ಶೂಟಿಂಗ್ ವೇಳೆ ಪೊದೆಗಳ ಹಿಂದೆ ಮುಟ್ಟಿನ ಬಟ್ಟೆ ಬದಲಾಯಿಸುತ್ತಿದ್ದೆವು: ಪೀರಿಯೆಡ್ಸ್ ಅನುಭವ ಬಿಚ್ಚಿಟ್ಟ ಜಯಾ ಬಚ್ಚನ್
ಮೊದ ಮೊದಲ ಪೀರಿಯೆಡ್ಸ್ ಅನುಭವಗಳು ಒಬ್ಬೊಬ್ಬ ಹೆಣ್ಣಿಗೆ ಒಂದೊಂದು ಥರ. ಚಿಕ್ಕ ವಯಸ್ಸಿನಲ್ಲೇ ಇಂಡಸ್ಟ್ರಿಗೆ ಬಂದ ಜಯಾ ಬಚ್ಚನ್ ಪೀರಿಯೆಡ್ಸ್ ಆದಾಗ ಶೂಟಿಂಗ್‌ಗಳಲ್ಲಿ ಅನುಭವಿಸುತ್ತಿದ್ದ ಹಿಂಸೆಗಳ ಬಗ್ಗೆ ಹೇಳಿದ್ದಾರೆ. ಆಗೆಲ್ಲ ಮುಟ್ಟಿನ ಬಟ್ಟೆಯನ್ನು ಪೊದೆಗಳ ಹಿಂದೆ ಬದಲಿಸಿ ಶೂಟಿಂಗ್‌ಗೆ ಮರಳುತ್ತಿದ್ದರಂತೆ!
ಜಯಾ ಬಚ್ಚನ್ ಒಂದು ಕಾಲದಲ್ಲಿ ಬಾಲಿವುಡ್ ಸೆನ್ಸೇಶನ್ ಎಂದೇ ಗುರುತಿಸಿಕೊಂಡಿದ್ದ ನಟಿ. ಟೀನೇಜ್‌ನಲ್ಲೇ ಸತ್ಯಜಿತ್ ರಾಯ್ ಅವರ 'ಮಹಾನಗರ್' ಸಿನಿಮಾ ಮೂಲಕ ಬಾಲಿವುಡ್‌ಗೆ ಕಾಲಿಟ್ಟವರು. ಗುಡ್ಡಿ ಇವರು ನಾಯಕಿಯಾಗಿ ನಟಸಿದ ಮೊದಲ ಸಿನಿಮಾ. ಹೆಣ್ಣುಮಕ್ಕಳು ಮನೆಯಿಂದ ಹೊರಹೋಗಲೂ ರಿಸ್ಟ್ರಿಕ್ಷನ್ಸ್ ಇರುತ್ತಿದ್ದ ಕಾಲದಲ್ಲಿ ಜಯಾ ಸಿನಿಮಾ ರಂಗಕ್ಕೆ ಬಂದವರು. ಜಂಜೀರ್ ಸಿನಿಮಾದಲ್ಲಿ ಇವರ ಹಾಗೂ ಅಮಿತಾಬ್ ಜೋಡಿಯನ್ನು ಆ ಕಾಲದ ಜನ ಬಹಳ ಮೆಚ್ಚಿಕೊಂಡರು. ಸ್ಕ್ರೀನ್ ಮೇಲೇನೋ ಅದ್ಭುತ ಪರ್ಫಾಮೆನ್ಸ್ ನೀಡುತ್ತಿದ್ದ ಜಯಾ ತೆರೆಯ ಹಿಂದಿನ ಕಥೆ ಬಿಚ್ಚಿಟ್ಟಿದ್ದಾರೆ. ಅದರಲ್ಲೂ ಆ ಕಾಲದಲ್ಲಿ ಶೂಟಿಂಗ್ ಟೈಮ್‌ನಲ್ಲಿ ಪೀರಿಯೆಡ್ಸ್ ಆದರೆ ತನ್ನ ಸ್ಥಿತಿ ಹೇಗಿರ್ತಿತ್ತು ಅನ್ನೋದನ್ನು ವಿವರಿಸಿದ್ದಾರೆ. ಪೀರಿಯೆಡ್ಸ್ ಬಗ್ಗೆ ಮುಕ್ತವಾಗಿ ಮಾತನಾಡುವ, ನಾನಾ ಬಗೆಯ ಪ್ಯಾಡ್, ಕಪ್ ಗಳು ಪೀರಿಯೆಡ್ಸ್ ವೇಳೆಗಿನ ಮುಜುಗರ ತಪ್ಪಿಸುತ್ತಿರುವ ಇಂದಿನ ದಿನದಲ್ಲಿ ನಿಂತು ಜಯಾ ಆ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
'ಆಗೆಲ್ಲ ಈಗಿನ ಹಾಗೆ ಸ್ಯಾನಿಟರಿ ಪ್ಯಾಡ್‌ಗಳು ಇರಲಿಲ್ಲ. ಮುಟ್ಟಿನ ವೇಳೆ ಬಟ್ಟೆಯನ್ನೇ ಪ್ಯಾಡ್ ನಂತೆ ಧರಿಸುತ್ತಿದ್ದೆವು. ಪೀರಿಯೆಡ್ಸ್ ಇದ್ದಾಗಲೂ ಶೂಟಿಂಗ್‌ಗೆ ಹಾಜರಾಗೋದು ಅನಿವಾರ್ಯವಾಗಿತ್ತು. ಶೂಟಿಂಗ್ ಅಂದ್ಮೇಲೆ ಕೇಳ್ಬೇಕಾ, ಸಮಯದ ರಿಸ್ಟ್ರಿಕ್ಷನ್ಸ್ ಇರುತ್ತಿರಲಿಲ್ಲ. ಆಗೆಲ್ಲ ಮುಟ್ಟಿನ ಬಟ್ಟೆ ಬದಲಿಸೋದು ಮಹಾ ಹಿಂಸೆ. ದಟ್ಟವಾದ ಪೊದೆಗಳನ್ನು ಅರಸಿಕೊಂಡು ಹೋಗಬೇಕು. ಆ ಪೊದೆಗಳ ಹಿಂದೆ ನಿಂತು ಮುಟ್ಟಿನ ಬಟ್ಟೆ ಬದಲಿಸಬೇಕಿತ್ತು. ಕ್ಯಾರವಾನ್ ಬಿಡಿ, ಶೌಚಾಲಯಗಳೂ ಸಿಗುತ್ತಿರಲಿಲ್ಲ. ಸೆಟ್‌ನಲ್ಲಿ ಮುಟ್ಟಿನ ಬಟ್ಟೆಗಳನ್ನು ಬದಲಿಸಲು ನಾನು ಪಡುತ್ತಿದ್ದ ಪಾಡು ದೇವರಿಗೇ ಪ್ರೀತಿ' ಎಂದು ಆ ದಿನಗಳು ಎಂಥಾ ನರಕ ಸದೃಶವಾಗಿರುತ್ತಿದ್ದವು ಅನ್ನೋದನ್ನು ಜಯಾ ಬಾಧುರಿ ವಿವರಿಸುತ್ತಾರೆ.
Samantha ಆರೋಗ್ಯದಲ್ಲಿ ಏರುಪೇರು; ತರ್ತು ಚಿಕಿತ್ಸೆಗೆ ದಕ್ಷಿಣ ಕೊರಿಯಾಗೆ ಶಿಫ್ಟ್?
ಜಯಾ ಬಚ್ಚನ್ ಅವರ ಮೊಮ್ಮಗಳು ನವ್ಯಾ ನವೇಲಿ ನಂದಾ ಪಾಡ್‌ಕಾಸ್ಟ್ ʼವಾಟ್ ದಿ ಹೆಲ್ ನವ್ಯʼ ಶುರುಮಾಡಿ ಕೆಲವು ದಿನಗಳಾದವು. ತನ್ನ ಇತ್ತೀಚಿನ ಎಪಿಸೋಡ್ ನಲ್ಲಿ ಆಕೆ ತಾಯಿ ಶ್ವೇತಾ ಬಚ್ಚನ್ ಮತ್ತು ಅಜ್ಜಿ ಜಯಾ ಬಚ್ಚನ್ ಅವರ ಮೊದಲ ಪಿರಿಯಡ್ಸ್‌ನ ಅನುಭವದ ಬಗ್ಗೆ ಪ್ರಶ್ನೆಗಳನ್ನು ಕೇಳಿದ್ದಾರೆ.
ಆಗ ಜಯಾ ಬಚ್ಚನ್ ತಮ್ಮ ಪೀರಿಯೆಡ್ಸ್ ಆರಂಭದ ದಿನಗಳ ಬಗ್ಗೆ ಮುಕ್ತವಾಗಿ ಮಾತನಾಡಿದರು. 'ನನಗೆ ಚೆನ್ನಾಗಿ ನೆನಪಿದೆ. ಶೂಟಿಂಗ್ ಸೆಟ್‌ನಲ್ಲಿ ಮುಟ್ಟಿನ ಬಟ್ಟೆಯನ್ನು ಬದಲಾಯಿಸಲು ಸಹ ಸಾಕಷ್ಟು ಹೆಣಗಾಡುತ್ತಿದ್ದೆ. ಆಗ ಶೂಟಿಂಗ್ ಸೆಟ್(Shooting set)ನಲ್ಲಿ ಸರಿಯಾದ ಶೌಚಾಲಯವೂ ಇರುತ್ತಿರಲಿಲ್ಲ. ಆ ಸಮಯದಲ್ಲಿ ಪಿರಿಯಡ್ಸ್(Periods) ಅನುಭವ ಬಹಳ ಭಯಾನಕವಾಗಿತ್ತು. ನಾವು ಹೊರಾಂಗಣ ಚಿತ್ರೀಕರಣ ಮಾಡುವಾಗ, ನಮ್ಮಲ್ಲಿ ಈಗ ಇರುವಂತೆ ಕ್ಯಾರವಾನ್‌ಗಳು ಇದ್ದಿಲ್ಲ. ಆದ್ದರಿಂದ ನಾವು ಪೊದೆಗಳ ಹಿಂದೆ ಹೋಗಿ ಬಟ್ಟೆ ಬದಲಿಸಬೇಕಿತ್ತು.
ಇದರಿಂದ ನಾವು ನಟಿಯರು ಸಾಕಷ್ಟು ಮುಜುಗರವನ್ನು ಎದುರಿಸುತ್ತಿದ್ದೆವು. ಆಗ ನಾವೆಲ್ಲ ಸ್ಯಾನಿಟರಿ ಟವೆಲ್(Sanitary pad) ಗಳನ್ನು ಬಳಸುತ್ತಿದ್ದೆವು. ಈಗ ಇರುವಂತೆ ಸ್ಯಾನಿಟರಿ ಪ್ಯಾಡ್‌ಗಳು ಆಗ ಲಭ್ಯವಿರಲಿಲ್ಲ' ಎಂದು ಜಯಾ ಬಚ್ಚನ್ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
ಶ್ರುತಿ ಹಾಸನ್ ಮುಖಕ್ಕೆ ಏನಾಯಿತು? ಸೆಲ್ಫಿ ಶೇರ್ ಮಾಡಿ ಕಮಲ್ ಪುತ್ರಿ ಹೇಳಿದ್ದೇನು?
ನಂದಾ ಇದೇ ಪ್ರಶ್ನೆಯನ್ನು ತನ್ನ ತಾಯಿಗೂ ಕೇಳಿದ್ದಾರೆ. ಆಗ ನವ್ಯಾ ತಾಯಿ ಶ್ವೇತಾ ಬಚ್ಚನ್, 'ಆ ಸಮಯದಲ್ಲಿ ನನಗೆ ಯಾವ ಕೆಲಸ ಮಾಡಲು ಸಹ ಇಷ್ಟವಾಗುತ್ತಿರಲಿಲ್ಲ. ಕೇವಲ ವಿಶ್ರಾಂತಿ ತೆಗೆದುಕೊಳ್ಳಲು ಬಯಸುತ್ತಿದ್ದೆ. ಅದರ ಜೊತೆಗೆ ಚಾಕೊಲೇಟ್ ತಿನ್ನಲು ಮತ್ತು ಒಬ್ಬಂಟಿಯಾಗಿರಲು ಇಷ್ಟಪಡುತ್ತಿದ್ದೆ' ಎಂದಿದ್ದಾರೆ. ವಾಟ್ ದಿ ಹೆಲ್ ನವ್ಯಾ (What the hell Navya)ಅನ್ನೋ ನವ್ಯಾ ನವೇಲಿ ನಂದಾ ಅವರ ಯೂಟ್ಯೂಬ್ ಚಾನೆಲ್‌ನಲ್ಲಿ ಮಹಿಳೆಯರ ಕುರಿತಾದ ಇಂಥಾ ಚರ್ಚೆಗೆ ಉತ್ತಮ ಪ್ರತಿಕ್ರಿಯೆ ಬರುತ್ತಿದೆ.