ಸುಶಾಂತ್‌ಗೆ ನ್ಯಾಯ ದೊರಕಿಸುವುದನ್ನು ತನ್ನದೇ ಕೆಲಸದಂತೆ ಆಡುವ ಅರ್ಧ ಕಲಿತ ನಟಿಯ ಅಭಿಪ್ರಾಯದಲ್ಲಿ ಯಾರಿಗೂ ಆಸಕ್ತಿ ಇಲ್ಲ ಎಂದು ಕ್ವೀನ್ ನಟಿ ಕಂಗನಾಗೆ ಟಾಂಗ್ ನೀಡಿದ್ದ ಹಿರಿಯ ನಟ ನಾಝಿರುದ್ದೀನ್ ಶಾ ವಿರುದ್ಧ ಕಂಗನಾ ಫ್ಯಾನ್ಸ್ ಗರಂ ಆಗಿದ್ದಾರೆ.

ಭಾರತದಲ್ಲಿ ಲಿಂಗ ಭೇದ ಬಹುತೇಕ ಕಡಿಮೆಯಾಗುತ್ತಿದೆ. ಆದರೆ ಸುಶಿಕ್ಷಿತರೂ ಹೀಗೆ ಯೋಚಿಸುತ್ತಾರೆ ಎನ್ನುವುದನ್ನು ತೋರಿಸಿಕೊಟ್ಟಿದ್ದು ಹಿರಿಯ ನಟ ನಾಝಿರುದ್ದೀನ್ ಶಾ ಹೇಳಿಕೆ.

ಮೂವಿ ಮಾಫಿಯಾವೂ ಇಲ್ಲ, ಸುಶಾಂತ್ ಬಗ್ಗೆ ಅಪ್ಡೇಟ್‌ ನನಗಿಲ್ಲ; ನಟ ನಸೀರುದ್ದೀನ್ ಹೇಳಿಕೆ ವೈರಲ್!

ನಟಿ ಕಂಗನಾ ರಣಾವತ್ ವಿರುದ್ಧ ಹಿರಿಯ ನಟ ಕೊಟ್ಟಿರುವ ಹೇಳಿಕೆ ವಿರುದ್ಧ ಕ್ವೀನ್‌ ಫ್ಯಾನ್ಸ್ ಫುಲ್ ಗರಂ ಆಗಿದ್ದಾರೆ. ಇತ್ತೀಚೆಗೆ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಸಂಬಂಧಿಸಿ ಪ್ರತಿಕ್ರಿಯಿಸಿದ ನಾಝೀರುದ್ದೀನ್ ಸಂತಪಾ ವ್ಯಕ್ತಪಡಿಸಿದ್ದರು. ಆದರೆ ಬಹಳಷ್ಟು ಜನ ಇದನ್ನೇ ಇಂಡಸ್ಟ್ರಿಗೆ ಮರಳುವ ದಾರಿಯಾಗಿಸಿಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.

ಸುಶಾಂತ್ ಕೇಸ್ CBIಗೆ: ಸುಪ್ರೀಂ ತೀರ್ಪು ಸ್ವಾಗತಿಸಿದ ಬಾಲಿವುಡ್ ಸ್ಟಾರ್ಸ್‌

ಸುಶಾಂತ್‌ಗೆ ನ್ಯಾಯ ದೊರಕಿಸುವುದನ್ನು ತನ್ನದೇ ಕೆಲಸದಂತೆ ಆಡುವ ಅರ್ಧ ಕಲಿತ ನಟಿಯ ಅಭಿಪ್ರಾಯದಲ್ಲಿ ಯಾರಿಗೂ ಆಸಕ್ತಿ ಇಲ್ಲ ಎಂದು ಕ್ವೀನ್ ನಟಿ ಕಂಗನಾಗೆ ಟಾಂಗ್ ನೀಡಿದ್ದರು.

ನನಗೆ ದೇಶದ ನ್ಯಾಯ, ಕಾನೂನು ವ್ಯವಸ್ಥೆಯಲ್ಲಿ ನಂಬಿಕೆ ಇದೆ ಎಂದು ಹೇಳಿದ್ದಾರೆ. ಸುಶಾಂತ್ ಸಾವಿನ ನಂತರ ಕಂಗನಾ ಬಾಲಿವುಡ್ ನೆಪೊಟಿಸಂ ಬಗ್ಗೆ ಟೀಕಿಸುತ್ತಲೇ ಬಂದಿದ್ದಾರೆ.

ಕರಣ್‌ನಿಂದ ಪದ್ಮಶ್ರೀ ಹಿಂಪಡೆಯಲು ಸರ್ಕಾರಕ್ಕೆ ಕಂಗನಾ ಮನವಿ

ನಾಸಿರುದ್ದೀನ್ ಶಾಗೆ ಪ್ರತಿಕ್ರಿಯಿಸಿದ ನಟಿ, ನಾನು ಪ್ರಕಾಶ್ ಪಡುಕೋಣೆ ಅಥವಾ ಅನಿಲ್ ಕಪೂರ್ ಮಗಳಾಗಿದ್ರೆ ನೀವಿದನ್ನು ನನಗೆ ಹೇಳುತ್ತಿದ್ದಿರಾ ಎಂದ ಪ್ರಶ್ನಿಸಿದ್ದಾರೆ. ಈ ರೀತಿ ಕಮೆಂಟ್ ಮಾಡಿ ನಿಮ್ಮ ಮೇಲಿನ ಗೌರವ ನೀವಾಗಿ ಕಳೆದುಕೊಂಡಿದ್ದೀರಿ ಎಂದು ನೆಟ್ಟಿಗರು ನಾಝೀರುದ್ದೀನ್‌ಗೆ ಪ್ರತಿಕ್ರಿಯಿಸಿದ್ದಾರೆ.