ಸೌತ್ ನಟಿ ಕೀರ್ತಿ ಸುರೇಶ್ ಕೊರೋನಾ ಮಧ್ಯೆಯೇ ಶೂಟಿಂಗ್ ಮುಗಿಸಿದ್ದಾರೆ. ಈಶ್ವರ್ ಕಾರ್ತಿಕ್ ನಿರ್ದೇಶನದ ಪೆಂಗ್ವಿನ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ನಟಿ, ಈಗ ಗುಡ್‌ಲಕ್‌ ಸಖಿ ಸಿನಿಮಾದ ಶೂಟಿಂಗ್ ಮುಗಿಸಿದ್ದಾರೆ.

ಟ್ವಿಟರ್‌ನಲ್ಲಿ ವಿಷಯ ಹಂಚಿಕೊಂಡ ನಟಿ, ಸಖಿ ಪಾತ್ರ ಜೀವನುದ್ದಕ್ಕೂ ನನ್ನ ಜೀವನದ ಭಾಗವಾಗಿರುತ್ತದೆ ಎಂದಿದ್ದಾರೆ. ಸಿನಿಮಾವನ್ನು ನಾಗೇಶ್ ಕುಕುನೂರ್ ನಿರ್ದೇಶಿಸಿದ್ದು, ಲಾಕ್‌ಡೌನ್ ಮೊದಲೇ ಶೂಟಿಂಗ್ ಮುಗಿಯಬೇಕಾಗಿತ್ತು.

ಹ್ಯಾಪಿ ಬರ್ತ್‌ಡೇ ಮಂಜು: ಪತಿಗಾಗಿ ಸಿನಿಮಾ ಬಿಟ್ಟು, ಪತಿ ಕೈಕೊಟ್ಟಾಗ ಸಿನಿಮಾ ಅಪ್ಪಿಕೊಂಡ ನಟಿ ಈಕೆ

ಸೆಲೆಬ್ರಿಟಿ ಸ್ಟೈಲಿಶ್ ಡಿಸೈನರ್ ಶ್ರಾವ್ಯ ವರ್ಮಾ ಈ ಸಿನಿಮಾದಲ್ಲಿ ಕೀರ್ತಿ ಜೊತೆ ಕೆಲಸ ಮಾಡಿದ್ದು, ಸೆಪ್ಟೆಂಬರ್ 6ರಂದು ಚಿತ್ರದ ಸಂಪೂರ್ಣ ಚಿತ್ರೀಕರಣ ಮುಗಿದಿದೆ ಎಂದು ಬರೆದಿದ್ದಾರೆ. ಕೆಲವು ದಿನದ ನಂತರ ಶ್ರಾವ್ಯ ಟ್ವೀಟ್ ರೀಟ್ವೀಟ್ ಮಾಡಿದ ನಟಿ, ಈ ಸಿನಿಮಾ ತಮಗ್ಯಾಕೆ ಸ್ಪೆಷಲ್ ಅಂತ ಹೇಳಿದ್ದಾರೆ.

ಆಗಸ್ಟ್ 15ರಂದು ಗುಡ್‌ಲಕ್ ಸಖಿಯ ಟೀಸರ್ ರಿಲೀಸ್ ಆಗಿತ್ತು. ಸೋಷಿಯಲ್ ಮೀಡಿಯಾದಲ್ಲಿ ಇದು ವೈರಲ್ ಆಗಿತ್ತು. ಸಿನಿಮಾದಲ್ಲಿ ಸಖಿ ದುರದೃಷ್ಟ ಹುಡಿಗಿಯೆಂದೇ ಬಿಂಬಿಸಲ್ಪಟ್ಟಿರುತ್ತಾಳೆ.

 

ಮಹಾನಟಿ ಕೀರ್ತಿಗೆ ಕೂಡಿ ಬಂದ ಕಂಕಣ ಭಾಗ್ಯ; ಮದುವೆ ಆಗ್ತಾ ಇರೋ ಹುಡುಗ ಯಾರು?

ಆಕೆಯ ವರನೂ ಆತ್ಮಹತ್ಯೆಯಲ್ಲಿ ಸಾವನ್ನಪ್ಪುತ್ತಾನೆ. ನಂತರ ಆಕೆ ಶಾರ್ಪ್‌ ಶೂಟರ್ ಆಗಿ ರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಾಳೆ. ಸಿನಿಮಾವನ್ನು ದಿಲ್ ರಾಜು ನಿರ್ಮಿಸಿದ್ದು, ತೆಲುಗು, ಹಿಂದಿ, ಮಲಯಾಳಂನಲ್ಲಿ ರಿಲೀಸ್ ಆಗಲಿದೆ.