Asianet Suvarna News Asianet Suvarna News

ಶಕುಂತಲೆಯಾಗಿ ಅಭಿಮಾನಿಗಳ ಮುಂದೆ ಬರಲು ಸಜ್ಜಾದ ಸಮಂತಾ; ಯಾವಾಗ?

ಸೌತ್ ಸುಂದರಿ ಸಮಂತಾ ರುತ್ ಪ್ರಭು ಸದ್ಯ ಬಹುನಿರೀಕ್ಷೆಯ ಶಾಕುಂತಲಂ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಈಗಾಗಲೇ ಶಾಕುಂತಲಂ ಸಿನಿಮಾದ ಚಿತ್ರೀಕರಣ ಮುಗಿಸಿದ್ದ ಸ್ಯಾಮ್ ಯಾವಾಗ ರಿಲೀಸ್ ಆಗುತ್ತೆ ಎಂದು ಎದುರು ನೋಡುತ್ತಿದ್ದರು. ಆದರೀಗ ಕೊನೆಗೂ ಬಿಡುಗಡೆ ದಿನಾಂಕ ಬಹಿರಂಗವಾಗಿದೆ. 

samantha starrer shakuntalam movie set to release on november 4th sgk
Author
First Published Sep 23, 2022, 4:53 PM IST

ಸೌತ್ ಸುಂದರಿ ಸಮಂತಾ ರುತ್ ಪ್ರಭು ಸದ್ಯ ಬಹುನಿರೀಕ್ಷೆಯ ಶಾಕುಂತಲಂ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಈಗಾಗಲೇ ಶಾಕುಂತಲಂ ಸಿನಿಮಾದ ಚಿತ್ರೀಕರಣ ಮುಗಿಸಿದ್ದ ಸ್ಯಾಮ್ ಯಾವಾಗ ರಿಲೀಸ್ ಆಗುತ್ತೆ ಎಂದು ಎದುರು ನೋಡುತ್ತಿದ್ದರು. ಆದರೀಗ ಕೊನೆಗೂ ಬಿಡುಗಡೆ ದಿನಾಂಕ ಬಹಿರಂಗವಾಗಿದೆ. ಹೌದು ಶಾಕುಂತಲಂ ಸಿನಿಮಾ ನವೆಂಬರ್ ನಲ್ಲಿ ತೆರೆಗೆ ಬರಲು ಸಜ್ಜಾಗಿದೆ. ದಿ ಫ್ಯಾಮಿಲಿ ಮ್ಯಾನ್ 2 ನಂತರ ಸಮಂತಾ ಮತ್ತೊಂದು ಬಿಗ್ ಹಿಟ್ ಗಾಗಿ ಕಾಯುತ್ತಿದ್ದಾರೆ. ಶಾಕುಂತಲಂ ಸಿನಿಮಾ ಸಮಂತಾಗೆ ಮತ್ತೊಂದು ಸಕ್ಸಸ್ ತಂದುಕೊಡುತ್ತಾ ಎಂದು ಎದುರು ನೋಡುತ್ತಿದ್ದಾರೆ. 

ಸಮಂತಾ, ಅಲ್ಲು ಅರ್ಜುನ್ ನಟನೆಯ ಪುಷ್ಪ ಸಿನಿಮಾದಲ್ಲಿ ಹು ಅಂಟವಾ ಮಾಮಾ...ಹಾಡಿಗೆ ಹೆಜ್ಜೆಹಾಕಿದ್ದರು. ಈ ಹಾಡು ಸಮಂತಾ ರಾಷ್ಟ್ರ- ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ತಂದುಕೊಟ್ಟಿತು. ಒಂದೇ ಒಂದು ಹಾಡಿನ ಮೂಲಕ ಸಮಂತಾ ಮತ್ತೆ ಅಭಿಮಾನಿಗಳ ಹೃದಯ ಗೆದ್ದಿದ್ದರು. ಇದೀಗ ವರ್ಷದ ಬಳಿಕ ಶಾಕುಂತಲಂ ಮೂಲಕ ಮತ್ತೆ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ಪೌರಾಣಿಕ ಕಥೆಯುಳ್ಳ 'ಶಾಕುಂತಲಂ' ಸಿನಿಮಾದಲ್ಲಿ ಸಮಂತಾ, ಶಕುಂತಲೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಮಂತಾ ಜೊತೆ ನಾಯಕನಾಗಿ ಮಲಯಾಳಂ ನಟ ದೇವ್ ಮೋಹನ್ ಕಾಣಿಸಿಕೊಂಡಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ರಿಲೀಸ್ ಆಗುತ್ತಿದೆ. 

ಅಂದಹಾಗೆ ಭಾರಿ ನಿರೀಕ್ಷೆ ಮತ್ತು ಕುತೂಹಲ ಮೂಡಿಸಿರುವ ಶಾಕುಂತಲಂ ಸಿನಿಮಾ ನವೆಂಬರ್ 4ರಂದು ರಿಲೀಸ್ ಆಗುತ್ತಿದೆ. ಈ ಸಿನಿಮಾದಲ್ಲಿ ಸಮಂತಾ ಜೊತೆ ಅಲ್ಲು ಅರ್ಜುನ್ ಪುತ್ರಿ ಅರ್ಹ ಕೂಡ ನಟಿಸಿದ್ದಾರೆ. ಮೊದಲ ಬಾರಿಗೆ ಅರ್ಹ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅರ್ಹ ಅಭಿನಯ ಹೇಗಿದೆ ಎಂದು ನೋಡಲು ಅಲ್ಲು ಫ್ಯಾನ್ ಸಹ ಕಾತರರಾಗಿದ್ದಾರೆ. 

ಅನಾರೋಗ್ಯದಿಂದ ಬಳಲುತ್ತಿದ್ದಾರಾ ನಾಗಚೈತನ್ಯ ಮಾಜಿ ಪತ್ನಿ? ಅನುಮಾನ ಹೆಚ್ಚಿಸಿದ ಸಮಂತಾ ಸೈಲೆನ್ಸ್

 ಶಾಕುಂತಲಂ ಚಿತ್ರಕ್ಕೆ ಖ್ಯಾತ ನಿರ್ಮಾಪಕ ದಿಲ್ ರಾಜು ಬಂಡವಾಳ ಹೂಡಿದ್ದಾರೆ. ಗುಣಶೇಖರ್ ಆಕ್ಷನ್ ಕಟ್ ಹೇಳಿದ್ದಾರೆ. ಈಗಾಗಲೇ ಆಕರ್ಷಕ ಪೋಸ್ಟರ್ ಮೂಲಕ ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿರುವ ಶಾಕುಂತಲಂ  ಕನ್ನಡ, ತೆಲುಗು, ಹಿಂದಿ, ತಮಿಳು, ಮಲಯಾಳಂ ಭಾಷೆಗಳಲ್ಲಿ ತೆರೆಕಾಣುತ್ತಿದೆ. ಈ ಸಿನಿಮಾವನ್ನು ರಾಮೋಜಿ ಫಿಲ್ಮ್ ಸಿಟಿ, ಅನಂತಗಿರಿ ಬೆಟ್ಟ, ಗಾಂಧಿಪೇಟ್ ಲೇಕ್ ಈ ಸ್ಥಳಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಈ ಸಿನಿಮಾದಲ್ಲಿ ಸಮಂತಾ ಮತ್ತು ದೇವ್ ಜೊತೆಗೆ ಕಬೀರ್ ದುಹನ್ ಸಿಂಗ್, ಅದಿತಿ ಬಾಲನ್, ಮಧು, ಪ್ರಕಾಶ್ ರಾಜ್, ಗೌತಮಿ, ಮೋಹನ್ ಬಾಬು ಸೇರಿದಂತೆ ಬಹುದೊಡ್ಡ ತಾರಾಗಣವೇ ಇದೆ.

samantha starrer shakuntalam movie set to release on november 4th sgk ಬದುಕಲ್ಲಿ ನನಗ್ಯಾಕೆ ಇಷ್ಟು ಅನ್ಯಾಯ ಆಗ್ತಿದೆ?: ಸದ್ಗುರು ಜೊತೆ ಸಮಂತಾ ಬಿಚ್ಚುಮಾತು!

ಶಕುಂತಲೆ ಬಗ್ಗೆ

 ಋಷಿ ಕಣ್ವ ಮಹರ್ಷಿಗಳಿಗೆ ಕಾಡಿನಲ್ಲಿ ಶಕುಂತ ಪಕ್ಷಿಗಳ ಮಧ್ಯೆ ಪುಟ್ಟ ಮಗುವೊಂದು ಸಿಗುತ್ತದೆ. ಕಾಡಿನಲ್ಲಿ ಸಿಕ್ಕಿದ ಮಗುವನ್ನು ಕಣ್ವ ಋಷಿಗಳು ತಮ್ಮ ಆಶ್ರಮಕ್ಕೆ ತಂದು ಬೆಳೆಸುತ್ತಾರೆ. ಶಕುಂತ ಪಕ್ಷಿಗಳ ಮಧ್ಯೆ ದೊರಕಿದ ಕಾರಣ ಮಗುವಿಗೆ ಶಕುಂತಲೆ ಎಂದು ಹೆಸರಿಡುತ್ತಾರೆ. ಶಕುಂತ ಅಂದರೆ ಸುರಕ್ಷಿತ ಎಂದು ಆದಿ ಪರ್ವದಲ್ಲಿ ಕಣ್ವ ಮಹರ್ಷಿಗಳು ವಿವರಿಸಿದ್ದಾರೆ. ಶಕುಂತಲೆ, ದುಶ್ಯಂತ ಮಹಾರಾಜನ ಪತ್ನಿ ಮತ್ತು ಚಕ್ರವರ್ತಿ ಭರತನ ತಾಯಿ.

Follow Us:
Download App:
  • android
  • ios