Asianet Suvarna News Asianet Suvarna News
breaking news image

ಅದೆಷ್ಟೂ ಅಂತ ಕೂದಲು ಕಿತ್ಕೋತಿಯಾ ತಾಯಿ? ಕೈಮೇಲೆ ಮಾಡಿ ಏನ್‌ ತೋರಿಸ್ತಿದ್ದಿಯಾ ಕೇಳ್ತಿದ್ದಾರೆ ಫ್ಯಾನ್ಸ್‌

ಬಿಗ್‌ಬಾ‌ಸ್‌ ಖ್ಯಾತಿಯ ನಿವೇದಿತಾ ಗೌಡ ಷಾರ್ಟ್ ಡ್ರೆಸ್‌ ಹಾಕಿಕೊಂಡು ರೀಲ್ಸ್‌ ಮಾಡಿದ್ದಾರೆ. ಇದಕ್ಕೆ ಥಹರೇವಾರಿ ಕಮೆಂಟ್ಸ್‌ ಬಂದಿವೆ. ನೆಟ್ಟಿಗರು ಹೇಳ್ತಿರೋದೇನು?
 

Nivedita Gowda of Bigg Boss fame has done reels wearing a short dress fans trools suc
Author
First Published May 30, 2024, 8:29 PM IST

ಇತ್ತೀಚಿಗೆ ಹೆಚ್ಚಿನ  ಹುಡುಗಿಯರು ಫ್ಯಾಷನ್​ ಹೆಸರಿನಲ್ಲಿ ಹೆಚ್ಚಾಗಿ ಷಾರ್ಟ್ಸ್​, ಮಿನಿ ಸ್ಕರ್ಟ್​ ಅನ್ನೇ ಹೆಚ್ಚು ಇಷ್ಟಪಡುತ್ತಾರೆ. ಸೈಡ್‌ ಸ್ಲಿಟ್‌ ಡ್ರೆಸ್‌ ಹಾಕಿಕೊಂಡು ತೊಡೆ ತೋರಿಸುವುದು ಇಂದು ಮಾಮೂಲಾಗಿಬಿಟ್ಟಿದೆ. ಅದರಲ್ಲಿಯೂ ಸಿನಿಮಾ ತಾರೆಯರನ್ನು ನೋಡಿ ಧಾರಾಳ ದೇಹ ಪ್ರದರ್ಶನ ಮಾಡುವುದು ಎಂದರೂ ಹಲವರಿಗೆ ಇನ್ನಿಲ್ಲದ ಖುಷಿ. ಈ ರೀತಿಯ ಬಟ್ಟೆ ಧರಿಸಿದರೆ ತಾವೂ ಸೆಲೆಬ್ರಿಟಿ ಎನಿಸುತ್ತದೆಯೋ ಏನೋ, ಒಟ್ಟಿನಲ್ಲಿ ಬಟ್ಟೆಯ ವಿಷಯದಲ್ಲಿ ಹಲವು ಹುಡುಗಿಯರು ಎಲ್ಲಾ ಮಿತಿಗಳನ್ನೂ ಮೀರುತ್ತಿದ್ದಾರೆ.  ಇದೀಗ ಬಿಗ್‌ಬಾಸ್‌ ಖ್ಯಾತಿಯ ನಿವೇದಿತ ಗೌಡ ಇದೇ ರೀತಿಯ ಬಟ್ಟೆ ತೊಟ್ಟು ಸಕತ್‌ ಟ್ರೋಲ್‌ಗೆ ಒಳಗಾಗಿದ್ದಾರೆ.


ಅಷ್ಟಕ್ಕೂ, ಬಾರ್ಬಿಡಾಲ್​ ಎಂದೇ ಫೇಮಸ್​ ಆಗಿರೋ ನಿವೇದಿತಾ ಗೌಡ ಇತ್ತೀಚಿಗೆ ರೀಲ್ಸ್​ ಮಾಡುವುದು ಹೆಚ್ಚುತ್ತಲೇ ಇದೆ. ದಿನಕ್ಕೊಂದರಂತೆ ಡ್ರೆಸ್​ ಮಾಡಿಕೊಂಡು ರೀಲ್ಸ್​ ಮಾಡುತ್ತಾರೆ. ಇವರ ಸೌಂದರ್ಯಕ್ಕಾಗಿಯೇ ಫ್ಯಾನ್ಸ್​ ಸಂಖ್ಯೆ ಸಕತ್​ ಹೆಚ್ಚಿದೆ. ಇದೇ  ಕಾರಣಕ್ಕೆ ಇವರು ಇನ್​ಸ್ಟಾಗ್ರಾಮ್​ನಲ್ಲಿ ವಾರಕ್ಕೆ ಏನಿಲ್ಲವೆಂದರೂ ನಾಲ್ಕೈದು ವಿಡಿಯೋ ಅಪ್​ಲೋಡ್​  ಮಾಡುತ್ತಾರೆ. ಹಲವೊಮ್ಮ ಸಿಂಗಲ್​ ಆಗಿ, ಕೆಲವೊಮ್ಮೆ ಪತಿ ಚಂದನ್​ ಶೆಟ್ಟಿ ಜೊತೆ ಈಕೆ ಇನ್​ಸ್ಟಾಗ್ರಾಮ್​ನಲ್ಲಿ ರೀಲ್ಸ್​ ಹಾಕುತ್ತಿರುತ್ತಾರೆ. ಇವರು ಹಾಕುವ ಎಲ್ಲಾ ವಿಡಿಯೋಗಳು ಸಕತ್​ ಸುದ್ದಿ ಮಾಡುತ್ತೆ.  ಈಕೆ ಏನೇ ಡ್ರೆಸ್ ಹಾಕಿದ್ರೂ ತುಂಬಾ ಮುದ್ದಾಗಿ ಕಾಣುವ ಕಾರಣ ಕಮೆಂಟ್​ಗಳ ಸುರಿಮಳೆಯೇ ಆಗುತ್ತದೆ. ಅದರ ಜೊತೆ ಅಷ್ಟೇ ಟ್ರೋಲ್​ಗಳೂ ಬರುತ್ತವೆ. ಟ್ರೋಲ್​ಗೆ ಜಗ್ಗದೇ  ನಿವೇದಿತಾ ಹಲವಾರು ವಿಡಿಯೋಗಳನ್ನು ಶೇರ್​ ಮಾಡುತ್ತಲೇ ಇರುತ್ತಾರೆ. ಇದಕ್ಕೆ ಪರ-ವಿರೋಧ ಕಮೆಂಟ್​ಗಳ ಸುರಿಮಳೆಯಾಗುತ್ತಲೇ ಇರುತ್ತದೆ.  ಕಮೆಂಟ್​ಗಳು ಏನೇ ಇದ್ದರೂ ನಟಿ ಮಾತ್ರ ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಆ್ಯಕ್ಟೀವ್​ ಆಗಿದ್ದಾರೆ. 

ಪುಟ್ಟಗೌರಿ ಮದುವೆ ಸೀರಿಯಲ್​ಗೆ ನಮ್ರತಾ ಗೌಡ ದಿನವೊಂದಕ್ಕೆ ಪಡೆದ ಸಂಭಾವನೆ ರಿವೀಲ್​...

ಇವರ ಸೌಂದರ್ಯಕ್ಕಾಗಿಯೇ ಫ್ಯಾನ್ಸ್​ ಸಂಖ್ಯೆ ಸಕತ್​ ಹೆಚ್ಚಿದೆ. ಇದೇ  ಕಾರಣಕ್ಕೆ ಇವರು ಇನ್​ಸ್ಟಾಗ್ರಾಮ್​ನಲ್ಲಿ ವಾರಕ್ಕೆ ಏನಿಲ್ಲವೆಂದರೂ ನಾಲ್ಕೈದು ವಿಡಿಯೋ ಅಪ್​ಲೋಡ್​  ಮಾಡುತ್ತಾರೆ. ಬಾರ್ಬಿ ಡಾಲ್ ಎಂದೂ ಅಭಿಮಾನಿಗಳಿಂದ ಕರೆಸಿಕೊಳ್ತಿರೋ ಈಕೆ ಹಾಕುವ ವಿಡಿಯೋ (Video), ಫೋಟೋಗಳಿಗಾಗಿಯೇ ಫ್ಯಾನ್ಸ್ ಕಾತರದಿಂದ ಕಾಯ್ತಾ ಇರ್ತಾರೆ.   ಈಕೆ ಏನೇ ಡ್ರೆಸ್ ಹಾಕಿದ್ರೂ ತುಂಬಾ ಮುದ್ದಾಗಿ ಕಾಣುವ ಕಾರಣ ಕಮೆಂಟ್​ಗಳ ಸುರಿಮಳೆಯೇ ಆಗುತ್ತದೆ. ಅದರ ಜೊತೆ ಅಷ್ಟೇ ಟ್ರೋಲ್​ಗಳೂ ಬರುತ್ತವೆ. ಟ್ರೋಲ್​ಗೆ ಜಗ್ಗದೇ  ನಿವೇದಿತಾ ಹಲವಾರು ವಿಡಿಯೋಗಳನ್ನು ಶೇರ್​ ಮಾಡುತ್ತಲೇ ಇರುತ್ತಾರೆ. ಇದಕ್ಕೆ ಪರ-ವಿರೋಧ ಕಮೆಂಟ್​ಗಳ ಸುರಿಮಳೆಯಾಗುತ್ತಲೇ ಇರುತ್ತದೆ.  ಕಮೆಂಟ್​ಗಳು ಏನೇ ಇದ್ದರೂ ನಟಿ ಮಾತ್ರ ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಆ್ಯಕ್ಟೀವ್​ ಆಗಿದ್ದಾರೆ. 

ಇದೀಗ ನಟಿಯ ಈ ಡ್ಯಾನ್ಸ್‌ ಮತ್ತು ಡ್ರೆಸ್‌ಗೆ ಸಕತ್‌ ಕಮೆಂಟ್‌ ಬರುತ್ತಿದೆ. ಎಲ್ಲಾ ರೀಲ್ಸ್‌ನಲ್ಲಿಯೂ ಕೂದಲು ಕಿತ್ತುಕೊಳ್ಳೋದೊಂದೇ ಮಾಡ್ತಿಯಲ್ಲಾ ತಾಯಿ, ಬೇರೆ ಪೋಸ್‌ ಬರಲ್ವಾ ಎಂದು ಕೆಲವರು ಕೇಳುತ್ತಿದ್ದರೆ, ಕೈ ಮೇಲೆ ಮೇಲೆ ಮಾಡಿ ತೋರಿಸೋದು ಏನನ್ನು ಎಂದು ಇನ್ನು ಹಲವರು ಪ್ರಶ್ನಿಸುತ್ತಿದ್ದಧಾರೆ.  ಯಾಕೋ ಬರ್ತಾ ಬರ್ತಾ ಡ್ರೆಸ್​ ಚಿಕ್ಕದಾಗ್ತಿದೆ, ತೋರಿಸೋದು ಜಾಸ್ತಿಯಾಗ್ತಿದೆ ಎನ್ನುತ್ತಿದ್ದಾರೆ ಅಭಿಮಾನಿಗಳು. ಇದೇ ವೇಳೆ ಆಪರೇಷನ್​ ಏನಾದ್ರೂ ಮಾಡಿಸಿಕೊಂಡ್ರಾ ಎಂದೂ ಕೇಳುತ್ತಿದ್ದಾರೆ. ಕೆಲವು ನಟಿಯರು ದೇಹದ ಗಾತ್ರ ದೊಡ್ಡದಾಗಿ ಕಾಣಿಸಲು ಪ್ಲಾಸ್ಟಿಕ್​ ಸರ್ಜರಿ ಮೊರೆ ಹೋಗುವುದು ಇದೆ. ಅದನ್ನೇ ಇಟ್ಟುಕೊಂಡು ನಿವೇದಿತಾಗೂ ಅದನ್ನೇ ಕೇಳುತ್ತಿದ್ದಾರೆ ನೆಟ್ಟಿಗರು. ಇನ್ನು ಕೆಲವರು ನಿವೇದಿತಾ ಪತಿ ಚಂದನ್​ ಶೆಟ್ಟಿಯವರನ್ನು ಅಯ್ಯೋ ಪಾಪ ಎನ್ನುತ್ತಿದ್ದರೆ, ಮತ್ತೆ ಕೆಲವರು ಮಗು ಮಾಡ್ಕೊ, ಸಾಕು ಈ ಹುಡುಗಾಟ ಎನ್ನುತ್ತಿದ್ದಾರೆ. ಯಾರು ಏನೇ ಕಮೆಂಟ್​ ಮಾಡಿದ್ರೂ ನಿವೇದಿತಾ ಮಾತ್ರ ಡೋಂಟ್​ ಕೇರ್​ ಎನ್ನುತ್ತಲೇ ಇರುತ್ತಾರೆ ಬಿಡಿ.

ಪಕ್ಕದಲ್ಲೇ ಇರ್ತಾಳೆ ಸಿಗಲ್ಲ.. ಒಂದೇ ಜಾಗಕ್ಕೆ ಹೋಗ್ತಾರೆ ಕಾಣಲ್ಲ... ನೆಟ್ಟಿಗರಾದ್ರು ನಿರ್ದೇಶಕರು!

Latest Videos
Follow Us:
Download App:
  • android
  • ios