ಸೊಸೆ ಬಗ್ಗೆ ಕೀಳು ಕಮೆಂಟ್: ರೊಚ್ಚೆಗೆದ್ದ ಐಶ್ವರ್ಯಾ ಅತ್ತೆ ಜಯಾ ಬಚ್ಚನ್
ಅಮೆರಿಕದ ಜನಪ್ರಿಯ ಷೋ 'ದಿ ಬಿಗ್ ಬ್ಯಾಂಗ್ ಥಿಯರಿ'ನಲ್ಲಿ ಬಾಲಿವುಡ್ ನಟಿಯರಾದ ಮಾಧುರಿ ದೀಕ್ಷಿತ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವುದಕ್ಕೆ ನಟಿ ಜಯಾ ಬಚ್ಚನ್ ಕಿಡಿ ಕಾರಿದ್ದಾರೆ. ಏನಿದು ವಿವಾದ?
ಅಮೆರಿಕದ ಜನಪ್ರಿಯ ಷೋ ಆಗಿರುವ 'ದಿ ಬಿಗ್ ಬ್ಯಾಂಗ್ ಥಿಯರಿ'ನಲ್ಲಿ (Big Bang Theory) ಬಾಲಿವುಡ್ ನಟಿಯರಾದ ಮಾಧುರಿ ದೀಕ್ಷಿತ್ (Madhuri Dixit) ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವುದು ಈಗ ಎಲ್ಲೆಡೆ ಕಿಡಿ ಹೊತ್ತಿಸಿದೆ. ಈ ಷೋದ ಎರಡನೇ ಸಂಚಿಕೆಯ ಮೊದಲ ಎಪಿಸೋಡ್ ಈಗ ವಿವಾದಕ್ಕೆ ಕಾರಣವಾಗಿದೆ. ಇದರಲ್ಲಿ ಶೆಲ್ಡನ್ ಕೂಪರ್ ಪಾತ್ರದಲ್ಲಿ ನಟಿಸಿರುವ ನಟ ಜಿಮ್ ಪಾರ್ಸನ್ಸ್ ಬಾಲಿವುಡ್ ನಟಿಯರಾದ ಐಶ್ವರ್ಯಾ ರೈ ಬಚ್ಚನ್ ಹಾಗೂ ಮಾಧುರಿ ದೀಕ್ಷಿತ್ ನೇನೆ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 'ಬಿಗ್ ಬ್ಯಾಂಗ್ ಥಿಯೇರಿ' ಸೀಸನ್ 2ನ ಒಂದು ದೃಶ್ಯದಲ್ಲಿ ಜಿಮ್ ಪಾರ್ಸನ್ಸ್ 'ಐಶ್ವರ್ಯಾ ರೈ ಬಡವರ ಪಾಲಿನ ಮಾಧುರಿ ದೀಕ್ಷಿತ್' ಎಂದು ಹೇಳುತ್ತಾರೆ. ಇದಕ್ಕೆ ರಾಜ್ ಕೂತ್ರಪ್ಪಲಿ ಪಾತ್ರದಲ್ಲಿ ನಟಿಸಿರೋ ಕುನಾಲ್ ನಯ್ಯರ್ 'ಐಶ್ವರ್ಯಾ ರೈ ದೇವತೆ, ಮಾಧುರಿ ದೀಕ್ಷಿತ್ ಕುಷ್ಠ ರೋಗವಿರುವ ವೇಶ್ಯೆ' ಎಂದು ಹೇಳುತ್ತಾರೆ. ಇದು ಬಹಳ ವಿವಾದವನ್ನು ಸೃಷ್ಟಿಸಿದೆ.
ಇದಾಗಲೇ ಇದಕ್ಕೆ ಸಂಬಂಧಿಸಿದಂತೆ ನೆಟ್‌ಫ್ಲಿಕ್ಸ್‌ಗೆ ನೋಟಿಸ್ ನೀಡಲಾಗಿದೆ. ಬಾಲಿವುಡ್ ನಟಿಗೆ ಅವಮಾನ ಮಾಡಿದ ಕಾರಣ ಎಪಿಸೋಡ್ (Episode) ಡಿಲೀಟ್ ಮಾಡುವಂತೆ ರಾಜಕೀಯ ವಿಶ್ಲೇಷಕ ಮಿಥುನ್ ವಿಜಯ್ ಕುಮಾರ್ ನೆಟ್‌ಫ್ಲಿಕ್ಸ್ (Netflix)ಗೆ ಇದಾಗಲೇ ನೋಟಿಸ್ ನೀಡಿದ್ದಾರೆ. ಇದೀಗ ಈ ವಿಷಯದ ಕುರಿತು ಐಶ್ವರ್ಯ ರೈ ಬಚ್ಚನ್ ಅವರ ಅತ್ತೆ ಜಯಾ ಬಚ್ಚನ್ ಕಿಡಿ ಕಾರಿದ್ದಾರೆ. ಮಾಧುರಿ ಅವರ ಬಗ್ಗೆ ಅಶ್ಲೀಲ ಹೇಳಿಕೆಗಳ ಬಗ್ಗೆ ಕೋಪಗೊಂಡಿರುವ ಜಯಾ ಬಚ್ಚನ್ ಅವರು, ಇಂಥ ಹೇಳಿಕೆ ನೀಡುವವರನ್ನು ಬಚ್ಚಲು ಮನೆಗೆ ತಳ್ಳಬೇಕು ಎಂದಿದ್ದಾರೆ. ಐಶ್ವರ್ಯಾ -ಮಾಧುರಿ ಹೋಲಿಕೆ ಮಾಡಿ ಮಾಧುರಿಯವರ ಬಗ್ಗೆ ಅಸಭ್ಯ ಕಮೆಂಟ್ ಮಾಡಿದ ನಟ ಕುನಾಲ್ ನಾಯರ್ ಅವರನ್ನು ಮಾನಸಿಕ ಆಶ್ರಯಕ್ಕೆ ಕಳುಹಿಸಬೇಕು ಎಂದು ಜಯಾ ಬಚ್ಚನ್ (Jaya Bachchan) ಹೇಳಿದ್ದಾರೆ. ಕುನಾಲ್ ನಾಯರ್ಗೆ ಹುಚ್ಚು ಹಿಡಿದಂತೆ ತೋರುತ್ತಿದೆ. ಅವರಿಗೆ ತುಂಬಾ ಅಸಹ್ಯ ಭಾಷೆ ಮಾತನಾಡುವುದು ಗೊತ್ತಿದೆ. ಅಂಥವರನ್ನು ಬಚ್ಚಲು ಮನೆಗೆ ತಳ್ಳಬೇಕು. ಇಂತಹ ಅಸಭ್ಯ ಕಮೆಂಟ್ ಮಾಡಲು ಅವರಿಗೆ ಏನು ಅಧಿಕಾರವಿದೆ? ಅವರ ಕುಟುಂಬದವರಿಗೂ ಹೀಗೆಯೇ ಹೇಳಿದರೆ ಹೇಗೆ ಅನ್ನಿಸುತ್ತದೆ ಎನ್ನುವುದನ್ನು ಅವರಿಗೆ ಕೇಳಬೇಕಿದೆ ಎಂದು ಕಿಡಿ ಕಾರಿದ್ದಾರೆ.
ನಟಿ ಮಾಧುರಿ ದೀಕ್ಷಿತ್ ಬಗ್ಗೆ ಅವಹೇಳನಕಾರಿ ಹೇಳಿಕೆ; ನೆಟ್‌ಫ್ಲಿಕ್ಸ್‌ಗೆ ನೋಟಿಸ್
ಮಾಧುರಿ ದೀಕ್ಷಿತ್ ಮತ್ತು ಐಶ್ವರ್ಯಾ ರೈ (Aishwarya Rai) ಬಗ್ಗೆ ಮಾಡಿದ ಅಶ್ಲೀಲ ಹೇಳಿಕೆಗಳ ಬಗ್ಗೆ ನಟಿ ಊರ್ಮಿಳಾ ಮಾತೋಂಡ್ಕರ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಊರ್ಮಿಳಾ ಅವರು, ನಾನು ಈ ಸಂಚಿಕೆಯನ್ನು ನೋಡಿಲ್ಲ, ಆದರೆ ಈ ರೀತಿ ಏನಾದರೂ ಸತ್ಯವಾಗಿ ಹೇಳಿದ್ದರೆ ಅದು ಅತ್ಯಂತ ಆಕ್ಷೇಪಾರ್ಹ. ಇದು ಕಮೆಂಟ್ ಮಾಡುವವರ ಕೀಳು ಮನಸ್ಥಿತಿಯನ್ನು ತೋರಿಸುತ್ತದೆ. ಅವರು ಅದನ್ನು ತಮಾಷೆಯಾಗಿ ಕಾಣಬಹುದು, ಆದರೆ ಇದು ಅಗೌರವವಾಗಿದೆ ಹಾಗೂ ಅವರ ಕೆಟ್ಟ ಮನಸ್ಥಿತಿಯನ್ನು ಬಿಂಬಿಸುತ್ತದೆ ಎಂದಿದ್ದಾರೆ.
ರಾಜಕೀಯ ವಿಶ್ಲೇಷಕ ಮಿಥುನ್ ವಿಜಯ್ ಕುಮಾರ್ ಅವರು ನೋಟಿಸ್ ನೀಡಿ, ಸೀಸನ್ 2ರ ಮೊದಲ ಸಂಚಿಕೆ ತೆಗೆದುಹಾಕಬೇಕು ಎಂದು ನೆಟ್‌ಫ್ಲಿಕ್ಸ್‌ಗೆ ಆಗ್ರಹಿಸಿದ್ದಾರೆ. ‘ಈ ರೀತಿ ಶಬ್ದಗಳ ಬಳಕೆ ಮಹಿಳೆಗೆ ಅಗೌರವ ನೀಡುವುದು ಮಾತ್ರವಲ್ಲದೇ ಮಾನಹಾನಿಕರವೂ ಹೌದು. ಈ ಎಪಿಸೋಡ್ನ ತೆಗೆದುಹಾಕದಿದ್ದರೆ ಲೀಗಲ್ ಆ್ಯಕ್ಷನ್ ಎದುರಿಸಬೇಕಾಗುತ್ತದೆ. ಮಹಿಳೆಯರ ಬಗೆಗಿನ ತಾರತಮ್ಯವನ್ನು ಈ ಶೋ ಪ್ರಚೋದಿಸುವಂತಿದೆ’ ಎಂದು ಮಿಥುನ್ ಕುಮಾರ್ ಹೇಳಿದ್ದಾರೆ. ನೆಟ್‌ಫ್ಲಿಕ್ಸ್ ಅಂತಹ ಕಂಪನಿಗಳು ತಾವು ಮಾಡುತ್ತಿರುವ ಕೆಲಸ ಅಲ್ಲಿನ ಸಮುದಾಯದ ಸಾಂಸ್ಕೃತಿಕ ಮೌಲ್ಯಗಳು ಹಾಗೂ ಭಾವನೆಗಳನ್ನು ಸೂಕ್ಷ್ಮವಾಗಿ ಗಮನಿಸಿವೆಂದು ಖಚಿತ ಪಡಿಸಿಕೊಳ್ಳಬೇಕು. ಅದು ಅವರ ಜವಾಬ್ದಾರಿ ಕೂಡ ಹೌದು. ತಾವು ನೀಡಿವ ಕಂಟೆಂಟ್ ಅನ್ನು ಎಚ್ಚರಿಕೆಯಿಂದ ಕ್ಯೂರೇಟ್ ಮಾಡಬೇಕಿದೆ ಎಂದಿದ್ದಾರೆ.
ಬಾಲಿವುಡ್ ಕ್ರೆಡಿಟ್ ಕದಿಯುತ್ತಿದೆ; ಸಂಸತ್‌ನಲ್ಲಿ ಆಸ್ಕರ್ ಗೆಲುವಿನ ಚರ್ಚೆ, ಜಯಾ ಬಚ್ಚನ್ ಸಖತ್ ಟ್ರೋಲ್