ಸೌತ್ ನಟ ಕಮಲ್ ಹಾಸನ್ ತಮ್ಮ ಭಿನ್ನ ನಿಲುವುಗಳಿಂದಲೇ ಫೇಮಸ್. ಇನ್ನು ಅವರ ಸಿನಿಮಾಗಳ ಕಡೆ ನೋಡಿದ್ರೆ ಅದರ ಒಳಾರ್ಥ, ಹೊರಾರ್ಥ ಹುಡುಕುವುದೇ ಸವಾಲು. ನಟ ಕಮಲ್ ಅವರ ಇನ್ನೊಂದು ಸೂಪರ್ ಸಿನಿಮಾ ಸಿದ್ಧವಾಗ್ತಿದೆ.

ಉಲಗ ನಾಯಕ ಕಮಲ್ ಹಾಸನ್ ಸೂಪರ್ ಹಿಟ್ ಸಿನಿಮಾ ಇಂಡಿಯನ್‌ನ ಎರಡನೇ ಭಾಗ ತೆರೆಯ ಮೇಲೆ ಬರಲಿದೆ. ಆದರೆ ಸಿನಿಮಾಗೆ ಸಾಕಷ್ಟು ತೊಂದರೆ, ವಿಘ್ನಗಳೂ ಎದುರಾಗಿವೆ.

ಸನ್ನಿ ಲಿಯೋನ್ ಖರೀದಿಸಿದ ಮಸರಾಟಿ ಘಿಬ್ಲಿ ಕಾರಿನ ವಿಶೇಷತೆ ಏನು?

ಪ್ರೊಡಕ್ಷನ್ ಕಂಪನಿ ಬದಲಾಗಿದೆ, ಸೆಟ್‌ನಲ್ಲಿ ಅಗ್ನಿ ಅವಘಡ ಸೇರಿ ಒಂದಲ್ಲ ಒಂದು ತೊಂದರೆ ಎದುರಿಸುತ್ತಲೇ ಬಂದಿದೆ ಚಿತ್ರ ತಂಡ. ಈ ನಡುವೆ ಚಿತ್ರ ಸ್ಥಗಿತವಾಗಲಿದೆ ಎಂದು ಸುದ್ದಿಯೂ ಇತ್ತು.

ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಿನಿಮಾ ತಂಡ  ಲಾಕ್‌ಡೌನ್ ಮುಗಿಯುತ್ತಲೇ ಚಿತ್ರ ಹೊರತರೋದಾಗಿ ಹೇಳಿದ್ದಾರೆ. 2021 ಜನವರಿ ಒಳಗಾಗಿ ಸಿನಿಮಾ ಶೂಟಿಂಗ್ ಮುಗಿಯಲಿದೆ ಎನ್ನಲಾಗಿದೆ. ಈ ಬಗ್ಗೆ ತಂಡ ಅಧಿಕೃತವಾಗಿ ಮಾಹಿತಿ ನೀಡಬೇಕಷ್ಟೆ. ಅಂತೂ ಕಮಲ್‌ಹಾಸನ್ ಫ್ಯಾನ್ಸ್ ಮಾತ್ರ ಫುಲ್ ಖುಷಿಯಾಗಿದ್ದಾರೆ.

ಕೊರೋನಾ ಮಧ್ಯೆಯೇ ಗುಡ್‌ಲಕ್‌ ಸಖಿ ಶೂಟಿಂಗ್ ಮುಗಿಸಿದ ಕೀರ್ತಿ..!

ಕಾಜಲ್ ಅಗರ್ವಾಲ್ ಮತ್ತು ರಾಕುಲ್ ಪ್ರೀತ್ ಸಿಂಗ್ ತಮ್ಮ ಮುಂಬರುವ ಚಿತ್ರ ಇಂಡಿಯನ್ 2 ಗಾಗಿ ಸಂಭಾವನೆ ಕಡಿತಗೊಳಿಸಲು ನಿರ್ಧರಿಸಿದ್ದಾರೆ ಎಂದು ಇತ್ತೀಚೆಗೆ ತಿಳಿದುಬಂದಿದೆ. ಸಿನಿಮಾವನ್ನು ಶಂಕರ್ ನಿರ್ದೇಶಿಸಲಿದ್ದು, ಲಿಕಾ ಪ್ರೊಡಕ್ಷನ್ಸ್ ನಿರ್ಮಿಸುತ್ತಿದೆ.

1996ರಲ್ಲಿ ಬಿಡುಗಡೆಯಾದ ಇಂಡಿಯನ್ ಸಿನಿಮಾದ ಸೀಕ್ವೆಲ್ ಇಂಡಿಯನ್ 2 ಸಿನಿಮಾ. ಇದರಲ್ಲಿ ಕಾಜಲ್ 80 ವರ್ಷದ ವೃದ್ಧೆಯಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಸಿನಿಮಾದಲ್ಲಿ ಕಮಲ್ ಹಾಸನ್ ಫೋಟೋಗಳಂತೂ ವೈರಲ್ ಆಗಿವೆ.