ಚೆನ್ನೈ(ಮಾ.16) : ಟಾಲಿವುಡ್ ಚಿತ್ರರಂಗದ ಮಾಸ್ಟರ್, ಸ್ಟಾರ್ ಆ್ಯಂಡ್ ಹಿಟ್ ಡೈರೆಕ್ಟರ್ ಎಸ್‌.ಪಿ ಜನನಾಥ್ (61) ಚೆನ್ನೈನ ಖಾಸಗಿ ಅಸ್ಪ್ರತೆಯಲ್ಲಿ ಹೃದಯಾಘಾತದಿಂದ ಕೊನೆ ಉಸಿರೆಳೆದಿದ್ದಾರೆ.  ಸೋಷಿಯಲ್ ಮೀಡಿಯಾ ಮೂಲಕ ಇಡೀ ತಮಿಳು ಚಿತ್ರರಂಗ ಸಂತಾಪ ಸೂಚಿಸಿದೆ.

ಮಾಜಿ ಬಿಗ್‌ಬಾಸ್ ಸ್ಪರ್ಧಿ, ಗಾಯಕ ಕೊರೋನಾಗೆ ಬಲಿ 

2003ರಲ್ಲಿ 'ಅಯ್ಯರ್ಕೈ' ಚಿತ್ರದ ಮೂಲಕ ಟಾಲಿವುಡ್ ಚಿತ್ರರಂಗಕ್ಕೆ ಜನನಾಥ್ ನಿರ್ದೇಶಕನಾಗಿ ಪಾದಾರ್ಪಣೆ ಮಾಡಿದ್ದರು. ತಮ್ಮ ಮೊದಲ ಚಿತ್ರವೇ ರಾಷ್ಟ್ರಪ್ರಶಸ್ತಿಗೆ ಭಾಜನವಾಯಿತು. ಜನನಾಥ್ ಇದುವರೆಗೂ 5 ಸಿನಿಮಾಗಳಿಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ, ಅದರಲ್ಲಿ ಒಂದಕ್ಕೆ ಬಂಡವಾಳ ಕೂಡ ಹಾಕಿದ್ದಾರೆ. ತಮ್ಮ 6 ಸಿನಿಮಾ ಬ್ಯುಸಿಯಲ್ಲಿದ್ದ ಜನನಾಥ್ ಬಿಡುಗಡೆಗೂ ಮುನ್ನವೇ ಕೊನೆ ಉಸಿರೆಳೆದಿದ್ದಾರೆ. 

ಬಿಗ್ ಬಾಸ್ ಸ್ಪರ್ಧಿ ಜಯಶ್ರೀ ರಾಮಯ್ಯ ಇನ್ನಿಲ್ಲ!

ಜನನಾಥ್ 6ನೇ ಸಿನಿಮಾ ಲಾಭಂ ಪೋಸ್ಟ್‌ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದವು. ಈ ಚಿತ್ರದಲ್ಲಿ ನಟಿ ಶ್ರುತಿ ಹಾಸನ್ ಅಭಿನಯಿಸಿದ್ದಾರೆ. ಈ ಚಿತ್ರದ ಮೂಲಕ ಇಬ್ಬರೂ ಆಪ್ತರಾಗಿದ್ದರು. ವಿಚಾರ ಕೇಳಿ ಶಾಕ್ ಆದ ಶ್ರುತಿ ಟ್ಟೀಟ್ ಮಾಡಿದ್ದಾರೆ. 'ಜನನಾಥ್ ಸರ್‌ ನಿಮಗೆ ಗುಡ್‌ ಬೈ ಹೇಳಲು ನನ್ನ ಹೃದಯ ಭಾರವಾಗುತ್ತಿದೆ. ನಿಮ್ಮ ಜೊತೆ ಕೆಲಸ ಮಾಡಿದ್ದು ನನ್ನ ಭಾಗ್ಯ. ನಿಮ್ಮ ಬುದ್ಧೀವಂತ ಹಾಗೂ ವಿನಯತೆ ಅದ್ಭುತ, ನೀವು ಸದಾ ನನ್ನ ಆಲೋಚನೆಗಳಲ್ಲಿ ಇರುತ್ತೀರಿ,' ಎಂದು ಟ್ಟೀಟ್ ಮಾಡಿದ್ದಾರೆ.

ಟಾಲಿವುಡ್ ಚಿತ್ರರಂಗ, ಸಿನಿ ಪ್ರೇಮಿಗಳು ಹಾಗೂ ಕುಟುಂಬದವರನ್ನು ಅಗಲಿರುವ ಜನನಾಥ್‌ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸೋಣ.