ನಟಿ ಶೋಭಿತಾ ಶಿವಣ್ಣ ಅವರ ಸಾವಿನ ಬಗ್ಗೆ ಕಿರುತೆರೆ ನಟ, ಬ್ರಹ್ಮಗಂಟು ಸೀರಿಯಲ್‌ನಲ್ಲಿ ನಟಿಯ ಜೊತೆ ಕೆಲಸ ಮಾಡಿದ್ದ   ಹರ್ಷ ಗೌಡ ಹೇಳಿದ್ದೇನು?  

ಬ್ರಹ್ಮಗಂಟು ಸೀರಿಯಲ್‌ ಮೂಲಕ ಮನೆಮಾತಾಗಿದ್ದ ಹಿರಿತೆರೆ-ಕಿರುತೆರೆಯ ನಟಿ ಶೋಭಿತಾ ಶಿವಣ್ಣ ಅವರ ಆತ್ಮಹತ್ಯೆ ಇಡೀ ಇಂಡಸ್ಟ್ರಿಯನ್ನು ದಂಗು ಬಡಿಸಿದೆ. ಅವರ ಮರಣೋತ್ತರ ಪರೀಕ್ಷೆ ಮುಕ್ತಾಯವಾಗಿದ್ದು, ವರದಿಯಲ್ಲಿ ಆತ್ಮಹತ್ಯೆ ಎಂದು ಖಚಿತಪಡಿಸಲಾಗಿದೆ. ಹೈದರಾಬಾದ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ಶೋಭಿತಾ ಅವರ ಮೃತದೇಹವನ್ನು ಕುಟುಂಬಸ್ಥರಿಗೆ ಇದಾಗಲೇ ಹಸ್ತಾಂತರಿಸಲಾಗಿದ್ದು ಅಂತಿಮ ಪ್ರಕ್ರಿಯೆಗಳು ನಡೆದಿವೆ. ಚೆನ್ನಾಗಿ ನಟನೆಯಲ್ಲಿ ಪಳಗಿದ್ದ ನಟಿ, ಏಕಾಏಕಿ ಹೀಗೆ ಮಾಡಿಕೊಂಡರು ಎನ್ನುವುದು ಇದುವರೆಗೂ ರಹಸ್ಯವಾಗಿಯೇ ಉಳಿದಿದೆ. ಇಲ್ಲಿಯವರೆಗೆ ಮೇಲ್ನೋಟಕ್ಕೆ ಕಂಡುಬಂದಿರುವಂತೆ ನಟಿ ಖಿನ್ನತೆಯಲ್ಲಿದ್ದರು, ಆದ್ದರಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದೇ ಅಂದುಕೊಳ್ಳಲಾಗುತ್ತಿದೆ. ಆದರೆ, ಅವರದ್ದು ಆತ್ಮಹತ್ಯೆಯೋ, ಕೊಲೆಯೋ ಎನ್ನುವ ಸಂದೇಹವಿತ್ತು. ಇದೀಗ ಆತ್ಮಹತ್ಯೆ ಎನ್ನುವುದು ಮರಣೋತ್ತರ ಪರೀಕ್ಷೆಯಿಂದ ಬಯಲಾಗಿದೆ.

ಆದರೂ, ಇವರ ಸಾವಿನ ಬಗ್ಗೆ ಇನ್ನೂ ಕುತೂಹಲ ತಣಿದಿಲ್ಲ. ಪತಿ-ಪತ್ನಿಯ ಸಂಬಂಧ ಚೆನ್ನಾಗಿ ಇರಲಿಲ್ವಾ ಎನ್ನುವ ಪ್ರಶ್ನೆಗಳೂ ಈ ಸಂದರ್ಭದಲ್ಲಿ ಕಾಡುತ್ತಿದೆ. ಇದಾಗಲೇ ಬ್ರಹ್ಮಗಂಟು ಸೀರಿಯಲ್‌ ನಲ್ಲಿ ಶೋಭಿತಾ ಜೊತೆ ನಟಿಸಿದ್ದ ನಟ ಹರ್ಷ ಗೌಡ ಅವರು ಈ ಸಾವಿನ ಕುರಿತು ಮಾತನಾಡಿದ್ದಾರೆ. ಇವರಿಬ್ಬರು ತುಂಬಾ ಕ್ಲೋಸ್‌ ಇದ್ದ ಹಿನ್ನೆಲೆಯಲ್ಲಿ, ಶೋಭಿತಾ ಅವರ ಬಗ್ಗೆ ಹರ್ಷ ಅವರು ಚೆನ್ನಾಗಿ ತಿಳಿದುಕೊಂಡಿದ್ದು, ಸಾವಿನಿಂದ ಶಾಕ್‌ ಆಗಿದ್ದಾರೆ. ಶೋಭಿತಾ ಏಕೆ ಹೀಗೆ ಮಾಡಿಕೊಂಡರು ಎನ್ನುವುದೇ ಅಚ್ಚರಿಯ ಸಂಗತಿ. ವಿಷಯ ತಿಳಿದು ಶಾಕ್ ಆಯ್ತು. ಅವರ ಭಾವನ ನಂಬರ್‍‌ ಅನ್ನು ಕಲೆಕ್ಟ್‌ ಮಾಡಿಕೊಂಡು ಅವರ ಹತ್ರ ಮಾತನಾಡಿದೆ. ಭಾವ ಶಬರಿಮಲೆಗೆ ಹೋಗ್ತಾ ಇದ್ದವರು, ಅರ್ಧಕ್ಕೇ ಮಾಲೆ ತೆಗೆದು ವಾಪಸ್‌ ಬಂದಿದ್ದರು ಎನ್ನುತ್ತಲೇ ಸಾವಿನ ಬಗ್ಗೆ ಮಾತನಾಡಿದ್ದಾರೆ.

ನಟಿ ಶೋಭಿತಾಗೆ ಮದ್ವೆನೇ ಇಷ್ಟ ಇರ್ಲಿಲ್ವಾ? ಎರಡು ವಿಳಾಸ ಕೊಟ್ಟದ್ದೇಕೆ? ಮಾಹಿತಿ ನೀಡಿದ ಆಪ್ತ ಸ್ನೇಹಿತೆ

ನಾಲ್ಕೈದು ವರ್ಷ ನಾವು ಎರಡು ಸೀರಿಯಲ್‌ನಲ್ಲಿ ಒಟ್ಟಾಗಿ ನಟಿಸಿದ್ದೇವೆ. ಈ ಜರ್ನಿಯಲ್ಲಿ ಅವರು ಬಹಳ ಕಷ್ಟಪಟ್ಟು ಬಂದಿದ್ದರು. ಕೆಲವೊಮ್ಮೆ ಸಾಕಾಗಿದೆ, ಕೆಲಸ ಬಿಟ್ಟು ಬಿಡ್ತೀನಿ ಅಂತಾನೂ ಹೇಳುತ್ತಿದ್ದರು. ಮದುವೆಯ ಬಳಿಕ ನಟನೆ ಬಿಟ್ಟರು. ಆಗ ಕರೆ ಮಾಡಿ ಮದುವೆ ಫಿಕ್ಸ್ ಆಗಿದೆ ಅಂತ ಹೇಳಿದರು. ಈಗ ನೋಡಿದ್ರೆ ಈ ವಿಷಯ ಕೇಳಿ ಶಾಕ್‌ ಆಯಿತು ಎಂದಿದ್ದಾರೆ. ಅವರ ಭಾವನಿಗೆ ಕಾರಣ ಕೇಳಿದೆ. ಅವರೂ ಏನಾಯ್ತೋ ಗೊತ್ತಿಲ್ಲ ಎಂದರು. ಕಳೆದ ವಾರವಷ್ಟೇ ಗೋವಾದ ಫಿಲ್ಮ್‌ ಫೆಸ್ಟಿವಲ್‌ಗೆ ಗಂಡ-ಹೆಂಡತಿ ಹೋಗಿ ಬಂದಿದ್ದರು. ಇಬ್ಬರೂ ಚೆನ್ನಾಗಿಯೇ ಇದ್ದರು. ಆದರೆ ಏನಾಯ್ತೊ ಎನ್ನುವುದು ಮಾತ್ರ ವಿಚಿತ್ರ ಎಂದಿದ್ದಾರೆ. ನಟನೆಗೆ ಅವಕಾಶ ಸಿಗುತ್ತಿಲ್ಲ ಎನ್ನುವ ಕಾರಣಕ್ಕೆ ಖಿನ್ನತೆಗೆ ಹೋಗಿರುವ ಸಾಧ್ಯತೆ ಇದೆಯಾ ಎನ್ನುವ ಪ್ರಶ್ನೆಗೆ ಹರ್ಷ ಅವರು, ಇಲ್ಲ, ಅವರು ಅಂಥ ನಟಿಯಲ್ಲ. ಖಿನ್ನತೆ ಎನ್ನುವ ವರದಿಯೆಲ್ಲಾ ಸುಳ್ಳು ಎಂದೇ ಅಂದುಕೊಂಡಿದ್ದೇನೆ ಎಂದಿದ್ದಾರೆ. ಶೋಭಿತಾ ಬಹಳ ಪಾಸಿಟಿವ್ ಆಗಿದ್ದವರು. ಹೀಗ್ಯಾಕೆ ಮಾಡಿಕೊಂಡರು ಗೊತ್ತಾಗುತ್ತಿಲ್ಲ ಎಂದಿದ್ದಾರೆ.

ನಿನ್ನೆಯಷ್ಟೇ ಶೋಭಿತಾ ಅವರ ಸ್ನೇಹಿತೆ ವೀಣಾ ಎನ್ನುವವರು ಮಾತನಾಡಿ, ಶೋಭಿತಾಗೆ ನಟನೆ ಎಂದರೆ ತುಂಬಾ ಇಷ್ಟವಿತ್ತು. ಮದುವೆ ಇಷ್ಟ ಇಲ್ಲ ಅಂತೇನೂ ಇರಲಿಲ್ಲ. ಆದರೆ ನಟನೆಯಲ್ಲೇ ಇರುವುದು ಅವಳಿಗೆ ಇಷ್ಟವಿತ್ತು. ಆದರೆ ಭಾವನ ಸಂಬಂಧಿಕರು ಆಗಿರುವುದರಿಂದ, ಮನೆಯವರೆಲ್ಲರೂ ಇದು ನಿನಗೆ ಮದುವೆಗೆ ರೈಟ್‌ ಏಜ್‌, ಮದುವೆಯಾಗು ಎಂದು ಹೇಳಿ ಮದುವೆ ಮಾಡಿಸಿದರು. ಆಗಲೂ ಅವಳಿಗೆ ಕರಿಯರ್‍‌ದ್ದೇ ಚಿಂತೆಯಾಗಿತ್ತು ಎಂದಿದ್ದರು. ಸಾಮಾನ್ಯವಾಗಿ ಕರಿಯರ್‍‌ ಮತ್ತು ಮದುವೆಯ ವಿಷಯ ಬಂದಾಗ ಮಹಿಳೆಯರಿಗೆ ಹೇಗೆ ಚಿಂತೆ ಆಗುತ್ತೋ, ಶೋಭಿತಾಗೂ ಹಾಗೇ ಆಗಿತ್ತು. ಆದರೆ ಮನೆಯವರು ಮದುವೆಯ ಬಗ್ಗೆ ಹೇಳಿದ್ದರಿಂದ ಮದುವೆಯಾದಳು. ಮದುವೆಯಾಗಿ ಯುಎಸ್‌ಗೆ ಹೋಗ್ತೇನೆ ಎಂದಿದ್ದಳು. ಅಲ್ಲಿಯೂ ನಟನೆಯಿಂದ ಬ್ರೇಕ್‌ ತೆಗೆದುಕೊಳ್ಳಬೇಕಾಗುತ್ತದೆ ಎಂದೇ ಅವಳಿಗೆ ಚಿಂತೆಯಾಗಿತ್ತು. ನಾನು ಅವಳಿಗೆ ಪರವಾಗಿಲ್ಲ. ಹೊಸದಾಗಿ ಮದುವೆಯಾಗಿರುವೆ. ಸ್ವಲ್ಪ ತಿಂಗಳು ಮದುವೆ ಲೈಫ್‌ ಎಂಜಾಯ್‌ ಮಾಡು, ಬಳಿಕ ವಾಪಸ್‌ ಬಂದು ನಟನೆ ಮುಂದುವರೆದು ಎಂದಿದ್ದೆ. ಅಷ್ಟು ನಟನೆಯ ಹುಚ್ಚು ಅವಳಿಗೆ ಇತ್ತು ಎಂದಿದ್ದರು. 

ಅವ್ರ ಹೆಸರನ್ನೇನಾದ್ರೂ ಹೇಳಿದ್ದಿದ್ರೆ, ಕಟ್ಕೊಂಡಾಕೆ ಜೀವ ಕಳ್ಕೋತಿದ್ರು: ಲೀಲಾವತಿ ಹಳೇ ವಿಡಿಯೋ ವೈರಲ್‌