Asianet Suvarna News Asianet Suvarna News

ಕನ್ನಡದಿಂದ ತೆಲುಗು ಬಣ್ಣದ ಲೋಕಕ್ಕೆ ಹಾರಿದ ಸತ್ಯ ಸೀರಿಯಲ್​ ಅಮುಲ್​ ಬೇಬಿ!

ಕನ್ನಡದಿಂದ ತೆಲುಗು ಬಣ್ಣದ ಲೋಕಕ್ಕೆ ಹಾರಿದ್ದಾರೆ ಸತ್ಯ ಸೀರಿಯಲ್​ ಅಮುಲ್​ ಬೇಬಿ ಅಲಿಯಾಸ್​ ಸಾಗರ್​ ಬಿಳಿಗೌಡ. 
 

Satya serial Amul Baby alias Sagar Biligowda in Telugu Serial suc
Author
First Published Nov 19, 2023, 5:29 PM IST

ಜೀ ಕನ್ನಡ ಚಾನೆಲ್​ನಲ್ಲಿ ಪ್ರಸಾರ ಆಗ್ತಿರೋ ಸತ್ಯ ಸೀರಿಯಲ್​ ಧಾರಾವಾಹಿಯಲ್ಲಿನ  ಅಮುಲ್​ ಬೇಬಿಯ (Amul Baby) ಮುಗ್ಧತೆ ಬಗ್ಗೆ ಹೇಳಬೇಕಾಗಿಲ್ಲ.  ಮುಗ್ಧ ಹುಡುಗನಾಗಿ, ಅಮ್ಮನ ಮುದ್ದಿನ ಮಗನಾಗಿ ಅಭಿನಯಿಸುತ್ತಿದ್ದಾರೆ.  ತಮ್ಮ ನಟನೆ ಮೂಲಕ ಜನರಿಗೆ ಹತ್ತಿರವಾಗ್ತಿರೋ ಕಾರ್ತಿಕ್​ ಕ್ಯೂಟ್​ ನಗು ಎಂದರೆ ಎಲ್ಲರಿಗೂ ಬಹಳ ಇಷ್ಟ ಎಂದೇ ಹೇಳಬೇಕು. ಚಿಕ್ಕಮಕ್ಕಳಂತೆ ಮುದ್ದು ಮುದ್ದಾಗಿ ನಗುತ್ತಾ ಧಾರಾವಾಹಿಯಲ್ಲಿ ಎಲ್ಲರನ್ನೂ ಮರಳುಗೊಳಿಸುತ್ತಾರೆ ಇವರು. ಪತ್ನಿ ಸತ್ಯ ಬಾಯಲ್ಲಿ ಕಾರ್ತಿಕ್​ ಪ್ರೀತಿಯ ಹೆಸರು ಅಮುಲ್​ ಬೇಬಿ.  ಈ ಪಾತ್ರಕ್ಕೆ ತಕ್ಕಂತೆ ಮುಗ್ಧ ಮುಖ ಹೊಂದಿರೋ ಕಾರ್ತಿಕ್​ ನಿಜವಾದ ಹೆಸರು ಸಾಗರ್​ ಬಿಳಿಗೌಡ. ಅಂದಹಾಗೆ  ಕಾರ್ತಿಕ್ ಅವರು  ಸಾಫ್ಟವೇರ್ (Software) ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಧಾರಾವಾಹಿಯಲ್ಲಿ ನಟಿಸುವ ಅವಕಾಶ ಸಿಕ್ಕಬಳಿಕ ಕೆಲಸ ಬಿಟ್ಟು ಧಾರಾವಾಹಿಯಲ್ಲಿಯೇ ತೊಡಗಿಸಿಕೊಂಡಿದ್ದಾರೆ. 

ಇವರಿಗೆ ಮೊನ್ನೆ ತಾನೇ ನಡೆದ ಜೀ ಕುಟುಂಬ ಅವಾರ್ಡ್ಸ್​ನಲ್ಲಿ  ನೆಚ್ಚಿನ ಅಳಿಯ ಪ್ರಶಸ್ತಿ ಕೂಡ ಲಭಿಸಿದೆ. ಇದೀಗ ಬಂದಿರುವ ಹೊಸ ಸುದ್ದಿ ಏನೆಂದರೆ, ಸಾಗರ್​ ಅವರು  ತೆಲುಗು ಬಣ್ಣದ ಲೋಕಕ್ಕೆ ಎಂಟ್ರಿ ಕೊಡಲು ರೆಡಿಯಾಗಿದ್ದಾರೆ. ಸತ್ಯ ಧಾರಾವಾಹಿಗೂ ಮೊದಲು ಅವರು,  'ಕಿನ್ನರಿ', 'ಮನಸಾರೆ'ಯಲ್ಲಿಯೂ ನಟಿಸಿದ್ದರು. ಇದೀಗ  ತೆಲುಗಿನ ಜೆಮಿನಿ ಟಿವಿಯಲ್ಲಿ ಪ್ರಸಾರವಾಗುತ್ತಿರುವ 'ಒಂಟರಿ ಗುಲಾಬಿ' ಧಾರಾವಾಹಿಯಲ್ಲಿ ನಾಯಕನಾಗಿ ನಟಿಸಲಿದ್ದಾರೆ. ಈ ಕುರಿತು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿಯೂ ಶೇರ್​ ಮಾಡಿಕೊಂಡಿದ್ದಾರೆ. 'ಒಂಟರಿ ಗುಲಾಬಿ' ಧಾರಾವಾಹಿಯಲ್ಲಿ ನಾಯಕ ಬಾಲು ಪಾತ್ರದಲ್ಲಿ  ರಾಹುಲ್ ರವಿ ಅಭಿನಯಿಸುತ್ತಿದ್ದಾರೆ. ಆದರೆ ಅವರು ನಾಯಕನ ರೋಲ್​ನಿಂದ ಹೊರಕ್ಕೆ ಹೋಗಿದ್ದು, ಅವರ ಜಾಗಕ್ಕೆ ಸಾಗರ್​ ಅವರು ಎಂಟ್ರಿ ಕೊಡಲಿದ್ದಾರೆ.
 
ಭಾರತಕ್ಕೆ ಗುಡ್​​ಬೈ ಹೇಳ್ತಾರಾ ನಟಿ ಪ್ರಿಯಾಂಕಾ ಚೋಪ್ರಾ? ಮುಂಬೈ ಬಂಗ್ಲೆ ಸೇಲ್​! 

 ಇನ್ನು ಸಾಗರ್​ ಅವರ ವೈಯಕ್ತಿಕ ಜೀವನದ ಕುರಿತು ಹೇಳುವುದಾದರೆ,  ಕಳೆದ ಜನವರಿ 20ರಂದು ಸಾಗರ್​ ಅವರು  ಸಿರಿ ಎನ್ನುವವರ ಜೊತೆ ದಾಂಪತ್ಯಜೀವನಕ್ಕೆ ಕಾಲಿಟ್ಟಿದ್ದಾರೆ. ಸಿರಿ ಮತ್ತು ಸಾಗರ್ ಅವರದ್ದು ಪ್ರೇಮ ವಿವಾಹ. ಇಬ್ಬರೂ ತಮ್ಮ ಪ್ರೀತಿ ವಿಚಾರವನ್ನು ಮದುವೆಗೆ ಕೆಲ ದಿನಗಳ ಮುಂಚೆಯಷ್ಟೇ  ಫೋಟೋ ಶೇರ್ ಮಾಡುವ ಮೂಲಕ ಅಧಿಕೃತ ಗೊಳಿಸಿದ್ದರು. ಬಳಿಕ ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ಜೋಡಿ  ಹಸೆಮಣೆ ಏರಿದೆ.  ಸಿರಿ ರಾಜು ಕೂಡ ಮಾಡೆಲ್ ಕಮ್ ನಟಿ. ಇವರು ಉದ್ಯಮಿ ಕೂಡ ಹೌದು. ಸಿರಿ ರಾಜು ಅವರು ಈವೆಂಟ್ ಕಂಪನಿಯನ್ನ ನಡೆಸುತ್ತಿದ್ದಾರೆ. ವಿಜಯ್ ರಾಘವೇಂದ್ರ ಜೊತೆಗೆ FIR 6 to 6 ಸಿನಿಮಾದಲ್ಲಿ ಸಿರಿ ರಾಜು ಅಭಿನಯಿಸುತ್ತಿದ್ದಾರೆ. ಇನ್ನು ಕೆಲವು ವೆಬ್ ಸೀರೀಸ್ ಗಳಲ್ಲೂ ನಟಿಸಿದ್ದಾರೆ.

   ಧಾರಾವಾಹಿಯಲ್ಲಿ ನಟರಾಗಲು ಬಂದು ಬೇಸರದಿಂದ ಖಿನ್ನತೆಗೆ ಜಾರುವ ಯುವಕರ ಬಗ್ಗೆ ಮಾತನಾಡಿದ್ದ ಸಾಗರ್​ ಅವರು,  ನಟನಾಗುವ ಕನಸು ಹೊತ್ತು ತುಂಬಾ ಮಂದಿ ಆಡಿಷನ್​ಗೆ ಹೋಗುತ್ತಾರೆ. ಅಲ್ಲಿ ಸೆಲೆಕ್ಟ್​ ಆಗಿಲ್ಲ ಎಂದರೆ ಬೇಸರಪಟ್ಟುಕೊಳ್ಳುತ್ತಾರೆ. ಆದರೆ ಇದು ಸರಿಯಲ್ಲ.  ಆ್ಯಕ್ಟರ್​ ಆಗುವ ಆಸೆ ಹೊಂದಿರುವವರು ಮೊದಲು ಆ್ಯಕ್ಟಿಂಗ್​ ಮಾಡುವುದನ್ನು ಕಲಿಯಬೇಕು. ಅವಕಾಶಗಳು ತುಂಬಾ ಇರುತ್ತವೆ. ಎಲ್ಲಿಯಾದರೂ ಅವಕಾಶ ಸಿಕ್ಕೇ ಸಿಗುತ್ತದೆ ಎಂದಿದ್ದರು. ಇದೇ ವೇಳೆ ಸತ್ಯ ಸೀರಿಯಲ್​ನಲ್ಲಿ ತಾವು ಕ್ಯೂಟ್​ ಆಗಿ ನಗಲು ಪಟ್ಟ ಶ್ರಮದ ಬಗ್ಗೆಯೂ ಮಾಹಿತಿ ಶೇರ್ ಮಾಡಿಕೊಂಡಿದ್ದರು.  ನಿರ್ದೇಶಕರು ಕ್ಯೂಟ್​ ಆಗಿ ನಗಲು ಹೇಳಿದ್ದಂತೆ. ಆದರೆ ಕ್ಯೂಟ್​ ಹೇಗೆ ಎನ್ನುವುದೇ ತಮಗೆ ತಿಳಿದಿಲ್ಲ ಎಂದು ಸಾಗರ್​ ಹೇಳಿದ್ದರು.  ತಾವು ಹೇಗೆಲ್ಲಾ ನಕ್ಕು ತೋರಿಸಿದ್ರೂ ಅದು ಕ್ಯೂಟ್​ ಎನಿಸಿರಲಿಲ್ಲ. ಆಮೇಲೆ ಕ್ಯೂಟ್​ ಆಗಿ ನಗೋದು ಹೇಗೆ ಅಂತಾನೇ ಗೊತ್ತಾಗ್ತಿಲ್ಲ ಎಂದೆ. ನಂತರ ನಿರ್ದೇಶಕರು ಮಗುವನ್ನು ನೋಡಿ, ಅದಕ್ಕೆ ತಾನು ಯಾಕೆ ನಗ್ತೇನೆ ಅಂತಾನೇ ಗೊತ್ತಿರಲಿಲ್ಲ. ಅದರಲ್ಲಿ ಮುಗ್ಧತೆ, ಕ್ಯೂಟ್​ನೆಸ್​ ಇರುತ್ತದೆ. ಅದನ್ನು ನೋಡಿ ಹಾಗೆಯೇ ನಗಬೇಕು ಎಂದಾಗ ನಾನು ಪ್ರಾಕ್ಟೀಸ್​ ಮಾಡಿಕೊಂಡೆ ಎಂದಿದ್ದರು.

ಭೂತ-ಪ್ರೇತಗಳ ದ್ವೀಪದಲ್ಲಿ ಡಾ.ಬ್ರೋ! ಹತ್ರ ಹೋದ್ರೆ ಅಲ್ಲೇ ಮಿಸ್ಸಿಂಗ್​, ವಾಪಸಾಗೋ ಮಾತೇ ಇಲ್ಲ...

 
 
 
 
 
 
 
 
 
 
 
 
 
 
 

A post shared by Gemini TV (@geminitv)

Follow Us:
Download App:
  • android
  • ios