ಅವ್ರ ಹೆಸರನ್ನೇನಾದ್ರೂ ಹೇಳಿದ್ದಿದ್ರೆ, ಕಟ್ಕೊಂಡಾಕೆ ಜೀವ ಕಳ್ಕೋತಿದ್ರು: ಲೀಲಾವತಿ ಹಳೇ ವಿಡಿಯೋ ವೈರಲ್‌

ನಟಿ ಲೀಲಾವತಿ ಅವರು ತಮ್ಮ ಜೀವನದ ಗುಟ್ಟು ಹಾಗೂ ವಿನೋದ್ ರಾಜ್‌ ಅವರ ಅಪ್ಪನ ಬಗ್ಗೆ ಹೇಳಿರುವ ಹಳೆಯ ವಿಡಿಯೋ ವೈರಲ್‌ ಆಗಿದೆ.
 

An old video of Leelavathi talking about her lifes secrets and Dr Rajkumar has gone viral suc

ಒಂದು ಕಾಲದಲ್ಲಿ ಸ್ಯಾಂಡಲ್‌ವುಡ್‌ ಆಳಿದ ನಟಿ ಲೀಲಾವತಿ ಅವರ ಬಣ್ಣದ ಬದುಕಿನ ಹಿಂದೆ ನೋವಿನ ಕಥೆ ಇರುವುದು ಎಲ್ಲರಿಗೂ ತಿಳಿದದ್ದೇ.  ಕಳೆದ ವರ್ಷ ಡಿ.8 ರಂದು ನಟಿ  ವಿಧಿವಶರಾಗಿದ್ದು, ಇನ್ನು ಕೆಲವೇ ದಿನಗಳಲ್ಲಿ ಒಂದು ವರ್ಷ ಆಗಲಿದೆ. ಈ ಸಂದರ್ಭದಲ್ಲಿ ಅವರ ಪುತ್ರ ವಿನೋದ್‌ ರಾಜ್ ಅವರು, ಅಮ್ಮನಿಗಾಗಿ ಲೀಲಾವತಿ ದೇಗುಲ ನಿರ್ಮಿಸಿದ್ದು, ಅದನ್ನು ಉದ್ಘಾಟಿಸಲಿದ್ದಾರೆ.  ಡಿಸೆಂಬರ್ 5ಕ್ಕೆ ಈ ಸ್ಮಾರಕ ಉದ್ಘಾಟನೆ ಆಗಲಿದೆ. 1 ಕೋಟಿ ವೆಚ್ಚದಲ್ಲಿ ಸ್ಮಾರಕ ನಿರ್ಮಾಣ ಮಾಡಿದ್ದಾರೆ ವಿನೋದ್‌ ರಾಜ್‌. ಬೆಳಗ್ಗೆ 10 ರಿಂದ ಶುರುವಾಗಲಿರುವ ಈ ಕಾರ್ಯಕ್ರಮದಲ್ಲಿ,  ಚಿತ್ರರಂಗದ ಕಲಾವಿದರು ಭಾಗಿಯಾಗಲಿದ್ದಾರೆ. ತಬ್ಬಲಿ ಮಗನ ಜೊತೆ ನಿಂತು ಕಾರ್ಯಕ್ರಮ ಯಶಸ್ಸುಗೊಳಿಸುವಂತೆ ಇದಾಗಲೇ ವಿನೋದ್ ರಾಜ್ ವಿಡಿಯೋ ಮೂಲಕ ಮನವಿ ಮಾಡಿಕೊಂಡಿದ್ದಾರೆ. ನೆಲಮಂಗಲದ ಸೋಲದೇವನ ಹಳ್ಳಿಯಲ್ಲಿ  ದೇಗುಲ ನಿರ್ಮಾಣ ಆಗಿದ್ದು,  ಈ ಸ್ಮಾರಕದ ಸುತ್ತಲೂ ಲೀಲಾವತಿ ಅವರ 62 ಫೋಟೋಗಳನ್ನು ಕೂಡ ಹಾಕಲಾಗಿದೆ.  

ಈ ಸಂದರ್ಭದಲ್ಲಿ ಲೀಲಾವತಿಯವರ ಹಳೆಯ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಸಾಯುವ ಸ್ವಲ್ಪ ತಿಂಗಳ ಮುಂಚೆ ನಟಿ ಮಿರರ್‍‌ ಕನ್ನಡ ಎನ್ನುವ ಯೂಟ್ಯೂಬ್ ಚಾನೆಲ್‌ಗೆ ನೀಡಿರುವ ಸಂದರ್ಶನದಲ್ಲಿ  ನಟಿ ತಮ್ಮ ಬದುಕಿನ ಕೆಲವು ಗುಟ್ಟುಗಳನ್ನು ತಿಳಿಸಿದ್ದಾರೆ. ಅಷ್ಟಕ್ಕೂ ಇವರ ಬದುಕಿನ ಬಗ್ಗೆ ರವಿ ಬೆಳೆಗೆರೆ ಅವರು ಲೇಖನ ಬರೆದಿದ್ದರು. ಆ ಬಗ್ಗೆ ಮಾತನಾಡಿದ್ದಾರೆ ನಟಿ ಲೀಲಾವತಿ. ಕೊನೆಯವರೆಗೂ ನಾನು ವಿನೋದ್‌ಗೆ ಅವರ ಅಪ್ಪನ ಬಗ್ಗೆ ತಿಳಿಸಿರಲಿಲ್ಲ. ಆದರೆ ಅದೊಂದು ದಿನ ತಿಳಿಸುವ ಸ್ಥಿತಿ ಬಂತು. ಆತನ ಆರೋಗ್ಯ ಸರಿ ಇರಲಿಲ್ಲ. ಆಗ ಅವನು ನನಗೆ ತುಂಬಾ ಒತ್ತಾಯ ಮಾಡಿ, ನಾನು ಮರ್ಯಾದಸ್ಥ ಅಪ್ಪನಿಗೆ ಹುಟ್ಟಿರುವುದು ಎನ್ನುವುದು ಗೊತ್ತಿದೆ. ಅದರ ಬಗ್ಗೆ ತಿಳಿಸು ಎಂದ. ನಾನು ನಿರಾಕರಿಸಿದೆ ಎನ್ನುತ್ತಲೇ ಅಂದು ನಡೆದ ಘಟನೆಯನ್ನು ಲೀಲಾವತಿ ಈವಿಡಿಯೋದಲ್ಲಿ ಹೇಳಿದ್ದಾರೆ.

ಆ ಮೂಲ, ಈ ಮೂಲ ಕೇಳಬಾರ್ದು ಎನ್ನುತ್ತಲೇ ಅಮ್ಮನ ಮಲಗುವ ಕೋಣೆ ರಹಸ್ಯ ತೆರೆದಿಟ್ಟ ವಿನೋದ್‌ ರಾಜ್!

ಕೊನೆಗೆ ವಿನೋದ್‌, ಈಗಲೇ ನನಗೆ ಸತ್ಯ ಹೇಳದಿದ್ರೆ ನಾನು ಸತ್ತ ಮೇಲೆ ಹೇಳ್ತಿಯಾ ಎಂದು ಕೇಳಿದ. ನನಗೆ ತುಂಬಾ ನೋವಾಗಿ ಅತ್ತುಬಿಟ್ಟೆ. ಆಗ ನನಗೆ ಸತ್ಯ ಹೇಳುವ ಅನಿವಾರ್ಯತೆ ಉಂಟಾಯಿತು. ಚುಟುಕಾಗಿ ಎಲ್ಲವನ್ನೂ ಹೇಳಿಬಿಟ್ಟೆ ಅವನಿಗೆ. ಅದನ್ನೇ ಇಟ್ಟುಕೊಂಡು ರವಿ ಬೆಳಗೆರೆ ಅವರು, ರಾಜ್ ಲೀಲಾ ವಿನೋದ ಕಥೆ ಎಂದು ಬರೆದುಬಿಟ್ಟರು. ಅವರಿಗೆ ನನ್ನಮೇಲೆ ತುಂಬಾ ಅಭಿಮಾನವಾಗಿತ್ತು.  ವೇದಿಕೆ ಮೇಲೆ ಕರೆಸಿ ನನಗೆ ಸನ್ಮಾನ ಮಾಡಿದರು. ಆದರೆ ನನ್ನ ಜೀವನದ ಈ ಸತ್ಯವನ್ನು ಯಾರ ಬಳಿಯೂ ಹೇಳುವಂತೆ ಇರಲಿಲ್ಲ. ಏಕೆಂದರೆ ನಾನೇನಾದ್ರೂ ಸತ್ಯ ಹೇಳಿದ್ದರೆ, ಅವರನ್ನು ಕಟ್ಟಿಕೊಂಡಾಕೆ ಒಬ್ಬರು ಇದ್ದರು. ಅವರು ಅಂದೇ ಪ್ರಪಂಚ ಬಿಟ್ಟು ಹೋಗುತ್ತಿದ್ದರು. ಯಾರನ್ನೋ ಸಾಯಿಸಿ, ನಾನು ಬದುಕುವ ಆಸೆ ನನಗೆ ಇರಲಿಲ್ಲ. ಆದ್ದರಿಂದ ಹೇಗೋ ಕಷ್ಟಪಟ್ಟು ಎಲ್ಲವನ್ನೂ ನಿಭಾಯಿಸಿಕೊಂಡು ಬಂದೆ ಎಂದಿದ್ದರು ಲೀಲಾವತಿ. 
 
ಇದೇ ವೇಳೆ ಡಾ.ರಾಜ್‌ಕುಮಾರ್‍‌ ಅವರ ಹೆಸರು ಹೇಳಿದರೆ ಏನನ್ನಿಸುತ್ತದೆ ಎನ್ನುವ ಪ್ರಶ್ನೆಗೆ ಲೀಲಾವತಿ ಅವರು, ಅವರು ಚಿತ್ರರಂಗಕ್ಕೆ ಮಾತ್ರವಲ್ಲದೇ,  ಎಲ್ಲ ವಿಷಯಗಳಲ್ಲಿಯೂ ತುಂಬಾ ಒಳ್ಳೆಯವರು. ನನಗೆ ಅನ್ನಿಸಿದೆ ಅವರು ನಿಜವಾಗಿಯೂ ಒಳ್ಳೆಯವರು ಎಂದರು. ಎಲುಬಿಲ್ಲದ ನಾಲಿಗೆಯವರು ಏನು ಬೇಕಾದರೂ ಮಾತನಾಡುತ್ತಾರೆ. ಆದರೆ ಸತ್ಯ ಯಾವತ್ತೂ ಸತ್ತು ಹೋಗಲ್ಲ. ಏಕೆಂದರೆ ಅವರ ಜೀವನದ ಒಳಗೆ ಹೊಕ್ಕು ಯಾರೂ ನೋಡಲಿಲ್ಲ.  ಒಳಹೊಕ್ಕು ನೋಡಿ ಕೆಲಸ ಮಾಡುವ ವ್ಯಕ್ತಿ ಕೂಡ ಅವರಲ್ಲ.  ನನ್ನ ಆತ್ಮಕ್ಕೆ ನಾನು ಹೇಗೆ ಎನ್ನುವುದು ಗೊತ್ತಿದೆ, ಅವರು ಹೇಗೆ ಎನ್ನುವುದೂ ಗೊತ್ತಿದೆ ಎಂದಿದ್ದರು ಲೀಲಾವತಿ. ಇನ್ನು ಲೀಲಾವತಿ ಸ್ಮಾರಕದ ಕುರಿತು ಹೇಳುವುದಾದರೆ, ಈ ಸ್ಮಾರಕ ನೋಡಲು ಬರುವವರಿಗೆ  ಊಟದ ವ್ಯವಸ್ಥೆಯನ್ನೂ ಮಾಡಿದ್ದಾರೆ ವಿನೋದ್‌ ರಾಜ್‌. ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೂ ಸ್ಮಾರಕ ತೆರೆದಿರಲಿದೆ ಅಮ್ಮನ ಸ್ಮಾರಕದ ಬಳಿಯೇ ಒಂದೆರಡು ದಿನ ಕಳೆಯಬೇಕು ಅಂತ ಇಚ್ಛಿಸುವವರಿಗೂ ಸ್ಮಾರಕದ ಬಳಿಕ ವಸತಿ ಗೃಹ ಕೂಡ ನಿರ್ಮಿಸಲಾಗಿದೆ ಎಂಬ ಮಾಹಿತಿ ಇದೆ. 
 

ನನ್ನಿಂದ್ಲೇ ನೀವ್‌ ಕಾಸ್‌ ಮಾಡ್ಕೊಂಡಿರೋದು, ಸಂಬಳನೂ ಸರಿ ಕೊಡ್ದೇ ಎಥಿಕ್ಸ್‌ ಇಲ್ಲ ಅಂತೀರಾ? ಹಂಸಾ ಗರಂ

 

Latest Videos
Follow Us:
Download App:
  • android
  • ios