Asianet Suvarna News

'ವಿಕ್ರಮ್‌'ನಲ್ಲಿ ಕಮಲ್ ಹಾಸನ್, ವಿಜಯ್ ಸೇತುಪತಿ, ಫಹಾದ್ ಫಾಜಿಲ್!

 'ವಿಕ್ರಮ್' ಚಿತ್ರದ ಫಸ್ಟ್‌ ಲುಕ್ ರಿಲೀಸ್. ಮೂವರು ಸ್ಟಾರ್ ನಟರ ಸಿನಿಮಾ ಇದಾಗಿದೆ. 

Kamal Haasan Vijay sethupathi Fahadh Faasil Vikram first look poster out vcs
Author
Bangalore, First Published Jul 12, 2021, 3:55 PM IST
  • Facebook
  • Twitter
  • Whatsapp

ಒಂದೇ ಚಿತ್ರದಲ್ಲಿ ದಕ್ಷಿಣ ಭಾರತೀಯ ಚಿತ್ರರಂಗದ ಮೂವರು ಸ್ಟಾರ್ ನಟರು ಜತೆಯಾಗಿದ್ದಾರೆ. ತಮಿಳಿನಿಂದ ಕಮಲ್ ಹಾಸನ್, ವಿಜಯ್ ಸೇತುಪತಿ, ಮಲಯಾಳಂನಿಂದ ಫಹಾದ್ ಫಾಜಿಲ್ ಅವರು ನಟಿಸುತ್ತಿರುವ ‘ವಿಕ್ರಮ್’ ಚಿತ್ರದ ಫಸ್ಟ್ ಲುಕ್ ಈಗಷ್ಟೆ ಬಿಡುಗಡೆ ಆಗಿದೆ.

ಬ್ಲಾಕ್ ಆಂಡ್ ವೈಟ್‌ನಲ್ಲಿರುವ ಈ ಪೋಸ್ಟರ್ ಸಾಕಷ್ಟು ವೈರಲ್ ಆಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಚಿತ್ರದ ಪೋಸ್ಟರ್ ಬಗ್ಗೆಯೇ ಹೆಚ್ಚು ಚರ್ಚೆ ಆಗುತ್ತಿದೆ. ಚಿತ್ರದ ಕಾಂಬಿನೇಶನ್ ನೋಡಿ ‘ನಟ ರಾಕ್ಷಸರು ಒಂದೇ ಚಿತ್ರಕ್ಕೆ ಜತೆಯಾಗಿದ್ದಾರೆ’ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಈ ಹಿಂದೆ ಕಾರ್ತಿ ನಟನೆಯ ‘ಖೈದಿ’, ವಿಜಯ್ ನಟನೆಯ ‘ಮಾಸ್ಟರ್’ ಚಿತ್ರಗಳನ್ನು ನಿರ್ದೇಶನ ಮಾಡಿರುವ ಲೋಕೇಶ್ ಕನಕರಾಜ್ ನಿರ್ದೇಶನದಲ್ಲಿ ಈ ‘ವಿಕ್ರಮ್’ ಸಿನಿಮಾ ಮೂಡಿ ಬರುತ್ತಿದೆ. ಹೀಗಾಗಿ ನಿರೀಕ್ಷೆ ಹೆಚ್ಚಾಗಿದೆ.

ರಜನಿ ರಾಜಕೀಯ ಪಕ್ಷ ವಿಸರ್ಜನೆ..! ಪಾಲಿಟಿಕ್ಸ್‌ಗೆ ಎಂಟ್ರಿ ಇಲ್ಲ

2019ರಲ್ಲಿ ಲೋಕೇಶ್‌ ಈ ಚಿತ್ರಕತೆಯನ್ನು ಕಮಲ್ ಹಾಸನ್‌ಗೆ ಹೇಳಿದ್ದರಂತೆ ಕೊನೆಗೂ ಗ್ರೀನ್ ಸಿಗ್ನಲ್ ಪಡೆದುಕೊಂಡು ಚಿತ್ರಕತೆ ಮುಂದೆ ಸಾಗಿದೆ. ಚಿತ್ರದ ಪ್ರಮೋಷನ್ ಟೀಸರ್‌ನ ಕಮಲ್ 66ನೇ ಹುಟ್ಟುಹಬ್ಬದಂದು ಬಿಡುಗಡೆ ಮಾಡಲಾಗಿತ್ತು.  ಮೂವರ ಮುಖದ ಮೇಲೆ ರಕ್ತದ ಕಲೆ ನೋಡಿ ಇದು ಪಕ್ಕಾ ಮಾಫಿಯಾ ಸಿನಿಮಾ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.

 

Follow Us:
Download App:
  • android
  • ios