ತಮ್ಮ ಬೋಲ್ಡ್ ಮಾತು, ಮುಕ್ತ ಅಭಿಪ್ರಾಯಗಳಿಂದ ಸುದ್ದಿಯಲ್ಲಿರೋ ಬಾಲಿವುಡ್ ನಟಿ ಕಂಗನಾ ರಣಾವತ್ ಇದೀಗ ನಿರ್ಮಾಪಕ ಕರಣ್‌ಗೆ ಸರ್ಕಾರ ನೀಡಿದ ಪದ್ಮಶ್ರೀ ಪ್ರಶಸ್ತಿಯನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದ್ದಾರೆ.

ಸುಶಾಂತ್ ಕೆರಿಯರ್ ನಾಶ ಮಾಡುವಲ್ಲಿ ಕರಣ್ ಹೇಗೆ ವರ್ತಿಸಿದ, ಯಾವ ರೀತಿ ಕಾರಣನಾದ ಎಂಬುದನ್ನು ಹೇಳಿ ಯುಆರ್‌ಐ ಯುದ್ಧ ಸಂದರ್ಭ ಪಾಕಿಸ್ತಾನವನ್ನು ಬೆಂಬಲಿಸಿದ್ದ. ಈಗ ಆರ್ಮಿ ವಿರುದ್ಧವಾಗಿ ಸಿನಿಮಾ ಮಾಡಿದ್ದಾನೆ ಎಂದಿದ್ದಾರೆ.

ಪತಿ ಸೈಫ್ ಬರ್ತ್‌ಡೇ ಪಾರ್ಟಿಯಲ್ಲಿ ಕರೀನಾ ಧರಿಸಿದ ಕಫ್ತಾನ್ ನೋಡೋಕಷ್ಟೇ ಸಿಂಪಲ್, ಬೆಲೆ ಮಾತ್ರ ದುಬಾರಿ

ಕರಣ್ ಜೋಹಾರ್‌ಗೆ ನೀಡಲಾದ ಪದ್ಮಶ್ರೀಯನ್ನು ಮರಳಿ ಪಡೆಯಬೇಕೆಂದು ನಾನು ಸರ್ಕಾರವನ್ನು ಕೇಳುತ್ತೇನೆ. ಬಹಿರಂಗವಾಗಿ ನನ್ನನ್ನು ಬೆದರಿಸಿದ್ದಲ್ಲದೆ, ಸಿನಿಮಾ ಇಂಡಸ್ಟ್ರಿ ಬಿಟ್ಟು ಹೋಗುವಂತೆ ಹೇಳಿದ್ದಾರೆ. ಸುಶಾಂತ್ ಕೆರಿಯರ್ ಹಾಳು ಮಾಡಿದ್ದಾರೆ ಎಂದು ಆರೋಪಿಸಿ ಟ್ವೀಟ್ ಮಾಡಿದ್ದಾರೆ.

ಸುಶಾಂತ್ ಸಾವಿನ ಪ್ರಕರಣ ಸಿಬಿಐ ತನಿಖೆಗಾಗಿ ಕಂಗನಾ ಒತ್ತಾಯಿಸುತ್ತಲೇ ಬಂದಿದ್ದಾರೆ. ಸುಶಾಂತ್ ಸಾವಿನ ನಂತರ ಕಂಗನಾ  ಬಾಲಿವುಡ್ ನೆಪೊಟಿಸಂ ಬಗ್ಗೆ ಹೆಚ್ಚು ಮಾತನಾಡುತ್ತಿದ್ದಾರೆ.