ಇಂಡಿಯನ್ 2 ಸಿನಿಮಾ ಕೆಲಸ ಆರಂಭಿಸಲಿರುವ ನಟ ಕಮಲ್ ಹಾಸನ್ ನಿರ್ದೇಶಕ ಲೋಕೇಶ್ ಕನಕರಾಜ್ ಜೊತೆಗೆ ಇನ್ನೊಂದು ಸಿನಿಮಾ ಮಾಡಲಿದ್ದಾರೆ. ಈ ಸಿನಿಮಾ ಟೈಟಲ್ ರಿವೀಲ್ ಮಾಡಿಲ್ಲ, ಆದ್ರೆ ಫಸ್ಟ್ ಪೋಸ್ಟರ್ ವೈರಲ್ ಆಗಿದೆ.

ರಾಜ್ ಕಮಲ್ ಇಂಟರ್‌ನ್ಯಾಷನಲ್ ಸಿನಿಮಾ ನಿರ್ಮಿಸಲಿದ್ದಾರೆ ಎನ್ನಲಾಗಿದ್ದು ಇದೊಂದು ಗ್ಯಾಂಗ್‌ಸ್ಟರ್ ಸಿನಿಮಾ ಎನ್ನಲಾಗಿದೆ. ಪೋಸ್ಟರ್‌ನಲ್ಲಿ ಗನ್‌, ಹಾಗೂ ಆಯುಧಗಳಿಂದ ಕೊಲೇಜ್ ಮಾಡಿ ಕಮಲ್ ಹಾಸನ್ ಮುಖ ರಚಿಸಲಾಗಿದೆ.

ಜನವರಿಯಲ್ಲಿ ತೆರೆಗೆ ಬರುತ್ತಾ ಕಮಲ್ ಹಾಸನ್ ಅಭಿನಯದ ಇಂಡಿಯನ್ 2..?

ಇನ್ನೊಂದು ಪಯಣ ಶುರು ಎಂದು ಕ್ಯಾಪ್ಶನ್ ಕೊಟ್ಟು ಕಮಲ್ ಹಾಸನ್ ಪೋಸ್ಟರ್ ಶೇರ್ ಮಾಡಿದ್ದಾರೆ. ರಜನೀಕಾಂತ್ ಲೋಕೇಶ್ ಜೊತೆ ಕೆಲಸ ಮಾಡಲಿದ್ದಾರೆ ಎಂಬ ಮಾತು ಇತ್ತು.

ಇದನ್ನು ಕಮಲ್ ಹಾಸನ್ ನಿರ್ದೇಶಿಸಲಿದ್ದಾರೆ ಎನ್ನಲಾಗಿತ್ತು. ಸಿನಿಮಾ ಎಪ್ರಿಲ್‌ನಲ್ಲಿ ಲಾಂಚ್ ಆಗಲಿದೆ ಎಂಬ ನಿರೀಕ್ಷೆ ಇತ್ತಾದರೂ ಈ ಬಗ್ಗೆ ಇದುವರೆಗೂ ಯಾವುದೇ ಅಪ್‌ಡೇಟ್ ಬಂದಿಲ್ಲ.

ಮಗಳು ಶ್ರುತಿ ಹಾಸನ್‌ ಕಿಡ್ನಾಪ್‌ ಆಗೋದ್ರಿಂದ ಸೇವ್‌ ಮಾಡಿದ ಕಮಲ್ ಹಾಸನ್

ವಿಜಯ್ ಅಭಿನಯದ ಮಾಸ್ಟರ್ ಸಿನಿಮಾ ರಿಲೀಸ್‌ಗೆ ಕಾಯುತ್ತಿರೋ ನಿರ್ದೇಶಕ ಲೋಕೇಶ್ ಇದೀಗ ಕಮಲ್ ಹಾಸನ್ ಜೊತೆ ಟೈ ಅಪ್ ಆಗಿದ್ದಾರೆ. ಮಾಸ್ಟರ್ ಸಿನಿಮಾದಲ್ಲಿ ವಿಜಯ್ ಹಾಗೂ ವಿಜಯ್ ಸೇತುಪತಿ ಜೊತೆಯಾಗಿ ನಟಿಸಲಿದ್ದಾರೆ.