ಶಾರುಖ್​ಗೆ ತಿಮ್ಮಪ್ಪನ ಕೃಪಾಕಟಾಕ್ಷ: ಮೊದಲ ದಿನವೇ ಇತಿಹಾಸ ಸೃಷ್ಟಿಸಿದ ಜವಾನ್​!

ಜವಾನ್​ ಚಿತ್ರ ಬಿಡುಗಡೆಯ ಮೊದಲ ದಿನವೇ ದಾಖಲೆ ಬರೆದಿದೆ. ಚಿತ್ರದ ಯಶಸ್ಸಿಗಾಗಿ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋಗಿದ್ದ ನಟನ ಆಸೆ ಈಡೇರಿದೆ ಎಂದು ಫ್ಯಾನ್ಸ್​ ಹೇಳುತ್ತಿದ್ದಾರೆ. 
 

Jawan box office collection  marks history beats Pathaan suc

ಬ್ಲಾಕ್​ಬಸ್ಟರ್​ ಎಂದು ಸಾಬೀತಾಗಿರೋ ಪಠಾಣ್​ (Pathaan) ಚಿತ್ರಕ್ಕೇ ಪೈಪೋಟಿ ಒಡ್ಡುವಂತೆ ಜವಾನ್​ ಚಿತ್ರ ಹುಟ್ಟಿಸಿರೋ ನಿರೀಕ್ಷೆ ಸುಳ್ಳಾಗಲಿಲ್ಲ.  ಈ ಚಿತ್ರವನ್ನು ಭಾರಿ ಯಶಸ್ವಿಗೊಳಿಸಲು ವಿದೇಶಗಳಲ್ಲಿಯೂ ಬಹಳ ತಯಾರಿ ನಡೆಸಲಾಗಿತ್ತು, ವಿಭಿನ್ನ ರೀತಿಯಲ್ಲಿ ಪ್ರಚಾರವನ್ನೂ ಮಾಡಲಾಗಿತ್ತು. ಚಿತ್ರದ ಪ್ರಮೋಷನ್​ಗೇ ಕೋಟಿ ಕೋಟಿ ಹಣ ಸುರಿಯಲಾಗಿತ್ತು. ಎಂಟು ವಿಭಿನ್ನ ಶೇಡ್​ಗಳಲ್ಲಿ ಕಾಣಿಸಿಕೊಳ್ಳಲಿರುವ ಶಾರುಖ್​ ಅವರನ್ನು ನೋಡಲು ಜನ ಬಹಳ ಕಾತರದಿಂದ ಕಾಯುತ್ತಿದ್ದರು. ಕೊನೆಗೂ ಆ ದಿನ ಬಂದೇ ಬಿಟ್ಟಿದೆ. ನಿನ್ನೆ ಶಾರುಖ್​ ಖಾನ್​ ಅವರ ಬಹುನಿರೀಕ್ಷಿತ ಜವಾನ್​ ಚಿತ್ರ ಬಿಡುಗಡೆಯಾಗಿದೆ. ಮೊದಲ ದಿನವೇ ಎಲ್ಲಾ ದಾಖಲೆಗಳನ್ನು ಉಡೀಸ್​ ಮಾಡಿರೋ ಜವಾನ್​ ಹೊಸ ದಾಖಲೆಯನ್ನು ಸೃಷ್ಟಿಸಿದೆ. ಬಿಡುಗಡೆಗೂ ಮುನ್ನವೇ ಬಾಕ್ಸ್​ ಆಫೀಸ್​ ಅನ್ನು ಕೊಳ್ಳೆ ಹೊಡೆದಿದ್ದ ಈ ಚಿತ್ರ ಈಗ ಮತ್ತೊಂದು ದಾಖಲೆ ಸೃಷ್ಟಿಮಾಡಿದೆ. 

 ಪೈರಸಿ ಕಾಟ ಜವಾನ್​ (Jawan) ಅನ್ನೂ ಬಿಟ್ಟಿಲ್ಲ.  ಉಚಿತ ಡೌನ್‌ಲೋಡ್ (Free Download) ಮತ್ತು ವೀಕ್ಷಣೆಗಾಗಿ ಪೂರ್ಣ ಎಚ್‌ಡಿ ಆವೃತ್ತಿಯಲ್ಲಿ ಜವಾನ್ ಆನ್‌ಲೈನ್‌ನಲ್ಲಿ ಸೋರಿಕೆಯಾಗಿಬಿಟ್ಟಿದೆ. ತಮಿಳುರಾಕರ್ಸ್, ಟೆಲಿಗ್ರಾಮ್, ಫಿಲ್ಮಿಜಿಲ್ಲಾ ಮತ್ತು ಇತರ ಪೈರಸಿ ಸೈಟ್‌ಗಳಲ್ಲಿ ಜವಾನ್​ ಸೋರಿಕೆಯಾಗಿದೆ. ಇದರಿಂದಾಗಿ  ಮುಂಬರುವ ದಿನಗಳಲ್ಲಿ ಬಾಕ್ಸ್ ಆಫೀಸ್ ಸಂಖ್ಯೆಗಳು ಹಿಟ್ ಆಗಬಹುದು ಎಂದೇ ಊಹಿಸಲಾಗುತ್ತಿತ್ತು. ಇದರ ನಡುವೆಯೇ ಜವಾನ್​ ದಾಖಲೆ ಬರೆದಿದೆ. ಚಿತ್ರ ಚೆನ್ನಾಗಿ ಓಡಲಿ ಎನ್ನುವ ಕಾರಣಕ್ಕೆ ಶಾರುಖ್​ ಖಾನ್​ ಅವರು ಕುಟುಂಬ ಸಹಿತರಾಗಿ ಚಿತ್ರ ಬಿಡುಗಡೆಗೂ ಮುನ್ನವೇ ತಿಮ್ಮಪ್ಪನ ದರ್ಶನ ಪಡೆದಿದ್ದರು. ಅವರ ಬೇಡಿಕೆಯನ್ನು ತಿಮ್ಮನ್ನು ಈಡೇರಿಸಿದ್ದಾನೆ ಎಂದೇ ಫ್ಯಾನ್ಸ್​ ಹೇಳುತ್ತಿದ್ದಾರೆ. ಅಂದಹಾಗೆ, ಸಮಾಜದಲ್ಲಿರುವ ಅನ್ಯಾಯಗಳನ್ನು, ತಪ್ಪುಗಳನ್ನು ತಿದ್ದಲು ಬರುವ ವ್ಯಕ್ತಿಯ ಕಥಾಹಂದರವನ್ನು ಜವಾನ್​ ಹೊಂದಿದೆ.  

ಬಿಡುಗಡೆ ದಿನವೇ ಆನ್​ಲೈನ್​ನಲ್ಲಿ ಜವಾನ್​ ಚಿತ್ರ ಸೋರಿಕೆ: ಡೌನ್​ಲೋಡ್​ ಮಾಹಿತಿಯೂ ವೈರಲ್​!
 
ಖ್ಯಾತ ಬಾಕ್ಸ್ ಆಫೀಸ್ ತಜ್ಞ ತರಣ್ ಆದರ್ಶ್ ಅವರು ಈ ಬಗ್ಗೆ ಟ್ವೀಟ್ ಮಾಡಿದ್ದು, ಜವಾನ್ ಚಿತ್ರ ದಾಖಲೆ  ಮಾಡಿರುವ ಕುರಿತು ಹೇಳಿದ್ದಾರೆ. ಮೊದಲ ದಿನ ಭರ್ಜರಿ 65 ಕೋಟಿ ಕಲೆಕ್ಷನ್ ಮಾಡಿದ್ದು, ಆ ಮೂಲಕ ಇಲ್ಲಿಯವರೆಗೆ ಹಿಂದಿ ಚಿತ್ರರಂಗದಲ್ಲಿ ಮೊದಲ ದಿನ ಅತ್ಯಧಿಕ ಗಳಿಕೆ ಕಂಡ ಮೊದಲ ಸಿನಿಮಾ ಎಂಬ ಜವಾನ್ ಪಾತ್ರವಾಗಿದೆ. ಅಂತೆಯೇ ಭಾರತದಾದ್ಯಂತ ಎಲ್ಲಾ ಭಾಷೆಗಳಲ್ಲಿ ಸಿನಿಮಾ ಗಳಿಸಿದ ಮೊತ್ತ 75 ಕೋಟಿ ರೂಗಳಾಗಿದ್ದು, ಹಿಂದಿಯಲ್ಲಿ ಮೊದಲ ದಿನ 65 ಕೋಟಿ, ತಮಿಳಿನಲ್ಲಿ 5 ಕೋಟಿ ಹಾಗೂ ತೆಲುಗಿನಲ್ಲಿ 5 ಕೋಟಿ ಗಳಿಸಿದೆ ಎಂದು ಅವರು ಹೇಳಿದ್ದಾರೆ. ಅಂತೆಯೇ ಜವಾನ್ ಹಿಂದಿಯಲ್ಲಿ ಮೊದಲ ದಿನ 65.50 ಕೋಟಿ ರೂ ಗಳಿಸಿದ್ದು,  ಪಠಾಣ್ ಗಿಂತ ಶೇ.19.09 ರಷ್ಟು ಹೆಚ್ಚಾಗಿದೆ ಎಂದಿದ್ದಾರೆ.  

ಅಂದಹಾಗೆ ಪಠಾಣ್ ಮೊದಲ ದಿನ 55 ಕೋಟಿ ರೂ ಗಳಿಸಿದ್ದರೆ, ಕನ್ನಡದ ಕೆಜಿಎಫ್2 ಹಿಂದಿ ಭಾಷೆಯಲ್ಲಿ 53.95 ಕೋಟಿ ರೂ ಗಳಿಸಿತ್ತು.   ಹೃತಿಕ್ ರೋಷನ್ ಮತ್ತು ಟೈಗರ್ ಶ್ರಾಫ್ ಅವರ ವಾರ್ ಚಿತ್ರ 51.60 ಕೋಟಿ ರೂ ಗಳಿಸಿತ್ತು. ಇದು ಈ ವರೆಗಿನ ಹಿಂದಿಯ ಅತ್ಯಧಿಕ ಗಳಿಕೆ ಅಂಕಿ ಅಂಶವಾಗಿದೆ ಎಂದು ತರಣ್ ಆದರ್ಶ್ ಟ್ವೀಟ್​ನಲ್ಲಿ ತಿಳಿಸಿದ್ದಾರೆ. 

ಶಾರುಖ್​ಗೆ ಚಾಟಿ ಬೀಸಿದ್ದ ಎನ್​ಸಿಬಿ ಅಧಿಕಾರಿ ವಾಂಖೆಡೆಗೆ ಜಯ! ಜವಾನ್​ ರಿಲೀಸ್​ ಬೆನ್ನಲ್ಲೇ ಕ್ಲೀನ್​ ಚಿಟ್​

Latest Videos
Follow Us:
Download App:
  • android
  • ios