ಬಾಲಿವುಡ್ ಖ್ಯಾತ ನಟಿ ಅಲಿಯಾ ಭಟ್ ಅವರ ಬಟ್ಟೆ ಬ್ರಾಂಡ್ ಎಡ್ ಎ ಮಮ್ಮಾ ಕಂಪನಿಯನ್ನು ಮುಖೇಶ್ ಅಂಬಾನಿ ಖರೀದಿ ಮಾಡುತ್ತಿದ್ದಾರೆ ಎನ್ನುವು ಸುದ್ದಿ ವೈರಲ್ ಆಗಿದೆ. 

ಬಾಲಿವುಡ್ ಖ್ಯಾತ ನಟಿ ಅಲಿಯಾ ಭಟ್ ಸಿನಿಮಾ ಮಾತ್ರವಲ್ಲದೆ ಬೇರೆ ಬೇರೆ ಉದ್ಯಮಗಳಲ್ಲೂ ತೊಡಗಿಕೊಂಡಿದ್ದಾರೆ. ನಟನೆ, ನಿರ್ಮಾಣ ಜೊತೆಗೆ ಅಲಿಯಾ ಭಟ್ ಬೇರೆ ಬೇರೆ ಕ್ಷೇತ್ರದಲ್ಲೂ ಹೂಡಕೆ ಮಾಡಿದ್ದಾರೆ. ಬಾಲಿವುಡ್‌ನ ಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದಾರೆ. ತರಹೇವಾರಿ ಪಾತ್ರಗಳನ್ನು ಮಾಡಿರುವ ನಟಿ ಅಲಿಯಾ ಭಟ್ ಅಭಿಮಾನಿಗಳನ್ನು ರಂಜಿಸಿದ್ದಾರೆ, ರಂಜಿಸುತ್ತಿದ್ದಾರೆ. ಸದ್ಯ ಮದುವೆಯಾಗಿ ಹೆಣ್ಣು ಮಗುವಿನ ತಾಯಿಯಾಗಿರುವ ಆಲಿಯಾ ಸಿನಿಮಾ ಜೊತೆಗೆ ಮಗಳ ಆರೈಕೆಯಲ್ಲೂ ಬ್ಯುಸಿಯಾಗಿದ್ದಾರೆ. 

ಅಲಿಯಾ ಭಟ್ ಬಟ್ಟೆ ಬ್ರಾಂಡ್ ಹೊಂದಿದ್ದಾರೆ. ಎಡ್ ಎ ಮಮ್ಮಾ ಎನ್ನುವ ಮಕ್ಕಳ ಉಡುಪಿನ ಬ್ರಾಂಡ್ ಇದಾಗಿದೆ. 2020ರಲ್ಲಿ ಈ ಬ್ರಾಂಡ್ ಲಾಂಚ್ ಮಾಡುವ ಮೂಲಕ ಅಲಿಯಾ ಉದ್ಯಮಿಯಾಗಿ ಹೊರಹೊಮ್ಮಿದ್ದರು. ಮಕ್ಕಳಿಗೆ ಕೈಗೆಟಕುವ ಮತ್ತು ಸುಸ್ಥಿರವಾದ ಬಟ್ಟೆ ಆಯ್ಕೆಗಳನ್ನು ನೀಡುವ ಉತ್ತಮ ಗುಣಮಟ್ಟದ ಹೊಸ ತಾಯಿ ಬ್ರ್ಯಾಂಡ್ ಅನ್ನು ಪ್ರಾರಂಭಿಸಿದರು. ಅದರ ಪ್ರಾರಂಭದಿಂದಲೂ, ಬ್ರ್ಯಾಂಡ್ ತಮ್ಮ ಸ್ವಂತ ವೆಬ್‌ಸೈಟ್‌ಗೆ ಹೆಚ್ಚುವರಿಯಾಗಿ ವಿವಿಧ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಮನರಂಜನಾ ಕ್ಷೇತ್ರದ ಅನೇಕ ನಟರು ತಮ್ಮ ಬ್ರ್ಯಾಂಡ್‌ಗಳನ್ನು ಪ್ರಚಾರ ಮಾಡುತ್ತಿರುತ್ತಾರೆ. ಆಲಿಯಾ ಭಟ್ ಆಗಾಗ್ಗೆ ಬೇರೆ ಬೇರೆ ಸ್ಟಾರ್ ಮಕ್ಕಳಿಗೆ ಬಟ್ಟೆ ಕಳುಹಿಸುತ್ತಾರೆ. 

ಆಲಿಯಾ ಭಟ್ ಅವರ ಬ್ರ್ಯಾಂಡ್ ಎಲ್ಲೆಡೆ ಗಮನ ಸೆಳೆಯುತ್ತದೆ. ದೊಡ್ಡ ಮಟ್ಟದಲ್ಲಿ ಖ್ಯಾತಿ ಗಳಿಸುತ್ತಿದ್ದಂತೆ ಇದೀಗ ಸೇಲ್ ಮಾಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಅಲಿಯಾ ಭಟ್ ಅವರ ಬಟ್ಟೆ ಬ್ರಾಂಡ್ ಅನ್ನು ರಿಲಾಯನ್ಸ್ ಸಂಸ್ಥೆ ಖರೀದಿಸಲು ಮುಂದಾಗಿದೆ. ಎಕನಾಮಿಕ್ಸ್ ಟೈಮ್ಸ್ ವರದಿ ಪ್ರಕಾರ ರಿಲಾಯನ್ಸ್ ಬ್ರ್ಯಾಂಡ್ಸ್ ಸಂಸ್ಥೆ 300ರಿಂದ 350 ಕೋಟಿ ರುಪಾಯಿಗೆ ಎಡ್ ಎ ಮಮ್ಮಾ ಬ್ರಾಂಡ್ ಡೀಲ್‌ಗೆ ಮಾತುಕತೆ ನಡೆಯುತ್ತಿದೆ. ಮಾತುಕತೆ ಅಂತಿಮ ಹಂತಕ್ಕೆ ಬಂದಿದ್ದು ಬಹತೇಕ ಸೇಲ್ ಆಗುವುದು ಖಚಿತವಾಗಿದೆ. ಆ ವರದಿ ಪ್ರಕಾರ ಮುಂದಿನ 10 ದಿನದೊಳಗೆ ಖರೀದಿ ಒಪ್ಪಂದ ಕೂಡ ಆಗಬಹುದು ಎನ್ನಲಾಗಿದೆ.

ಆಲಿಯಾಳನ್ನು ರಣಬೀರ್​ ಸಿಂಗ್ ತಬ್ಬಿಕೊಂಡ್ರೆ ಫ್ಯಾನ್ಸ್​ ಹೀಗ್ ಹೇಳೋದಾ?

ಏತನ್ಮಧ್ಯೆ, ಆಲಿಯಾ ಭಟ್ ಶೀಘ್ರದಲ್ಲೇ ಕರಣ್ ಜೋಹರ್ ಅವರ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ರಣವೀರ್ ಸಿಂಗ್ ಮತ್ತು ಇತರ ಪ್ರಮುಖ ನಟರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಅಲಿಯಾ ಭಟ್-ರಣ್ವೀರ್ ಸಿಂಗ್ ಲಿಪ್‌ಕಿಸ್ ದೃಶ್ಯ ವೈರಲ್: ರಾಕಿ-ರಾಣಿಯ ಪ್ರೇಮ್ ಕಹಾನಿ ರಿವೀಲ್

ಆಲಿಯಾ ಭಟ್ ಎಡ್–ಎ–ಮಮ್ಮಾ ಬ್ರ್ಯಾಂಡ್​ನ ಕಂಪನಿ ಸ್ಥಾಪಿಸಿದಾಗ ಬಹಳ ಮಂದಿಗೆ ಇದು ಯಾವ ಹೆಸರು ಎಂದು ಅಚ್ಚರಿ ಪಟ್ಟಿದ್ದುಂಟು. ಎಡ್ ಪದದ ಹುಟ್ಟಿನ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗಳಾಗಿದ್ದವು. ಆದರೆ, ಆಲಿಯಾ ಭಟ್ ಅವರು ಬ್ರಹ್ಮಾಸ್ತ್ರ ಸಿನಿಮಾ ಬಿಡುಗಡೆ ಸಂದರ್ಭದಲ್ಲಿ ಈ ಅನುಮಾನಗಳಿಗೆ ತೆರೆ ಎಳೆದಿದ್ದರು. ಎಡ್ ಎಂಬುದು ಎಡ್ವರ್ಡ್ ಎಂಬ ಅವರ ಬೆಕ್ಕಿನ ಹೆಸರಂತೆ. ಆ ಬೆಕ್ಕಿಗೆ ತಾನು ತಾಯಿ ಸಮಾನಳಾಗಿದ್ದರಿಂದ ಮಮ್ಮಾ ಹಾಗು ಎಡ್ವರ್ಡ್ ಹೆಸರು ಸೇರಿಸಿ ಎಡ್–ಎ–ಮಮ್ಮಾ ಎಂದು ಹೆಸರಿಟ್ಟಿರುವುದಾಗಿ ಆಲಿಯಾ ಭಟ್ ಬಹಿರಂಗ ಪಡಿಸಿದ್ದರು.