ಹಣಕ್ಕಾಗಿ ಮದುವೆ, ಪಾರ್ಟಿಗಳಲ್ಲಿ ಡಾನ್ಸ್ ಮಾಡಲ್ಲ; ನಟಿ ಕಂಗನಾ ರಣಾವತ್
ಬಾಲಿವುಡ್ ನಟಿ ಕಂಗನಾ ರಣಾವತ್ ಹಣಕ್ಕಾಗಿ ಮದುವೆ, ಪಾರ್ಟಿಗಳಲ್ಲಿ ಡಾನ್ಸ್ ಮಾಡಲ್ಲ ಎಂದು ಹೇಳಿದ್ದಾರೆ.
ಬಾಲಿವುಡ್ ನಟಿ ಕಂಗನಾ ರಣಾವತ್ ಸದ್ಯ ಎಮರ್ಜೆನ್ಸಿ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಒಂದಲ್ಲೊಂದು ವಿವಾದಗಳ ಮೂಲಕ ಸದಾ ಸುದ್ದಿಯಲ್ಲಿದ್ದ ಕಂಗನಾ ಇದೀಗ ಸಿನಿಮಾ, ಶೂಟಿಂಗ್ ನಿರತರಾಗಿದ್ದಾರೆ. ಈ ನಡುವೆ ಕಂಗನಾ ಹೇಳಿರುವ ಮಾತು ವೈರಲ್ ಆಗಿದೆ. ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರ ಅಭಿಮಾನಿಯಾಗಿರುವ ಕಂಗನಾ ಅನೇಕ ವಿಚಾರಗಳಲ್ಲಿ ಅವರು ತನಗೆ ಸ್ಫೂರ್ತಿ ಎಂದು ಹೇಳಿದ್ದಾರೆ. ಲತಾ ಮಂಗೇಶ್ಕರ್ ಅವರು ಖಾಸಗಿ ಕಾರ್ಯಕ್ರಮವೊಂದರಲ್ಲಿ ಹಾಡಲು ನಿರಾಕರಿಸಿದರು. ಮಿಲಿಯನ್ ಡಾಲರ್ ಕೊಡುವುದಾಗಿ ಹೇಳಿದರು ಲತಾ ಮಂಗೇಶ್ಕರ್ ಅವರು ಹಾಡಲು ನಿರಾಕಸಿದ್ದರು. ಈ ವಿಡಿಯೋ ಶೇರ್ ಮಾಡಿರುವ ಕಂಗನಾ ಹಣಕ್ಕಾಗಿ ತಾನು ಮದುವೆ ಸಮಾರಂಭಗಳಲ್ಲಿ ಡಾನ್ಸ್ ಮಾಡಲ್ಲ ಎಂದು ಹೇಳಿದ್ದಾರೆ.
ಲತಾ ಮಂಗೇಶ್ಕರ್ ವಿಡಿಯೋ ಶೇರ್ ಮಾಡಿ, 'ಒಪ್ಪುತ್ತೇನೆ, ನಾನು ಮದುವೆಗಳಲ್ಲಿ ಅಥವಾ ಖಾಸಗಿ ಪಾರ್ಟಿಗಳಲ್ಲಿ ಯಾವತ್ತೂ ಡಾನ್ಸ್ ಮಾಡಿಲ್ಲ. ನಾನು ಅತ್ಯಂತ ಜನಪ್ರಿಯ ಹಾಡುಗಳನ್ನು ಹೊಂದಿದ್ದರೂ ಸಹ. ಕ್ರೇಸಿ ಹಣವನ್ನು ನಿರಾಕರಿಸಿದೆ. ಈ ವೀಡಿಯೊ ನೋಡಲು ತುಂಬಾ ಸಂತೋಷವಾಗಿದೆ. ಲತಾಜಿ ನಿಜವಾಗಿಯೂ ತುಂಬಾ ಸ್ಫೂರ್ತಿದಾಯಕ' ಎಂದು ಹೇಳಿದ್ದಾರೆ.
'ಲತಾ ಒಮ್ಮೆ ಮದುವೆಯಲ್ಲಿ ಎರಡು ಗಂಟೆಗಳ ಕಾಲ ಪ್ರದರ್ಶನ ನೀಡಲು ಮಿಲಿಯನ್ ಡಾಲರ್ ನಿರಾಕರಿಸಿದ್ದರು. 5 ಮಿಲಿಯನ್ ಡಾಲರ್ ಬೇಡಿಕೆ ಇಟ್ಟರೂ ಸಹ ಲತಾ ಅವರು ನಿರಾಕರಿಸಿದ್ದರು' ಹಳೆಯ ವಿಡಿಯೋ ವೈರಲ್ ಆಗಿದೆ.
'ಎಮರ್ಜೆನ್ಸಿ' ಬಗ್ಗೆ ಹಬ್ಬಿದ್ದ ವದಂತಿ ಬ್ರೇಕ್ ಹಾಕಿದ ನಟಿ ಕಂಗನಾ ರಣಾವತ್
ಎಮರ್ಜೆನ್ಸಿ ಸಿನಿಮಾದಲ್ಲಿ ಕಂಗನಾ ಬ್ಯುಸಿ
ಕಂಗನಾ ಸದ್ಯ ಎಮರ್ಜೆನ್ಸಿ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾಗಾಗಿ ಕಂಗನಾ ಸಂಸತ್ ಭವನದಲ್ಲಿ ಶೂಟ್ ಮಾಡಲು ಅನುಮತಿ ಕೇಳಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಈ ಸಿನಿಮಾದ ಕೆಲವು ಪ್ರಮುಖ ಭಾಗಗಳನ್ನು ಸಂಸತ್ ಭವನದೊಳಗೆ ಶೂಟ್ ಮಾಡಲು ಅವಕಾಶ ಕೋರಿದ್ದರು ಎನ್ನುವ ಮಾತು ಕೇಳಿ ಬಂದಿತ್ತು. ಮೊದಲ ಬಾರಿಗೆ ಸಂಸತ್ತಿನಲ್ಲಿ ಚಲನಚಿತ್ರವನ್ನು ಚಿತ್ರೀಕರಿಸಲು ಅನುಮತಿ ಕೊಡಲಾಗುತ್ತಿದೆ ಎನ್ನುವ ಮಾತು ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಈ ಸುದ್ದಿಗೆ ಪ್ರತಿಕ್ರಿಯೆ ನೀಡಿದ್ದ ನೀಡಿದ್ದ ಕಂಗನಾ, 'ಇದು ನಿಜವಲ್ಲ, ಇದು ಫೇಕ್ ಸುದ್ದಿ' ಎಂದು ಹೇಳಿದ್ದರು.
ಅನುಪಮ್ ಖೇರ್ ಹೇಳಿದ್ರೂ ಕಂಗನಾ ಜೊತೆ ಮಾತಾಡಲ್ಲ ಎಂದ ಜಯಾ ಬಚ್ಚನ್; ವಿಡಿಯೋ ವೈರಲ್
‘ಎಮರ್ಜೆನ್ಸಿ’ ಚಿತ್ರವನ್ನು ಕಂಗನಾ ಅವರೇ ಬರೆದು, ನಿರ್ಮಾಣ ಮಾಡಿ, ನಿರ್ದೇಶನ ಮಾಡಿ, ಅವರೇ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಕಂಗನಾ ರಣಾವತ್ ಅವರ ವೃತ್ತಿಜೀವನದಲ್ಲಿ ‘ಎಮರ್ಜೆನ್ಸಿ’ ಸಿನಿಮಾ ಬಹುಮುಖ್ಯ ಆಗಲಿದೆ. ಅದಕ್ಕಾಗಿ ಅವರು ಸಖತ್ ತಯಾರಿ ಮಾಡಿಕೊಂಡು ಶೂಟಿಂಗ್ ಆರಂಭಿಸಿದ್ದಾರೆ. ಕಂಗನಾ ವಿಭಿನ್ನ ಪಾತ್ರ ಆಯ್ಕೆ ಮಾಡಿಕೊಂಡಿರುವುದು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ. ಇಂದಿರಾ ಪಾತ್ರಕ್ಕೆ ಬಣ್ಣ ಹಚ್ಚಿರುವ ಕಂಗನಾ ಲುಕ್ ಕೂಡ ಎಲ್ಲರ ಹೃದಯ ಗೆದ್ದಿತ್ತು. ಈ ಸಿನಿಮಾಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.