ಡಾ. ರಾಜ್‌ಕುಮಾರ್ ಅವರ ವೈರಲ್ ಸಂದರ್ಶನದಲ್ಲಿ ಕಲಾಭಿಮಾನಿಯಾಗಿ ತಮ್ಮ ಸಂತೋಷದ ಬಗ್ಗೆಯೂ ಮಾತನಾಡಿದ್ದಾರೆ. ಇತರರ ಏಳಿಗೆಯಿಂದ ಸಂತೋಷಪಡುವ ಅವರು, ತಮಗೂ ಸಂತಸ ಬೇಕೆಂದು ಭಾವಿಸಿದ್ದರು. ಎಲ್ಲರೂ ಎತ್ತರಕ್ಕೆ ಬೆಳೆಯುವುದೇ ತಮ್ಮ ಸಂತೋಷವೆಂದೂ ಅಣ್ಣಾವ್ರು ಹೇಳಿದ್ದಾರೆ.

ಕನ್ನಡದ ಮೆರು ನಟ, ಅಣ್ಣಾವ್ರು ಖ್ಯಾತಿಯ ಡಾ ರಾಜ್‌ಕುಮಾರ್ (Dr Rajkumar) ಸಂದರ್ಶನವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಅಗ್ತಿದೆ. ಡಾ ರಾಜ್‌ಕುಮಾರ್ ಅವರು ಒಂದು ವಿಶೇಷ ಟಾಪಿಕ್ ಕುರಿತು ಅಲ್ಲಿ ಮಾತನಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಓಡಾಡುತ್ತಿರುವ ಈ ವಿಡಿಯೋ ನೋಡಿ ಅನೇಕರು ವಿಭಿನ್ನವಾಗಿ ವಿಶೇಷವಾಗಿ ಕಾಮೆಂಟ್ ಮಾಡಿದ್ದಾರೆ. ಅಚ್ಚರಿ ಎಂದರೆ, ಡಾ ರಾಜ್‌ಕುಮಾರ್ ಬಗ್ಗೆ ಇಲ್ಲಿ ಹೊಸ ಸಂಗತಿಯೊಂದನ್ನು ಅರ್ಥೈಸಿಕೊಳ್ಳಬಹುದು. 

ಹಾಗಿದ್ದರೆ, ಪದ್ಮಭೂಷಣ, ಗಾನ ಗಂಧರ್ವ ಡಾ ರಾಜ್‌ಕುಮಾರ್ ಅವರು ಯಾವುದರ ಬಗ್ಗೆ ಮಾತನ್ನಾಡಿದ್ದಾರೆ? ಡಾ ರಾಜ್‌ಕುಮಾರ್ ಮಾತನ್ನು ಕೇಳುತ್ತಿದ್ದರೆ ಅವರು ಕೇವಲ ಮುಗ್ಧರಲ್ಲ, ಬುದ್ದಿವಂತರು ಕೂಡ ಹೌದು ಎಂಬುದು ಅರ್ಥವಾಗುತ್ತದೆ. ಜೊತೆಗೆ, ಬೇರೆಯವರಿಗೆ ಏನು ಕೊಡಬೇಕು ಎಂಬ ಮಾನವೀಯತೆ ಗುಣದ ಜೊತೆ ತಮಗೇನು ಬೇಕು ಎಂಬ ಅರಿವೂ ಸಹ ಇರುವ ವ್ಯಕ್ತಿಯೂ ಹೌದು ಅಣ್ಣಾವ್ರು ಎಂಬುದು ಅರ್ಥವಾಗುತ್ತದೆ. ಹಾಗಿದ್ದರೆ ಡಾ ರಾಜ್‌ ಅದೇನು ಹೇಳಿದ್ದಾರೆ ನೊಡಿ..

ಬಾಲಿವುಡ್ ಯಂಗ್ ಬಾಯ್ ಮಾಡಿದ ಯಡವಟ್ಟು, ಟಾಕ್ಸಿಕ್ ಸಿನಿಮಾದ ಗುಟ್ಟು ರಟ್ಟು!

ಅವ್ರುಗಳೆಲ್ಲಾ ಆ ಎತ್ತರಕ್ಕೆ ಬೆಳೆಯಬೇಕು ಅನ್ನೋ ಆಸೆ ನಂಗೆ. ನಾನು ಹಿಂದಿನಿಂದಲೂ ಆ ರೀತಿಯಾಗಿ ಯೋಚಿಸೋ ಅಭಿಮಾನಿ.. ನಾನು ಸಂತೋಷಪಡೋದು ಬೇಡ್ವಾ? ಎಲ್ರೂ ನನ್ನ ನೋಡಿ ಸಂತೋಷ ಪಡ್ತಾರೆ ಸರಿ, ನಾನೂ ಸಂತೋಷ ಪಡೋದು ಬೇಡ್ವಾ? ನಂಗೂ ಅದು ಬೇಡ್ವಾ?' ಎಂದಿದ್ದಾರೆ ಡಾ ರಾಜ್‌ಕುಮಾರ್. ಅದಕ್ಕೆ 'ತಾವು ಯಾವುದರ ಅಭಿಮಾನಿ ಸ್ವಾಮಿ?' ಎಂಬ ನಿರೂಪಕರ ಪ್ರಶ್ನೆಗೆ ಅಣ್ಣಾವ್ರು 'ನಾನು ಕಲೆಯ ಅಭಿಮಾನಿ' ಎಂದು ಎಂದಿನಂತೆ ತಮ್ಮ ಮುಗ್ಧ ನಗು ಬೀರಿದ್ದಾರೆ. 

ಹೌದು, ಅಣ್ಣಾವ್ರು ಹೇಳಿರೋ ಸಂಗತಿ ಸತ್ಯದ ತಲೆಯ ಮೇಲೆ ಹೊಡೆದ ಹಾಗಿದೆ. ಅಣ್ಣಾವ್ರಿಂದ ಇಡೀ ಕರುನಾಡು ಮನರಂಜನೆ ಪಡೆದಿದೆ, ಸಂತೋಷ ಅನುಭವಿಸಿದೆ. ಆದರೆ, ಅದು ಅಣ್ಣಾವ್ರಿಗೆ ಕೂಡ ಬೇಕು ಅಲ್ವಾ? ಆದರೆ ಆ ಬಗ್ಗೆ ಯಾರೂ ಯೋಚನೆ ಮಾಡಿದಂತೆ ಕಾಣಿಸೋದಿಲ್ಲ. ಬೇರೆಯವರಿಗೆ ಆ ಯೋಚನೆ ಮಾಡಿದಾರೋ ಬಿಟ್ಟಿದಾರೋ, ಆದ್ರೆ ಸ್ವತಃ ಡಾ ರಾಜ್‌ಕುಮಾರ್ ಅವರಿಗೆ ಅ ಬಗ್ಗೆ ವಿಚಾರ ಇತ್ತು ಎನ್ನಬಹುದು. 

ಅದಕ್ಕೇ ಅವ್ರು ಅಷ್ಟು ನಿಖರವಾಗಿ ಹೇಳಿದ್ದಾರೆ, ತಮಗೂ ಮನರಂಜನೆ, ಸಂತೋಷ ಎಲ್ಲವೂ ಬೇಕು' ಅಂತ! ಹೌದು, ಡಾ ರಾಜ್‌ಕುಮಾರ್ ಅವರಿಂದ ಕನ್ನಡ ಸಿನಿಪ್ರೇಕ್ಷಕರು ಬಹಳಷ್ಟು ಸಂತೋಷ ಪಡೆದಿದ್ದಾರೆ. ಅವರಿಗೂ ನೀಡಬೇಕು ತಾನೇ? ಆದರೆ, ಬಹಳಷ್ಟು ಜನರಿಗೆ 'ಅವ್ರಿಗೆ ಯಾವುದು ಸಂತೋಷ ಕೊಡುತ್ತೆ' ಎಂಬುದು ಗೊತ್ತಿಲ್ಲದೆ ಇದ್ದಿರಬಹುದು. 

ನಮ್ಮದನ್ನೇ ಬಳಸಿ ಬಳಸಿ ಸುಂದರವಾಗಿ ಕಾಣಿಸ್ಕೊಳ್ಳಿ: ತಮನ್ನಾ ಬ್ಯೂಟಿ ಟಿಪ್ಸ್‌ ವೈರಲ್!

ಸೋ, ಅದನ್ನು ಅವರೇ ಸ್ವತಃ ಹೇಳಿದ್ದಾರೆ. 'ಎಲ್ರೂ ಎತ್ತರಕ್ಕೆ ಬೆಳೀಬೇಕು' ಎಂಬುದು ಅವರ ಆಸೆ, ಸಂತೋಷ ಕೊಡುವ ಸಂಗತಿ. ಅಷ್ಟು ಮಾಡಿದರೆ ಸಾಕಿತ್ತು. ಈಗ ಅಣ್ಣಾವ್ರು ನಮ್ಮೊಂದಿಗಿಲ್ಲ, ಅವರ ವಿಚಾರಧಾರೆ, ಸಿನಿಮಾಗಳು ಹಾಗೂ ಸಂದರ್ಶನಗಳು ಇವೆ, ನೋಡಿ ಆನಂದಿಸಬಹುದು. ಕನ್ನಡ ನಾಡಿನ ಮೇರು ನಟನ ಈ ವಿಡಿಯೋ ಈಗ ಬಹಳಷ್ಟು ವೈರಲ್ ಆಗ್ತಿದೆ. 

dr rajkumar #kannada #kannadiga #india #motivational #drrajkumar