ಫಿಲ್ಮ್ ಫೇರ್ ಪ್ರಶಸ್ತಿ ವಿರುದ್ಧ ನಟಿ ಕಂಗನಾ ಗರಂ; ನಾಮನಿರ್ದೇಶನ ಹಿಂಪಡೆದ ಕಮಿಟಿ

ಫಿಲ್ಮ್ ಫೇರ್ ಪ್ರಶಸ್ತಿ ವಿರುದ್ಧ ನಟಿ ಕಂಗನಾ ರೊಚ್ಚಿಗೆದ್ದಿದ್ದಾರೆ. ಕಂಗನಾ ಫಿಲ್ಮ್ ಫೇರ್ ಪ್ರಶಸ್ತಿ ವಿರುದ್ಧ ಗರಂ ಆದ ಬೆನ್ನಲ್ಲೇ ಕಂಗನಾ ನಾಮನಿರ್ಧೇಶನವನ್ನು ವಾಪಾಸ್ ಪಡೆದಿದೆ ಫಿಲ್ಮ್ ಫೇರ್ ಕಮಿಟಿ. 

Filmfare Cancels Kangana Ranauts Nomination After Her Claims sgk

ನಟಿ ಕಂಗನಾ ರಣಾವತ್ ವಿವಾದಗಳ ಮೂಲಕವೆ ಹೆಚ್ಚು ಸದ್ದು ಮಾಡುತ್ತಿದ್ದಾರೆ. ಇದೀಗ ಕಂಗನಾ ಮತ್ತೊಂದು ವಿವಾದ ಸುದ್ದಿಯಾಗಿದೆ. ಫಿಲ್ಮ್ ಫೇರ್ ಪ್ರಶಸ್ತಿ ವಿರುದ್ಧ ನಟಿ ಕಂಗನಾ ರೊಚ್ಚಿಗೆದ್ದಿದ್ದಾರೆ. ಕಂಗನಾ ಫಿಲ್ಮ್ ಫೇರ್ ಪ್ರಶಸ್ತಿ ವಿರುದ್ಧ ಗರಂ ಆದ ಬೆನ್ನಲ್ಲೇ ಕಂಗನಾ ನಾಮನಿರ್ಧೇಶನವನ್ನು ವಾಪಾಸ್ ಪಡೆದಿದೆ ಫಿಲ್ಮ್ ಫೇರ್ ಕಮಿಟಿ. ಕಂಗನಾ ನಟನೆಯ ತಲೈವಿ ಸಿನಿಮಾ ಫಿಲ್ಮ್ ಫೇರ್ ಪ್ರಶಸ್ತಿಗೆ ನಾಮ ನಿರ್ದೇಶನವಾಗಿತ್ತು. 

ಕಂಗನಾ ರಣಾವತ್, ಫಿಲ್ಮ್ ಫೇರ್ ಆಯೋಜಕರ ವಿರುದ್ಧ ಅನೇಕ ಆರೋಪಗಳನ್ನು ಹೊರಿಸಿದ್ದಾರೆ. ತನ್ನ ಜೊತೆ ನಾಮಿನೇಟ್ ಆಗಿರುವ ಉಳಿದ ನಟಿಯರನ್ನು ಕಂಗನಾ ರಣಾವತ್ ಜರಿದಿದ್ದಾರೆ. ಕೆಳಮಟ್ಟದ ನಟಿಯರ ಜೊತೆ ತನ್ನನ್ನು ನಾಮನಿರ್ದೇಶನ ಮಾಡಲಾಗದಿದೆ ಎಂದು ಗುಡುಗಿದ್ದಾರೆ. ಕಂಗನಾ ಆರೋಪಗಳ ಬೆನ್ನಲ್ಲೇ ಫಿಲ್ಮ್ ಫೇರ್ ಕಂಗನಾ ಅರೋಪಗಳನ್ನು ತಳ್ಳಿಹಾಕಿದೆ. ತನ್ನ ಅಧಿಕೃತ ಇನ್‌ಸ್ಟಾಗ್ರಾಮ್‌ನಲ್ಲಿ ಸುದೀರ್ಘ ಹೇಳಿಕೆನ್ನು ಬಿಡುಗಡೆ ಮಾಡಿರುವ ಫಿಲ್ಮ್‌ಫೇರ್, ಕಂಗನಾ ಆರೋಪವನ್ನು ಸ್ಪಷ್ಟ ಸುಳ್ಳು ಎಂದು ಸ್ಪಷ್ಟವಾಗಿ ತಳ್ಳಿಹಾಕಿದೆ. ಅಲ್ಲದೆ ಮಹಿಳಾ ವಿಭಾಗದಲ್ಲಿ ಅತ್ಯುತ್ತಮ ನಟಿ ನಾಮನಿರ್ದೇಶನಗೊಂಡಿರುವ ಬಗ್ಗೆ ತಿಳಿಸಲು ಮತ್ತು ಕೇಳಲು ನಟಿಯನ್ನು ಸಂಪರ್ಕಿಸಿದ್ದೇವೆ ಅಷ್ಟೆ ಎಂದು ಹೇಳಿದ್ದಾರೆ. ಆಗಸ್ಟ್ 30 ಮುಂಬೈನಲ್ಲಿ ಪ್ರಶಸ್ತಿ ಸಮಾರಂಭಕ್ಕೆ ಆಮಂತ್ರಣ ಕಳುಹಿಸಲು ಅವರ ವಿಳಾಸಕ್ಕಾಗಿ ಸಂಪರ್ಕ ಮಾಡಿದ್ದು ಅಷ್ಟೆ ಎಂದು ಹೇಳಿದ್ದಾರೆ. 

ಫಿಲ್ಮ್ ಫೇರ್ ಆಯೋಜಕರು ಹೇಳಿದ್ದೇನು?

'ಫಿಲ್ಮ್‌ಫೇರ್ ಪ್ರಶಸ್ತಿಗಳ ಬಗ್ಗೆ ಕಂಗನಾ ರಣಾವತ್ ಅವರು ಮಾಡಿದ ಬೇಜವಾಬ್ದಾರಿ ಹೇಳಿಕೆಗಳನ್ನು ಪರಿಗಣಿಸಿ, ನಾವು ತಲೈವಿ ಚಲನಚಿತ್ರಕ್ಕಾಗಿ ಅವರ ಅತ್ಯುತ್ತಮ ನಟಿ ನಾಮನಿರ್ದೇಶನವನ್ನು ಹಿಂತೆಗೆದುಕೊಳ್ಳುತ್ತೇವೆ. ಅವರ ದುರುದ್ದೇಶಪೂರಿತ ಮತ್ತು ಮಾನಹಾನಿಕರ ಹೇಳಿಕೆಗಳ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಳ್ಳಲು ನಾವು ಸಿದ್ಧರಿದ್ದೇವೆ' ಎಂದು ಹೇಳಿದ್ದಾರೆ. 

ಲಾಲ್‌ ಸಿಂಗ್‌ ಚಡ್ಡಾ ಬಹಿಷ್ಕರಿಸಿ: ಆಮೀರ್ ಚಿತ್ರದ ವಿರುದ್ಧ ಕಂಗನಾ ಕಿಡಿ

ನ್ಯಾಯಾಲಯದಲ್ಲಿ ಭೇಟಿಯಾಗೋಣ ಎಂದ ಕಂಗನಾ

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕಂಗನಾ,  'ಫಿಲ್ಮ್‌ಫೇರ್ ಅಂತಿಮವಾಗಿ ನನ್ನ ಅತ್ಯುತ್ತಮ ನಟಿ ನಾಮನಿರ್ದೇಶನಗಳನ್ನು ಹಿಂತೆಗೆದುಕೊಂಡಿದೆ, ಭ್ರಷ್ಟ ವ್ಯವಸ್ಥೆಯ ವಿರುದ್ಧದ ಈ ಹೋರಾಟದಲ್ಲಿ ನನ್ನನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು. ಆದರೆ ಇದು ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವುದನ್ನು ತಡೆಯುವುದಿಲ್ಲ. ನನ್ನ ಪ್ರಯತ್ನ ಇಂಥ ಅಕ್ರಮ ಕಾರ್ಯಕ್ರಮಗಳನ್ನು ಕೊನೆಗಾಣಿಸುವುದಾಗಿದೆ ಮತ್ತು ಇಂತಹ ದುರುದ್ದೇಶಪೂರಿತ ಪ್ರಶಸ್ತಿ ಕಾರ್ಯಕ್ರಮಗಳನ್ನು ನಿಲ್ಲಿಸುವುದಾಗಿದೆ. ನ್ಯಾಯಾಲಯದಲ್ಲಿ ಭೇಟಿಯಾಗೋಣ ಫಿಲ್ಮ್ ಫೇರ್' ಎಂದು ಹೇಳಿದ್ದಾರೆ. 

ಕಂಗನಾ 'ಎಮರ್ಜನ್ಸಿ'ಯಲ್ಲಿ ಅಟಲ್ ಬಿಹಾರಿ ವಾಜಪೇಯಿಯಾದ ಶ್ರೇಯಸ್ ತಲ್ಪಡೆ; ಫಸ್ಟ್ ಲುಕ್ ರಿಲೀಸ್

ಫಿಲ್ಮ್ ಫೇರ್ ವಿರುದ್ಧ ಕಂಗನಾ ಆರೋಪ

'ನಾನು 2014 ರಿಂದ ಫಿಲ್ಮ್ ಫೇರ್ ನಂತಹ ಅಕ್ರಮ, ಭ್ರಷ್ಟ ಮತ್ತು ಸಂಪೂರ್ಣವಾಗಿ ಅನ್ಯಾಯದ ಅಭ್ಯಾಸಗಳನ್ನು ನಿಷೇಧಿಸಿದ್ದೇನೆ. ಆದರೆ ಈ ವರ್ಷ ಅವರ ಪ್ರಶಸ್ತಿ ಸಮಾರಂಭದಲ್ಲಿ ಭಾಗವಹಿಸಲು ನಾನು ಅವರಿಂದ ಅನೇಕ ಕರೆಗಳನ್ನು ಸ್ವೀಕರಿಸುತ್ತಿದ್ದೇನೆ. ತಲೈವಿಗಾಗಿ ನನ್ನನ್ನು ನಾಮನಿರ್ದೇಶನ ಮಾಡುತ್ತಿದ್ದಾರೆ ಎಂದು ತಿಳಿದು ನನಗೆ ಆಘಾತವಾಗಿದೆ. ಹೇಗಾದರೂ ಇಂತಹ ಭ್ರಷ್ಟ ಆಚರಣೆಗಳನ್ನು ಪ್ರೋತ್ಸಾಹಿಸುವುದು ನನ್ನ ಘನತೆ, ಕೆಲಸದ ನೀತಿ ಮತ್ತು ಮೌಲ್ಯ ವ್ಯವಸ್ಥೆಯ ಕೆಳಗಿದೆ, ಅದಕ್ಕಾಗಿಯೇ ನಾನು ಫಿಲ್ಮ್ ಫೇರ್ ವಿರುದ್ಧ ಮೊಕದ್ದಮೆ ಹೂಡಲು ನಿರ್ಧರಿಸಿದೆ, ಧನ್ಯವಾದಗಳು.' ಎಂದು ಹೇಳಿದರು. 

Latest Videos
Follow Us:
Download App:
  • android
  • ios