Asianet Suvarna News Asianet Suvarna News

Jacqueline Fernandez: ಮುತ್ತಿನ ಹಿಂದಿದೆ ಕಾಸ್ಟ್ಲಿ ಗಿಫ್ಟ್ಸ್ ಕಥೆ, ನಟಿಗೆ ಸಿಕ್ಕಿದ್ದು 100 ಕೋಟಿಯ ಉಡುಗೊರೆ

  • ಕೋಟ್ಯಾಂತ ವಂಚನೆ ಮಾಡಿರೋ ಆರೋಪಿಯಿಂದ 100 ಕೋಟಿ ಗಿಫ್ಟ್ ಪಡೆದ ಜಾಕ್ವೆಲಿನ್(Jacqueline Fernandez)
  • ಸಿಹಿ ಮುತ್ತಿನ ಹಿಂದಿದೆ ದುಬಾರಿ ಉಡುಗೊರೆಗಳ(Gifts) ಪಟ್ಟಿ
  • 52 ಲಕ್ಷದ ಕುದುರೆ, 9 ಲಕ್ಷದ ಬೆಕ್ಕು, ನಟಿಗೆ ಸಿಕ್ಕಿದ್ದು ಒಂದಾ ಎರಡಾ ?
  • ಆರೋಪಿಯನ್ನೇ ತಬ್ಬಿ ಮುತ್ತಿಟ್ಟ ಶ್ರೀಲಂಕಾ ಸುಂದರಿಗೆ ಸಂಕಟ, ಇದೆಲ್ಲಾ ಬೇಕಿತ್ತಾ ?
Jacqueline Fernandez was gifted 52 lakh worth horse and 9 lakh worth cat by conman Sukesh dpl
Author
Bangalore, First Published Dec 5, 2021, 5:54 PM IST

ನಟಿ ಜಾಕ್ವೆಲಿನ್ ಫರ್ನಾಂಡಿಸ್ ದುಬಾರಿ ಉಡುಗೊರೆಗಳ ಆಸೆಗೆ ಬಿದ್ದು ಈಗ ಸಮಸ್ಯೆಯಲ್ಲಿ ಸಿಲುಕಿದ್ದಾರೆ. ಜಾರಿ ನಿರ್ದೇಶನಾಲಯ ಆರೋಪಿ ಸುಕೇಶ್ ಚಂದ್ರಶೇಖರ್ ಹಾಗೂ ಅತನ ಪತ್ನಿ ಲೀನಾ ಮರಿಯಾ ಪೌಲ್ ಹಾಗೂ ಇನ್ನೂ ಆರು ಮಂದಿಯ ವಿರುದ್ಧ ಬರೋಬ್ಬರಿ 7 ಸಾವಿರ ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. 200 ಕೋಟಿ ಹಣ ವಂಚನೆ ಕೇಸ್‌ನಲ್ಲಿ ಇವರೆಲ್ಲರ ವಿರುದ್ಧ ಕೇಸ್ ದಾಖಲಾಗಿದೆ, ಚಾರ್ಜ್‌ಶೀಟ್ ಪ್ರಕಾರ ಆರೋಪಿ ಸುಕೇಶ್ ತಾನು ಜಾಕ್ವೆಲಿನ್‌ಗೆ ಕೊಟ್ಟ ದುಬಾರಿ ಉಡುಗೊರೆಗಳ ಕುರಿತು ಸೀಕ್ರೆಟ್ ರಿವೀಲ್ ಮಾಡಿದ್ದಾನೆ.

ಶ್ರೀಲಂಕಾ ಸುಂದರಿ ಬಾಲಿವುಡ್‌ನ ಖ್ಯಾತ ನಟಿ ಜಾಕ್ವೆಲಿನ್ ಫರ್ನಾಂಡಿಸ್‌ಗೆ 52 ಲಕ್ಷ ರುಪಾಯಿಯ ಕುದುರೆ ಹಾಗೂ 9 ಲಕ್ಷ ರೂಪಾಯಿಯ ಪರ್ಷಿಯನ್ ಬೆಕ್ಕು ಉಡುಗೊರೆಯಾಗಿ ನೀಡಿರುವುದಾಗಿ ಹೇಳಿದ್ದಾನೆ. ಚಾರ್ಜ್‌ಶೀಟ್‌ನಲ್ಲಿ ನಟಿ ಹಾಗೂ ಡ್ಯಾನ್ಸರ್ ನೋರಾ ಫತೇಹಿ ಅವರ ಹೆಸರನ್ನೂ ನಮೂದಿಸಲಾಗಿದೆ. ನಟಿಗೆ ಸುಕೇಶ್ ಚಂದ್ರಶೇಖರ್ ದುಬಾರಿ ಕಾರು ಉಡುಗೊರೆಯಾಗಿ ನೀಡಿರುವುದಾಗಿ ಹೇಳಿದ್ದಾರೆ.

Jacqueline Fernandez : ತನಗಿಂತ 15 ವರ್ಷ ಹಿರಿಯ ನಿರ್ದೇಶಕನ ಪ್ರೀತಿಗೆ ಬಿದ್ದಳು ಸುಂದರಿ!

ಸ್ಪಷ್ಟನೆ ಕೊಟ್ಟಿದ್ದ ನೋರಾ ಫತೇಹಿ:

ಈ ಹಿಂದೆ ನೋರಾ ಫತೇಹಿ ಬಹುಕೋಟಿ ವಂಚನೆ ಪ್ರಕರಣದಲ್ಲಿ ತನ್ನ ಹೆಸರು ಕೇಳಿ ಬಂದಾಗ ಈ ಬಗ್ಗೆ ಸ್ಪಷ್ಟನೆ ನೀಡಿದ್ದರು. ತಾನು ಯಾವುದೇ ಮನಿ ಲಾಂಡರಿಂಗ್ ಚಟುವಟಿಕೆಯ ಭಾಗವಾಗಿಲ್ಲ ಎಂದು ಹೇಳಿಕೆ ನೀಡಿದ್ದರು. ನೋರಾ ಫತೇಹಿ ಪ್ರಕರಣದ ಸುತ್ತ ಬಲಿಪಶುವಾಗಿದ್ದು, ಸಾಕ್ಷಿಯಾಗಿರುವ ಅವರು ತನಿಖೆಯಲ್ಲಿ ಅಧಿಕಾರಿಗಳಿಗೆ ಸಹಕರಿಸುತ್ತಿದ್ದಾರೆ. ಸಹಾಯ ಮಾಡುತ್ತಿದ್ದಾರೆ. ಆಕೆ ಯಾವುದೇ ಮನಿ ಲಾಂಡರಿಂಗ್ ಚಟುವಟಿಕೆಯ ಭಾಗವಾಗಿಲ್ಲ, ಆಕೆಗೆ ಆರೋಪಿಗಳೊಂದಿಗೆ ಯಾವುದೇ ವೈಯಕ್ತಿಕ ಸಂಪರ್ಕವಿಲ್ಲ. ತನಿಖೆಗೆ ಕಟ್ಟುನಿಟ್ಟಾಗಿ ಸಹಾಯ ಮಾಡಲು ಇಡಿ ಕರೆ ಮಾಡಿದೆ ಎಂದು ನಾವು ಸ್ಪಷ್ಟವಾಗಿ ಹೇಳಲು ಬಯಸುತ್ತೇವೆ ಎನ್ನಲಾಗಿತ್ತು.

ಸುಕೇಶ್ ಚಂದ್ರಶೇಖರ್ ಅವರ ಪತ್ನಿ ಲೀನಾ ಮರಿಯಾ ಪೌಲ್ ಅವರು ಆಹ್ವಾನಿಸಿದ ನಂತರ ನೋರಾ ಫತೇಹಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಸಮಾರಂಭದಲ್ಲಿ ನಟಿಗೆ ದುಬಾರಿ ಕಾರನ್ನು ಉಡುಗೊರೆಯಾಗಿ ನೀಡಲಾಯಿತು ಎಂದು ಹೇಳಲಾಗಿದೆ.

Jacqueline Fernandez was gifted 52 lakh worth horse and 9 lakh worth cat by conman Sukesh dpl

ದೆಹಲಿ ಪೊಲೀಸರ ಆರ್ಥಿಕ ಅಪರಾಧ ವಿಭಾಗ ಸುಕೇಶ್ ಚಂದ್ರಶೇಖರ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ರಾನ್‌ಬಾಕ್ಸಿಯ ಮಾಜಿ ಪ್ರವರ್ತಕರು, ಶಿವಿಂದರ್ ಸಿಂಗ್ ಮತ್ತು ಮಲ್ವಿಂದರ್ ಸಿಂಗ್ ಅವರ ಸಂಗಾತಿಗಳಿಗೆ ₹200 ಕೋಟಿ ವಂಚಿಸಿದ್ದಾರೆ ಎಂದು ಆರೋಪದ ಮೇಲೆ ಕೇಸ್ ದಾಖಲಿಸಲಾಗಿತ್ತು. ಪೊಲೀಸ್ ಎಫ್ಐಆರ್ ಆಧರಿಸಿ ಜಾರಿ ನಿರ್ದೇಶನಾಲಯ ಕೇಸ್ ದಾಖಲಿಸಿತ್ತು. ಪ್ರಕರಣದಲ್ಲಿ ವ್ಯಕ್ತಿಯು ಗೃಹ ಸಚಿವಾಲಯದ ಅಧಿಕಾರಿಯಾಗಿ ತನ್ನನ್ನು ತಾನು ಪರಿಚಯಿಸಿಕೊಂಡು ಪ್ರಕರಣದಲ್ಲಿ ಪತಿಯಂದಿರನ್ನು ಬಿಡುಗಡೆ ಮಾಡಲು ನೆರವಾಗುವುದಾಗಿ ವಂಚಿಸಿದ್ದರು. ಈ ವಿಚಾರವಾಗಿ ಸುಕೇಶ್ 2019ರಲ್ಲಿ ಅರೆಸ್ಟ್ ಆಗಿದ್ದರು.  ರೆಲಿಗೇರ್ ಫಿನ್‌ವೆಸ್‌ ಲಿಮಿಟೆಡ್‌ಗೆ 2000 ಕೋಟಿ ವಂಚಿಸಿದ್ದರು.

ತಿಹಾರ್ ಜೈಲಿನ ಸಿಬ್ಬಂದಿಗೇ ಲಂಚ:

ವಿಚಾರಣೆ ವೇಳೆ ಸುಕೇಶ್ ಅವರು ಜೈಲಿನಿಂದ ತನ್ನ ಸುಲಿಗೆ ದಂಧೆ ನಡೆಸಲು ತಿಹಾರ್ ಜೈಲು ಸಿಬ್ಬಂದಿಗೆ ಕೋಟ್ಯಂತರ ರೂಪಾಯಿ ಲಂಚ ನೀಡಿರುವುದಾಗಿ ಹೇಳಿಕೊಂಡಿದ್ದಾರೆ. ಸುಲಿಗೆ ದಂಧೆ ನಡೆಸಲು ಚಂದ್ರಶೇಖರ್‌ಗೆ ಸಹಾಯ ಮಾಡಿದ್ದಕ್ಕಾಗಿ ಐವರು ಹಿರಿಯ ಜೈಲು ಅಧಿಕಾರಿಗಳನ್ನು ಬಂಧಿಸಲಾಗಿದೆ.

Jacqueline Fernandez was gifted 52 lakh worth horse and 9 lakh worth cat by conman Sukesh dpl

ಚಂದ್ರಶೇಖರ್ ಅವರ ಪತ್ನಿ ಪೌಲ್ ಅವರ ಸೂಚನೆ ಮೇರೆಗೆ ಹಣ ವರ್ಗಾವಣೆ ಮಾಡಲಾಗುತ್ತಿದೆ ಎಂದು ಇಡಿ ಈ ಹಿಂದೆ ನ್ಯಾಯಾಲಯಕ್ಕೆ ತಿಳಿಸಿತ್ತು. ತನಿಖೆಯ ಸಂದರ್ಭದಲ್ಲಿ, ಚಂದ್ರಶೇಖರ್ ಮತ್ತು ಅವರ ಸಹಚರರಿಗೆ ಸಂಬಂಧಿಸಿದ ವಿವಿಧ ಸ್ಥಳಗಳಲ್ಲಿ ಶೋಧ ನಡೆಸಲಾಗಿದ್ದು, 6 ಅತ್ಯಾಧುನಿಕ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾರುಗಳು ಪೌಲ್ ಅವರ ಸಂಸ್ಥೆಗಳ ಹೆಸರಿನಲ್ಲಿ ಅಥವಾ ಮೂರನೇ ವ್ಯಕ್ತಿಗಳ ಹೆಸರಿನಲ್ಲಿವೆ. ಪೌಲ್ ಮತ್ತು ಚಂದ್ರಶೇಖರ್ ಇತರರು ಹವಾಲಾ ಮಾರ್ಗಗಳನ್ನು ಬಳಸುತ್ತಿದ್ದರು. ಅಪರಾಧದ ಆದಾಯದಿಂದ ಗಳಿಸಿದ ಹಣವನ್ನು ನಿಲುಗಡೆ ಮಾಡಲು ಶೆಲ್ ಕಂಪನಿಗಳನ್ನು ರಚಿಸಿದ್ದಾರೆ ಎಂದು ದೆಹಲಿ ಪೊಲೀಸರು ಆರೋಪಿಸಿದ್ದಾರೆ..

Follow Us:
Download App:
  • android
  • ios