ತಲೈವಿಗಾಗಿ ತೂಕ ಹೆಚ್ಚಿಸ್ಕೊಂಡ ನಟಿಗೆ ಈಗ ತೂಕ ಇಳಿಸೋ ಕಷ್ಟ
ತೂಕ ಹೆಚ್ಚಿಸ್ಕೊಂಡಿದ್ದ ನಟಿಗೆ ತೂಕ ಇಳಿಸೋ ಕಷ್ಟ | ತೂಕ ಹೆಚ್ಚಿಸೋದು ಫನ್, ಇಳಿಸೋದು ಪನಿಷ್ಮೆಂಟ್ ಎಂದ ಕಂಗನಾ | ಇಲ್ನೋಡಿ ಫೊಟೋಸ್
ತಲೈವಿ ಸಿನಿಮಾ ಮಾಡಿದ ಬಾಲಿವುಡ್ ನಟ ಕಂಗನಾ ರಣಾವತ್ ಸಿನಿಮಾಗಾಗಿ 20 ಕೆಜಿ ತೂಕ ಹೆಚ್ಚಿಸಿಕೊಂಡಿದ್ದರು.
ಇದೀಗ ಸಿನಿಮಾ ಶೂಟಿಂಗ್ ಬಹುತೇಕ ಮುಕ್ತಾಯವಾಗಿದ್ದು ನಟಿಗೆ ತೂಕ ಇಳಿಸಿಕೊಳ್ಳೋ ಸವಾಲು ಎದುರಾಗಿದೆ. ಮತ್ತೆ ಕಠಿಣ ವರ್ಕೌಟ್ನಲ್ಲಿ ತೊಡಗಿದ್ದಾರೆ ಕ್ವೀನ್
ಮತ್ತೆ ತೂಕ ಇಳಿಸಿಕೊಳ್ಳೋ ಕಸರತ್ತಿನಲ್ಲಿರುವ ನಟಿ ತಮ್ಮ ವರ್ಕೌಟ್ ಫೋಟೋ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ.
ತಲೈವಿಗಾಗಿ ತೂಕ ಹೆಚ್ಚಸ್ಕೊಂಡಿದ್ದೆ. ಈಗ ಶೂಟಿಂಗ್ ಬಹುತೇಕ ಮುಗಿಯುತ್ತಾ ಬಂದಿದೆ. ಮತ್ತೆ ಮೊದಲಿನಂತಾಗಬೇಕು. ಬೇಗ ಎದ್ದು ಜಾಗ್ ಮಾಡ್ತಿದ್ದೀನಿ ಯಾರೆಲ್ಲಾ ನಂಜೊತೆ ಜಾಯಿನ್ ಆಗ್ತೀರಾ ಎಂದು ಕೇಳಿದ್ದಾರೆ ನಟಿ.
ಬೇಕಾಬಿಟ್ಟಿ ಖಾದ್ಯಗಳನ್ನಿಟ್ಟು ತಿನ್ನುವ ಫೋಟೋ ಹಾಕಿದ ನಟಿ ತೂ ಹೆಚ್ಚಿಸ್ಕೊಳ್ಳೋದು ಫನ್, ಇಳಿಸ್ಕೊಳೋದು ಪನಿಷ್ಮೆಂಟ್ ಎಂದಿದ್ದಾರೆ.