ಮುಂಬೈ ಪೊಲೀಸರು ಕಂಗನಾ ರಣಾವತ್ ಹಾಗೂ ಆಕೆಯ ಸಹೋದರಿ ಮತ್ತು ಮ್ಯಾನೇಜರ್ ರಂಗೋಲಿಗೆ ನೋಟಿಸ್ ಕಳುಹಿಸಿದ ಬೆನ್ನಲ್ಲೇ ನಟಿ ಟ್ವೀಟ್ ಮಾಡಿದ್ದಾರೆ. ಟ್ವೀಟ್ ಮಾಡಿ ಶಿವಸೇನೆಯನ್ನು ಪೆಂಗ್ವಿನ್ ಸೇನೆ ಎಂದು ವ್ಯಂಗ್ಯ ಮಾಡಿದ್ದಾರೆ.

ಪೆಂಗ್ವಿನ್ ಸೇನೆ ನನ್ನನ್ನು ಮಿಸ್ ಮಾಡ್ಕೊಳ್ತಿದ್ಯಾ..? ಪರ್ವಾಗಿಲ್ಲ ಬೇಗ ಬರ್ತೀನಿ ಎಂದು ಹೇಳಿದ್ದಾರೆ. ಇಬ್ಬರೂ ಸಹೋದರಿಯರೂ ಅ.25ರಂದು-26ರಂದು ಬಾಂದ್ರಾ ಪೊಲೀಸ್ ಠಾಣೆಗೆ ಬರಬೇಕೆಂದು ತಿಳಿಸಲಾಗಿದೆ.

ತಲೈವಿಗಾಗಿ ತೂಕ ಹೆಚ್ಚಿಸ್ಕೊಂಡ ನಟಿಗೆ ಈಗ ತೂಕ ಇಳಿಸೋ ಕಷ್ಟ

ತಮ್ಮ ಸೋಷಿಯಲ್ ಮೀಡಿಯಾ ಪೋಸ್ಟ್‌ಗಳ ಮೂಲಕ ಹಿಂದೂ ಮತ್ತು ಮುಸ್ಲಿಂ ನಡುವೆ ಕೋಮು ಸೌಹಾರ್ದ ಕದಡಿದ ಆರೋಪ ಬಾಲಿವುಡ್ ಸೆಲೆಬ್ರಿಟಿ ಸಹೋದರಿಯರ ಮೇಲಿದೆ.

295ಎ(ಧರ್ಮ ನಿಂದಿಸಿ ವಿವಾದ ಸೃಷ್ಟಿಸುವುದು), 153ಎ(ಎರಡು ಗುಂಪುಗಳ ನಡುವೆ ದ್ವೇಷ ಸೃಷ್ಟಿಸುವುದು), 124ಎರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಸಿನಿಮಾ ಇಂಡಸ್ಟ್ರಿಯ ಫಿಟ್‌ನೆಸ್‌ ಟ್ರೈನರ್ ಮುನ್ನಾವರಾಲಿ ಸಯ್ಯದ್ ಎಂಬವರು ದೂರು ನೀಡಲಾಗಿದೆ.