Asianet Suvarna News Asianet Suvarna News

ಕೇವಲ 10 ಸಿನಿಮಾ ಮಾಡಿದ್ದಕ್ಕೆ ಕಂಗನಾಗೆ ಪದ್ಮಶ್ರೀ, ಸೌತ್‌ನವರಿಗೆ ಯಾಕಿಲ್ಲ; ನಟಿ ಜಯಸುಧಾ ಆಕ್ರೋಶ

ಕೇವಲ 10 ಸಿನಿಮಾ ಮಾಡಿದ್ದಕ್ಕೆ ಕಂಗನಾಗೆ ಪದ್ಮಶ್ರೀ ಸಿಗುತ್ತೆ ಸೌತ್‌ನವರಿಗೆ ಯಾಕಿಲ್ಲ ಎಂದು ನಟಿ ಜಯಸುಧಾ ಆಕ್ರೋಶ ಹೊರಹಾಕಿದ್ದಾರೆ.

Kangana Ranaut got Padma Shri within ten films says Jayasudha sgk
Author
First Published Dec 26, 2022, 4:14 PM IST

ಸದ್ಯ ಬಾಲಿವುಡ್ ವರ್ಸಸ್ ಸೌತ್ ಚರ್ಚೆ ಜೋರಾಗಿದೆ. ಸೌತ್ ಸಿನಿಮಾಗಳು ರಾರಾಜಿಸುತ್ತಿವೆ. ಹಿಂದಿ ಸಿನಿಮಾರಂಗದಲ್ಲಿ ದಕ್ಷಿಣದ ಸಿನಿಮಾಗಳ ಹವಾಳಿ ಹೆಚ್ಚಾಗಿದೆ. ಸೌತ್ ಸಿನಿಮಾಗಳು ದೇಶ-ವಿದೇಶಗಳಲ್ಲಿ ಸದ್ದು ಮಾಡುತ್ತಿವೆ. ಸೌತ್ ಸಿನಿಮಾರಂಗವನ್ನು, ಕಲಾವಿದರನ್ನು ಕಡೆಗಣಿಸಲಾಗಿತ್ತು. ಭಾರತೀಯ ಸಿನಿಮಾರಂಗ ಎಂದರೆ ಬಾಲಿವುಡ್ ಸಿನಿಮಾ ಎನ್ನುವ ಮಟ್ಟಕ್ಕೆ ಹಿಂದಿ ಸಿನಿಮಾರಂಗ ಪ್ರಾಬಲ್ಯ ಸಾಧಿಸಿತ್ತು. ಆದರೀಗ ಕಾಲ ಬದಲಾಗಿದೆ. ದಕ್ಷಿಣ ಭಾರತದ ಸಿನಿಮಾಗಳು ಸದ್ದು ಮಾಡುತ್ತಿವೆ. ಈ ನಡುವೆ ದಕ್ಷಿಣ ಭಾರತದ ಖ್ಯಾತ ನಟಿ ಜಯಸುಧಾ ಹೇಳಿರುವ ಮಾತು ವೈರಲ್ ಆಗಿದೆ.  ಬಾಲಿವುಡ್ ನಟಿ ಕಂಗನಾ ರಣವಾತ್ 10 ಸಿನಿಮಾಗಳಿಗೆಯೇ ಪದ್ಮಶ್ರೀ ಪಡೆದುಕೊಂಡರು. ಆದರೆ ದಕ್ಷಿಣ ಭಾರತದ ಕಲಾವಿದರನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದು ಹೇಳಿದರು. 

ಅಂದಹಾಗೆ ಜಯಸುಧಾ ಅವರು ಇತ್ತೀಚಿಗಷ್ಟೆ ಬಾಲಕೃಷ್ಣ ಅವರ ಟಾಕ್ ಶೋನಲ್ಲಿ ಭಾಗಿಯಾಗಿದ್ದರು. ಜಯಸುಧಾ ಮತ್ತು ಜಯಪ್ರದಾ ಇಬ್ಬರೂ ಭಾಗಿಯಾಗಿದ್ದರು. ಆಗ ಭಾರತ ಸರ್ಕಾರದ ವಿರುದ್ಧ ನಟಿ ಜಯಸುಧಾ ಅಸಮಾಧಾನ ಹೊರಹಾಕಿದರು. ಕೇವಲ 10 ಚಿತ್ರಗಳಲ್ಲಿ ಕೆಲಸ ಮಾಡಿದ ಕಂಗನಾ ರಣವಾತ್ ಅವರಂತಹ ಬಾಲಿವುಡ್ ನಟಿಯರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ ಆದರೆ, ಚಿತ್ರರಂಗದಲ್ಲಿ ಹಲವು ದಶಕಗಳಿಂದ ದುಡಿದ ನಟರಿಗೆ ಅದರಲ್ಲೂ ದಕ್ಷಿಣ ಚಿತ್ರರಂಗದ ನಟರಿಗೆ ಅವರ ಕೆಲಸಗಳಿಗೆ ಯಾವುದೇ ಮನ್ನಣೆ ಸಿಕ್ಕಿಲ್ಲ ಎಂದರು. 

'ಕಂಗನಾ ರಣಾವತ್‌ಗೆ ಪದ್ಮಶ್ರೀ ಪ್ರಶಸ್ತಿ ಸಿಕ್ಕಿರುವುದಕ್ಕೆ ಪರವಾಗಿಲ್ಲ. ಆಕೆ ಅದ್ಭುತ ನಟಿ. ಆದರೆ ಅವರು ಕೇವಲ 10 ಚಿತ್ರಗಳಿಗೆ ಆ ಪ್ರಶಸ್ತಿಯನ್ನು ಪಡೆದರು. ಇಲ್ಲಿ ನಾವು ಅನೇಕ ಚಿತ್ರಗಳಲ್ಲಿ ಕೆಲಸ ಮಾಡಿದ್ದೇವೆ ಇನ್ನೂ ಸರ್ಕಾರದಿಂದ ಗುರುತಿಸಲ್ಪಟ್ಟಿಲ್ಲ' ಎಂದು ಜಯಸುಧಾ ಹೇಳಿದರು. ಹಿರಿಯ ನಟಿ ಗಿನ್ನಿಸ್ ದಾಖಲೆ ಮಾಡಿರುವ ಮಹಿಳಾ ನಿರ್ದೇಶಕಿ ವಿಜಯ್ ನಿರ್ಮಲಾ ಕೂಡ್ಅಂತಹ ಮೆಚ್ಚುಗೆ ಪಡೆದಿಲ್ಲ. ದಕ್ಷಿಣ ಭಾರತೀಯರನ್ನು ನಿರ್ಲಕ್ಷ್ಯ ಮಾಡುವುದು ನನಗೆ ಬೇಸರವಾಗುತ್ತದೆ' ಎಂದು ಹೇಳಿದರು. 

'ಎಮರ್ಜೆನ್ಸಿ'ಗಾಗಿ ಸಂಸತ್ ಭವನ ಕೇಳಿದ ನಟಿ ಕಂಗನಾ ರಣಾವತ್; ಸಿಗುತ್ತಾ ಅನುಮತಿ?

ಗುರುತಿಸಿ ಎಂದು ಕೇಳಬಾರದು ಅದು ಸರ್ಕಾರದಿಂದಲೇ ಆಗಬೇಕು ಎಂದು ಜಯಪ್ರದಾ ಹೇಳಿದರು.  'ನಾವು ಅದನ್ನು ಗೌರವಯುತವಾಗಿ ಪಡೆಯಬೇಕು ಮತ್ತು ಅದನ್ನು ಕೇಳಿ ಪಡೆಯಬಾರದು' ಎಂದು ಹೇಳಿದರು. ಇದೇ ವೇಳೆ ಜಯಪ್ರದಾ ಅವರು ಎನ್‌ಟಿಆರ್‌ಗೆ ಭಾರತ ರತ್ನಕ ಕೋರಿದ್ದ ಬಗ್ಗೆ ಬಹಿರಂಗ ಪಡಿಸಿದರು. ದಕ್ಷಣ ಭಾರತದ ನಟರನ್ನು ಗೌರವಿಸಿ ಎಂದು ಕೇಳಿಕೊಂಡರು.  

ಹಣಕ್ಕಾಗಿ ಮದುವೆ, ಪಾರ್ಟಿಗಳಲ್ಲಿ ಡಾನ್ಸ್ ಮಾಡಲ್ಲ; ನಟಿ ಕಂಗನಾ ರಣಾವತ್

 ಕಂಗನಾ ರಣವಾತ್ ನೇರ ನಡುಗೆ ಹೆಸರುವಾಸಿಯಾದವರು.. ಯಾರು ಏನೇ ಹೇಳಿದರೂ ತಿರುಗೇಟು ಕೊಡದೆ ಸೈಲೆಂಟ್ ಆಗಿ ಇರುವ ನಟಿ ಅಲ್ಲ. ಆಗಾಗ ಸಿಡಿದೇಳುವ ನಟಿ ಜಯಸುಧಾ ಮಾತಿಗೆ ಏನು ಹೇಳುತ್ತಾರೆ ಎಂದು ಕಾದು ನೋಡಬೇಕಿದೆ. 

Follow Us:
Download App:
  • android
  • ios