Asianet Suvarna News Asianet Suvarna News

Pushpa 2; ಸಮಂತಾ ಅಲ್ಲ, ಅಲ್ಲು ಅರ್ಜುನ್ ಜೊತೆ ಐಟಂ ಹಾಡಿಗೆ ಹೆಜ್ಜೆ ಹಾಕ್ತಿದ್ದಾರೆ ಈ ಖ್ಯಾತ ನಟಿ

'ಹೂ ಅಂತಿಯಾ ಮಾವ...' ಸದ್ಯ ಟ್ರೆಂಡಿಂಗ್‌ನಲ್ಲಿರುವ ಹಾಡುಗಳಲ್ಲಿ ಒಂದಾಗಿದೆ. ಈ ಹಾಡಿನ ಮೂಲಕ ಸೌತ್ ಸುಂದರಿ  ಸಮಂತಾ ಮತ್ತಷ್ಟು ಶೈನ್ ಆದರು. ಪುಷ್ಪ-2ನಲ್ಲೂ ಈ ಹಾಡು ಇರುತ್ತಾ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. 

Kajal Aggarwal likely to dance with allu arjun in pushpa 2 sgk
Author
First Published Sep 27, 2022, 11:28 AM IST

'ಹೂ ಅಂತಿಯಾ ಮಾವ...' ಸದ್ಯ ಟ್ರೆಂಡಿಂಗ್‌ನಲ್ಲಿರುವ ಹಾಡುಗಳಲ್ಲಿ ಒಂದಾಗಿದೆ. ಈ ಹಾಡಿನ ಮೂಲಕ ಸೌತ್ ಸುಂದರಿ  ಸಮಂತಾ ಮತ್ತಷ್ಟು ಶೈನ್ ಆದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದರು. ಯಾರ್ ನೋಡಿದ್ರು ಹೂ ಅಂತಿಯಾ ಮಾವ ಎಂದು ಹೆಜ್ಜೆ ಹಾಕುವಂತೆ ಮಾಡಿದ್ರು. ಸಮಂತಾ ಡಾನ್ಸ್, ಲುಕ್, ಬೋಲ್ಡ್‌ನೆಸ್, ಲಿರಿಕ್ಸ್ ಅಭಿಮಾನಿಗಳ ಕಿಕ್ ಏರಿಸಿತ್ತು. ಪುಷ್ಪ ಸಿನಿಮಾ ಒಂದು ತೂಕ ಆದರೆ ಸಮಂತಾ ಹಾಡು ಮತ್ತೊಂದು ತೂಕ. ಈ ಹಾಡು ಅಷ್ಟು ದೊಡ್ಡ ಮಟ್ಟದ ಹಿಟ್ ತಂದುಕೊಟ್ಟಿತ್ತು. ಸಮಂತಾ ಅವರನ್ನು ಹೂ ಅಂತಾವ ಗರ್ಲ್ ಎಂದೇ ಕರೆಯಲಾಗುತ್ತಿದೆ.

ಅಂದಹಾಗೆ ಈ ಹಾಡಿಗಾಗಿ ನಿರ್ದೇಶಕ ಸುಕುಮಾರ್ ಅನೇಕ ಬಾಲಿವುಡ್ ಸ್ಟಾರ್‌ಗಳಿಗೆ ಆಫರ್ ಮಾಡಿದ್ದರು. ಮೊದಲು ದಿಶಾ ಪಟಾಣಿಯನ್ನು ಕೇಳಿದ್ದರು. ಆದರೆ ದಿಶಾ ಈ ಆಫರ್ ತಿರಸ್ಕರಿಸಿದರು. ಬಳಿಕ ಸಾಕಷ್ಟು ಬಾಲಿವುಡ್ ನಟಿಯರಿಗೆ ಆಫರ್ ಮಾಡಿದ್ದರು. ಆದರೆ  4 ರಿಂದ 5 ಕೋಟಿ ರೂಪಾಯಿ ಡಿಮ್ಯಾಂಡ್ ಮಾಡಿದ ಕಾರಣ ನಿರ್ದೇಶಕ ಸುಕುಮಾರ್ ಬಾಲಿವುಡ್ ಬಿಟ್ಟು ಸೌತ್ ಸುಂದರಿಯನ್ನೆ ಆಯ್ಕೆ ಮಾಡಲು ನಿರ್ಧರಿಸಿದರು. ದಕ್ಷಿಣ ಭಾರತೀಯ ಸಿನಿಮಾರಂಗದಲ್ಲಿ ಮಿಂಚುತ್ತಿರುವ ಉತ್ತರ ಭಾರತದ ಸುಂದರಿ ಸಮಂತಾ ಅವರನ್ನು ಆಯ್ಕೆ ಮಾಡಿದರು. ದಿ ಫ್ಯಾಮಿಲಿ ಮ್ಯಾನ್ ಸಕ್ಸಸ್ ನಲ್ಲಿದ್ದ ಸಮಂತಾ ಅಲ್ಲು ಅರ್ಜುನ್ ಜೊತೆ ಹೂ ಅಂತೀಯಾ ಹಾಡಿಗೆ ಹೆಜ್ಜೆ ಹಾಕಿದರು. ಈ ಹಾಡು ಸಮಂತಾ ವೃತ್ತಿ ಜೀವನಕ್ಕೆ ಮತ್ತೊಂದು ದೊಡ್ಡ ಸಕ್ಸಸ್ ತಂದುಕೊಟ್ಟಿತು.

ಚಿಕಿತ್ಸೆಗಾಗಿ ಅಲ್ಲ ಈ ಕಾರಣಕ್ಕೆ ವಿದೇಶಕ್ಕೆ ಹಾರಿದ ನಟಿ ಸಮಂತಾ

ಇದೀಗ ಪಾರ್ಟ್-2 ಚಿತ್ರೀಕರಣ ಪ್ರಾರಂಭವಾಗಿದೆ. ಪಾರ್ಟ್2ನಲ್ಲೂ ನಿರ್ದೇಶಕ ಸುಕುಮಾರ್ ಐಟಂ ಹಾಡನ್ನು ಇರಿಸಿದ್ದಾರಂತೆ. ಅಷ್ಟೆಯಲ್ಲೇ ಈಗಾಗಲೇ ಐಟಂ ಹಾಡಿಗೆ ಹೆಜ್ಜೆ ಹಾಕುವ ನಟಿಯನ್ನು ಸಹ ಆಯ್ಕೆ ಮಾಡಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಹೌದು, ಪುಷ್ಪ 2 ಸಿನಿಮಾದ ವಿಶೇಷ ಹಾಡಿನಲ್ಲಿ ದಕ್ಷಿಣ ಭಾರತದ ಮತ್ತೋರ್ವ ಖ್ಯಾತ ನಟಿ, ಸದ್ಯ ಮತ್ತೆ ಸಿನಿಮಾಗೆ ಕಮ್ ಬ್ಯಾಕ್ ಮಾಡಿರುವ ಕಾಜಲ್ ಅಗರವಾಲ್ ಹೆಜ್ಜೆ ಹಾಕುತ್ತಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಕಾಜಲ್ ಅಥವಾ ಸಿನಿಮಾತಂಡದ ಕಡೆಯಿಂದ ಇನ್ನು ಅಧಿಕೃತ ಮಾಹಿತಿ ರಿವೀಲ್ ಆಗಿಲ್ಲ. 

ಶಕುಂತಲೆಯಾಗಿ ಅಭಿಮಾನಿಗಳ ಮುಂದೆ ಬರಲು ಸಜ್ಜಾದ ಸಮಂತಾ; ಯಾವಾಗ?

ಕಾಜಲ್ ಸದ್ಯ ಕಮಲ್ ಹಾಸನ್ ಮತ್ತು ಶಂಕರ್ ಅವರ ಇಂಡಿಯನ್-2 ಸಿನಿಮಾಗಾಗಿ ಮತ್ತೆ ವಾಪಸ್ ಆಗಿದ್ದಾರೆ. ಮಗುವಾದ ಬಳಿಕ ಕಾಜಲ್ ಮೊದಲ ಬಾರಿಗೆ ಚಿತ್ರೀಕಣ ಸೆಟ್‌ಗೆ ಮರಳುತ್ತಿದ್ದಾರೆ.ಈಗಾಗಲೇ ಸಿಕ್ಕಾಪಟ್ಟೆ ವರ್ಕೌಟ್ ಮಾಡುತ್ತಿರುವ ನಟಿ ಕಾಜಲ್ ಅಲ್ಲು ಅರ್ಜುನ್ ಜೊತೆ ಹೆಜ್ಜೆ ಹಾಕ್ತಾರಾ?'ಹೂ ಅಂತಿಯಾ ಮಾವ...'ಅಷ್ಟೆ ಸೂಪರ್ ಹಿಟ್ ಆಗುತ್ತಾ ಎಂದು ಕಾದುನೋಡಬೇಕಿದೆ. 

Follow Us:
Download App:
  • android
  • ios