Asianet Suvarna News Asianet Suvarna News

ಒಹೊ... ಮೂರೂ ಬಿಟ್ಟವರಿಗೆ ಇದು ಬೇರೆ ಗೊತ್ತಾಗತ್ತಾ? ಜಾಹ್ನವಿ ಕಪೂರ್‌ ಮಾತಿಗೆ ಇನ್ನಿಲ್ಲದ ಟ್ರೋಲ್‌

ತಮ್ಮ ಫೋಟೋ, ವಿಡಿಯೋ ಮಾಡುವವರಿಗೆ ನಟಿ ಜಾಹ್ನವಿ ಕಪೂರ್‌ ಕ್ಲಾಸ್‌ ತೆಗೆದುಕೊಂಡು ಇದೀಗ ಇನ್ನಿಲ್ಲದ ಟ್ರೋಲ್‌ಗೆ ಒಳಗಾಗಿದ್ದಾರೆ. ಆಗಿದ್ದೇನು? 
 

Janhvi Kapoor lashes out at photographers but heavily trolled by neteizens
Author
First Published May 30, 2024, 8:36 PM IST

ಚಿತ್ರ ನಟಿಯರು ಅದರಲ್ಲಿಯೂ ಹೆಚ್ಚಾಗಿ ಬಾಲಿವುಡ್‌ ನಟಿಯರು ಇಂದು ಪೈಪೋಟಿಗೆ ಬಿದ್ದವರಂತೆ ದೇಹ ಪ್ರದರ್ಶನ ಮಾಡುವುದು ಮಾಮೂಲಾಗಿದೆ. ಈ ಪೈಪೋಟಿ ಎಷ್ಟರ ಮಟ್ಟಿಗೆ ಇದೆ ಎಂದರೆ, ಇದೀಗ ನಟಿಯರು ಅರೆಬೆರೆ ಬೆತ್ತಲಾಗಿದ್ದು ಸಾಕಾಗಲ್ಲ ಎಂದು ಪೂರ್ಣ ಬೆತ್ತಲಾಗಿದ್ದೂ ನಡೆದಿದೆ. ಚಿತ್ರಕ್ಕೆ ಒಪ್ಪುವಂತಿದ್ದರೆ ನಾನು ರೆಡಿ ಎನ್ನುವ ಮಾತು ಬಹುತೇಕ ನಟಿಯರಿಂದ ಕೇಳಬಹುದು. ಇನ್ನು ಕೆಲವು ನಟಿಯರು ಬಳಕುವ ಬಳ್ಳಿಯಂತೆ ಇರಲು ಇನ್ನಿಲ್ಲದ ಸರ್ಕಸ್‌ ಮಾಡಿದ್ರೂ, ದೇಹದ ಭಾಗಕ್ಕೆ ಸರ್ಜರಿ ಮಾಡಿಕೊಂಡು ಅದರ ಧಾರಾಳ ಪ್ರದರ್ಶನ ಮಾಡುವುದೂ ನಡೆದಿದೆ. ಇಂಥ ನಟಿಯರು ಟ್ರೋಲ್‌ ಆಗುವುದರಿಂದಲೇ ಸಕತ್‌ ಪ್ರಚಾರದಲ್ಲಿ ಇರುವ ಕಾರಣ, ಇವರನ್ನು ನೋಡಿ ಇನ್ನುಳಿದ ನಟಿಯರು ಇವರ ಹಾದಿಯಲ್ಲಿಯೇ ಸಾಗುತ್ತಿದ್ದಾರೆ.

ಇನ್ನು ಚಿತ್ರ ತಾರೆಯರನ್ನೇ ಅದರಲ್ಲಿಯೂ ಹೆಚ್ಚಾಗಿ ನಟಿಯರ ಹಿಂದೆ ಹಿಂದೆ ಹೋಗುವ ಪಾಪರಾಜಿಗಳ ಬಗ್ಗೆ ಹೇಳಬೇಕೆ? ಕೆಲವೊಮ್ಮೆ ಅಸಹ್ಯ ಎನ್ನುವ ರೀತಿಯಲ್ಲಿ ನಟಿಯರು ಎಲ್ಲಿಯೇ ಹೋದರೂ ಅವರ ಹಿಂದೆ ಹೋಗುತ್ತಾರೆ. ಈ ರೀತಿಯ ಫೋಟೋ ತೆಗೆದು ಮಾರಾಟ ಮಾಡಿದರೆ ಅವರಿಗೆ ಸಕತ್‌ ದುಡ್ಡು ಬರುವುದಾದರೆ ಕೆಲ ದಿನಗಳ ಹಿಂದಷ್ಟೇ ನಟಿ ಜಾಹ್ನವಿ ಕಪೂರ್‌ ಹೇಳಿದ್ದರು. ಚಿತ್ರದ ಪ್ರಮೋಷನ್‌ ಇದ್ದರೆ ನಾವೇ ಅವರನ್ನು ದುಡ್ಡು ಕೊಟ್ಟು ಕರೆಸುತ್ತೇವೆ. ಇಲ್ಲದಿದ್ದರೆ ನಮ್ಮ ಹಿಂದೆ ಅವರು ಬಿದ್ದು, ಫೋಟೋ, ವಿಡಿಯೋ ಮಾಡಿ ಸಾಕಷ್ಟು ಹಣ ಗಳಿಸುತ್ತಾರೆ ಎಂದಿದ್ದರು.

ಅದೆಷ್ಟೂ ಅಂತ ಕೂದಲು ಕಿತ್ಕೋತಿಯಾ ತಾಯಿ? ಕೈಮೇಲೆ ಮಾಡಿ ಏನ್‌ ತೋರಿಸ್ತಿದ್ದಿಯಾ ಕೇಳ್ತಿದ್ದಾರೆ ಫ್ಯಾನ್ಸ್‌

ನಟಿಯರು ಧಾರಾಳವಾಗಿ ಎಲ್ಲವನ್ನೂ ತೋರಿಸುತ್ತಾರೆ ಎಂದ ಮೇಲೆ ಪಾಪರಾಜಿಗಳಿಗೆ ಇನ್ನೇನು? ಅವರಿಗೆ ಹಬ್ಬವೋ ಹಬ್ಬ. ಹಿಂದೆ ಮುಂದೆ ಎಲ್ಲೆಲ್ಲಿ ಜೂಮ್‌ ಮಾಡಬೇಕೋ ಅಲ್ಲೆಲ್ಲಾ ತಮ್ಮ ಕ್ಯಾಮೆರಾಗಳನ್ನು ಓಡಿಸಿ ಅದನ್ನೇ ತೋರಿಸುತ್ತಾರೆ. ತಮ್ಮ ದೇಹ ಸೌಂದರ್ಯವನ್ನು ನೋಡಲಿ ಎನ್ನುವ ಕಾರಣಕ್ಕೇ ಇಂಥ ಅಸಭ್ಯ, ಅಶ್ಲೀಲ ಎನ್ನುವ ತುಂಡುಡುಗೆ ಹಾಕಿಕೊಂಡು ಇಂಥ ನಟಿಯರು ಓಡಾಡುವುದು ಏನೂ ಗುಟ್ಟಾಗಿ ಉಳಿದಿಲ್ಲ.

ಆದರೆ ಇದೀಗ ನಟಿ ಜಾಹ್ನವಿ ಕಪೂರ್‌ ಪಾಪರಾಜಿಗಳಿಗೆ ಕ್ಲಾಸ್‌ ತೆಗೆದುಕೊಂಡಿದ್ದಾರೆ. ನೀವು ಎಲ್ಲೆಲ್ಲೋ ಜೂಮ್‌ ಮಾಡುತ್ತೀರಿ. ಹಿಂದೆ-ಮುಂದೆ ಬೇಡದ ಕಡೆಗಳಲ್ಲೆಲ್ಲಾ ಜೂಮ್‌ ಮಾಡುತ್ತೀರಿ. ಹಾಗೆಲ್ಲಾ ಮಾಡಬೇಡಿ ಎಂದು ಸ್ವಲ್ಪ ಗರಂ ಆಗಿಯೇ ಹೇಳಿದ್ದಾರೆ. ಇದರ ವಿಡಿಯೋ ವೈರಲ್‌ ಆಗುತ್ತಿದ್ದಂತೆಯೇ, ನೆಟ್ಟಿಗರು ನಟಿಯ ವಿರುದ್ಧ ಸಕತ್‌ ಟ್ರೋಲ್‌ ಮಾಡಿದ್ದಾರೆ. ಮೂರೂ ಬಿಟ್ಟವರಿಗೆ ನಾಚಿಕೆ ಎಂದರೆ ಏನು ಗೊತ್ತಿದ್ಯಾ ಎಂದು ಪ್ರಶ್ನಿಸುತ್ತಿದ್ದಾರೆ. ಜೂಮ್ ಮಾಡಿದೇ ಹೋದರೆ ನಿಮ್ಮ ಲೈಫೇ ವೇಸ್ಟ್‌ ಅಲ್ವಾ ಎಂದು ಮತ್ತೆ ಕೆಲವರು ಪ್ರಶ್ನಿಸುತ್ತಿದ್ದಾರೆ. ಎಲ್ಲರೂ ನೋಡಲಿ ಎನ್ನುವ ಕಾರಣಕ್ಕೇ ಇಂಥ ಉಡುಗೆ ತೊಟ್ಟು ಬರುತ್ತೀರಿ, ಮೂರು ಬಿಟ್ಟವರಂತೆ ವರ್ತಿಸುತ್ತೀರಿ. ಇನ್ನು ಜೂಮ್‌ ಮಾಡಬಾರದು ಎಂದರೆ ಹೇಗೆ ಎಂದು ಪ್ರಶ್ನಿಸುತ್ತಿದ್ದಾರೆ. ಅಂದಹಾಗೆ ನಟಿ ಸದ್ಯ ಮಿ. & ಮಿಸೆಸ್ ಮಾಹಿ' ಸಿನಿಮಾದ ಪ್ರಚಾರದಲ್ಲಿ ತೊಡಗಿದ್ದಾರೆ. ಮೈತುಂಬಾ ಬಾಲ್‌ ಡ್ರೆಸ್‌ ಧರಿಸಿ, ಕೈಯಲ್ಲಿ ಬಾಲ್‌ ಹಿಡಿದು ಸಕತ್‌ ಟ್ರೋಲ್‌ ಕೂಡ ಆಗಿದ್ದರು. . & ಮಿಸೆಸ್ ಮಾಹಿ' ಚಿತ್ರವು  ಕ್ರಿಕೆಟ್‌ಗಾಗಿ ಹಂಚಿಕೊಂಡ ಪ್ರೀತಿಯೊಂದಿಗೆ ದಂಪತಿಯ ನಡುವಿನ ಅಪೂರ್ಣ ಪರಿಪೂರ್ಣ ಪಾಲುದಾರಿಕೆಯ ಕಥೆಯನ್ನು ವಿವರಿಸುತ್ತದೆ ಎನ್ನಲಾಗಿದೆ. ಶರಣ್ ಶರ್ಮಾ ಇದನ್ನು ನಿರ್ದೇಶಿಸಿದ್ದಾರೆ.  ನಾಳೆ ಅಂದ್ರೆ ಮೇ 31 ರಂದು ಚಿತ್ರ ಬಿಡುಗಡೆಯಾಗಲಿದೆ. ಅದರ ಸಲುವಾಗಿ ನಟಿ ಕ್ರಿಕೆಟ್​ ಬಾಲ್​ನ ಡ್ರೆಸ್​ ಹಾಕಿಕೊಂಡಿದ್ದರು.

ಕಸವನ್ನು ಹೀಗೆಲ್ಲಾ ಹೆಕ್ಕಿ ಹಾಕ್ತಾರಾ? ಪೋಸ್​ ಕೊಡಲು ಹೋಗಿ ಮಲೈಕಾ ಅರೋರಾ ಸಕತ್​ ಟ್ರೋಲ್​!

Latest Videos
Follow Us:
Download App:
  • android
  • ios