ನಟ ಅಕ್ಷಯ್ ಕುಮಾರ್, ನಟಿ ಕಂಗನಾ ರಣಾವತ್, ಕೃತಿ ಸನೋನ್ ಸೇರಿ ಹಲವು ಬಾಲಿವುಡ್ ಸೆಲೆಬ್ರಿಟಿಗಳು ಸುಶಾಂತ್ ಸಿಂಗ್ ರಜಪೂತ್ ಕೇಸಿನಲ್ಲಿ ಸುಪ್ರೀಂ ತೀರ್ಪನ್ನು ಸ್ವಾಗತಿಸಿದ್ದಾರೆ. 

ನಟ ಅಕ್ಷಯ್ ಕುಮಾರ್, ನಟಿ ಕಂಗನಾ ರಣಾವತ್, ಕೃತಿ ಸನೋನ್ ಸೇರಿ ಹಲವು ಬಾಲಿವುಡ್ ಸೆಲೆಬ್ರಿಟಿಗಳು ಸುಶಾಂತ್ ಸಿಂಗ್ ರಜಪೂತ್ ಕೇಸಿನಲ್ಲಿ ಸುಪ್ರೀಂ ತೀರ್ಪನ್ನು ಸ್ವಾಗತಿಸಿದ್ದಾರೆ.

ಸುಶಾಂತ್ ಸಿಂಗ್ ರಜಪೂತ್ ಪ್ರಕರಣವನ್ನು ಮುಂಬೈ ಪೊಲೀಸರಿಗೆ ಹಸ್ತಾಂತರಿಸಬೇಕೆಂದು ನಟಿ, ಸುಶಾಂತ್ ಗೆಳತಿ ರಿಯಾ ಚಕ್ರವರ್ತಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಇಂದು ವಿಚಾರಣೆ ನಡೆಸಿದೆ. ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು ಹಾಗೂ ಮುಂಬೈ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ಸಾಕ್ಷ್ಯಾಧಾರಗಳನ್ನು ಸಿಬಿಐಗೆ ನೀಡಬೇಕೆಂದು ಕೋರ್ಟ್‌ ಸೂಚಿಸಿದೆ.

"

ರಿಯಾ ಚಕ್ರವರ್ತಿ ಅರ್ಜಿ ವಿಚಾರಣೆ: ಸುಶಾಂತ್ ಕೇಸ್ CBIಗೆ ಹಸ್ತಾಂತರ

ಸುಶಾಂತ್ ಸಾವಿನ ತನಿಖೆ ಸಿಬಿಐಗೆ ಹಸ್ತಾಂತರಿಸಬೇಕೆಂದು ಅಭಿಮಾನಿಗಳು ಉತ್ತಾಯಿಸುತ್ತಿದ್ದರು. #CBIforSSR ಟ್ವಿಟರ್‌ನಲ್ಲಿ ಟ್ರೆಂಡ್ ಆಗಿತ್ತು. ಇದೀಗ ಸುಶಾಂತ್ ಸಿಂಗ್ ಪ್ರಕರಣ ಸಿಬಿಐಗೆ ವಹಿಸಿರುವುದನ್ನು ಸ್ವಾಗತಿಸಿದ ನಟ ಅಕ್ಷಯ್ ಕುಮಾರ್ ಸತ್ಯ ಹೊರಗೆ ಬರಲಿ ಎಂದು ಟ್ವೀಟ್ ಮಾಡಿದ್ದಾರೆ.

Scroll to load tweet…

ನಟಿ ಕಂಗನಾ ರಣಾವತ್ ಟ್ವೀಟ್ ಮಾಡಿಪ್ರಿಯೊಬ್ಬ SSR ವಾರಿಯರ್‌ಗೆ ಅಭಿನಂದನೆಗಳು. ಅಮೇಝಿಂಗ್ ಎಂದು ಬರೆದಿದ್ದಾರೆ. ಕಳೆದ ಎರಡು ತಿಂಗಳಲ್ಲಿ ಎಲ್ಲವೂ ಅಸ್ಪಷ್ಟವಾಗಿತ್ತು. ಇದೀಗ ಸುಶಾಂತ್ ವಿಚಾರದಲ್ಲಿ ಸತ್ಯ ಹೊರ ಬರುವ ಭರವಸೆ ಬಂದಿದೆ. ನಂಬಿಕೆ ಇರಿಸೋಣ ಎಂದು ಕೃತಿ ಸೆನೋನ್ ಟ್ವೀಟ್ ಮಾಡಿದ್ದಾರೆ.

Scroll to load tweet…
Scroll to load tweet…

ಶೀಘ್ರದಲ್ಲಿಯೇ ಸತ್ಯ ಹೊರ ಬರುವ ನಂಬಿಕೆ ಇದೆ. ನಟ ಕುಟುಂಬ, ಅಭಿಮಾನಿಗಳಿಗಾಗಿ ಇನ್ನೂ ಮುಖ್ಯವಾಗಿ ನಟ ಆತ್ಮಕ್ಕಾಗಿ ಸತ್ಯ ಹೊರ ಬರಲಿ.. ನ್ಯಾಯ ಜಯಿಸುತ್ತದೆ ಎಂದು ನಟಿ ಶಿಲ್ಪಾ ಶೆಟ್ಟಿ ಕುಂದ್ರಾ ಟ್ವಿಟ್ ಮಾಡಿದ್ದಾರೆ.

Scroll to load tweet…

ಇದು ಘನಾತ್ಮಕ ಹೆಜ್ಜೆ. ಈ ಕ್ಷಣವನ್ನು ಗೌರವಿಸಿ, ಸಿಬಿಐ ತನ್ನ ಕೆಲಸ ಮಾಡಲಿ. ನಮ್ಮದೇ ಆದ ತೀರ್ಮಾನಳಿಗೆ ಬರುವುದನ್ನು ನಿಲ್ಲಿಸೋಣ ಎಂದಿದ್ದಾರೆ ನಟಿ ಪರಿಣಿತಿ ಚೋಪ್ರಾ.

Scroll to load tweet…