Asianet Suvarna News Asianet Suvarna News

ಸೌತ್ ಆಯ್ತು ಈಗ ಹಳೆ ಹಿಂದಿ ಚಿತ್ರದ ರಿಮೇಕ್‌ಗೆ ಮುಂದಾದ ಬಾಲಿವುಡ್; ಹಿಟ್ ಸಿನಿಮಾದಲ್ಲಿ ರಣ್ವೀರ್-ಜಾನ್ವಿ

ಬಾಲಿವುಡ್ ನ ಸೂಪರ್ ಹಿಟ್ ತೇಜಾಬ್ ಸಿನಿಮಾವನ್ನು ರಿಮೇಕ್ ಮಾಡಲಾಗಿತ್ತಿದ್ದು ರಣ್ವೀರ್ ಸಿಂಗ್ ಮತ್ತು ಜಾನ್ವಿ ಕಪೂರ್ ಕಾಣಿಸಿಕೊಳ್ಳುತ್ತಿದ್ದಾರೆ. 

Janhvi Kapoor and Ranveer Singh to share screen space together in Tezaab remake sgk
Author
First Published Jan 6, 2023, 5:32 PM IST

ಬಾಲಿವುಡ್‌ನಲ್ಲಿ ಇತ್ತೀಚಿಗೆ ಸೌತ್ ಸಿನಿಮಾಗಳ ರಿಮೇಕ್ ಹೆಚ್ಚಾಗುತ್ತಿವೆ ಎನ್ನುವ ಮಾತು ಕೇಳಿ ಬರುತ್ತಿದೆ. ದಕ್ಷಿಣ ಭಾರತದ ಸಿನಿಮಾಗಳು ಭಾರತ ಮತ್ತು ವಿದೇಶಗಳಲ್ಲಿ ಸದ್ದು ಮಾಡುತ್ತಿವೆ. ಬಾಲಿವುಡ್‌ನಲ್ಲೂ ಅಬ್ಬರಿಸುತ್ತಿದೆ. ದಕ್ಷಿಣದ ಅನೇಕ ಸಿನಿಮಾಗಳು ಬಾಲಿವುಡ್‌ನಲ್ಲಿ ರಿಮೇಕ್ ಆಗಿ ರಿಲೀಸ್ ಆಗಿವೆ. ಈಗಲೂ ರಿಮೇಕ್ ಆಗುತ್ತಿವೆ. ಈ ನಡುವೆ ಬಾಲಿವುಡ್ ಮಂದಿ ಹಿಂದಿಯ ಹಳೆಯ ಸಿನಿಮಾಗಳನ್ನೇ ರಿಮೇಕ್ ಮಾಡಲು ಮುಂದಾಗಿದೆ. ಹೌದು, ಬಾಲಿವುಡ್‌ನ ಸೂಪರ್ ಹಿಟ್ ಸಿನಿಮಾ ತೇಜಾಬ್ ರಿಮೇಕ್ ಮಾಡಲು ಮಾಡಲು ಎಲ್ಲಾ ಸಿದ್ಧತೆ ನಡೆಯುತ್ತಿದೆ. ಅನಿಲ್ ಕಪೂರ್ ಮತ್ತು ಮಾಧುರಿ ದೀಕ್ಷಿತ್ ನಟಿಸಿದ್ದ ಸಿನಿಮಾ ಇದಾಗಿದ್ದು 1988ರಲ್ಲಿ ರಿಲೀಸ್ ಆಗಿತ್ತು. 

2021 ರಲ್ಲಿಯೇ ಅನಿಲ್ ಕಪೂರ್ ಮತ್ತು ಮಾಧುರಿ ದೀಕ್ಷಿತ್ ಅಭಿನಯದ ತೇಜಾಬ್ ಚಿತ್ರದ ಹಕ್ಕನ್ನು ಕಬೀರ್ ಸಿಂಗ್  ನಿರ್ಮಾಣ ಸಂಸ್ಥೆ ಪಡೆದು ಕೊಂಡಿತ್ತು. ಅಂದಹಾಗೆ ಸದ್ಯ ವೈರಲ್ ಆಗಿರುವ ಮಾಹಿತಿ ಪ್ರಕಾರ ಈ ಸಿನಿಮಾದಲ್ಲಿ ಬಾಲಿವುಡ್ ಸ್ಟಾರ್ ರಣ್ವೀರ್ ಸಿಂಗ್ ಮತ್ತು ಜಾನ್ವಿ ಕಪೂರ್ ಕಾಣಿಸಿಕೊಳ್ಳುತ್ತಿದ್ದಾರೆ.  ಸದ್ಯ ಈ ಸಿನಿಮಾದ ಪ್ರಿ ಪ್ರೊಡಕ್ಷನ್ ಕೆಲಸ ನಡೆಯುತ್ತಿದ್ದು ಜಾನ್ವಿ ಮತ್ತು ರಣಬೀರ್ ಕಪೂರ್ ನಟಿಸುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. 

ಅಂದಹಾಗೆ ಈ ಮೊದಲು ನಟಿ ಶ್ರದ್ಧಾ ಕಪೂರ್ ಮತ್ತು ಕಾರ್ತಿಕ್ ಆರ್ಯನ್ ನಟಿಸಲಿದ್ದಾರೆ ಎನ್ನಲಾಗಿತ್ತು. ಆದರೀಗ ಕೆಲವು ಕಾರಣಗಳಿಂದ ಕಾರ್ತಿಕ್ ಮತ್ತು ಶ್ರದ್ಧಾ ಬದಲಿಗೆ ರಣ್ವೀರ್ ಮತ್ತು ಜಾನ್ವಿ ಕಪೂರ್ ಆಯ್ಕೆ ಮಾಡಲಾಗಿದೆ ಎನ್ನಲಾಗಿದೆ. ಅಂದಹಾಗೆ ಈಗಾಗಲೇ ರಣ್ವೀರ್ ಮತ್ತು ಜಾನ್ವಿ ಜೊತೆ ಮಾತುಕತೆ ನಡೆಸಿದ್ದು ಇಬ್ಬರೂ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎನ್ನಲಾಗಿದೆ.  

ರಿಷಬ್ ಶೆಟ್ಟಿ ಜೊತೆ ಸಿನಿಮಾ ಮಾಡ್ಬೇಕು; ಬಾಲಿವುಡ್ ನಟಿ ಜಾನ್ವಿ ಕಪೂರ್

ಆದರೆ ಈ ಬಗ್ಗೆ ಸಿನಿಮಾತಂಡ ಅಥವಾ ರಣ್ವೀರ್ ಕಡೆಯಿಂದ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ. ಸದ್ಯದಲ್ಲೇ ಈ ಬಗ್ಗೆ ಅಧಿಕೃತಗೊಳಿಸುವ ಸಾಧ್ಯತೆ ಇದೆ. ಒಂದು ವೇಳೆ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡರೆ ಮೊದಲ ಬಾರಿಗೆ ಜಾನ್ವಿ, ರಣ್ವೀರ್ ಸಿಂಗ್ ಜೊತೆ ನಟಿಸಲಿದ್ದಾರೆ. ಈ ಫ್ರೆಶ್ ಪೇರ್ ನೋಡಲು ಅಭಿಮಾನಿಗಳು ಸಹ ಕಾಯುತ್ತಿದ್ದಾರೆ. ಈಗಾಗಲೇ ಹಿಟ್ ಆಗಿರುವ ತೇಜಾಬ್ ಸಿನಿಮಾನ್ನು ಹೊಸ ರೀತಿ ಹೇಗೆ ಕಟ್ಟಿಕೊಡಲಿದ್ದಾರೆ ಎನ್ನುವ ಕುತೂಹಲ ಹೆಚ್ಚಾಗಿದೆ.  

ಸರ್ಕಸ್ ಸೋಲಿನ ಬಳಿಕ ಮುಂಬೈ ಬಿಟ್ಟ ರಣ್ವೀರ್ ಸಿಂಗ್; ದೀಪಿಕಾ ಕೈ ಹಿಡಿದು ಹೊರಟ ಫೋಟೋ ವೈರಲ್

ರಣ್ವೀರ್ ಸಿಂಗ್ ಕೊನೆಯದಾಗಿ ಸರ್ಕಸ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಆದರೆ ಈ ಸಿನಿಮಾ ಹೀನಾಯ ಸೋಲು ಕಂಡಿದೆ. ಬಾಕ್ಸ್ ಆಫೀಸ್ ನಲ್ಲೂ ಉತ್ತಮ ಕಮಾಯಿ ಮಾಡಲು ವಿಫಲವಾಗಿದೆ. ಸದ್ಯ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಅಲಿಯಾ ಭಟ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಸದ್ಯದಲ್ಲೇ ಈ ಸಿನಿಮಾ ರಿಲೀಸ್ ಆಗುತ್ತಿದೆ. ಇನ್ನೂ ಜಾನ್ವಿ ಕಪೂರ್ ಕೊನೆಯದಾಗಿ ಮಿಲಿ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಮಿಲಿ ಕೂಡ ಬಾಕ್ಸ್ ಆಫೀಸ್ ನಲ್ಲಿ ಹೀನಾಯ ಸೋಲು ಕಂಡಿದೆ.  ಇದೀಗ ಇಬ್ಬರೂ ಒಟ್ಟಿಗೆ ತೆರೆಮೇಲೆ ಬರಲು ಸಜ್ಜಾಗುತ್ತಿದ್ದಾರೆ. 

Latest Videos
Follow Us:
Download App:
  • android
  • ios