Asianet Suvarna News Asianet Suvarna News

ಹುಟ್ಟುಹಬ್ಬದ ಸಂಭ್ರಮದಲ್ಲಿ ಸತ್ಯ ಸೀರಿಯಲ್​ ಊರ್ಮಿಳಾ: ನಟಿಯ ಕುರಿತು ಇಂಟರೆಸ್ಟಿಂಗ್​ ಮಾಹಿತಿ...

ಸತ್ಯ ಸೀರಿಯಲ್​ನಲ್ಲಿ ಊರ್ಮಿಳಾ ಪಾತ್ರಧಾರಿಯಾಗಿರುವ ಶಾಲಿನಿ ರಾವ್​ ಅವರ ಹುಟ್ಟುಹಬ್ಬವಿಂದು. ಈ ಸಮಯದಲ್ಲಿ ಅವರ ಕುರಿತು ಕೆಲವು ಇಂಟರೆಸ್ಟಿಂಗ್​ ಮಾಹಿತಿ... 
 

It is the birthday of Shalini Rao who plays the role of Urmila in Satya serial suc
Author
First Published Nov 20, 2023, 4:37 PM IST

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಸತ್ಯ ಸೀರಿಯಲ್​ ಈಗ ಮಹತ್ವದ ಘಟ್ಟಕ್ಕೆ ಬಂದು ತಲುಪಿದೆ. ಸತ್ಯ ಮತ್ತು ಅತ್ತೆ ಸೀತಾ ನಡುವೆ ಇದ್ದ ವೈಮನಸ್ಸು ದೂರವಾಗಿದೆ. ಆದರೆ ಸದಾ ಶ್ರೀಮಂತಿಕೆಯ ಕನಸು ಕಾಣುತ್ತಾ ಶ್ರೀಮಂತನೆಂದು ನಂಬಿ ಬಾಲನನ್ನು ಮದುವೆಯಾಗಿ ಸತ್ಯಳ ಅಕ್ಕ ದಿವ್ಯಾ ಕಂಗೆಟ್ಟು ಹೋಗಿದ್ದಾಳೆ. ರೌಡಿಯಾಗಿದ್ದ ಬಾಲ ಒಳ್ಳೆಯ ಹಾದಿ ಹಿಡಿದು ಬೋಂಡಾ ಬಜ್ಜಿ ಅಂಗಡಿ ಶುರುವಿಟ್ಟುಕೊಂಡಿದ್ದಾನೆ. ಗಂಡ ಹೇಗಾದರೂ ಸರಿ, ರೌಡಿಸಂ ಮಾಡಿಯಾದ್ರೂ ಸರಿ... ತಾನು ಹೇಳದ್ದನ್ನೆಲ್ಲಾ ತಂದುಕೊಡಬೇಕು ಎಂದು ಅಂದುಕೊಂಡಿದ್ದ ದಿವ್ಯಾಗೆ ಈ ಅಂಗಡಿ ನೋಡಿ ಸಿಟ್ಟುಬಂದಿದೆ. ಒಳ್ಳೆಯತನಕ್ಕೆ ಒಳ್ಳೆಯದೇ ಆಗುತ್ತದೆ ಎಂದು ಈ ಧಾರಾವಾಹಿ ಹೇಳುತ್ತಲೇ ಸಾಗಿದೆ. ಅದೇ ಇನ್ನೊಂದೆಡೆ, ಧಾರಾವಾಹಿಯಲ್ಲಿ ತುಂಬಾ ಒಳ್ಳೆಯ ಪಾತ್ರಧಾರಿಯಾಗಿದ್ದ ಊರ್ಮಿಳಾಗೆ ಮಾತ್ರ ಸಂಕಟ ಎದುರಾಗಿದೆ. ಗಂಡನಿಗೆ ಮತ್ತೊಂದು ಮದುವೆಯಾಗಿದ್ದು, ಒಂದು ಮಗು ಕೂಡ ಇದೆ ಎನ್ನುವ ಸತ್ಯ ಈ ಊರ್ಮಿಳಾಗೆ ಗೊತ್ತಿಲ್ಲ. ಈ ಟ್ವಿಸ್ಟ್​ ಧಾರಾವಾಹಿ ಪಡೆದುಕೊಂಡಿದ್ದು, ಮುಂದೇನಾಗುತ್ತದೆ ಎಂದು ಧಾರಾವಾಹಿ ಪ್ರಿಯರು ಕಾಯುತ್ತಿದ್ದಾರೆ.

ಅಂದಹಾಗೆ ಈ ಸೀರಿಯಲ್​ನಲ್ಲಿ ಊರ್ಮಿಳಾ ಪಾತ್ರಧಾರಿಯಾಗಿರುವವರ ರಿಯಲ್​ ಹೆಸರು ಶಾಲಿನಿ ಎಸ್. ರಾವ್. ಸತ್ಯ ಸೀರಿಯಲ್​ನಲ್ಲಿ ಸತ್ಯಳ ಚಿಕ್ಕತ್ತೆಯ ಪಾತ್ರ ಇವರದ್ದು. ರಗಡ್​ ಎನಿಸಿಕೊಂಡಿರುವ ಸತ್ಯ ಅಚಾನಕ್​ ಆಗಿ ಸಂಪ್ರದಾಯಬದ್ಧ ಕುಟುಂಬದ ಸೊಸೆಯಾಗುವ ಅನಿವಾರ್ಯತೆ ಎದುರಾಗುತ್ತದೆ. ಚಿಕ್ಕ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡು, ತಂದೆಯ ಬೈಕ್​ ರಿಪೇರಿ ಅಂಗಡಿಯನ್ನು ಮುನ್ನಡೆಸುತ್ತಾ, ಗಂಡುಬೀರಿಯಂತೆ ಬೆಳೆದು ಸದಾ ನಟ್ಟು, ಬೋಲ್ಟು ಎನ್ನುತ್ತಿದ್ದ ಸತ್ಯ ಈ ಸಂಪ್ರದಾಯಸ್ಥ ಕುಟುಂಬಕ್ಕೆ ಹೊಂದಿಕೊಳ್ಳಲು ಪ್ರಯತ್ನಪಟ್ಟರೂ, ಪತಿ ಸೇರಿದಂತೆ ಎಲ್ಲರೂ ಈಕೆಯ ವಿರೋಧಿಗಳೇ. ಆದರೆ ಆ ಸಮಯದಲ್ಲಿಯೂ ಸತ್ಯಳ ಪರವಾಗಿ ನಿಲ್ಲುವವರು ಆಕೆಯ ಮಾವ ಹಾಗೂ ಇದೇ ಚಿಕ್ಕತ್ತೆ ಊರ್ಮಿಳಾ. ಇದೀಗ ಎಲ್ಲರೂ ಸತ್ಯಳನ್ನು ಒಪ್ಪಿಕೊಳ್ಳುವಲ್ಲಿ ಮಹತ್ವದ ಪಾತ್ರವನ್ನು ವಹಿಸುವ ಪಾತ್ರಧಾರಿ ಊರ್ಮಿಳಾ.

ಕನ್ನಡದಿಂದ ತೆಲುಗು ಬಣ್ಣದ ಲೋಕಕ್ಕೆ ಹಾರಿದ ಸತ್ಯ ಸೀರಿಯಲ್​ ಅಮುಲ್​ ಬೇಬಿ!

ಇಂದು ಊರ್ಮಿಳಾ ಅರ್ಥಾತ್​ ಶಾಲಿನಿ ಎಸ್. ರಾವ್. ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಕಳೆದ 20 ವರ್ಷಗಳಿಂದ ಕನ್ನಡ ಕಿರುತೆರೆಯಲ್ಲಿರುವ ನಟಿಗೆ ಹೆಚ್ಚು ಹೆಸರು ತಂದುಕೊಟ್ಟಿರುವ ಸೀರಿಯಲ್​ ಸತ್ಯ. ಅವರು ಹುಟ್ಟುಹಬ್ಬದ ಸಂದರ್ಭದಲ್ಲಿ ಕೆಲವೊಂದು ಕುತೂಹಲದ ವಿಷಯಗಳು ಬೆಳಕಿಗೆ ಬಂದಿವೆ. ಅದೇನೆಂದರೆ, ಶಾಲಿನಿ ಅವರು, ಬಣ್ಣ ಹಚ್ಚಿದ್ದು, ಅವರು ಏಳನೇ ತರಗತಿಯಲ್ಲಿದ್ದಾರೆ. ಆಗ ಅವರು 'ವಠಾರ' ಧಾರಾವಾಹಿಯಲ್ಲಿ ನಟಿಸಿದ್ದರು. ಮೂರು ವರ್ಷ ನಡೆದ ಈ ಧಾರಾವಾಹಿ ಮುಗಿಯುವವರೆಗೆ ಶಾಲಿನಿ 10ನೇ ತರಗತಿ ತಲುಪಿದ್ದರು. ಈಗಲೇ ತಮ್ಮನ್ನು ಇದೇ ಧಾರಾವಾಹಿ ಮೂಲಕ ಹೆಚ್ಚು ಮಂದಿ ಗುರುತಿಸುತ್ತಾರೆ ಎನ್ನುತ್ತಾರೆ ಶಾಲಿನಿ.

 ಈಗ ಇವರು 'ಬ್ರಾಹ್ಮಿನ್ಸ್ ಕೆಫೆ'ಯಲ್ಲಿ ಯಶೋಧಾ ಆಗಿ ನಟಿಸುತ್ತಿದ್ದಾರೆ. ಇದಾಗಲೇ  ವಠಾರ ಸೇರಿದಂತೆ  ಕಸ್ತೂರಿ, ಸುಕನ್ಯ, ಆಕಾಂಕ್ಷಾ, ನೀ ನಡೆದ ದಾರಿಯಲ್ಲಿ, ಪುಣ್ಯಕೋಟಿ, ಮನೆಯೊಂದು ಮೂರು ಬಾಗಿಲು, ಮಹಾತಾಯಿ, ಒಲವೇ ಜೀವನ ಸೇರಿದಂತೆ 30ಕ್ಕೂ ಅಧಿಕ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಅಷ್ಟೇ ಅಲ್ಲದೇ,  ದೂರದರ್ಶನದಲ್ಲಿ ಮೂಡಿ ಬಂದ 'ಥ್ಯಾಂಕ್ಯೂ ಸರು' ಎಂಬ ಧಾರಾವಾಹಿಯಲ್ಲಿ ತಾರಾ ಅವರ ಮಗಳಾಗಿ ನಟಿಸಿದ್ದರು. ಆಮೇಲೆ ಅನೇಕ ಸೀರಿಯಲ್​ಗಳಲ್ಲಿ ನಟಿಸಿದ್ದರು. ನಂತರ  ಸುಮಾರು ಹತ್ತು ವರ್ಷ ಬಣ್ಣದ ಲೋಕದಿಂದ ದೂರ ಉಳಿದು, ಬಳಿಕ  'ಮಮತೆಯ ಕರೆಯೋಲೆ' ಧಾರಾವಾಹಿ ಮೂಲಕ ಮತ್ತೆ ಮರಳಿ ಈಗ ಸತ್ಯ ಸೀರಿಯಲ್​ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ನಿಜ ಜೀವನದ ಸತ್ಯಾಳ ರೂಪ ನೋಡಿರುವಿರಾ? ರೀಲ್​ ಲೈಫ್​ ಗಂಡ ಕಾರ್ತಿಕ್​ ಜೊತೆ ಬೊಂಬೆ ಹಾಡಿಗೆ ಬೊಂಬಾಟ್​ ಡ್ಯಾನ್ಸ್​​
 
 ಇವರು ಫ್ಯಾಷನ್​ ಡಿಸೈನರ್​ ಕೂಡ ಹೌದು. ಈಗಲೂ ಇವರು ತಮ್ಮ ಬ್ಲೌಸ್‌ಗಳನ್ನು ತಾವೇ ಸ್ಟಿಚ್ ಮಾಡಿಕೊಳ್ಳುತ್ತಾರೆ. ಡಿಸೈನರ್ ಆಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಂದ ಹಾಗೆ ಇವರು ಮಾಡಿರುವ ಸೀರಿಯಲ್​ಗಳಲ್ಲಿ ಇವರಿಗೆ ಸಿಕ್ಕಿದ್ದು ಪಾಸಿಟಿವ್​ ರೋಲ್​ಗಳೇ. ಆದ್ದರಿಂದ ಒಮ್ಮೆಯಾದರೂ ನೆಗೆಟಿವ್​ ರೋಲ್​ ಮಾಡುವ ಆಸೆ ಇದೆ ಎಂದಿದ್ದಾರೆ. ಇವರ ಹುಟ್ಟುಹಬ್ಬದ ಈ ಆಸೆಯೂ ಈಡೇರಲಿ ಎಂದು ಫ್ಯಾನ್ಸ್​ ವಿಷ್​ ಮಾಡುತ್ತಿದ್ದಾರೆ.  
 
 

Follow Us:
Download App:
  • android
  • ios