ಕದ್ದುಮುಚ್ಚಿ ಸಿಗೋದೆ ಕಷ್ಟವಾಗಿತ್ತು, ಸೋ ಕೈಕೊಟ್ಟೆ: ಜಾಹ್ನವಿ ಮಾತಿಗೆ ಹೆಣ್ಮಕ್ಳಿಗೆ ಬೈತಿರೋ ಹೈಕ್ಳು!
ನಟಿ ಜಾಹ್ನವಿ ಕಪೂರ್ ತಮ್ಮ ಮೊದಲ ಕ್ರಷ್ ಹಾಗೂ ಕೈಕೊಟ್ಟ ಕಾರಣ ತಿಳಿಸಿದ್ದು, ಟ್ರೋಲಿಗರು ಹುಡುಗಿಯರನ್ನು ಸಕತ್ ಬೈಯುತ್ತಿದ್ದಾರೆ.
ಒಂದು ಕಾಲದಲ್ಲಿ ಬಾಲಿವುಡ್ ಆಳಿದ್ದ ಸುಂದರಿ ಶ್ರೀದೇವಿ ಅವರ ಪುತ್ರಿ ಜಾಹ್ನವಿ ಕಪೂರ್ (Janhvi Kapoor) ಸದಾ ಸುದ್ದಿಯಲ್ಲಿ ಇರುತ್ತಾರೆ. ಹೆಚ್ಚಾಗಿ ಬಿಕಿನಿ ತೊಟ್ಟು ಇಲ್ಲವೇ ಚಿಕ್ಕ ಉಡುಗೆ ಹಾಕಿಕೊಂಡು ಇವರು ಟ್ರೋಲ್ ಆಗುತ್ತಿರುವುದೇ ಹೆಚ್ಚು. ಶ್ರೀದೇವಿಯಂಥ ನಟಿಯ ಮಗಳು ಈ ರೀತಿಯ ಡ್ರೆಸ್ ಧರಿಸುವುದು ಸರಿಯಲ್ಲ ಎಂದು ನೆಟ್ಟಿಗರು ಪಾಠ ಮಾಡುತ್ತಲೇ ಇರುತ್ತಾರೆ. ಆದರೆ ಇದ್ಯಾವುದಕ್ಕೂ ಕೇರೇ ಅನ್ನದ ನಟಿ, ಸದಾ ಡೇಟಿಂಗ್, ಪಾರ್ಟಿ, ಟೂರ್ ಎನ್ನುತ್ತಲೇ ಇರುತ್ತಾರೆ. ಈಗಾಗಲೇ ಜಾಹ್ನವಿ ಕಪೂರ್ ಹೆಸರು ಹಲವಾರು ಮಂದಿಯ ಜೊತೆ ಥಳಕು ಹಾಕಿಕೊಂಡಿದೆ. ಸಾರಾ ಆಲಿ ಖಾನ್ ಮತ್ತು ಜಾನ್ವಿ ಕಪೂರ್ ಅವರು ಕಾಫಿ ವಿತ್ ಕರಣ್ನಲ್ಲಿ ಕಾಣಿಸಿಕೊಂಡಾಗ ಈ ವಿಷಯ ಬಹಿರಂಗಗೊಂಡಿತ್ತು. ಕರಣ್ ಯಾರ ಹೆಸರನ್ನೂ ಹೇಳದೇ ಇಬ್ಬರು ಸಹೋದರರ ನಡುವೆ ನೀವಿಬ್ಬರೂ ಈ ಹಿಂದೆ ಡೇಟಿಂಗ್ ಮಾಡ್ತಿದ್ರಿ, ಆ ಡೇಟಿಂಗ್ ಬಗ್ಗೆ ಒಂಚೂರು ಇಲ್ಲಿ ಹೇಳ್ತೀರಾ? ಅನ್ನೋ ಪ್ರಶ್ನೆ ಕೇಳಿದರು. ಆಗ ಸಾರಾ ಮತ್ತು ಜಾನ್ವಿ ಇಬ್ಬರೂ ಶಾಕ್‌ಗೆ ಒಳಗಾದವರಂತೆ ಕಂಡರು. ಟಾಪಿಕ್ ಚೇಂಜ್ ಮಾಡಿ ನುಣುಚಿಕೊಳ್ಳುವ ಪ್ರಯತ್ನ ಮಾಡಿದ್ದರು. ಅಂತೂ ಕೊನೆಗೆ ಅವರು ಯಾರು ಎಂದು ನೆಟ್ಟಿಗರು ಪತ್ತೆ ಮಾಡಿದ್ದರು.
ಅಷ್ಟಕ್ಕೂ ಸದ್ಯ ಈಕೆಯ ಸುದ್ದಿ ಇರೋದು ಉದ್ಯಮಿ ಶಿಖರ್ ಪಹರಿಯಾ (Shikhar Pahariya) ಜೊತೆ. ಅಂದಹಾಗೆ, ಶಿಖರ್ ಪಹಾರಿಯಾ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಸುಶೀಲ್ ಕುಮಾರ್ ಶಿಂಧೆ ಅವರ ಮೊಮ್ಮಗ. ಸುಶೀಲ್ ಕುಮಾರ್ ಶಿಂಧೆ (Sushil Kumar Shindhe) ಅವರಿಗೆ ಮೂವರು ಹೆಣ್ಣು ಮಕ್ಕಳಿದ್ದಾರೆ. ಶಿಖರ್ ಸ್ಮೃತಿ ಶಿಂಧೆ ಅವರ ಪುತ್ರ. ಶಿಖರ್ ಪಹರಿಯಾ ಜೊತೆ ಜಾಹ್ನವಿ ಡೇಟಿಂಗ್ ಮಾಡ್ತಿರೋ ವಿಷಯ ತುಂಬಾ ಹಳೆಯದು. ಇದಾಗಲೇ ಹಲವು ಕಡೆಗಳಲ್ಲಿ ಇವರು ಒಟ್ಟಿಗೇ ಕಾಣಿಸಿಕೊಂಡಿದ್ದಾರೆ. ಫೋಟೋ ಶೂಟ್ ಕೂಡ ಮಾಡಿಸಿಕೊಂಡಿದ್ದಾರೆ. ಬಾಲಿವುಡ್ನಲ್ಲಿ ಸರಿಯಾಗಿ ನೆಲೆ ಕಂಡುಕೊಳ್ಳಲು ಅವರು ಪ್ರಯತ್ನಿಸುತ್ತಿರುವ ನಡುವೆಯೇ ಹೀಗೆಲ್ಲಾ ಸುದ್ದಿಯಾಗುತ್ತಲೇ ಇರುವ ಜಾಹ್ನವಿ ಈಗ ಬಾಯ್ ಫ್ರೆಂಡ್ (Boy Friend) ಜೊತೆ ಟ್ರಿಪ್ಗೆ ಹೋಗಿರುವ ಫೋಟೋಗಳು ವೈರಲ್ ಆಗಿದ್ದವು. ಆದರೆ ಶಿಖರ್ಗೂ ಮುನ್ನ ಜಾಹ್ನವಿ ಅವರ ಹೆಸರು ಹಲವರ ಜೊತೆ ಥಳಕು ಹಾಕಿಕೊಂಡಿದ್ದಾರೆ.
ಮಾಜಿ ಸಿಎಂ ಮೊಮ್ಮಕ್ಕಳ ಜೊತೆ ಸಾರಾ ಆಲಿ ಖಾನ್ ಮತ್ತು ಜಾಹ್ನವಿ ಕಪೂರ್ ಡೇಟಿಂಗ್!
ಆದರೆ ಇದೀಗ ತಮ್ಮ ಮೊದಲ ಕ್ರಷ್ ಬಗ್ಗೆ ಮಾತನಾಡಿದ್ದಾರೆ. ಯೂಟ್ಯೂಬರ್ ಜೊತೆ ಕಾರಿನಲ್ಲಿ ತಮ್ಮ ಮೊದಲ ಕ್ರಷ್ ಕುರಿತು ಜಾಹ್ನವಿ ಮಾತನಾಡಿದ್ದಾರೆ. ಆಗ ಡೇಟಿಂಗ್ ಎಲ್ಲಾ ಮಾಡ್ತಿದ್ದೆ. ಬಾಯ್ಫ್ರೆಂಡ್ ಇದ್ದ. ಆದ್ರೆ ಮನೆಯಲ್ಲಿ ಎಲ್ಲದಕ್ಕೂ ಪರ್ಮಿಷನ್ ಪಡೆಯೋದು ಕಷ್ಟವಾಗಿತ್ತು. ಕದ್ದುಮುಚ್ಚಿ ಭೇಟಿಯಾಗಬೇಕಿತ್ತು. ಅವನನ್ನು ಮೀಟ್ ಆಗ್ಬೇಕೆಂದರೆ ಮನೆಯಲ್ಲಿ ಏನಾದ್ರೂ ಸುಳ್ಳು ಹೇಳಿ ಹೋಗಬೇಕಿತ್ತು. ಅದಕ್ಕೆ ತುಂಬಾ ಕಷ್ಟವಾಗುತ್ತಿತ್ತು. ಇದರ ಸಹವಾಸವೇ ಬೇಡ ಎಂದು ಆತನನ್ನು ಬಿಟ್ಬಿಟ್ಟೆ ಎಂದು ಜಾಹ್ನವಿ ಹೇಳಿದ್ದಾರೆ.
ಇದಕ್ಕೆ ಥಹರೇವಾರಿ ಕಮೆಂಟ್ಗಳು ಬಂದಿದ್ದು, ನಿಜ ಹೇಳಿದುದಕ್ಕೆ ಕೆಲವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಹುಡುಗಿಯರು ಇರುವುದೇ ಕೈಕೊಡುವುದಕ್ಕೆ, ಮಾಡೋದೆಲ್ಲಾ ಮಾಡಿ ಆಮೇಲೆ ಕೈಕೊಡೊದೇ ಆಯ್ತು, ಹುಡುಗರ ಕಥೆ ಪಾಪ ಎಂದಿದ್ದಾರೆ. ಅನೇಕ ಮಂದಿ ಇದಕ್ಕೆ ಹೌದು ಎಂದಿದ್ದು, ಹುಡುಗರು ಹುಡುಗಿಯರು ಮಾಡೋದೆಲ್ಲಾ ನಿಜ ಎಂದುಕೊಳ್ತಾರೆ. ಆಮೇಲೆ ನೋಡಿ ಎಷ್ಟು ಸಲೀಸಾಗಿ ಕೈಕೊಟ್ಟು ಹೋಗುತ್ತಾರೆ. ಎಲ್ಲಾ ಹುಡುಗಿಯರೂ ಹೀಗೆ ಅಂತಿದ್ದಾರೆ.
ಸೀರೆ ಮೇಲಕ್ಕೆತ್ತಿ ಜಾಹ್ನವಿ ಕಪೂರ್ ತಿರುಪತಿ ದರ್ಶನ: ಇಷ್ಟೆಲ್ಲಾ ಕಷ್ಟಪಡ್ಬೇಡಿ ಎಂದ ಫ್ಯಾನ್ಸ್