Asianet Suvarna News Asianet Suvarna News

Jr.NTR ಜೊತೆ ನಟಿಸಲು ಸ್ಟಾರ್ ನಟಿಯರಿಗಿಂತ ಹೆಚ್ಚು ಸಂಭಾವನೆ ಪಡೆದ ಜಾನ್ವಿ ಕಪೂರ್

ಜೂ.ಎನ್ ಟಿ ಆರ್ 30ನೇ ಸಿನಿಮಾಗೆ ಜಾನ್ವಿ ಕಪೂರ್ ಭರ್ಜರಿ ಸಂಭಾವನೆ ಪಡೆದಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ..

Janhvi Kapoor Charges 4 crore For Jr NTR starrer NTR30 film sgk
Author
First Published Mar 7, 2023, 3:58 PM IST | Last Updated Mar 7, 2023, 3:58 PM IST

ಬಾಲಿವುಡ್ ಖ್ಯಾತ ನಟಿ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ ಕೊನೆಗೂ ಸೌತ್ ಸಿನಿಮಾ ರಂಗಕ್ಕೆ ಕಾಲಿಟ್ಟಿದ್ದಾರೆ. ದಕ್ಷಿಣ ಭಾರತದ ಸಿನಿಮಾಗಳಲ್ಲಿ ನಟಿಸಬೇಕೆನ್ನುವುದು ಜಾನ್ವಿಯ ದೊಡ್ಡ ಕನಸಾಗಿತ್ತು. ತಾಯಿಯಂತೆ ತಾನು ಕೂಡ ಸೌತ್ ಸಿನಿಮಾರಂಗದಲ್ಲಿ ಮೆರೆಯಬೇಕು ಎನ್ನುವ ಆಸೆ ಇತ್ತು. ಇದೀಗ ಜಾನ್ವಿ ಕನಸು ನನಸಾಗಿದೆ. ಸೌತ್ ಸ್ಟಾರ್ RRR ಹೀರೋ ಜೂ.ಎನ್ ಟಿ ಆರ್‌ಗೆ ನಾಯಕಿಯಾಗಿ ಜಾನ್ವಿ ತೆಲುಗು ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಜೂ.ಎನ್ ಟಿ ಆರ್ ನಟನೆಯ 30ನೇ ಸಿನಿಮಾ 'ಎನ್‌ಟಿಆರ್ 30' (ತಾತ್ಕಾಲಿಕ ಹೆಸರು)ದಲ್ಲಿ ಜಾನ್ವಿ ನಟಿಸುತ್ತಿರುವುದು ಅಧಿಕೃತವಾಗಿದೆ. 

ಕೊರಟಾಲ ಶಿವ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಎನ್‌ಟಿಆರ್ 30 ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಿದೆ. ಜಾನ್ವಿ ಕಪೂರ್ ತನ್ನ ಎಂಟ್ರಿಯ ಬಗ್ಗೆ ಪೋಸ್ಟರ್ ಮೂಲಕ ಅಧಿಕೃತ ಗೊಳಿಸಿದ್ದಾರೆ.   ಪೋಸ್ಟರ್ ನೋಡ್ತಿದ್ರೆ ಜಾನ್ವಿ ಡಿಗ್ಲಾಮ್ ಲುಕ್ ನಲ್ಲಿ ಕಾಣಿಸಿಕೊಳ್ತಾರೆ ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಜಾನ್ವಿ ಲುಕ್‌ ಅಭಿಮಾನಿಗಳ ಹೃದಯ ಗೆದ್ದಿದೆ. ಧಡಕ್ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಜಾನ್ವಿ ದೊಡ್ಡ ಸಕ್ಸಸ್ ಗಾಗಿ ಕಾಯುತ್ತಿದ್ದಾರೆ. ಅನೇಕ ಸಿನಿಮಾ ಮತ್ತು ವೆಬ್ ಸಿನಿಮಾಗಳ ಮೂಲಕ ಮಿಂಚಿರುವ ನಟಿ ಜಾನ್ವಿಗೆ ಬ್ರೇಕ್ ಅನಿವಾರ್ಯವಾಗಿದೆ. ಹಾಗಾಗಿ ಸೌತ್ ಸಿನಿಮಾವಾದರೂ ಸಕ್ಸಸ್ ತಂದುಕೊಡುತ್ತಾ ಎನ್ನುವ ನಿರೀಕ್ಷೆಯಲ್ಲಿದ್ದಾರೆ. 

ಕೊನೆಗೂ ಸೌತ್ ಸಿನಿರಂಗಕ್ಕೆ ಕಾಲಿಟ್ಟ ನಟಿ ಜಾನ್ವಿ ಕಪೂರ್; ಪೋಸ್ಟರ್ ರಿಲೀಸ್

ಜಾನ್ವಿ ಎಂಟ್ರಿ ಕೊಡುತ್ತಿದ್ದಂತೆ ಸಂಭಾವನೆ ವಿಚಾರ ಚರ್ಚೆಯಾಗುತ್ತಿದೆ. ಜಾನ್ವಿ ಅತೀ ಹೆಚ್ಚು ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಸೌತ್ ಸ್ಟಾರ್ ಗಳಿಗಿಂತ ಜಾನ್ವಿ ಅವರಿಗೆ ಅಧಿಕ ಸಂಭಾನೆ ನೀಡಲಾಗಿದೆಯಂತೆ. ಮೂಲಗಳ ಪ್ರಕಾರ ಜಾನ್ವಿ ಕಪೂರ್ ಅವರಿಗೆ ಬರೋಬ್ಬರಿ 4 ಕೋಟಿ ರೂಪಾಯಿ ಸಂಭಾವನೆ ನೀಡಲಾಗಿದೆಯಂತೆ. ಇತ್ತೀಚೆಗೆ ಸಮಂತಾ ಅವರ ಸಂಭಾವನೆ 5 ಕೋಟಿ ರೂಪಾಯಿ ಆಗಿದೆ ಎನ್ನಲಾಗಿದೆ. 

ಅನಿವಾರ್ಯವಾಗಿ ಒಂಟಿಯಾಗಿರುವೆ; ಶ್ರೀದೇವಿ ಇಲ್ಲದೆ ಜೀವನ ಕ್ರೂರ: ಜಾನ್ವಿ ಕಪೂರ್ ಕಣ್ಣೀರು

ಜೂ.ಎನ್ ಟಿ ಆರ್ 30ನೇ ಸಿನಿಮಾಗೆ ನಾಯಕಿ ಯಾರಾಗ್ತಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇತ್ತು. ಅಲ್ಲದೇ ಸಾಕಷ್ಟು ನಾಯಕಿಯಾರ ಹೆಸರು ಕೇಳಿ ಬಂದಿತ್ತು. ಸೌತ್ ನಿಂದ ಬಾಲಿವುಡ್ ವರೆಗೂ ಅನೇಕ ನಟಿಯರ ಹೆಸರು ಹರಿದಾಡುತ್ತಿತ್ತು. ಆದರೆ ಇದುವರೆಗೂ ಯಾವ ನಟಿ ಎಂದು ಸಿನಿಮಾತಂಡ ರಿವೀಲ್ ಮಾಡಿರಲಿಲ್ಲ. ಇದೀಗ ಜಾನ್ವಿ ಫೈನಲ್ ಆಗಿದ್ದು ಅವರ ಸಂಭಾವನೆ ಕೂಡ ಚರ್ಚೆಯಾಗುತ್ತಿದೆ. ಜೂ. ಎನ್ ಟಿ ಆರ್ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗುತ್ತಿದೆ. ಹಾಗಾಗಿ ಹಿಂದಿ ಮೂಲದ ನಟಿಯನ್ನು ಆಯ್ಕೆ ಮಾಡಲಾಗಿದೆ ಎನ್ನಲಾಗಿದೆ. ಈ ಸಿನಿಮಾ ಮೂಲಕ ಜಾನ್ವಿ ಸೌತ್ ಸಿನಿಮಾರಂಗದ ಅಭಿಮಾನಿಗಳ ಹೃದಯ ಗೆಲ್ತಾರಾ ಎಂದು ಕಾದುನೋಡಬೇಕಿದೆ. 

Latest Videos
Follow Us:
Download App:
  • android
  • ios