ಐಶ್ವರ್ಯಾ ರೈ ಖುಷಿಗೆ ಕಲ್ಲು ಹಾಕೋದೇ ಜಯಾ ಬಚ್ಚನ್ ಕೆಲ್ಸ, ವಿಡಿಯೋ ಏನ್ ಹೇಳ್ತಿದೆ?
ಅಮಿತಾಬ್ ಬಚ್ಚನ್ ಹಾಗೂ ಜಯಾ ಬಚ್ಚನ್ ದಂಪತಿಯ ಮಧ್ಯೆ ಸರಿ ಇಲ್ಲ ಎನ್ನುವ ಸುದ್ದಿಯಿಂದ ಹಿಡಿದು, ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ಮಧ್ಯೆ ಸರಿ ಇಲ್ಲ ಎನ್ನುವ ಸುದ್ದಿಯವರೆಗೆ ಬಹತೇಕರಿಗೆ ಗೊತ್ತು. ಆದರೆ, ಎಲ್ಲಕ್ಕಿಂತ ಹೆಚ್ಚಾಗಿ ಅತ್ತೆ ಜಯಾ ಬಚ್ಚನ್ ..

ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ (Amitabh Bachchan) ಕುಟುಂಬದಲ್ಲಿ ಎಲ್ಲವೂ ಸರಿ ಇಲ್ಲ ಎಂದು ತುಂಬಾ ಸಮಯಗಳಿಂದ ಹೇಳಲಾಗುತ್ತಿದೆ. 'ಎಲ್ಲರ ಮನೆಯ ದೋಸೆಯೂ ತೂತೇ' ಎಂದು ಎಲ್ಲರಿಗೂ ಗೊತ್ತಿದ್ದರೂ ಬೇರೆಯವರ ಮನೆ ದೋಸೆ ನೋಡುವ, ಆ ಬಗ್ಗೆ ಮಾತನಾಡುವ ಚಟ ಹಲವರಿಗೆ ಇರುತ್ತದೆ. ಅದರಂತೆ, ನಟಿ ಐಶ್ವರ್ಯಾ ರೈ (Aishwarya Rai) ಅವರನ್ನು ಜಯಾ ಬಚ್ಚನ್ (Jaya Bachchan) ಅನುಮಾನದಿಂದ ನೋಡುತ್ತಾರೆ, ಅವಮಾನ ಮಾಡುತ್ತಾರೆ ಎಂದು ಹೇಳುವವರೇ ಹೆಚ್ಚು.
ಅಮಿತಾಬ್ ಬಚ್ಚನ್ ಹಾಗೂ ಜಯಾ ಬಚ್ಚನ್ ದಂಪತಿಯ ಮಧ್ಯೆ ಸರಿ ಇಲ್ಲ ಎನ್ನುವ ಸುದ್ದಿಯಿಂದ ಹಿಡಿದು, ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ಮಧ್ಯೆ ಸರಿ ಇಲ್ಲ ಎನ್ನುವ ಸುದ್ದಿಯವರೆಗೆ ಬಹತೇಕರಿಗೆ ಗೊತ್ತು. ಆದರೆ, ಎಲ್ಲಕ್ಕಿಂತ ಹೆಚ್ಚಾಗಿ ಅತ್ತೆ ಜಯಾ ಬಚ್ಚನ್ ಹಾಗೂ ಸೊಸೆ ಐಶ್ವರ್ಯಾ ರೈ ಮಧ್ಯೆ ಸರಿ ಇಲ್ಲದಿರುವುದೇ ಆ ಮನೆಯ ಎಲ್ಲಾ ಸಮಸ್ಯೆಗೆ ಮೂಲ ಕಾರಣ ಎನ್ನಲಾಗುತ್ತಿದೆ.
ಐಶ್ವರ್ಯ ರೈಗೆ ʼಮಿಸ್ ಇಂಡಿಯಾʼದಲ್ಲಿ ಪೈಪೋಟಿ ನೀಡಿದ ಸುಂದರಿ ಬರ್ಖಾ ಏನಾಗಿದ್ದಾಳೆ ನೋಡಿ!
ಇತ್ತೀಚೆಗಂತೂ ಐಶ್ವರ್ಯಾ ರೈ ಹಾಗೂ ಅಭಿಷೇಕ್ ಮಧ್ಯೆ ಸರಿ ಇಲ್ಲ ಅಂತ ಬಹಳಷ್ಟು ಗಾಸಿಪ್ ಹಬ್ಬಿತ್ತು. ಆದರೆ ಬಚ್ಚನ್ ಫ್ಯಾಂಇಲಿ ಮಾತ್ರ ಇದ್ಯಾವುದಕ್ಕೂ ಹೆಚ್ಚು ತಲೆ ಕೆಡಿಸಿಕೊಂಡಿಲ್ಲ. 'ನಮ್ಮಲ್ಲೆನೂ ಸಮಸ್ಯೆ ಇಲ್ಲ, ನಾವು ಚೆನ್ನಾಗಿಯೇ ಇದ್ದೇವೆ, ನೋಡುವವರ ಕಣ್ಣಿಗೆ ಸಮಸ್ಯೆ ಕಾಣಿಸಿದರೆ ಅದು ನಮ್ಮ ತಪ್ಪಲ್ಲ' ಎಂಬಂತೆ, ಅದಕ್ಕೆ ಸಾಕ್ಷಿ ಎಂಬಂತೆ ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ಆಗಾಗ ಒಟ್ಟಿಗೇ ಕಾಣಿಸಕೊಂಡು ಸೋಷಿಯಲ್ ಮೀಡಿಯಾದಲ್ಲಿ ಫೋಟೋ ವೈರಲ್ ಆಗುವಂತೆ ನೋಡಕೊಳ್ಳುತ್ತಾರೆ.
ಅಷ್ಟೇ ಅಲ್ಲ, ಜಯಾ ಬಚ್ಚನ್ ಹಾಗೂ ಐಶ್ವರ್ಯಾ ರೈ ಕೂಡ ತಮ್ಮ ಕುಟುಂಬದ ಕಾರ್ಯಕ್ರಮಗಳಲ್ಲಿ, ವೇದಿಕೆಗಳಲ್ಲಿ ಒಟ್ಟೊಟ್ಟೊಗೇ ಕಾಣಿಸಿಕೊಂಡು ತಮ್ಮ ವಿರುದ್ಧ ಇರುವ ಆರೋಪಗಳಿಗೆ ಉತ್ತರ ಕೊಡುವ ಪ್ರಯತ್ನ ಮಾಡುತ್ತಾ ಇರುತ್ತಾರೆ. ಆದರೆ, ಅಲ್ಲೇ ಎಲ್ಲೋ ಯಡವಟ್ಟು ಆಗ್ತಿರೋದು. ಜಯಾ ಬಚ್ಚನ್ ಹಾಗೂ ಐಶ್ವರ್ಯಾ ರೈ ಒಟ್ಟಿಗೇ ಕಾಣಿಸಿಕೊಂಡಾಗ, ಅಲ್ಲಿ ಜಯಾ ಬಚ್ಚನ್ ನಡೆದುಕೊಳ್ಳುವ ರೀತಿ ಹಲವರಿಗೆ ಸಂಶಯ ಮೂಡಿಸುತ್ತಿದೆ.
ನಾನು ಸಂತೋಷಪಡೋದು ಬೇಡ್ವಾ..? ಆಂಕರ್‌ಗೇ ಶಾಕ್ ಕೊಟ್ಟ ಅಣ್ಣಾವ್ರು.. !
ಅದರಲ್ಲೂ ಪ್ರಮುಖವಾಗಿ, ಸೊಸೆ ಐಶ್ವರ್ಯಾ ರೈ ತಮ್ಮ ಮಧ್ಯೆ ಏನೇ ಮನಸ್ತಾಪ, ಹೊಂದಾಣಿಕೆ ಕೊರತೆ ಇದ್ದರೂ ಅದನ್ನು ತೋರಿಸಿಕೊಳ್ಳುವುದಿಲ್ಲ. ಆದರೆ, ಜಯಾ ಬಚ್ಚನ್ ಅದನ್ನು ಪ್ರದರ್ಶನ ಮಾಡುತ್ತಾರೆ. ಆ ಮೂಲಕ ತಮ್ಮ ವಿರುದ್ಧದ ಆರೋಪಕ್ಕೆ ಮತ್ತಷ್ಟು ಪುಷ್ಟಿ ಕೊಡುತ್ತಾರೆ ಎಂಬುದನ್ನು ಹಲವರು ವಿಡಿಯೋ ಪೋಸ್ಟ್ ಮಾಡುವ ಮೂಲಕ ಸಾಕ್ಷಿ ಕೊಡುತ್ತಾರೆ. ಇಲ್ಲೊಂದು ವಿಡಿಯೋ ಇದೆ ನೋಡಿ, ನಿಮ್ಮ ಅಭಿಪ್ರಾಯ ತಿಳಿಸುವಿರಾ?

