Asianet Suvarna News Asianet Suvarna News

Katrina Kaif: ಫ್ಯಾನ್ಸ್​ಗೆ ಗುಡ್​​ ನ್ಯೂಸ್​ ಕೊಟ್ಟ ಕತ್ರಿಕಾ ಕೈಫ್​: ಇನ್​ಸ್ಟಾದಲ್ಲಿ ಪೋಸ್ಟ್​

ಕತ್ರಿನಾ ಕೈಫ್  ಮತ್ತು ವಿಕ್ಕಿ ಕೌಶಲ್ ಮದುವೆಯಾಗಿ ವರ್ಷವಾದ ಬೆನ್ನಲ್ಲೇ ಅವರು ಯಾವಾಗ ಗುಡ್​ನ್ಯೂಸ್​ ಕೊಡುತ್ತಾರೆ ಎಂದು ಅಭಿಮಾನಿಗಳು ಕೇಳುತ್ತಲೇ ಇದ್ದರು. ಈಗ ಇನ್ಸ್​ಟಾದಲ್ಲಿ ಒಂದು ಗುಡ್​ನ್ಯೂಸ್​ ಕೊಟ್ಟಿದ್ದಾರೆ ನಟಿ, ಏನದು?
 

Katrina Kaif flashes radiant smile as she celebrates 70 million followers on Instagram
Author
First Published Jan 24, 2023, 5:23 PM IST

ಬಾಲಿವುಡ್‌ನ ಕ್ಯೂಟ್​ ಕಪಲ್‌ ಕತ್ರಿನಾ ಕೈಫ್ (Katrina Kaif) ಮತ್ತು ವಿಕ್ಕಿ ಕೌಶಲ್ (Vicky Kaushal) ತಮ್ಮ ಮೊದಲ ಮಗುವನ್ನು ನಿರೀಕ್ಷಿಸುತ್ತಿದ್ದಾರೆ ಎಂಬ ಊಹಾಪೋಹಗಳು ವರ್ಷದಿಂದಲೂ ಹರಡುತ್ತಲೇ ಇದೆ. ಆಲಿಯಾ ಭಟ್​ ಗರ್ಭಿಣಿಯಾದಾಗಿನಿಂದಲೂ ಚಿತ್ರರಂಗದ ಭಾವಿ ಅಮ್ಮಂದಿರ ಬಗ್ಗೆ ವಿಷಯ ಹರಿದಾಡುತ್ತಲೇ ಇದೆ. ಅದರಂತೆಯೇ ಕತ್ರಿನಾ ಅವರ ಸುದ್ದಿಯೂ ಹರಿದಾಡುತ್ತಿತ್ತು. ಆದರೆ ಆಲಿಯಾ ಭಟ್​, ಅಮ್ಮನಾಗಿ ಎರಡು ತಿಂಗಳಾದರೂ ಕತ್ರಿಕಾ ಕೈಫ್​ ದಂಪತಿ ಮಾತ್ರ ಮಗುವಿನ ಬಗ್ಗೆ ಮೌನ ತಾಳಿದ್ದಾರೆ. ಅದರೆ ಅವರ ಅಭಿಮಾನಿಗಳು ಮಾತ್ರ ಈ ವಿಷಯವನ್ನು ಬಿಡುತ್ತಿಲ್ಲ. ಈ ಹಿಟ್ ಜೋಡಿ ಗುಡ್ ನ್ಯೂಸ್ ಕೊಡುತ್ತೋ ಅಂತ ಕಾಯ್ತಾ ಇದ್ದಾರೆ. ಆಗಾಗ ಕತ್ರಿನಾ ಕೈಫ್ ಗರ್ಭಿಣಿ (Pregnant) ಅನ್ನು ಸುದ್ದಿ ಸಹ ಹರದಾಡುತ್ತಲೇ ಇದೆ.  ಜುಲೈ 16 ರಂದು ಕತ್ರಿನಾ ಕೈಫ್ ಹುಟ್ಟುಹಬ್ಬವಾಗಿದ್ದರಿಂದ ತಮ್ಮ ಮೊದಲ ಮಗುವನ್ನು ಅಂದೇ ಅನೌನ್ಸ್​ ಮಾಡುತ್ತಾರೆ ಎಂದೂ ಅಭಿಮಾನಿಗಳು ಅಂದುಕೊಂಡಿದ್ದರು.  ಆದರೆ ಜುಲೈ ಮುಗಿದು ಈಗ ಜನವರಿಯೂ ಮುಗಿಯುತ್ತಾ ಬಂದರೂ ಸುದ್ದಿಯ ಪತ್ತೆಯೇ ಇಲ್ಲ ಎಂದು ಅಭಿಮಾನಿಗಳಿಗೆ ನಿರಾಸೆಯಾಗಿದೆ. 

2021ರ ಡಿಸೆಂಬರ್ ತಿಂಗಳಲ್ಲಿ ವಿಕ್ಕಿ ಕೌಶಲ್ ಜೊತೆ ಕತ್ರಿನಾ ಕೈಫ್  ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಯಾವುದೇ ಸಭೆ, ಸಮಾರಂಭ, ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಳ್ಳುತ್ತಿಲ್ಲವಾದ್ದರಿಂದ ಈಕೆ ಗರ್ಭಿಣಿಯಾಗಿರಬಹುದು  ಎಂದು ಅಭಿಮಾನಿಗಳು ಊಹಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ಇಂಬುಕೊಡಲು ಎಂಬಂತೆ,  ಭೂತ್ ಪೊಲೀಸ್ (Bhoot Police) ಚಿತ್ರದ ಪ್ರಚಾರದಲ್ಲಿಯೂ ಅವರು ಕಾಣಿಸಿಕೊಂಡಿರಲಿಲ್ಲ. ಮೇ ತಿಂಗಳಲ್ಲಿ ಕರಣ್ ಜೋಹರ್ ಅವರ 50ನೇ ಹುಟ್ಟುಹಬ್ಬದ ಸಂಭ್ರಮದಲ್ಲೂ ಕತ್ರಿನಾ ಕೈಫ್ ಕಾಣಿಸಿಕೊಂಡಿಲ್ಲ. ಆಗಿನಿಂದಲೇ ಇವರು ಗರ್ಭಿಣಿ ಎನ್ನುವ ಸುದ್ದಿ ಜೋರಾಗಿ ಹರಡಿತ್ತು.  ಸದಾ ಇನ್​ಸ್ಟಾಗ್ರಾಮ್​ನಲ್ಲಿ ಆ್ಯಕ್ಟೀವ್​ ಆಗಿರುತ್ತಿದ್ದ ಅವರು ಅದರಲ್ಲಿಯೂ ಕೆಲ ಕಾಲ ಕಾಣಿಸಿಕೊಳ್ಳದಿದ್ದರಿಂದ ಅಭಿಮಾನಿಗಳು ಇದು ಪ್ರೆಗ್ನೆನ್ಸಿ ಲಕ್ಷಣ ಎಂದು ಅಂದುಕೊಂಡಿದ್ದರು. 

Mala Sinha: ಖ್ಯಾತ ಬಾಲಿವುಡ್​ ತಾರೆ ಬಾತ್​ರೂಂನಲ್ಲಿ ಸಿಕ್ಕ ಕಂತೆ ಕಂತೆ ಹಣ ವೇಶ್ಯಾವಾಟಿಕೆಯದ್ದು!

ಕಳೆದ ಕೆಲವು ದಿನಗಳ ಹಿಂದೆ ಸಲ್ವಾರ್ ಕುರ್ತಾದಲ್ಲಿ ಕತ್ರಿನಾ ಕೈಫ್ ಮುಂಬೈ (Mumbai) ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಆ ವೇಳೆ, ಹೊಟ್ಟೆ ಕಾಣದ ರೀತಿಯಲ್ಲಿ ದುಪ್ಪಟ್ಟಾ ಹಾಕಿಕೊಂಡಿದ್ದರು. ಇದನ್ನು ನೋಡಿ ಕೆಲವರಿಗೆ ಕತ್ರಿನಾ ಗರ್ಭಿಣಿಯೇ ಎಂಬ ಅನುಮಾನ ವ್ಯಕ್ತಪಡಿಸಿದ್ದರು. ಹೊಟ್ಟೆ ಕಾಣಬಾರದು ಎಂದು ದುಪ್ಪಟ್ಟ ಹಾಕಿಕೊಂಡಿದ್ದಾರೆ ಎಂದು ನೆಟ್ಟಿಗರು ಹೇಳಿದ್ರು ಆಗ ಕತ್ರಿನಾ ಕೈಫ್ ತಾವು ಗರ್ಭಿಣಿ ಅಲ್ಲ ಎಂದು ಸ್ಪಷ್ಟಪಡಿಸಿದ್ದರು. ಇದರಿಂದ ಮತ್ತೆ ಅಭಿಮಾನಿಗಳಿಗೆ ನಿರಾಸೆಯಾಗಿತ್ತು. ಆದರೆ ಈಗ ಕತ್ರಿನಾ ಅಭಿಮಾನಿಗಳಿಗೆ ಗುಡ್​ ನ್ಯೂಸ್​ ಒಂದನ್ನು ಕೊಟ್ಟಿದ್ದಾರೆ. 

ನಿಜ. ಖುದ್ದು ಈ ಗುಡ್​ ನ್ಯೂಸ್​ ಅನ್ನು  ಕತ್ರಿನಾ ಕೈಫ್ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್​ ಮಾಡಿಕೊಂಡಿದ್ದಾರೆ.  ಏಳು ಬೆರಳುಗಳನ್ನು ತೋರಿಸಿ ಖುಷಿ ಹಂಚಿಕೊಂಡಿದ್ದಾರೆ ಕತ್ರಿನಾ. ಈಕೆ ಖುಷಿಯಿಂದ ನಗುತ್ತಿರುವ ಫೋಟೋ ಇನ್​ಸ್ಟಾದಲ್ಲಿ ಕಾಣಬಹುದು. ಹಾಗಿದ್ದರೆ ಏನಿದು ಗುಡ್​ನ್ಯೂಸ್​? ಗುಡ್​ನ್ಯೂಸ್​ ಸದ್ಯ ಅಭಿಮಾನಿಗಳು ಕಾಯುತ್ತಿರುವಂತೆ ಅಮ್ಮನಾಗುವ ಸುದ್ದಿಯಲ್ಲ, ಬದಲಿಗೆ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ 70 ಮಿಲಿಯನ್​ ಫಾಲೋವರ್ಸ್​ ಆದರು ಎಂಬ ಬಗ್ಗೆ ಸಂತೋಷ ಹಂಚಿಕೊಂಡಿದ್ದಾರೆ ನಟಿ!

ಆಲಿಯಾ ಭಟ್​ ಮತ್ತೊಮ್ಮೆ ಗರ್ಭಿಣಿನಾ? ಫೋಟೋ ಶೇರ್​ ಮಾಡಿ ತಬ್ಬಿಬ್ಬುಗೊಳಿಸಿದ ನಟಿ

 ಸೋಶಿಯಲ್ ಮೀಡಿಯಾದಿಂದ ಕೆಲ ಕಾಲ ದೂರವಾಗಿ ಪುನಃ ಈಗ  ಆ್ಯಕ್ಟೀವ್ ಆಗಿರುವ ಕತ್ರಿನಾ ಅಭಿಮಾನಿಗಳಿಗಾಗಿ ಹೊಸ ಫೋಟೋ ಹಂಚಿಕೊಳ್ತಾರೆ. ಈಗ 70.1 ಮಿಲಿಯನ್ ಫಾಲೋವರ್ಸ್ (followers) ಹೊಂದಿರುವುದಾಗಿ  ಸಂಭ್ರಮ ವ್ಯಕ್ತಪಡಿಸಿದ್ದಾರೆ. ಆದರೆ ಈಕೆ ಗರ್ಭಿಣಿ ಎಂಬ ಬಗ್ಗೆ ಮಾತ್ರ ಇನ್ನು ಯಾವುದೇ ಸ್ಪಷ್ಟನೆ ನೀಡಿಲ್ಲ. 'ಕ್ರಿಸ್ಮಸ್' ಮತ್ತು 'ಟೈಗರ್ 3' ಸಿನಿಮಾ ಸದ್ಯ ನಟಿಯ ಕೈಯಲ್ಲಿದೆ.  ಕ್ರಿಸ್ಮಸ್ (Chrismass) ಸಿನಿಮಾದಲ್ಲಿ ವಿಜಯ್ ಸೇತುಪತಿ ಜೊತೆ ಕತ್ರಿನಾ ಕೈಫ್ ಹಾಗೂ 'ಟೈಗರ್ 3'ನಲ್ಲಿ ಸಲ್ಮಾನ್​ ಖಾನ್​ (Salman Khan) ಮತ್ತು ಇಮ್ರಾನ್​ ಹಷ್ಮಿ (Imran Hashmi) ಅವರ ಜೊತೆ ಕತ್ರಿನಾ ಅಭಿನಯಿಸುತ್ತಿದ್ದಾರೆ. 

 
 
 
 
 
 
 
 
 
 
 
 
 
 
 

A post shared by Katrina Kaif (@katrinakaif)

Follow Us:
Download App:
  • android
  • ios