ಪುರುಷ ತಾರೆಯರಿಗೆ ಸರಿಸಮಾನವಾಗಿ ಸಂಭಾವನೆ ಪಡೆಯುವ ಏಕೈಕ ಮಹಿಳಾ ನಟಿ ನಾನೇ: ಕಂಗನಾ

ಬಾಲಿವುಡ್​ನಲ್ಲಿ ನಾಯಕನಷ್ಟೇ ಹಣ ನಾಯಕಿಗೆ ನೀಡುತ್ತಿಲ್ಲ ಎಂಬ ಬಗ್ಗೆ ಈಚೆಗೆ ನಟಿ ಪ್ರಿಯಾಂಕಾ ಚೋಪ್ರಾ ಆಡಿದ ಮಾತಿಗೆ ನಟಿ ಕಂಗನಾ ರಣಾವತ್​ ಹೇಳಿದ್ದೇನು? 
 

Kangana Ranaut reacts to Priyanka Chopra on pay parity in Bollywood

ಚಿತ್ರರಂಗದಲ್ಲಿ ನಾಯಕಿಯರಿಗೂ ನಾಯಕರಿಗೆ ಸಮಾನವಾಗಿ ಸಂಭಾವನೆ (Equal Remmuneration) ನೀಡಬೇಕು ಎಂಬ ಬೇಡಿಕೆ ಬಹಳ ದಿನಗಳಿಂದ ಚರ್ಚೆಯಲ್ಲಿದೆ. ನಾಯಕರಿಗೆ ಸಿಗುವ ಅರ್ಧದಷ್ಟು ಹಣವೂ ಫೇಮಸ್ ನಟಿಯರಿಗೆ ಸಿಗುವುದಿಲ್ಲ ಎಂಬುದು ವಾಸ್ತವ. ಈ ಬಗ್ಗೆ ಹಾಲಿವುಡ್, ಬಾಲಿವುಡ್​ನಲ್ಲಿ ಮಿಂಚುತ್ತಿರುವ ನಟಿ ಪ್ರಿಯಾಂಕಾ ಚೋಪ್ರಾ ಇತ್ತೀಚೆಗೆ  ಮಾತನಾಡಿದ್ದರು. ಈ ಹಿಂದೆ ಹೀರೋ ಪಡೆದ ಸಂಭಾವನೆಯಲ್ಲಿ ಶೇ.10ರಷ್ಟು ಮಾತ್ರ ತಮಗೆ ನೀಡಲಾಗಿತ್ತು ಎಂದು ಪ್ರಿಯಾಂಕಾ ಚೋಪ್ರಾ (Priyanka Chopra) ಹೇಳಿಕೊಂಡಿದ್ದರು. 2002ರಲ್ಲಿ ತೆರೆಕಂಡ ತಮಿಳಿನ ತಮಿಳನ್ ಚಿತ್ರದ ಮೂಲಕ ಪ್ರಿಯಾಂಕಾ ಚೋಪ್ರಾ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟಿದ್ದಾರೆ. 2003ರಲ್ಲಿ ನಟ ತಬಾನ್ನ ಮೊದಲ ಬಾಲಿವುಡ್ ಚಿತ್ರದಲ್ಲಿ ನಟಿಸಿದರು. ನಂತರ ಹಲವು ಸೂಪರ್ ಹಿಟ್ ಚಿತ್ರಗಳಲ್ಲಿ ನಾಯಕಿಯಾಗಿ ಬಾಲಿವುಡ್​ನಲ್ಲಿ ಮಿಂಚಿದ್ದಾರೆ. ಇಷ್ಟೂ ವರ್ಷಗಳ ತಮ್ಮ ಸಿನಿ ಪಯಣದಲ್ಲಿ ಸಂಭಾವನೆ ವಿಷಯದಲ್ಲಿ ತಮಗಾಗಿರುವ ಅನ್ಯಾಯದ ಕುರಿತು ಹೇಳಿಕೊಂಡಿದ್ದರು. ಇಷ್ಟೂ ವರ್ಷಗಳ ಜರ್ನಿಯಲ್ಲಿ ವೆಬ್​ಸೀರೀಸ್​ ಸಿಟಾಡೆಲ್​ನಲ್ಲಿ ಮಾತ್ರ  ಮೊದಲ ಬಾರಿಗೆ ನನಗೆ ಸಮಾನ ವೇತನ ಸಿಕ್ಕಿದ್ದು. ಇದಕ್ಕಾಗಿ ಹಲವಾರು ವರ್ಷಗಳ ಹೋರಾಟ ಮಾಡಿದ್ದೇನೆ ಎಂದಿದ್ದರು.
 
ಈ ಮಾತಿಗೆ ಕಾಂಟ್ರವರ್ಸಿ ಕ್ವೀನ್​ ಕಂಗನಾ ರಣಾವತ್​ (Kangana Ranaut) ತಿರುಗಿ ಬಿದ್ದಿದ್ದಾರೆ.  ಬಾಲಿವುಡ್‌ನ ಸಂಭಾವನೆ ಸಮಾನತೆಯ ಬಗ್ಗೆ ಮಾತನಾಡುತ್ತಾ ಕಂಗನಾ ಅವರು, ಪ್ರಿಯಾಂಕಾ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬಾಲಿವುಡ್​ನಲ್ಲಿ ನಟರಷ್ಟೇ ವೇತನ ನಟಿಯರಿಗೆ ನೀಡುತ್ತಿಲ್ಲ ಎನ್ನುವ ಪ್ರಿಯಾಂಕಾ ಅವರ ಹೇಳಿಕೆಯನ್ನು ಒಪ್ಪಿಕೊಂಡಿರೋ ಕಂಗನಾ ರಣಾವತ್​,  ಇದಕ್ಕೆ  ಕಾರಣ ನೀಡಿದ್ದಾರೆ. ನಂತರ ಅವರು, ಸಮಾನ ವೇತನಕ್ಕಾಗಿ ಹೋರಾಡಿದ ಮೊದಲ ನಟಿ ಪ್ರಿಯಾಂಕಾ ಅಲ್ಲ, ಬದಲಿಗೆ ನಾನೇ ಎಂದಿದ್ದಾರೆ.  ಹೆಚ್ಚಿನ ಎ ಲಿಸ್ಟ್ ನಾಯಕಿಯರು ಇತರ ಆಫರ್‌ಗಳಿಂದಾಗಿ ಉಚಿತವಾಗಿ ಕೆಲಸ ಮಾಡಲು ಸಿದ್ಧರಾಗಿರುತ್ತಾರೆ. ಆದ್ದರಿಂದ ಸಂಭಾವನೆ ಕಡಿಮೆಗೆ ಒಪ್ಪಿಕೊಳ್ಳುತ್ತಾರೆ. ಆದರೆ ವಾಸ್ತವದಲ್ಲಿ,  ಹಿಂದಿ ಚಿತ್ರರಂಗದಲ್ಲಿ (Bollywood) ಪುರುಷ ತಾರೆಯರಂತೆ ಸಂಭಾವನೆ ಪಡೆಯುವ ಏಕೈಕ ನಟಿ ನಾನೇ ಎಂದಿದ್ದಾರೆ.

ಫ್ರೀಯಾಗಿ ನಟಿಸಿರುವ ಸೂಪರ್​ಹಿಟ್​ ಬಾಲಿವುಡ್​ ನಟ-ನಟಿಯರಿವರು!

ಕಂಗನಾ ರಣಾವತ್​ ಅವರು ಈ ಕುರಿತು ತಮ್ಮ ಇನ್‌ಸ್ಟಾ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ. ಸಮಾನ ವೇತನ ಪಡೆಯುತ್ತಿರುವ ಕುರಿತು ಪ್ರಿಯಾಂಕಾ ಚೋಪ್ರಾ ಅವರು ನೀಡಿರುವ ಹೇಳಿಕೆಯ ವೀಡಿಯೊವನ್ನು ಹಂಚಿಕೊಂಡಿರುವ ಕಂಗನಾ ಅವರು, ನಟಿಯರಿಗೆ ನೀಡುವ ಶುಲ್ಕದ ಬಗ್ಗೆ ಮಾತನಾಡಿದ್ದಾರೆ.  'ನಾನು ಬಾಲಿವುಡ್‌ನಲ್ಲಿ ಪುರುಷ ಸಹ ನಟರಿಗೆ ಸಮಾನವಾದ ಹಣವನ್ನು ಎಂದಿಗೂ ಪಡೆದಿಲ್ಲ. ನಾನು ಇಲ್ಲಿ ಸುಮಾರು 60 ಚಿತ್ರಗಳನ್ನು ಮಾಡಿದ್ದೇನೆ. ಆದರೆ ನನ್ನ ಪುರುಷ ಸಹ -ನಟಿಯಷ್ಟು ಸಂಭಾವನೆಯನ್ನು ನಾನು ಎಂದಿಗೂ ಪಡೆದಿಲ್ಲ. ಅವರಿಗೆ ಹೋಲಿಸಿದರೆ ನಾನು ಕೇವಲ 10 ಪ್ರತಿಶತದಷ್ಟು ಶುಲ್ಕ ಪಡೆದುಕೊಂಡಿದ್ದೇನೆ. ಇದು ದೊಡ್ಡ ಅಂತರವಾಗಿದೆ ಮತ್ತು ಅನೇಕ  ನಟಿಯರು (Actresses) ಇನ್ನೂ ಇದರೊಂದಿಗೆ ಹೋರಾಡುತ್ತಿದ್ದಾರೆ ಎಂದು ವಿಡಿಯೋದಲ್ಲಿ ಪ್ರಿಯಾಂಕಾ ಹೇಳುವುದನ್ನು ಕೇಳಬಹುದು. 

ಇದಕ್ಕೆ ಪ್ರತಿಕ್ರಿಯೆ ನೀಡಿರುವ  ಕಂಗನಾ, ಚಿತ್ರರಂಗದಲ್ಲಿ ಪುರುಷ ತಾರೆಯರಿಗೆ ಸರಿಸಮಾನವಾಗಿ ಸಂಭಾವನೆ ಪಡೆಯುವ ಏಕೈಕ ಮಹಿಳಾ ನಟಿ ನಾನೇ ಎಂದಿದ್ದಾರೆ.  'ಬಾಲಿವುಡ್‌ನ ಸಂಭಾವನೆ ಸಮಾನತೆಗಾಗಿ ನಾನು ಮೊದಲು ಹೋರಾಡಿದೆ. ನಾನು ಫೈಟ್ ಮಾಡುತ್ತಿದ್ದ ಪಾತ್ರಗಳನ್ನು ಅನೇಕ ನಟಿಯರು ಉಚಿತವಾಗಿ ಮಾಡಿದ್ದಾರೆ. ಹೆಚ್ಚಿನ A ಲಿಸ್ಟರ್‌ಗಳು (ಮಹಿಳೆಯರು) ಇತರ ಅನುಕೂಲಗಳ ಕೊಡುಗೆಗಳೊಂದಿಗೆ ಚಲನಚಿತ್ರಗಳನ್ನು ಉಚಿತವಾಗಿ ಮಾಡುತ್ತಾರೆ ಎಂದು ನಾನು ವಿಶ್ವಾಸದಿಂದ ಹೇಳಬಲ್ಲೆ.  ನಾನು ಪುರುಷ ನಟರಂತೆ ಮಾತ್ರ ಸಂಭಾವನೆ ಪಡೆಯುತ್ತೇನೆ ಹೊರತು ಬೇರಾರೂ ಅಲ್ಲ ಮತ್ತು ಅವರಲ್ಲಿ ಕಿಂಚಿತ್ತೂ ಸಂಶಯವಿಲ್ಲ ಎಂಬುದು  ಚಿತ್ರರಂಗದ (Film Industry) ಎಲ್ಲರಿಗೂ ಗೊತ್ತು ಎಂದಿದ್ದಾರೆ. 

ಬಾಲಿವುಡ್ ಕಂಗನಾ ಮಾದಕ ದ್ರವ್ಯ ವ್ಯಸನಿಯೇ? Ex ಹೇಳಿದ್ದಿಷ್ಟು

Latest Videos
Follow Us:
Download App:
  • android
  • ios