Janhvi Kapoor: ಬಾಯ್ಫ್ರೆಂಡ್ ಜೊತೆ ಮತ್ತೆ 'ಸೆರೆ'ಯಾದ ಶ್ರೀದೇವಿ ಪುತ್ರಿ
ಶ್ರೀದೇವಿ ಪುತ್ರಿ ನಟಿ ಜಾಹ್ನವಿ ಕಪೂರ್ ಬಾಯ್ಫ್ರೆಂಡ್ ಶಿಖರ್ ಜೊತೆ ಮತ್ತೊಮ್ಮೆ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಗುಸುಗುಸು ಸುದ್ದಿಗೆ ಮತ್ತಷ್ಟು ರೆಕ್ಕೆಪುಕ್ಕೆ ಬಂದಿದೆ.
ಒಂದು ಕಾಲದಲ್ಲಿ ಬಾಲಿವುಡ್ ಆಳಿದ್ದ ಸುಂದರಿ ಶ್ರೀದೇವಿ ಅವರ ಪುತ್ರಿ ಜಾಹ್ನವಿ ಕಪೂರ್ (Janhvi Kapoor) ಸದಾ ಸುದ್ದಿಯಲ್ಲಿ ಇರುತ್ತಾರೆ. ಹೆಚ್ಚಾಗಿ ಬಿಕಿನಿ ತೊಟ್ಟು ಇಲ್ಲವೇ ಚಿಕ್ಕ ಉಡುಗೆ ಹಾಕಿಕೊಂಡು ಇವರು ಟ್ರೋಲ್ ಆಗುತ್ತಿರುವುದೇ ಹೆಚ್ಚು. ಶ್ರೀದೇವಿಯಂಥ ನಟಿಯ ಮಗಳು ಈ ರೀತಿಯ ಡ್ರೆಸ್ ಧರಿಸುವುದು ಸರಿಯಲ್ಲ ಎಂದು ನೆಟ್ಟಿಗರು ಪಾಠ ಮಾಡುತ್ತಲೇ ಇರುತ್ತಾರೆ. ಆದರೆ ಇದ್ಯಾವುದಕ್ಕೂ ಕೇರೇ ಅನ್ನದ ನಟಿ, ಸದಾ ಡೇಟಿಂಗ್, ಪಾರ್ಟಿ, ಟೂರ್ ಎನ್ನುತ್ತಲೇ ಇರುತ್ತಾರೆ. ಅಷ್ಟಕ್ಕೂ ಸಿನಿ ರಂಗದಲ್ಲಿ ಬಾಲಿವುಡ್‌ನಲ್ಲಿ ಪ್ರೀತಿ, ಮದುವೆ, ಡೇಟಿಂಗ್, ಚಾಟಿಂಗ್, ಲಿವಿಂಗ್ ರಿಲೇಷನ್‌ಶಿಪ್ ಎಲ್ಲಾ ಬಹಳ ಕಾಮನ್. ಇದೀಗ ಈಕೆಯ ಕುರಿತು ಕುತೂಹಲದ ಮಾಹಿತಿಯೊಂದು ಬಂದಿದೆ. ಈಗಾಗಲೇ ಜಾಹ್ನವಿ ಕಪೂರ್ ಹೆಸರು ಹಲವಾರು ಮಂದಿಯ ಜೊತೆ ಥಳಕು ಹಾಕಿಕೊಂಡಿದೆ. ಈಕೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಕೆಲವು ಯುವಕರ ಹೆಸರೂ ಪ್ರಸ್ತಾಪಿಸಲಾಗಿದೆ. ಆದರೆ ಕೆಲ ದಿನಗಳಿಂದ ಈಕೆ ಉದ್ಯಮಿ ಶಿಖರ್ ಪಹರಿಯಾ (Shikhar Pahariya) ಜೊತೆ ಡೇಟಿಂಗ್ನಲ್ಲಿ ಇದ್ದಾರೆ ಎನ್ನುವ ಸುದ್ದಿಯಾಗಿತ್ತು.
ಇದಕ್ಕೆ ಇಂಬುಕೊಡಲು ಎಂಬಂತೆ, ಜಾಹ್ನವಿ ಹಾಗೂ ಕುಟುಂಬಸ್ಥರು ವಿದೇಶಕ್ಕೆ ತೆರಳುತ್ತಿದ್ದಾಗ ಕ್ಲಿಕ್ ಮಾಡಲಾಗಿದ್ದ ಫೋಟೋ ವೈರಲ್ ಆಗಿತ್ತು. ಆಗ ಜಾಹ್ನವಿ ಜೊತೆ ಶಿಖರ್ ಕೂಡ ಕಾಣಿಸಿಕೊಂಡಿದ್ದರು. ಇಷ್ಟೇ ಅಲ್ಲದೇ, ಇದನ್ನೂ ಮುನ್ನ ಇವರಿಬ್ಬರೂ ಮಾಲ್ಡವೀಸ್ಗೆ ಒಟ್ಟಿಗೇ ಹೋಗಿದ್ದರು ಎಂಬ ಸುದ್ದಿ ಹರಡಿತ್ತು. ಇದಕ್ಕೆಲ್ಲ ಕಾರಣ ರಾತ್ರಿ ಸಮಯ ಜಾಹ್ನವಿ ಬಿಕಿನಿ ಸೆಟ್‌ನಲ್ಲಿ ತನ್ನ ಅದ್ಭುತ ಆಕೃತಿಯನ್ನು ತೋರಿ ಚಂದಿರನತ್ತ ಮುಖ ಮಾಡಿ ನಿಂತಿರುವ ಫೋಟೋ ಶೇರ್ ಮಾಡಿಕೊಂಡಿದ್ದದರೆ, ಅತ್ತ ಶಿಖರ್ ಪಹಾರಿಯಾ ಕೂಡ ಚಂದ್ರನ ಬೆಳಕಿನಲ್ಲಿ ಕಡು ನೀಲಿ ಸಾಗರದ ಇದೇ ರೀತಿಯ ಫೋಟೋವನ್ನು ಇನ್‌ಸ್ಟಾಗ್ರಾಮ್ (Instagram) ಸ್ಟೇಟಸ್ ಹಾಕಿದ್ದರು. ಹದ್ದಿನ ಕಣ್ಣಿನ ಕೆಲ ನೆಟ್ಟಿಗರು ಇವರಿಬ್ಬರ ಫೋಟೋವನ್ನು ನೋಡಿ ಇಬ್ಬರೂ ಒಟ್ಟಿಗೆ ಮಾಲ್ಡೀವ್ಸ್‌ಗೆ ಹೋಗಿದ್ದಾರೆ ಎಂದು ಅಂತ ಸಾಕ್ಷಿ ಮುಂದಿಟ್ಟಿದ್ದರು.
NTR 30: ದೇವರು ಆಸೆ ಈಡೇರಿಸಿದ, ಕನಸೊಂದು ನನಸಾಯ್ತು ಎಂದ ನಟಿ ಜಾಹ್ನವಿ ಕಪೂರ್
ಇದೀಗ ಮತ್ತೆ ಜೋಡಿ ಒಟ್ಟಿಗೆ ಕಾಣಿಸಿಕೊಂಡಿದ್ದು, ಕ್ಯಾಮೆರಾ ಕಣ್ಣಿಗೆ ಸಿಕ್ಕಿಬಿದ್ದಿದೆ. ಜಾಹ್ನವಿ ಮುಂಬೈ ಏರ್‌ಪೋರ್ಟ್‌ನಲ್ಲಿ ಶಿಖರ್ ಜೊತೆ ಕಂಡುಬಂದಿದ್ದಾರೆ. ನೀತಾ ಅಂಬಾನಿಯವರು ಆಯೋಜಿಸಿದ್ದ ಈವೆಂಟ್‌ಗೆ ಹಾಜರಾಗಿದ್ದ ಈ ಜೋಡಿ ವೈಟ್ ಡ್ರೆಸ್‌ನಲ್ಲಿ ಟ್ವಿನ್ನಿಂಗ್ ಔಟ್‌ಫಿಟ್‌ನಲ್ಲಿ ದರ್ಶನ ಕೊಟ್ಟಿದ್ದಾರೆ. ಇದರಿಂದ ಇವರಿಬ್ಬರು ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ವಿಷಯ ಮತ್ತಷ್ಟು ಬಲವಾಗಿದೆ. ಆದರೆ ಏರ್‌ಪೋರ್ಟ್‌ನಿಂದ ಹೊರ ಬರುತ್ತಿದ್ದಂತೆ ಇಬ್ಬರು ಬೇರೆ ಬೇರೆ ಕಾರುಗಳನ್ನು ಏರಿ ಹೊರಟುಬಿಟ್ಟಿದ್ದಾರೆ.
ಅಂದಹಾಗೆ, ಶಿಖರ್ ಪಹಾರಿಯಾ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಸುಶೀಲ್ ಕುಮಾರ್ ಶಿಂಧೆ ಅವರ ಮೊಮ್ಮಗ. ಸುಶೀಲ್ ಕುಮಾರ್ ಶಿಂಧೆ (Sushil Kumar Shindhe) ಅವರಿಗೆ ಮೂವರು ಹೆಣ್ಣು ಮಕ್ಕಳಿದ್ದಾರೆ. ಶಿಖರ್ ಸ್ಮೃತಿ ಶಿಂಧೆ ಅವರ ಪುತ್ರ. ಶಿಖರ್ ಪಹರಿಯಾ ಜೊತೆ ಜಾಹ್ನವಿ ಡೇಟಿಂಗ್ ಮಾಡ್ತಿರೋ ವಿಷಯ ತುಂಬಾ ಹಳೆಯದು. ಇದಾಗಲೇ ಹಲವು ಕಡೆಗಳಲ್ಲಿ ಇವರು ಒಟ್ಟಿಗೇ ಕಾಣಿಸಿಕೊಂಡಿದ್ದಾರೆ. ಫೋಟೋ ಶೂಟ್ ಕೂಡ ಮಾಡಿಸಿಕೊಂಡಿದ್ದಾರೆ. ಬಾಲಿವುಡ್‌ನಲ್ಲಿ ಸರಿಯಾಗಿ ನೆಲೆ ಕಂಡುಕೊಳ್ಳಲು ಅವರು ಪ್ರಯತ್ನಿಸುತ್ತಿರುವ ನಡುವೆಯೇ ಹೀಗೆಲ್ಲಾ ಸುದ್ದಿಯಾಗುತ್ತಲೇ ಇರುವ ಜಾಹ್ನವಿ ಈಗ ಬಾಯ್ ಫ್ರೆಂಡ್ (Boy Friend) ಜೊತೆ ಟ್ರಿಪ್ಗೆ ಹೋಗಿರುವ ಫೋಟೋಗಳು ವೈರಲ್ ಆಗಿವೆ. ಆದರೆ ಕುತೂಹಲದ ಸಂಗತಿಯೆಂದರೆ, ಜಾಹ್ನವಿ ಅವರ ತಂದೆ ಬೋನಿ ಕಪೂರ್ (Bony Kapoor) ಕೂಡ ಈ ಟ್ರಿಪ್ಗೆ ಹೋಗಿದ್ದಾರೆ ಎನ್ನುವುದು! ಮಗಳ ಬಾಯ್ಫ್ರೆಂಡ್ ಜೊತೆ ಅಪ್ಪನಿಗೆ ಏನು ಕೆಲಸ ಎಂದು ನೆಟ್ಟಿಗರು ಕಾಲೆಳೆಯುತ್ತಿದ್ದಾರೆ. ಇನ್ನೂ ಕುತೂಹಲದ ಸಂಗತಿಯೆಂದರೆ ಇವರ ಜೊತೆಗೂಡಿದ್ದಾರೆ ಶಿಖರ್ ಪಹಾರಿಯಾ ಸಹೋದರಿ ಸಾರಾ ಕೂಡ!
Jr NTR ಜೊತೆ ರೊಮಾನ್ಸ್ ಮಾಡಲು ಜಾಹ್ನವಿ ಕಪೂರ್‌ಗೆ ಈ ಪರಿ ಸಂಭಾವನೆಯಾ?