ಬಾಲಿವುಡ್‌ ಚಿತ್ರರಂಗದ ಹಿರಿಯ ಕಲಾವಿದ ನಸೀರುದ್ದೀನ್‌ ಶಾ ಇತ್ತೀಚಿಗೆ ಭಾಗಿಯಾಗಿದ್ದ ಸಂದರ್ಶನವೊಂದರಲ್ಲಿ ಮೂವಿ ಮಾಫಿಯಾ, ನೆಪೋಟಿಸಂ ಹಾಗೂ ಸುಶಾಂತ್ ಸಿಂಗ್ ಸಾವಿನ ಬಗ್ಗೆ ಮಾತನಾಡಿದ್ದಾರೆ. ಅದರಲ್ಲೂ ಚಿತ್ರರಂಗದ ಬಗ್ಗೆ ಅವರಿಗಿರುವ ಅಪ್ಡೇಟ್ ಕೇಳಿದ್ರೆ ಶಾಕ್ ಆಗ್ತೀರಾ...

ಸುಶಾಂತ್ ಆತ್ಮಹತ್ಯೆ ಪ್ರಕರಣ: 

'ಇದು ನಿಜಕ್ಕೂ ಅಸಹ್ಯ ತರಿಸುವ ವಿಚಾರ, ನಮ್ಮ ಚಿತ್ರರಂಗದಲ್ಲಿ ಹೀಗೆಲ್ಲಾ ಆಗುತ್ತಿರುವುದು ಹೇಗೆ? ಇಂಥ ಅಮಾಯಕ ಹುಡುಗರೇ ಟಾರ್ಗೆಟ್ ಯಾಕೆ? ನನಗೆ ನಿಜಕ್ಕೂ ಸುಶಾಂತ್ ವೈಯಕ್ತಿಕವಾಗಿ ಗೊತ್ತಿಲ್ಲ. ಆದರೆ ಅವನನ್ನು ನೋಡಿದರೆ ಚಿತ್ರರಂಗದಲ್ಲಿ ಸಾಧಿಸುವಂಥ ವ್ಯಕ್ತಿ ಎನಿಸುತ್ತಾನೆ. ಅದಾದ ನಂತರ ಅವನ ಸಾವಿನ ಬಗ್ಗೆ ಹರಿದಾಡುತ್ತಿರುವ ವಿಚಾರಗಳ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುತ್ತಿಲ್ಲ. ಎಲ್ಲರ ಮನಸ್ಸಿನಲ್ಲೂ ನೋವಿದೆ. ಎಲ್ಲರಿಗೂ ತಮ್ಮದೇ ಆದ ಅಭಿಪ್ರಾಯಗಳಿರುತ್ತವೆ. ಅದರಲ್ಲೂ ಈಗ ಕಮರ್ಷಿಯಲ್ ಇಂಡಸ್ಟ್ರಿಯಲ್ಲಿ ಏನು ಬೇಕಾದರೂ ಆಗುತ್ತದೆ. ಜನರು ತಮ್ಮ ಅಭಿಪ್ರಾಯಗಳನ್ನು ಮೀಡಿಯಾದಲ್ಲಿ ವಾಂತಿ ಮಾಡುತ್ತಿದ್ದಾರೆ. ನಿಮ್ಮ ಅನಿಸಿಕೆಗಳನ್ನು ನಿಮ್ಮಲ್ಲಿ ಇಟ್ಟುಕೊಳ್ಳಿ. ಯಾರಿಗೆ ಇದೆಲ್ಲಾ ಕೇಳಲು ಇಷ್ಟವಾಗುತ್ತದೆ ಹೇಳಿ? ನಿಮ್ಮ ಮಾತುಗಳಿಂದ ಆಗಿರುವ ಅನಾಹುತಕ್ಕೆ ನ್ಯಾಯ ಸಿಗುತ್ತದೆ ಅಂದ್ರೆ ಖಂಡಿವಾಗಿಯೂ ಮುಂದುವರೆಯಬಹುದು. ಇಲ್ಲವಾದರೆ ಅರ್ಧ ವಿಚಾರ ತಿಳಿದುಕೊಂಡು ಮಾತನಾಡಬಾರದು,' ಎಂದು ನಸೀರುದ್ದೀನ್‌ ಹೇಳಿದ್ದಾರೆ.

ಮೂವಿ ಮಾಫಿಯಾ ನಿಜಾನಾ?

'ಇಲ್ಲಿ ಕೆಲವೊಂದು ಕಾಲ್ಪನಿಕ ಮನಸ್ಸುಗಳು ಸೇರಿಕೊಂಡು ಮಾಡಿರುವ ಮಿಶ್ರಣ ಈ ಮಾಫಿಯಾ ಅನ್ನುವ ಪದ. ನನಗೆ ಕೆಲವೊಬ್ಬರ ಜೊತೆ ಅಭಿನಯಿಸಿದ್ದಾಗ ಅವರಲ್ಲಿ ಉತ್ತಮವಾದ ಕಲೆ ಇದೆ ಅನಿಸಿದರೆ, ಖಂಡಿತವಾಗಿಯೂ ನನಗೆ ತಿಳಿದವರ ಮೂಲಕ ಅವರಿಗೆ ಸಹಾಯ ಮಾಡಿಸುತ್ತೇನೆ. ಅವಕಾಶ ಕೊಡಿಸುವೆ.  ಆದರೆ ಕೆಲವರು ಸೆಲೆಬ್ರಿಟಿಗಳ ಮಕ್ಕಳೂ ಆಗಿರುತ್ತಾರೆ. ಆದರೆ ಇದರಲ್ಲಿಅವರ ತಪ್ಪು ಏನಿದೆ? ಇಲ್ಲಿ ಯಾವ ಮಾಫಿಯಾನೂ ಇಲ್ಲ. ನನ್ನ 40-45 ವರ್ಷ ಜರ್ನಿಯಲ್ಲಿ ಇಂಥ ಯಾವ ವಿಚಾರಗಳು ಸಾಧಿಸಬೇಕಾದ ಗುರಿಗೆ ಅಡ್ಡ ಬಂದಿಲ್ಲ. ಇನ್ನು ನನಗೆ ಹೆಚ್ಚಿನ ಪ್ರೀತಿ ಹಾಗೂ ಅವಕಾಶಗಳು ಸಿಕ್ಕಿವೆ,' ಎಂದು ಮಾಫಿಯಾ ಬಗ್ಗೆ ಮಾತನಾಡಿದ್ದಾರೆ.

ಪಶು ಆಸ್ಪತ್ರೆ ಸಿಬ್ಬಂದಿ ಮೇಲೆ ನಸೀರುದ್ದೀನ್ ಶಾ ಪುತ್ರಿಯಿಂದ ಹಲ್ಲೆ!

ಸೆಲೆಬ್ರಿಟಿ ಮಕ್ಕಳಿಗೆ ಅವಕಾಶ ಇಲ್ಲ:

'ಸೆಲೆಬ್ರಿಟಿ ಮಕ್ಕಳು ಎಂದು ಅವರು ಚಿತ್ರರಂಗಕ್ಕೆ ಕಾಲಿಡಬಹುದು. ಆದರೆ ಅವರ ಅಭಿನಯ ಇಷ್ಟವಾಗಿಲ್ಲ ಅಂದರೆ ಜನರು ಒಪ್ಪಿಕೊಳ್ಳುವುದಿಲ್ಲ. ನನ್ನ ಮಗನಿಗೆ ನನ್ನಿಂದ ಅವಕಾಶ ಖಂಡಿತವಾಗಿಯೂ ಸಿಕ್ಕಿಲ್ಲ. ನಾನು ಸಹಾಯವನ್ನೂ ಮಾಡಿಲ್ಲ. ಅವನ ಪರಿಶ್ರಮ ಹಾಗೂ ನಟನಾಗಲು ಅನೇಕ ರೀತಿಯ ತರಬೇತಿಗಳನ್ನು ಪಡೆದುಕೊಂಡಿದ್ದಾನೆ. ಹೊರಗಿನವರು-ಒಳಗಿನವರು ಎಂಬುದೆಲ್ಲಾ ಬುಲ್‌ಶಿಟ್‌. ಚಿತ್ರರಂಗಕ್ಕೆ ಕಾಲಿಟ್ಟು ಬೆಳೆಸಿಕೊಳ್ಳುವ ಸಂಪರ್ಕ, ಜನರ ಪ್ರೀತಿ ಹಾಗೂ ಅವಕಾಶಗಳು ಅವರ ಕೈಗೆ ಬಿಟ್ಟಿದ್ದು. ಪೋಷಕರಾಗಿ ನಾನು ಸಿನಿಮಾ ನೋಡಿ, ಸಿನಿಮಾ ನೋಡಿ ಎಂದು ಜನರಿಗೆ ಒತ್ತಾಯ ಮಾಡಲು ಆಗುವುದಿಲ್ಲ' ಎಂದು ನೇರ ನುಡಿಯಲ್ಲಿ ಉತ್ತರಿಸಿದ್ದಾರೆ.