Asianet Suvarna News Asianet Suvarna News

ಮೇಕಪ್​ ರಹಿತ ರಾಣಿ ಲುಕ್​ನಲ್ಲಿ ಕಂಗನಾ: ನಿಮಗೆ ನೀವೇ ಸಾಟಿ ಅಂತಿದ್ದಾರೆ ಫ್ಯಾನ್ಸ್​

ಕಾಂಟ್ರೋವರ್ಸಿ ಕ್ವೀನ್​ ಎಂದೇ ಫೇಮಸ್​ ಆಗಿರೋ ಕಂಗನಾ ಈಗ ಮೇಕಪ್​ ಇಲ್ಲದೇ ರಾಣಿಯ ಲುಕ್​ನಲ್ಲಿ ಕಾಣಿಸಿಕೊಂಡಿದ್ದು, ಫ್ಯಾನ್ಸ್​ ಫಿದಾ ಆಗಿದ್ದಾರೆ. 
 

Kangana Ranaut royal look photoshoot viral fans gets crazy comments on pics suc
Author
First Published Jun 5, 2023, 4:00 PM IST

ಕಂಗನಾ ರಣಾವತ್ (Kangana Ranauth) ಎಂದಾಕ್ಷಣ ನೆನಪಾಗುವುದು ಅವರು ವಿವಾದಾತ್ಮಕ ಹೇಳಿಕೆ. ಎಲ್ಲಿಯಾದರೂ ತಪ್ಪು ನಡೆಯುತ್ತಿರುವುದನ್ನು ಗಮನಿಸಿದಾಗ ಮನಸ್ಸಿಗೆ ಕಂಡದ್ದನ್ನು ನೇರಾನೇರವಾಗಿ ಹೇಳುವ ಮೂಲಕ ವಿವಾದಾತ್ಮಕ ನಟಿಯೆಂದೇ ಇವರು ಗುರುತಿಸಿಕೊಂಡಿದ್ದಾರೆ. ಯಾರಿಗೂ, ಯಾವುದಕ್ಕೂ ಹೆದರದೇ, ಜಗ್ಗದೇ ನೇರ ಮಾತುಗಳ ಮೂಲಕ ಜನರ ಗಮನ ಸೆಳೆಯುತ್ತಿರುವವರು ಕಂಗನಾ. ಹೀಗೆ ತಮ್ಮ ವಿವಾದಾತ್ಮಕ ಹೇಳಿಕೆಗಳಿಂದ ಫೇಮಸ್ ಆಗಿದ್ದರೂ ತಮ್ಮ ವಿಶೇಷ ರೀತಿಯ ಸ್ಟೈಲ್​ ಮಾತ್ರ ತೋರಿಸುವುದನ್ನು ಬಿಡಲಿಲ್ಲ. ಇದರಿಂದ ಅವರು ಹಿಂದೆ ಬಿದ್ದಿಲ್ಲ. ಇತ್ತೀಚೆಗೆ ಅವರು ರಾಯಲ್ ಫೋಟೋಶೂಟ್ (Photoshoot) ಮಾಡಿದ್ದಾರೆ, ಅದರಲ್ಲಿ ಅವರ ಉಗ್ರ ರಾಣಿ ಶೈಲಿಯನ್ನು ಅವರು ತೋರಿಸಿದ್ದಾರೆ.  ಆಕೆ ತಲೆಯ ಮೇಲೆ ಕಿರೀಟವನ್ನು ಧರಿಸಿರುವುದನ್ನು ಮತ್ತು ಸಾಂಪ್ರದಾಯಿಕ ಸೊಗಸಾದ ಉಡುಪಿನಲ್ಲಿ  ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ.  ಮುಖಕ್ಕೆ ಮೇಕಪ್ ಇಲ್ಲದೇ ತುಂಬಾ ಸಿಂಪಲ್ ಆಗಿ ಕಾಣಿಸಿಕೊಂಡಿದ್ದಾರೆ ಕಂಗನಾ.  ಕಂಗನಾ ಇನ್‌ಸ್ಟಾಗ್ರಾಮ್‌ನಲ್ಲಿ ಒಂದರ ನಂತರ ಒಂದರಂತೆ ಮೂರು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳನ್ನು ಶೇರ್​ ಮಾಡಿಕೊಂಡಿರುವ ಅವರು,  'ನೀವು ನಿಮ್ಮ ಕನಸುಗಳನ್ನು ಆಯ್ಕೆ ಮಾಡಬೇಡಿ. ಅದು ನಿಮ್ಮನ್ನು ಆಯ್ಕೆ ಮಾಡುತ್ತದೆ.  ನಿಮ್ಮನ್ನು ನೀವು ನಂಬಿರಿ ಮತ್ತು ಮುನ್ನಡೆಯಲು ಒಂದು ಜಿಗಿತವನ್ನು ತೆಗೆದುಕೊಳ್ಳಿ' ಎಂದಿದ್ದಾರೆ.

ಕಂಗನಾ ಫೋಟೋಗೆ ಅಭಿಮಾನಿಗಳಿಂದ  (Fans) ಕಮೆಂಟ್​ಗಳ ಮಹಾಪೂರವೇ ಹರಿದುಬರುತ್ತಿದೆ. ಕಂಗನಾ ರಣಾವತ್​ ಅವರ  ಕ್ವೀನ್ ಸ್ಟೈಲ್​ಗೆ ಫ್ಯಾನ್ಸ್​ ಫಿದಾಆಗಿದ್ದಾರೆ. ಈಕೆ ನಿಜವಾದ ರಾಣಿ ಎಂದು ಹಲವರು ಬರೆದಿದ್ದಾರೆ.  ನೀವು ತುಂಬಾ ಅದ್ಭುತವಾಗಿ ಕಾಣುತ್ತಿದ್ದೀರಿ, ಜೈ ಹೋ ಎಂದು ಓರ್ವ ಅಭಿಮಾನಿ ಬರೆದಿದ್ದರೆ,  ನಿಮಗೆ ನೀವೇ ರಾಣಿ ಎಂದಿದ್ದಾರೆ ಇನ್ನೊಬ್ಬರು. ಕೆಲವರು ಈ ಫೋಟೋ ಅನ್ನು ಮೊನಾಲಿಸಾ ಅವರ ವರ್ಣಚಿತ್ರಕ್ಕೆ ಹೋಲಿಸಿದ್ದಾರೆ.  ನೀವು ಎಂದಾದರೂ ಸಿಂಹಿಣಿಯ ಕಣ್ಣಿನಲ್ಲಿ ರಕ್ತವನ್ನು ನೋಡಿದ್ದೀರಾ, ಇಲ್ಲದಿದ್ದರೆ, ಒಮ್ಮೆ ನೋಡಿ ಎಂದು ಒಬ್ಬ ಅಭಿಮಾನಿ ಕಮೆಂಟ್​ ಮಾಡಿದ್ದದಾರೆ.  ಮೊದಲ ನೋಟದಲ್ಲಿ, ಫೋಟೋವನ್ನು ಕೃತಕ ಬುದ್ಧಿಮತ್ತೆಯಿಂದ (Artificila Intelligence)  ರಚಿಸಲಾಗಿದೆ ಎಂದು ನಾನು ಭಾವಿಸಿದೆ, ಆದರೆ ಇದು ಅದಲ್ಲ, ನಿಜವಾಗಿಯೂ ನೀವೇ, ನಿಮ್ಮದೇ ಫೋಟೋಶೂಟ್​ ಎಂದು ತಿಳಿದು ಅಚ್ಚರಿಯಾಯಿತು ಎಂದು ಸಾಮಾಜಿಕ ಜಾಲತಾಣ ಬಳಕೆದಾರರೊಬ್ಬರು ಅಚ್ಚರಿ ವ್ಯಕ್ತಪಡಿಸಿದ್ದಾರೆ.  

ಪುರುಷ ತಾರೆಯರಿಗೆ ಸರಿಸಮಾನವಾಗಿ ಸಂಭಾವನೆ ಪಡೆಯುವ ಏಕೈಕ ಮಹಿಳಾ ನಟಿ ನಾನೇ: ಕಂಗನಾ

ನೀವು ಎಷ್ಟು ಸುಂದರವಾಗಿದ್ದೀರಿ ಎಂದು ಇನ್ನು ಕೆಲವರು ಹೇಳಿದರೆ,  ಹೃದಯ ಮತ್ತು ಬೆಂಕಿಯ ಎಮೋಜಿಗಳಿಂದ ಕಮೆಂಟ್​ ಬಾಕ್ಸ್​ ತುಂಬಿ ತುಳುಕಾಡುತ್ತಿದೆ. ಕಳೆದ ವರ್ಷ ಕಂಗನಾ  ಅಭಿನಯದ ಧಡಕ್ (Dhadak) ಚಿತ್ರ ಬಿಡುಗಡೆಯಾಗಿ ಗಲ್ಲಾಪೆಟ್ಟಿಗೆಯಲ್ಲಿ ಸೋತಿತ್ತು. ಈ ವರ್ಷ ಅವರ ಯಾವುದೇ ಚಿತ್ರ ಬಿಡುಗಡೆಯಾಗಿಲ್ಲ. ಅವರ ಮುಂಬರುವ ಚಿತ್ರಗಳು ಎಮರ್ಜೆನ್ಸಿ, ಚಂದ್ರಮುಖಿ 2 ಮತ್ತು ತೇಜಸ್.

ಅಂದಹಾಗೆ ಭಿನ್ನ ಪಾತ್ರಗಳ ಮೂಲಕ ಗಮನ ಸೆಳೆದವರು ನಟಿ ಕಂಗನಾ ರಣಾವತ್​. ಗ್ಯಾಂಗ್​ಸ್ಟರ್​ (Gangster) ಸಿನಿಮಾ ಮೂಲಕ ಬಣ್ಣದ ಬದುಕು ಆರಂಭಿಸಿದ ಅವರು, ಚಿತ್ರರಂಗದಲ್ಲಿ 15 ವರ್ಷ ಕಳೆದಿದ್ದಾರೆ.  ಅವರು ರಾಣಿಯಾಗಿ ಕಾಣಿಸಿಕೊಂಡಿದ್ದ ಮಣಿಕರ್ಣಿಕಾ ಹೆಸರಿನ ಸಿನಿಮಾದಲ್ಲಿ ನಟಿಸಿದ್ದರು. ಈ ಚಿತ್ರಕ್ಕೆ ಅವರೇ ನಿರ್ದೇಶನ ಕೂಡ ಮಾಡಿದ್ದರು. ಕಂಗನಾ ಮಣಿಕರ್ಣಿಕಾ (Manikarnika) ಸಿನಿಮಾದಲ್ಲಿ ಮಣಿಕರ್ಣಿಕಾ  ಪಾತ್ರ ನಿರ್ವಹಿಸಿದ್ದರು. ಮಗನನ್ನು ಬೆನ್ನಿಗೆ ಕಟ್ಟಿಕೊಂಡು ಶತ್ರುಗಳ ವಿರುದ್ಧ ಹೋರಾಡುವ ವೀರ ರಾಣಿಯಾಗಿ ಕಾಣಿಸಿಕೊಂಡಿದ್ದರು. ಈ ಚಿತ್ರಕ್ಕೆ ದೊಡ್ಡ ಮಟ್ಟದಲ್ಲಿ ಮೆಚ್ಚುಗೆ ವ್ಯಕ್ತವಾಗಿತ್ತು. ಈ ಚಿತ್ರದಲ್ಲಿ ಅವರ ಅಭಿನಯ ಮಾತ್ರವಲ್ಲದೇ, ಅವರ ರಾಣಿಯ ಲುಕ್​ ನೋಡಿ ಫ್ಯಾನ್ಸ್​ ಫಿದಾ ಆಗಿದ್ದರು. ನಂತರ ಅದೇ ಹೆಸರನ್ನು ಅವರು ತಮ್ಮ ಪ್ರೊಡಕ್ಷನ್​ ಹೌಸ್​ಗೆ ಇಟ್ಟಿದ್ದಾರೆ.  

ಬಾಲಿವುಡ್ ಕಂಗನಾ ಮಾದಕ ದ್ರವ್ಯ ವ್ಯಸನಿಯೇ? Ex ಹೇಳಿದ್ದಿಷ್ಟು

Follow Us:
Download App:
  • android
  • ios