Asianet Suvarna News Asianet Suvarna News

ನಾನು ಗಾಂಧಿವಾದಿಯಲ್ಲ, ನೇತವಾದಿ; ನಟಿ ಕಂಗನಾ ರಣಾವತ್


ನಟಿ ಕಂಗನಾ ರಣಾವತ್ ತನನ್ನು ತಾನು ನೇತಾವಾಡಿ (ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಅನುಯಾಯಿ) ಗಾಂಧಿವಾದಿ ಅಲ್ಲ ಎಂದು ಹೇಳಿದ್ದಾರೆ. ಕರ್ತವ್ಯ ಪಥ ಉದ್ಘಾಟನೆ ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಕಂಗನಾ ಹೀಗೆ ಹೇಳಿದರು. 

Kangana Ranaut calls herself Netawadi not Gandhiwadi after inauguration Kartavya Path sgk
Author
First Published Sep 9, 2022, 3:03 PM IST

ನಟಿ ಕಂಗನಾ ರಣಾವತ್ ತನನ್ನು ತಾನು ನೇತಾವಾಡಿ (ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಅನುಯಾಯಿ) ಗಾಂಧಿವಾದಿ ಅಲ್ಲ ಎಂದು ಹೇಳಿದ್ದಾರೆ.  ಗುರುವಾರ (ಸೆಪ್ಟಂಬರ್ 8) ದೆಹಲಿಯ ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್‌ವರೆಗೆ ಹೊಸದಾಗಿ ನಾಮಕರಣಗೊಂಡ ಕರ್ತವ್ಯ ಪಥವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ಈ ಕಾರ್ಯಕ್ರಮಕ್ಕೆ ನಟಿ ಕಂಗನಾ ರಣಾವತ್​ ಕೂಡ ಹಾಜರಾಗಿದ್ದರು.  ಕರ್ತವ್ಯ ಪಥ ಉದ್ಘಾಟನೆ ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಕಂಗನಾ,‘ನಾನು ಗಾಂಧಿವಾದಿ ಅಲ್ಲ, ನೇತಾವಾದಿ’ ಎಂದು ಹೇಳಿದರು.  'ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಸುಭಾಷ್​ ಚಂದ್ರ ಬೋಸ್ ಹಾಗೂ ವೀರ ಸಾವರ್ಕರ್​ ಅವರನ್ನು ಕಡೆಗಣಿಸಲಾಗಿದೆ. ಕೇವಲ ಉಪವಾಸ ಸತ್ಯಾಗ್ರಹ ಹಾಗೂ ದಂಡಿ ಸತ್ಯಾಗ್ರಹದಿಂದ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದಲ್ಲ’ ಎಂದು ಕಂಗನಾ ಹೇಳಿದ್ದಾರೆ.

ಬಾಲಿವುಡ್ ನಟಿ ಕಂಗನಾ ರಣಾವತ್ ಸದಾ ಒಂದಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಸದಾ ವಿವಾದಗಳ ಮೂಲಕ ಸುದ್ದಿಯಲ್ಲಿರುವ ಕಂಗನಾ ಇದೀಗ ಮತ್ತೊಂದು ಹೇಳಿಕೆ ನೀಡಿ ಮತ್ತೆ ಸುದ್ದಿಯಲ್ಲಿದ್ದಾರೆ. ಸಿನಿಮಾಗಿಂತಲೂ ಹೆಚ್ಚಾಗಿ ಅವರು ಬೇರೆ ಕಾರಣದಿಂದಲೇ ಸುದ್ದಿ ಆಗುತ್ತಾರೆ. ರಾಜಕೀಯದ ಹಲವು ವಿಷಯಗಳಲ್ಲಿ ಕಂಗನಾ ಸದಾ ಮೂಗು ತೂರಿಸುತ್ತಾರೆ. ಇದೀಗ ನೇತವಾದಿ ಎಂದಿರುವ ಕಂಗನಾ ತಾನು ಮಾತನಾಡುವ ರೀತಿ ತೊಂದರೆಯಾಗಿದೆ ಎಂದು ಹೇಳಿದ್ದಾರೆ. 

‘ನಾನು ಗಾಂಧಿವಾದಿ ಅಲ್ಲ, ನೇತಾವಾದಿ ಎಂದು ಮೊದಲಿನಿಂದಲೂ ಹೇಳುತ್ತಾ ಬಂದಿದ್ದೇನೆ. ಹಾಗಾಗಿ ನಾನು ಮಾತನಾಡುವ ರೀತಿಯಿಂದಾಗಿ ಕೆಲವರಿಗೆ ತೊಂದರೆ ಆಗಿದೆ. ಎಲ್ಲರಿಗೂ ಅವರದ್ದೇ ಆದಂತಹ ಆಲೋಚನಾ ರೀತಿ ಇರುತ್ತದೆ. ಲಕ್ಷಾಂತರ ಜನರು ಪ್ರಾಣ ತ್ಯಾಗ ಮಾಡಿದರು. 2ನೇ ವಿಶ್ವ ಯುದ್ಧದಲ್ಲಿ ಭಾಗವಹಿಸಿ ಭಾರತವನ್ನು ಹೀನಾಯ ಸ್ಥಿತಿಯಿಂದ ಹೊರತರಲು ನೇತಾಜಿ ಪ್ರಪಂಚಾದ್ಯಂತ ಅಭಿಯಾನ ಮಾಡಿದರು. ಅವರು ತಮ್ಮದೇ ಸೈನ್ಯ ಕಟ್ಟಿದ್ದರು. ಅವರಿಗೆ ಸ್ವಾತಂತ್ರ್ಯದ ಹಸಿವು ಇತ್ತು. ಅಧಿಕಾರದ ಹಸಿವು ಇರಲಿಲ್ಲ’ ಎಂದು ಕಂಗನಾ ರಣಾವತ್​ ಹೇಳಿದ್ದಾರೆ.

'ಅಸ್ಲಾಂ' ಹೆಸರನ್ನು ಬದಲಾಯಿಸಿಕೊಂಡಿದ್ದೇಕೆ ಮಹೇಶ್ ಭಟ್? ಆಲಿಯಾ ತಂದೆ ವಿರುದ್ಧ ಕಂಗನಾ ವ್ಯಂಗ್ಯ

ಇನ್ನು ಕರ್ತ್ಯವ ಪಥ ಉದ್ಘಾಟನೆ ಬಗ್ಗೆಯೂ ಮಾತನಾಡಿದ ಕಂಗನಾ, ‘ಇದು ಕರ್ತವ್ಯದ ಪಥ. ಅನೇಕ ತಲೆಮಾರುಗಳಿಗೆ ಇದು ಮಾದರಿ ಆಗಲಿದೆ. ರಾಜಪಥ ಎಂದಿದ್ದರೆ ಅದು ಮಾದರಿ ಆಗುವುದಿಲ್ಲ. ಕರ್ತವ್ಯ ಪಥ ಎಂಬುದು ಜನರಿಗೆ ಮಾರ್ಗದರ್ಶನ ನೀಡುತ್ತದೆ’ ಎಂದು ಕಂಗನಾ ಹೇಳಿದರು. 

ಫಿಲ್ಮ್ ಫೇರ್ ಪ್ರಶಸ್ತಿ ವಿರುದ್ಧ ನಟಿ ಕಂಗನಾ ಗರಂ; ನಾಮನಿರ್ದೇಶನ ಹಿಂಪಡೆದ ಕಮಿಟಿ

ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ ಕಂಗನಾ ರಣಾವತ್ ಕೊನಯದಾಗಿ ಧಾಕಡ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಆ ಸಿನಿಮಾ ಹೀನಾಯವಾಗಿ ಸೋಲು ಕಂಡಿತ್ತು. ಸಿಕ್ಕಾಪಟ್ಟೆ ಪ್ರಮೋಷನ್ ಮಾಡಿದ್ದ ಕಂಗನಾ ಧಾಕಡ್ ಸೋಲು ಭಾರಿ ನಿರಾಸೆ ಮೂಡಿಸಿತ್ತು. ಕಂಗನಾ ಸಿನಿಮಾಗಳು ಬ್ಯಾಕ್​ ಟು ಬ್ಯಾಕ್​ ಸೋಲುತ್ತಿವೆ. ಧಾಕಡ್ ಸಿನಿಮಾಗೂ ಮೊದಲು ಬಂದ ‘ಪಂಗ’, ‘ತಲೈವಿ’, ‘ಜಡ್ಜ್​ಮೆಂಟಲ್​ ಹೈ ಕ್ಯಾ’ ಸಿನಿಮಾಗಳು ಕೂಡ ಬಾಕ್ಸ್ ಆಫೀಸ್ ನಲ್ಲಿ ಹೀನಾಯ ಸೋಲು ಕಂಡಿವೆ. ಸದ್ಯ ‘ಎಮರ್ಜೆನ್ಸಿ’ ಚಿತ್ರದಲ್ಲಿ ಕಂಗನಾ ಬ್ಯುಸಿ ಆಗಿದ್ದಾರೆ.

Follow Us:
Download App:
  • android
  • ios