Asianet Suvarna News Asianet Suvarna News

ಕಮಲ್‌ ಹಾಸನ್‌ಗೆ ಕೊರೊನಾ ಪಾಸಿಟಿವ್: ಆಸ್ಪತ್ರೆಗೆ ದಾಖಲು

ನಟ ಹಾಗೂ ರಾಜಕಾರಣಿ ಕಮಲ್ ಹಾಸನ್ ಅವರಿಗೆ  ಕೊರೊನಾ ವೈರಸ್ ದೃಢಪಟ್ಟಿದ್ದು, ಈ ಬಗ್ಗೆ ಅವರೇ ಟ್ವೀಟ್  ಮಾಡಿದ್ದಾರೆ. ಅಮೆರಿಕದಿಂದ ಹಿಂದಿರುಗಿದ ನಂತರ ಸ್ವಲ್ಪ ಕೆಮ್ಮು ಕಾಣಿಸಿಕೊಂಡಿತ್ತು. ನಂತರ  ಕೋವಿಡ್ ಪರೀಕ್ಷೆಗೊಳಗಾಗಿದ್ದು ಕೊರೊನಾ ಪಾಸಿಟಿವ್ ಆಗಿದೆ ಎಂದು ಅವರು ಹೇಳಿದ್ದಾರೆ. 

Kamal Haasan tests positive for coronavirus, admitted to hospital as a precaution gvd
Author
Bangalore, First Published Nov 22, 2021, 6:08 PM IST

ನಟ ಹಾಗೂ ರಾಜಕಾರಣಿ ಕಮಲ್ ಹಾಸನ್ (Kamal Haasan) ಅವರಿಗೆ  ಕೊರೊನಾ ವೈರಸ್ (coronavirus) ದೃಢಪಟ್ಟಿದ್ದು, ಈ ಬಗ್ಗೆ ಅವರೇ ಟ್ವೀಟ್  ಮಾಡಿದ್ದಾರೆ. ಅಮೆರಿಕದಿಂದ ಹಿಂದಿರುಗಿದ ನಂತರ ಸ್ವಲ್ಪ ಕೆಮ್ಮು (cough) ಕಾಣಿಸಿಕೊಂಡಿತ್ತು. ನಂತರ  ಕೋವಿಡ್ ಪರೀಕ್ಷೆಗೊಳಗಾಗಿದ್ದು ಕೊರೊನಾ ಪಾಸಿಟಿವ್ ಆಗಿದೆ ಎಂದು ಅವರು ಹೇಳಿದ್ದಾರೆ. ಇತ್ತೀಚೆಗಷ್ಟೇ 67ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ಕಮಲ್ ಹಾಸನ್ ಅವರು ಆಸ್ಪತ್ರೆಯಲ್ಲಿ ಸ್ವತಃ ಐಸೋಲೇಟ್ (Isolated) ಆಗಿದ್ದಾರೆ. ಈ ಸಾಂಕ್ರಾಮಿಕ ರೋಗವು ಇನ್ನೂ ಕೊನೆಗೊಂಡಿಲ್ಲ. ದಯವಿಟ್ಟು ಎಲ್ಲರೂ ಕಾಳಜಿ ವಹಿಸುವಂತೆ ಅಭಿಮಾನಿಗಳಿಗೆ ಕಮಲ್ ಹೇಳಿದ್ದಾರೆ.

ಕಮಲ್ ಹಾಸನ್ ಸಾಕಷ್ಟು ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದು, ಪ್ರಸ್ತುತ ತಮಿಳಿನ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ (Bigg Boss Tamil) ಐದನೇ ಸೀಸನ್ ಅನ್ನು ಹೋಸ್ಟ್ ಮಾಡುತ್ತಿದ್ದಾರೆ. ಇತ್ತೀಚೆಗೆ ಹೊಸ ಬಟ್ಟೆ ಉದ್ಯಮದ ಶಾಪ್​ ಉದ್ಘಾಟನೆಗಾಗಿ ಕಮಲ್ ಅಮೆರಿಕಕ್ಕೆ ತೆರಳಿದ್ದರು. ಕಮಲ್ ಹೌಸ್ ಆಫ್ ಖದ್ದರ್ (KH House of Khaddar) ಎಂಬ ತಮ್ಮ ಜವಳಿ ಮಳಿಗೆಯನ್ನು ಅಮೆರಿಕದಲ್ಲಿ (United States) ಪ್ರಾರಂಭಿಸಿದ್ದಾರೆ. 

'ವಿಕ್ರಮ್‌'ನಲ್ಲಿ ಕಮಲ್ ಹಾಸನ್, ವಿಜಯ್ ಸೇತುಪತಿ, ಫಹಾದ್ ಫಾಜಿಲ್!

ಕಮಲ್ ಹಾಸನ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಎರಡು ವಾರಗಳ ನಂತರ ಅವರಿಗೆ ಕೊರೊನಾ ದೃಢಪಟ್ಟಿದೆ. ಮುಖ್ಯವಾಗಿ​ ಅವರು ಕಳೆದ ಮಾರ್ಚ್​ನಲ್ಲಿಯೇ ಕೋವಿಡ್​ ಮೊದಲ ಡೋಸ್​ ಲಸಿಕೆ ಪಡೆದಿದ್ದರು. ಎರಡು ಡೋಸ್​ ಲಸಿಕೆ ಪಡೆದ ಬಳಿಕವೂ ಅವರಿಗೆ ಸೋಂಕು ದೃಢಪಟ್ಟಿದೆ. ಕಮಲ್ ಅವರ ಹುಟ್ಟುಹಬ್ಬದ ಪ್ರಯುಕ್ತ ಅವರ ಮುಂಬರುವ ಸಿನಿಮಾ 'ವಿಕ್ರಮ್‌' (Vikram) ಚಿತ್ರದ  ಫಸ್ಟ್ ಲುಕ್‌ನ್ನು ಚಿತ್ರತಂಡ ಬಿಡುಗಡೆ ಮಾಡಿತ್ತು. ಚಿತ್ರಕ್ಕೆ ಲೋಕೇಶ್ ಕನಗರಾಜ್ (Lokesh Kanagaraj) ಆಕ್ಷನ್ ಕಟ್ ಹೇಳಿದ್ದು, ಇದು ಕಮಲ್ ಹಾಸನ್ ಅವರ 232ನೇ ಚಿತ್ರವಾಗಿದೆ. ಈ ಸಿನಿಮಾದಲ್ಲಿ ವಿಜಯ್​ ಸೇತುಪತಿ (Vijay Sethupati), ,ಮಲಯಾಳಂ ನಟ ಫಹಾದ್​ ಫಾಸಿಲ್ (Fahadh Faasil) ಸೇರಿದಂತೆ ಘಟಾನುಘಟಿ ಕಲಾವಿದರು ನಟಿಸಿದ್ದಾರೆ.

ಇನ್ನು ಇತ್ತೀಚೆಗೆ ಬಿಡುಗಡೆಯಾದ 'ವಿಕ್ರಮ್' ಚಿತ್ರದ ಬ್ಲಾಕ್ ಆಂಡ್ ವೈಟ್‌ನಲ್ಲಿರುವ ಪೋಸ್ಟರ್ ಸಾಕಷ್ಟು ವೈರಲ್ ಆಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಈ ಚಿತ್ರದ ಪೋಸ್ಟರ್ ಬಗ್ಗೆಯೇ ಹೆಚ್ಚು ಚರ್ಚೆಯಾಗಿತ್ತು. ಚಿತ್ರದ ಕಾಂಬಿನೇಶನ್ ನೋಡಿ 'ನಟ ರಾಕ್ಷಸರು ಒಂದೇ ಚಿತ್ರಕ್ಕೆ ಜತೆಯಾಗಿದ್ದಾರೆ' ಎನ್ನುವ ಮಾತುಗಳು ಕೇಳಿ ಬಂದಿತ್ತು. ಈ ಹಿಂದೆ ಕಾರ್ತಿ ನಟನೆಯ 'ಖೈದಿ', ವಿಜಯ್ ನಟನೆಯ 'ಮಾಸ್ಟರ್' ಚಿತ್ರಗಳನ್ನು ನಿರ್ದೇಶನ ಮಾಡಿರುವ ಲೋಕೇಶ್ ಕನಕರಾಜ್ ನಿರ್ದೇಶನದಲ್ಲಿ ಈ 'ವಿಕ್ರಮ್'  ಸಿನಿಮಾ ಮೂಡಿ ಬರುತ್ತಿದೆ. ಹೀಗಾಗಿ ನಿರೀಕ್ಷೆ ಹೆಚ್ಚಾಗಿದೆ. 

ಒಂದು ಸ್ಥಾನ ಗೆಲ್ಲದ ಕಮಲ್ ಹಾಸನ್ ಪಕ್ಷಕ್ಕೆ ಮತ್ತೊಂದು ಹೊಡೆತ; ಪ್ರಮುಖ ನಾಯಕ ಗುಡ್‌ಬೈ!

2019ರಲ್ಲಿ ಲೋಕೇಶ್‌ 'ವಿಕ್ರಮ್' ಚಿತ್ರಕತೆಯನ್ನು ಕಮಲ್ ಹಾಸನ್‌ಗೆ ಹೇಳಿದ್ದರಂತೆ ಕೊನೆಗೂ ಗ್ರೀನ್ ಸಿಗ್ನಲ್ ಪಡೆದುಕೊಂಡು ಚಿತ್ರಕತೆ ಮುಂದೆ ಸಾಗಿದೆ. ಚಿತ್ರದ ಪ್ರಮೋಷನ್ ಟೀಸರ್‌ನ ಕಮಲ್ 66ನೇ ಹುಟ್ಟುಹಬ್ಬದಂದು ಬಿಡುಗಡೆ ಮಾಡಲಾಗಿತ್ತು. ಮೂವರ ಮುಖದ ಮೇಲೆ ರಕ್ತದ ಕಲೆ ನೋಡಿ ಇದು ಪಕ್ಕಾ ಮಾಫಿಯಾ ಸಿನಿಮಾ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದರು.

Follow Us:
Download App:
  • android
  • ios