ಸತ್ಯಾ ಸೀರಿಯಲ್​ ಗೌತಮಿ ಜಾಧವ್​ ರಿಯಲ್​ ಲೈಫ್​ನಲ್ಲಿ ಕಾಣಿಸಿಕೊಂಡು ಭರ್ಜರಿ ಡ್ಯಾನ್ಸ್​ ಮಾಡಿದ್ದಾರೆ. 

ಗಂಡುಬೀರಿಯಂತೆ ಡ್ರೆಸ್ಸು, ನಾಜೂಕತನವಂತೂ ಗೊತ್ತೇ ಇಲ್ಲ. ಅಪ್ಪ ಸತ್ತ ಬಳಿಕ ಬೈಕ್​ ರಿಪೇರಿ ಅಂಗಡಿಯನ್ನು ಮುನ್ನಡೆಸುವುದು ಮಾತ್ರವಲ್ಲದೇ ಇಡೀ ಕುಟುಂಬದ ನೊಗ ಹೊತ್ತ ಹೆಣ್ಣುಮಗಳೊಬ್ಬಳು, ಸಂಪ್ರದಾಯಸ್ಥ ಕುಟುಂಬದ ಸೊಸೆಯಾಗಿ ಅಚಾನಕ್​ ಆಗಿ ಹೋಗಿ ಎದುರಿಸುವ ಸಂಕಷ್ಟಗಳು, ಸಂಪ್ರದಾಯ ಬದ್ಧ ಅತ್ತೆಯ ಮನಸ್ಸನ್ನು ಗೆಲ್ಲಲು ಪರದಾಟ, ಗಂಡನಿಗೂ ಬೇಡವಾಗಿ, ಅತ್ತೆಗೂ ಬೇಡವಾದ ರಗಡ್​ ಹೆಣ್ಣುಮಗಳೊಬ್ಬಳು ಕೊನೆಗೆ ಸಂಪ್ರದಾಯಸ್ಥಳಾಗಿ ಬದಲಾಗಿ ಎಲ್ಲರನ್ನೂ ಒಲಿಸಿಕೊಂಡಿದ್ದಾಳೆ. ಇವಳೇ ಜೀ ಕನ್ನಡ ವಾಹಿನಿಯ ಸತ್ಯಾ ಸೀರಿಯಲ್​ ಸತ್ಯಾ. ಈಕೆಯ ರಿಯಲ್​ ಹೆಸರು ಗೌತಮಿ ಜಾಧವ್. 'ಸತ್ಯಾ' ಸೀರಿಯಲ್ ನ ಟಾಮ್ ಬಾಯ್ ಪಾತ್ರಕ್ಕೆ ಜೀವದುಂಬಿ ನಟಿಸುತ್ತಿದ್ದಾರೆ. ಪಕ್ಕಾ ಟಾಮ್ ಬಾಯ್ ಪಾತ್ರವಿದು. ಬಾಯ್ ಕಟ್ ಹೇರ್, ಟೀ ಶರ್ಟ್ ಮೇಲೊಂದು ಅಂಗಿ ತೊಟ್ಟು ಬುಲೆಟ್ ಏರಿ ಪಕ್ಕಾ ರೌಡಿ ಸ್ಟೈಲ್ ನಲ್ಲಿ ಎಂಟ್ರಿ ಕೊಡೋ ಸತ್ಯ ಇಡೀ ಕನ್ನಡ ಸೀರಿಯಲ್ಗೇ ಡಿಫರೆಂಟ್ ಲುಕ್​ನಲ್ಲಿ ಇರುವವಳು. ಆತ್ಮ ವಂಚನೆ ಮಾಡಿಕೊಳ್ಳದೇ ನೇರವಾಗಿ ಅನಿಸಿದ್ದನ್ನು ಮಾಡೋಳು. ಈ ಪಾರ್ಟನ್ನು ಮಾಡುತ್ತಿರುವ ಸತ್ಯಾ ರಿಯಲ್​ ಆಗಿ ಹೇಗಿರಬಹುದು ಎಂಬ ಆಸೆ ಹಲವರದ್ದು.

ಅದನ್ನು ನೋಡುವ ಭಾಗ್ಯವನ್ನು ಸತ್ಯಾ ಫ್ಯಾನ್ಸ್​ಗೆ ಕಲ್ಪಿಸಿದೆ ಜೀ ಕುಟುಂಬ ಅವಾರ್ಡ್​. ಜೀ ಕನ್ನಡ ವಾಹಿನಿ ನವೆಂಬರ್​ 10 ಮತ್ತು 11ರಂದು ನಡೆಸಿದ್ದ ಜೀ ಕುಟುಂಬ ಅವಾರ್ಡ್​ ಪ್ರಶಸ್ತಿ ಪ್ರದಾನ ಸಮಾರಂಭ ನಡೆಸಿತು. ಇದರಲ್ಲಿ ಜೀ ವಾಹಿನಿಯ ಸೀರಿಯಲ್​ ನಟ-ನಟಿಯರು ಹಾಗೂ ತಂತ್ರಜ್ಞರು ಸೇರಿದಂತೆ ಧಾರಾವಾಹಿಯ ತೆರೆ ಮರೆಯಲ್ಲಿ ಶ್ರಮಿಸಿರುವವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಸಂದರ್ಭದಲ್ಲಿ ಸತ್ಯಾ ಪಾತ್ರಕ್ಕೆ ಒಳ್ಳೆಯ ಸೊಸೆ ಅವಾರ್ಡ್​ ಪಡೆದಿದ್ದಾರೆ ಗೌತಮಿ ಜಾಧವ್​. ಇವರು ಈಗ ವೇದಿಕೆಯ ಮೇಲೆ ರಿಯಲ್​ ಲೈಫ್​ ಗೌತಮಿಯಾಗಿ ಕಾಣಿಸಿಕೊಂಡಿದ್ದು, ರೀಲ್ ಲೈಫ್​ ಗಂಡ ಕಾರ್ತಿಕ್​ ಜೊತೆ ಭರ್ಜರಿ ಸ್ಟೆಪ್​ ಹಾಕಿದ್ದಾರೆ. ಬೊಂಬೆ ಹಾಡಿಗೆ ಬೊಂಬಾಡ್​​ ಡ್ಯಾನ್ಸ್​ ಮಾಡಿದ್ದಾರೆ.

ಸೊಸೆಯೆಂದ್ರೆ ಹೀಗಿರ್ಬೇಕು: ಜೀ ಕುಟುಂಬ ಅವಾರ್ಡ್​ ಗೆದ್ದ ಸತ್ಯಾ, ಹಿಟ್ಲರ್​ ಕಲ್ಯಾಣದ ಲೀಲಾ ಹೇಳಿದ್ದೇನು?

ಡೇಲಿ ಬಾಬ್​ಕಟ್​ನಲ್ಲಿ ಸತ್ಯಳನ್ನು ನೋಡೋರಿಕೆ ನಿಜಕ್ಕೂ ರಿಯಲ್​ ಸತ್ಯ ಅವಳೇ ಹೌದಾ ಎನ್ನುವಷ್ಟರ ಮಟ್ಟಿಗೆ ಡಿಫರೆಂಟ್​ ಆಗಿ ಕಾಣಿಸಿಕೊಂಡಿದ್ದಾರೆ ಗೌತಮಿ. ಗೌತಮಿ ಮತ್ತು ಕಾರ್ತಿಕ್​ ಪಾತ್ರಧಾರಿ ಸಾಗರ್​ ಅವರು ಹಾಡೊಂದಕ್ಕೆ ಡ್ಯಾನ್ಸ್​ ಮಾಡಿದ್ದು, ಫ್ಯಾನ್ಸ್ ಫಿದಾ ಆಗಿದ್ದಾರೆ. ಅಂದಹಾಗೆ, ಗೌತಮಿ ಅವರಿಗೆ ಕಿರುತೆರೆ ಸಿನಿಮಾ ಹೊಸತಲ್ಲ. 2021 ರ ಫೇಮಸ್ ಸೀರಿಯಲ್ 'ನಾಗರ ಪಂಚಮಿ'ಯಲ್ಲಿ ಈಕೆ ನಟಿಸಿದ್ರು. ಆ ಬಳಿಕ ಸಿನಿಮಾ ಫೀಲ್ಡ್ ಗೆ ಹೋದ ಗೌತಮಿ 'ಲೂಟಿ', 'ಆದ್ಯಾ', 'ಕಿನಾರೆ' ಮೊದಲಾದ ಸಿನಿಮಾಗಳಲ್ಲಿ ಕಾಣಿಸಿಕೊಂಡರು. ಇನ್ನೊಂದು ತಮಿಳು ಸಿನಿಮಾದಲ್ಲೂ ನಟಿಸಿದ್ದಾರೆ. ಸಹಜ ನಟನೆಗೆ ಹೆಸರಾದ ಈಕೆಗೆ ಸಿನಿಮಾ ಯಾಕೋ ಕೈ ಹಿಡೀಲಿಲ್ಲ. ಸೀರಿಯಲ್ ಜಗತ್ತು ಕೈ ಬಿಡಲಿಲ್ಲ. ಸತ್ಯಾ ಮೂಲಕ ಸಕತ್​ ಮಿಂಚುತ್ತಿದ್ದಾರೆ. ಅಂದಹಾಗೆ ಕಾರ್ತಿಕ್ ಅವರು ಸಾಫ್ಟವೇರ್ (Software) ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಧಾರಾವಾಹಿಯಲ್ಲಿ ನಟಿಸುವ ಅವಕಾಶ ಸಿಕ್ಕಬಳಿಕ ಕೆಲಸ ಬಿಟ್ಟು ಧಾರಾವಾಹಿಯಲ್ಲಿಯೇ ತೊಡಗಿಸಿಕೊಂಡಿದ್ದಾರೆ. ಸತ್ಯ ಧಾರಾವಾಹಿಗೂ ಮೊದಲು ಅವರು, 'ಕಿನ್ನರಿ', 'ಮನಸಾರೆ'ಯಲ್ಲಿಯೂ ನಟಿಸಿದ್ದಾರೆ.

ಜೀ ಕುಟುಂಬ ಅವಾರ್ಡ್ಸ್​ ಕಾರ್ಯಕ್ರಮದಲ್ಲಿ ಬೆಸ್ಟ್​ ಸೊಸೆ ಅವಾರ್ಡ್​ ಪಡೆದ ಸತ್ಯಾ ಅವರು, ಬೆಸ್ಟ್​ ಸೊಸೆ ಆಗುವುದಕ್ಕೆ ಸಿಕ್ಕಾಪಟ್ಟೆ ಸರ್ಕಸ್​ ಮಾಡಿದ್ದೇನೆ. ಅದನ್ನು ನೀವೂ ನೋಡಿರಬಹುದು. ಅದಕ್ಕಾಗಿ ಅವಾರ್ಡ್​ ಸಿಕ್ಕಿದೆ. ಸಿಕ್ಕಾಪಟ್ಟೆ ಖುಷಿಯಾಗ್ತಿದೆ ಎಂದರು. ಸೀರಿಯಲ್​ ಪಾರ್ಟ್​ಗಿಂತ ತಾವು ತುಂಬಾ ಭಿನ್ನ ಎಂದು ಹಿಂದೊಮ್ಮೆ ಗೌತಮಿ ಹೇಳಿಕೊಂಡಿದ್ದರು. 'ನಾನು ಕಂಪ್ಲೀಟ್ ಉಲ್ಟಾ' ಅಂದಿದ್ದರು. ರಿಯಲ್ ಲೈಫ್​ನಲ್ಲಿ ಇವರು ಸಖತ್ ಗರ್ಲಿಶ್ ಆಗಿರೋರು. ಸತ್ಯ ಪಾತ್ರಕ್ಕೆ ವಿರುದ್ಧವಾಗಿ ತುಂಬ ಮೃದು ಸ್ವಭಾವದ ಸೂಕ್ಷ್ಮ ಮನಸ್ಸಿನ ಹುಡುಗಿ. ಯಾರನ್ನೂ ಬೈದು ಅಭ್ಯಾಸ ಇಲ್ಲ. ಜೋರಾಗಿ ಮಾತಾಡಿಯೂ ಗೊತ್ತಿಲ್ಲದ ಹುಡುಗಿ. ಶುರು ಶುರುವಿನಲ್ಲಿ ಈ ಪಾತ್ರ ನಿಭಾಯಿಸಲು ಗೌತಮಿ ಒಂಚೂರು ಕಷ್ಟಪಡಬೇಕಾಯ್ತು. ಆದರೆ ನಟನೆ ಅಂದ್ರೆ ನೀರು ಕುಡಿದಷ್ಟೇ ಸಲೀಸಾದ ಈಕೆ ಕ್ರಮೇಣ ಸತ್ಯ ಪಾತ್ರಕ್ಕೆ ಹೊಂದಿಕೊಳ್ಳುತ್ತಾ ಹೋದರು.

ವಿರಹ... ಹುಲಿಯ ಉಗುರು ತರಹ... ಡ್ಯಾನ್ಸ್​ ಮೂಲಕ ನೋವು ತೋಡಿಕೊಂಡ ಆ್ಯಂಕರ್​ ಅನುಶ್ರೀ!

View post on Instagram