ಚೆನ್ನೈ(ಮೇ.20):  ತಮಿಳುನಾಡು ಚುನಾವಣೆ ಫಲಿತಾಂಶ ಬಳಿಕ ನಟ ಕಮಲ್ ಹಾಸನ್ ಸ್ಥಾಪಿಸಿದ ಮಕ್ಕಳ್ ನೀಧಿ ಮಯ್ಯಂ(MNM) ರಾಜಕೀಯ ಪಕ್ಷ ಮುಳುಗುತ್ತಿರುವ ದೋಣಿಯಾಗಿ ಪರಿಣಮಿಸಿದೆ. ಒಂದೇ ಒಂದು ಸ್ಥಾನ ಗೆಲ್ಲಲು ಸಾಧ್ಯವಾಗದ MNM ಪಕ್ಷ ಇದೀಗ ಪ್ರಮುಖ ನಾಯಕರನ್ನು ಕಳೆದುಕೊಳ್ಳುತ್ತಿದೆ. ಇದೀಗ ಪಕ್ಷದ ನೀತಿ, ಧೋರಣೆ ವಿರೋಧಿಸಿ ಪ್ರಮುಖ ನಾಯಕ ಸೆಕೆ ಕುಮರವೇಲ್ ಕಮಲ್ ಹಾಸನ್ ಪಕ್ಷದಿಂದ ಹೊರಬಂದಿದ್ದಾರೆ.

ರಾಜಕೀಯಕ್ಕೆ ಅಡ್ಡಿಯಾದರೆ ಸಿನಿಮಾರಂಗ ತ್ಯಜಿಸಲು ಸಿದ್ಧ!.

ಪಕ್ಷದಲ್ಲಿ ಹೀರೋ ಪೂಜೆ ಸಾಧ್ಯವಿಲ್ಲ. ನಾನು ಜಾತ್ಯತೀತ ಪ್ರಜಾಪ್ರಭುತ್ವ ರಾಜಕಾರಣದಲ್ಲಿ ಪ್ರಯಾಣಿಸಲು ಬಯಸುತ್ತೇನೆ. ಒಂದು ವರ್ಗದ ಒಲೈಕೆಗಾಗಿ ರಾಜಕೀಯ ಮಾಡಲು ಸಾಧ್ಯವಿಲ್ಲ. ನಾವು ಇತಿಹಾಸವನ್ನು ರಚಿಸಬೇಕಾಗಿತ್ತು ಆದರೆ ನಾವು ಇತಿಹಾಸವನ್ನು ಓದುತ್ತಿದ್ದೇವೆ ಎಂದು ಸಿಕೆ ಕುಮರವೇಲ್ ಹೇಳಿದ್ದಾರೆ.

ಪ್ರಾಮಾಣಿಕ ಹಾಗೂ ಪ್ರಜಾಪ್ರಭುತ್ವದ ಅಡಿಯಲ್ಲಿ ಸಾಮಾಜಿಕ ಹಾಗೂ ಜನರ ಸೇವೆ ಮಾಡಲು ಪಕ್ಷ ಸೇರಿಕೊಂಡಿದ್ದೆ. ಆದರೆ ಈ ಪಕ್ಷದಲ್ಲಿ ಅದಕ್ಕೆ ಅನೂಕೂಲಕರ ವಾತಾವರಣ ಇಲ್ಲ. ಹೀರೋಗಳ ಪೂಜೆ, ಒಂದು ವರ್ಗದ ಒಲೈಕೆ ಮಾಡುವ ರಾಜಕಾರಣ ನನ್ನಿಂದ ಸಾಧ್ಯವಿಲ್ಲ. ಒಂದೇ ಚುನಾವಣೆಯಲ್ಲಿ ಪಕ್ಷದ ಅಸಲಿಯತ್ತು ಬಹಿರಂಗವಾಗಿದೆ ಹೀಗಾಗಿ ಪಕ್ಷದ ಎಲ್ಲಾ ಸ್ಥಾನ ಹಾಗೂ ಪ್ರಾಥಮಿಕ ಸದಸ್ಯತ್ವದಿಂದ ಹೊರಗುಳಿಯುತ್ತಿದ್ದೇನೆ ಎಂದು ಕುಮರವೇಲ್ ಹೇಳಿದ್ದಾರೆ. 

ಹೌಸ್‌ವೈಫ್‌ಗೆ ಸಂಬಳ: ಕಮಲ್ ಹಾಸನ್ ವಿರುದ್ಧ ಕಂಗನಾ ಗರಂ ಆಗಿದ್ದೇಕೆ..?

ಪಕ್ಷದ ಸೋಲಿನ ಬಳಿಕ ಕುಮರವೇಲ್ ಸೇರಿದಂತೆ 6 ನಾಯಕರು ರಾಜೀನಾಮೆ ನೀಡಿದ್ದಾರೆ. ಈ ಹಿಂದೆ MNM ಪಕ್ಷದ ಉಪಾಧ್ಯಕ್ಷ ಆರ್ ಮಹೇಂದ್ರನ್ ಮತ್ತು ಪ್ರಧಾನ ಕಾರ್ಯದರ್ಶಿ ಸಂತೋಷ್ ಬಾಬು ಪಕ್ಷ ತ್ಯಜಿಸಿದ್ದರು. ಪರಿಸರ ಕಾರ್ಯಕರ್ತೆ ಪದ್ಮ ಪ್ರಿಯಾ ವೈಯಕ್ತಿಕ ಕಾರಣಗಳನ್ನು ನೀಡಿ ಪಕ್ಷ ತೊರೆದಿದ್ದರು.