ಮದ್ವೆಗಿಂತ ಹೆಚ್ಚು ಡಿವೋರ್ಸ್ ಸೆಲೆಬ್ರೇಟ್ ಮಾಡಬೇಕು ಎಂದ ನಿರ್ದೇಶಕ
- ಅಮೀರ್ ಖಾನ್ - ಕಿರಣ್ ರಾವ್ ವಿಚ್ಛೇದನೆ
- ಮದುವೆಗಿಂತಲೂ ವಿಚ್ಛೇದನೆಯನ್ನು ಸಂಭ್ರಮಿಸಬೇಕು ಎಂದ ನಿರ್ದೇಶಕ
ರಾಮ್ ಗೋಪಾಲ್ ವರ್ಮಾ ಅವರು ಅಮೀರ್ ಖಾನ್ ಮತ್ತು ಕಿರಣ್ ರಾವ್ ಅವರ ವಿಚ್ಛೇದನೆ ಘೋಷಿಸಿದ ನಂತರ ಅವರನ್ನು ಸಮರ್ಥಿಸಿಕೊಂಡಿದ್ದಾರೆ. ಟ್ರೋಲ್‌ಗಳ ವಿರುದ್ಧ ಅವರು ಡಿವೋರ್ಸ್ ವಿಚಾರ ಸಮರ್ಥಿಸಿಕೊಂಡಿದ್ದಾರೆ. ಅಮೀರ್ ಮತ್ತು ಕಿರಣ್ ಮದುವೆಯಾಗಿ 15 ವರ್ಷಗಳಾಗಿದ್ದು, ಅವರ ಮಗ ಆಜಾದ್ ರಾವ್ ಖಾನ್‌ನನ್ನು ಒಟ್ಟಿಗೆ ಬೆಳೆಸಲಿದ್ದಾರೆ.
ಅಮೀರ್ ಖಾನ್ ಮತ್ತು ಕಿರಣ್ ರಾವ್ ತಮ್ಮ 15 ವರ್ಷಗಳ ದಾಂಪತ್ಯದ ಅಂತ್ಯವನ್ನು ಘೋಷಿಸಿದ ನಂತರ, ರಾಮ್ ಗೋಪಾಲ್ ವರ್ಮಾ ಟ್ವಿಟ್ಟರ್‌ನಲ್ಲಿ ಟ್ರೋಲ್‌ಗಳಿಗೆ ಉತ್ತರಿಸಿದ್ದಾರೆ.
ಅಮೀರ್‌ಖಾನ್ ಮತ್ತು ಕಿರಣ್‌ರಾವ್‌ಗೆ ಪರಸ್ಪರ ವಿಚ್ಛೇದನೆ ನೀಡುವಲ್ಲಿ ಯಾವುದೇ ಸಮಸ್ಯೆ ಇಲ್ಲದಿದ್ದರೆ, ಜಗತ್ತಿನಲ್ಲಿ ಬೇರೆಯವರಿಗೆ ಯಾಕೆ ಚಿಂತೆ? ಟ್ರೋಲರ್‌ಗಳು ಇದನ್ನು ಮೂರ್ಖತನದಿಂದ ವೈಯಕ್ತಿಕ ರೀತಿಯಲ್ಲಿ ಟ್ರೋಲ್ ಮಾಡುತ್ತಿದ್ದಾರೆ, ಆದರೆ ದಂಪತಿಗಳು ವೈಯಕ್ತಿಕವಾಗಿ ವೃತ್ತಿಪರರಾಗಿದ್ದಾರೆ! ಎಂದು ಬರೆದಿದ್ದಾರೆ.
15 ವರ್ಷದ ವೈವಾಹಿಕ ಜೀವನದ ನಂತರ ಬೇರಾಗುತ್ತಿದ್ದಾರೆ ಅಮೀರ್-ಕಿರಣ್...
ಹೇ ಅಮೀರ್‌ಖಾನ್ ಮತ್ತು ಕಿರಣ್‌ರಾವ್ ನೀವು ಒಬ್ಬರಿಗೊಬ್ಬರು ಒಳ್ಳೆಯದನ್ನು ಬಯಸುತ್ತಿರುವುದನ್ನು ನೀವು ಮಾಡುತ್ತಿದ್ದೀರಿ ಮತ್ತು ಭವಿಷ್ಯದಲ್ಲಿ ನಿಮ್ಮ ಸ್ವಂತ ವೈಯಕ್ತಿಕ ಕಾರಣಗಳಿಗಾಗಿ ಸಂತೋಷದ ಸಮಯವನ್ನು ಹೊಂದಿರುವಿರಿ ಎಂದು ಖಚಿತವಾಗಿ ಹೇಳಬಹುದು ಎಂದಿದ್ದಾರೆ.
ರಂಗೀಲಾದಲ್ಲಿ ಅಮೀರ್ ಅವರೊಂದಿಗೆ ಕೆಲಸ ಮಾಡಿದ ಆರ್.ಜಿ.ವಿ ಅವರು ಮತ್ತು ಕಿರಣ್ ಮೊದಲಿಗಿಂತಲೂ ಹೆಚ್ಚು ವರ್ಣರಂಜಿತ ಜೀವನವನ್ನು ಬಯಸಿದರು ಮತ್ತು ‘ವಿವಾಹಕ್ಕಿಂತ ವಿಚ್ಚೇದನೆಯನ್ನು ಆಚರಿಸಬೇಕು’ ಎಂದು ಹೇಳಿದರು..ಏಕೆಂದರೆ ವಿಚ್ಚೇದನೆ ಜ್ಞಾನ ಮತ್ತು ಬುದ್ಧಿವಂತಿಕೆಯಿಂದ ನಡೆಯುತ್ತದೆ. ವಿವಾಹಗಳು ಅಜ್ಞಾನ ಮತ್ತು ಮೂರ್ಖತನದಿಂದ ನಡೆಯುತ್ತವೆ ಎಂದಿದ್ದಾರೆ.
ಈ 15 ಸುಂದರ ವರ್ಷಗಳಲ್ಲಿ ನಾವು ಜೀವಮಾನದ ಅನುಭವಗಳು, ಸಂತೋಷ ಮತ್ತು ನಗೆಯನ್ನು ಹಂಚಿಕೊಂಡಿದ್ದೇವೆ ಮತ್ತು ನಮ್ಮ ಸಂಬಂಧವು ನಂಬಿಕೆ, ಗೌರವ ಮತ್ತು ಪ್ರೀತಿಯಲ್ಲಿ ಮಾತ್ರ ಬೆಳೆದಿದೆ. ಈಗ ನಾವು ನಮ್ಮ ಜೀವನದಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭಿಸಲು ಬಯಸುತ್ತೇವೆ - ಇನ್ನು ಮುಂದೆ ಗಂಡ ಮತ್ತು ಹೆಂಡತಿಯಾಗಿರದೆ, ಒಬ್ಬರಿಗೊಬ್ಬರು ಸಹ-ಪೋಷಕರು ಮತ್ತು ಕುಟುಂಬವಾಗಿರಲಿದ್ದೇವೆ ಎಂದು ಅಮೀರ್ ಮತ್ತು ಕಿರಣ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.