ಆಟೋರಿಕ್ಷಾದಲ್ಲಿ ಹಾಸ್ಯ ನಟನ ಮೃತದೇಹ ಪತ್ತೆಯಾಗಿದೆ. ಈ ಸಾವಿನ ಬಗ್ಗೆ ಹಲವು ಅನುಮಾನಗಳು ಹುಟ್ಟಿಕೊಂಡಿದ್ದು, ಪ್ರಕರಣದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.   

ಚೆನ್ನೈ (ಮಾ.25): ತೆಲುಗು ಚಿತ್ರರಂಗದ ಖ್ಯಾತ ಹಾಸ್ಯ ನಟ ವಿರುಚಕಕಾಂತ್ ಬಾಬು ಚೆನ್ನೈನ ಆಟೋರಿಕ್ಷಾವೊಂದರಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಈ ಅನುಮಾನಾಸ್ಪದ ಸಾವಿನ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿರ್ದೇಶಕ ಜನನಾಥನ್‌ ಇನ್ನಿಲ್ಲ 

ಕೆಲವು ವರ್ಷಗಳ ಹಿಂದೆ ಪೋಷಕರನ್ನು ಕಳೆದುಕೊಂಡ ವಿ. ಬಾಬು ಅವರು ಮಾನಸಿಕವಾಗಿ ನೊಂದಿದ್ದರು. ಸರಿಯಾದ ಉದ್ಯೋಗವು ಇರಲಿಲ್ಲ. ಆಟೋ ಚಲಾಯಿಸಿ ಜೀವನ ನಡೆಸಲು ಆರಂಭಿಸಿದ್ದರು ಹಾಗೂ ದೇವಾಲಯಗಳಲ್ಲಿ ಮಲಗುತ್ತಿದ್ದರು. ಕೊರೋನಾ ಲಾಕ್‌ಡೌನ್‌ ಸಮಯದಲ್ಲಿ ಸಂಕಷ್ಟ ಎದುರಾದ ಕಾರಣ ಚೆನ್ನೈನ ಬೀದಿಗಳಲ್ಲಿ ಭಿಕ್ಷೆ ಬೇಡುತ್ತಿದ್ದರು ಹಾಗೂ ದೇವಸ್ಥಾನಗಳಲ್ಲಿ ನೀಡುವ ಪ್ರಸಾದವನ್ನು ಸೇವಿಸಿ ಜೀವನ ನಡೆಸುತ್ತಿದ್ದರು. 

2004ರಲ್ಲಿ 'ಖಾದಲ್' ಚಿತ್ರದಲ್ಲಿ ವಿ ಬಾಬು ಅಭಿನಯಿಸಿದ್ದಾರೆ. ಇದೇ ಖಾದಲ್ ಚಿತ್ರವನ್ನು ಕನ್ನಡದಲ್ಲಿ 'ಚೆಲುವಿನ ಚಿತ್ತಾರ' ಎಂದು ರಿಮೇಕ್ ಮಾಡಲಾಗಿತ್ತು. ಅಗಲಿರುವ ವಿ ಬಾಬು ಆತ್ಮಕ್ಕೆ ಶಾಂತಿ ಸಿಗಲಿ.