ಮಗಳು ಶ್ರುತಿ ಹಾಸನ್‌ ಕಿಡ್ನಾಪ್‌ ಆಗೋದ್ರಿಂದ ಸೇವ್‌ ಮಾಡಿದ ಕಮಲ್ ಹಾಸನ್

First Published 29, Jun 2020, 6:02 PM

ಕಮಲ್ ಹಾಸನ್ ಭಾರತೀಯ ಸಿನಮಾ ಕಂಡ ಅದ್ಭುತ ನಟ ಜೊತೆಗೆ  ನರ್ತಕಕ, ನಿರ್ದೇಶಕ, ಚಿತ್ರಕಥೆಗಾರ, ನಿರ್ಮಾಪಕ, ಹಿನ್ನೆಲೆ ಗಾಯಕ, ಗೀತರಚನೆಕಾರ ಮತ್ತು ರಾಜಕಾರಣಿ ಹೀಗೆ ಇವರ ಪ್ರತಿಭೆಯ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಮುಖ್ಯವಾಗಿ ತಮಿಳು ಚಿತ್ರರಂಗದಲ್ಲಿ ನಟಿಸುವ ಕಮಲ್‌ ಹಾಸನ್‌ ತೆಲಗು, ಮಲಯಾಳಂ, ಕನ್ನಡ, ಹಿಂದಿ ಮತ್ತು ಬಂಗಾಳಿ ಚಿತ್ರಗಳಲ್ಲಿಯೂ ಕೆಲಸ ಮಾಡಿದ್ದಾರೆ. 58 ವರ್ಷಗಳಿಂದ ಸುಮಾರು 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ನಟನಿಗೆ ದೊರೆತ ಆವಾರ್ಡ್‌ಗಳಿಗೆ ಲೆಕ್ಕವೇ ಇಲ್ಲ. ಇವರ 1994ರ ಸಿನಿಮಾ ಮಹಾನಂದಿ ಸಿನಿಮಾಕ್ಕೆ ಪ್ರೇರಣೆಯಾದ ಮಗಳ ಅಪಹರಣದ ಪ್ಲಾಟ್‌ ಬಗ್ಗೆ ಕಮಲ್‌ ಮಾತನಾಡಿದ್ದಾರೆ, ಶೃತಿ ಹಾಸನ್‌ ಕಿಡ್ನಾಪ್‌ ಸಂಚು ಒಂದು ನ್ಯಾಷನಲ್‌ ಆವಾರ್ಡ್‌ ಸಿನಿಮಾಕ್ಕೆ ರೂವಾರಿಯಾಗಿದೆ.

200ಕ್ಕೂ ಹೆಚ್ಚು ಸಿನಿಮಾಗಳು ಹಾಗೂ ಲೆಕ್ಕವಿಲ್ಲದಷ್ಡು ಆವಾರ್ಡ್‌ಗಳನ್ನು ಮುಡಿಗೇರಿಸಿಕೊಂಡಿರುವ ಕಮಲ್ ಹಾಸನ್ ಭಾರತದ ಅತ್ಯುತ್ತಮ ನಟರಲ್ಲಿ ಒಬ್ಬರು. ಕಮಲ್ ಚಿತ್ರರಂಗಕ್ಕೆ ಕಾಲಿಟ್ಟು 58 ವರ್ಷಗಳು ಕಳೆದಿವೆ.

ಅವರ ಮೊದಲ ತಮಿಳು ಚಿತ್ರ ಕಲತೂರ್ ಕಣ್ಣಮ್ಮ 1959ರಲ್ಲಿ  ಬಿಡುಗಡೆಯಾಗಿತ್ತು.

ಹಿಂದೂಸ್ತಾನ್ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ, ಕಮಲ್ ಅವರು 1994ರಲ್ಲಿ ಬಿಡುಗಡೆಯಾದ ವಿಮರ್ಶಕರ ಮೆಚ್ಚುಗೆ ಪಡೆದ ಮಹಾನದಿ ಚಿತ್ರದ ಬಗ್ಗೆ ಮಾತನಾಡಿದ್ದರು. ಈ ಚಿತ್ರ  ಅವರ ಸಿನಿಮಾ ಇತಿಹಾಸದಲ್ಲಿಯೇ ಅತ್ಯುತ್ತಮ ಚಿತ್ರಗಳಲ್ಲಿ  ಒಂದು.

ಕಮಲ್‌ ಮೊದಲ ಪತ್ನಿ ಸಾರಿಕಾರ ಮಗಳು ಶೃತಿಯನ್ನು ಅಪಹರಣ ಮಾಡಲು ಸಂಚು ರೂಪಿಸಲಾಗಿತ್ತು ಎಂದು ಆಗಲೇ ಈ ನಟ ಬಹಿರಂಗಪಡಿಸಿದ್ದರು.

ಆ ಅಪಹರಣದ ಘಟನೆಯು ಕಮಲ್ ಹಾಸನ್ ಜೀವನದ ಮರೆಯಲಾಗದ್ದಂತೆ.ಈ ನೈಜ ಘಟನೆಯೇ ಮಹಾನದಿ ಚಿತ್ರಕ್ಕೆ ಪ್ರೇರಣೆಯಾಯಿತಂತೆ.

ರಾಷ್ಟ್ರೀಯ ಪ್ರಶಸ್ತಿ ವಿಜೇತ ಮಹಾನದಿ ಸಿನಿಮಾದಲ್ಲಿ ಕಮಲ್‌ ನಟಿಸಿದ್ದು ಮಾತ್ರವಲ್ಲ ಕಥೆ ಮತ್ತು ಸ್ಕ್ರೀನ್‌ ಪ್ಲೇಯನ್ನೂ ಬರೆದಿದ್ದಾರೆ. ಚಿತ್ರದಲ್ಲಿ, ನಾಯಕನ ಮಗಳನ್ನು ಅಪಹರಿಸಿ ಲೈಂಗಿಕ ಕಾರ್ಯಕರ್ತೆಗೆ ಮಾರಲಾಗುತ್ತದೆ.

ಮನೆಯ ಕೆಲಸದವರು ತನ್ನ ಮಗಳನ್ನು ಅಪಹರಿಸಲು ಸಂಚು ರೂಪಿಸುತ್ತಿದ್ದಾರೆ, ಎಂದು ತಿಳಿದ ನಂತರ ಕಮಲ್ ಮಹಾನದಿ ಬರೆದಿದ್ದಾರೆ. 65 ವರ್ಷದ ನಟ ಈ ಘಟನೆಯ ಬಗ್ಗೆ  ಹೇಳಿಕೊಂಡಿದ್ದಾರೆ, 'ಮಹಾನದಿ ಬರೆಯಲು ನನ್ನನ್ನು ಪ್ರೇರೇಪಿಸಿದ ಬಗ್ಗೆ ನಾನು ಎಂದಿಗೂ ಮಾತನಾಡಿರಲಿಲ್ಲ', ಎಂದಿದ್ದಾರೆ.

'ಈಗ ನನ್ನ ಹೆಣ್ಣುಮಕ್ಕಳಿಗೆ ಈ ಪ್ರಪಂಚದ ಮಾರ್ಗಗಳನ್ನು ಅರ್ಥಮಾಡಿಕೊಳ್ಳುವಷ್ಟು ವಯಸ್ಸಾಗಿದೆ. ನನ್ನ ಮನೆಯ ಸಹಾಯಕಿ, ಎಲ್ಲರೂ ನನ್ನ ಮಗಳನ್ನು ಹಣಕ್ಕಾಗಿ ಅಪಹರಿಸಲು ಸಂಚು ಹೂಡಿದ್ದರು. ಅವರು ರಿಹರ್ಸಲ್‌ ಕೂಡ ಮಾಡಿದರು. ಆಕಸ್ಮಿಕವಾಗಿ, ನಾನು ಅವರ ಯೋಜನೆಯನ್ನು ಕಂಡು ಹಿಡಿದೆ. ಆಗ ನು ಕೋಪಗೊಂಡಿದ್ದೆ, ನನ್ನ ಮಗುವಿನ ಸುರಕ್ಷತೆಗಾಗಿ ಕೊಲ್ಲಲು ಸಿದ್ಧನಾಗಿದ್ದೆ.' ಎಂದು ಹಳೆಯ ಘಟನೆಯ ಬಗ್ಗೆ ಬಾಯಿ ಬಿಟ್ಟಿದ್ದಾರೆ ಕಮಲ್.

ಕಮಲ್ ಮಾಜಿ ಪತ್ನಿ ಸಾರಿಕಾರ ಮಕ್ಕಳು ಶ್ರುತಿ ಹಾಸನ್ (34) ಮತ್ತು ಅಕ್ಷರಾ ಹಾಸನ್ (28) ಇಬ್ಬರೂ ಈಗ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದಾರೆ.

loader