Asianet Suvarna News Asianet Suvarna News

ಅಲಿಯಾ ಭಟ್-ರಣ್ವೀರ್ ಸಿಂಗ್ ಲಿಪ್‌ಕಿಸ್ ದೃಶ್ಯ ವೈರಲ್: ರಾಕಿ-ರಾಣಿಯ ಪ್ರೇಮ್ ಕಹಾನಿ ರಿವೀಲ್

ಬಾಲಿವುಡ್ ಸ್ಟಾರ್ ರಣ್ವೀರ್ ಸಿಂಗ್ ಮತ್ತು ಅಲಿಯಾ ಭಟ್ ನಟನೆಯ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು ಇದೀಗ ವೈರಲ್ ಆಗಿದೆ. 

Alia Bhatt and Ranveer Singh starrer Rocky Aur Rani Kii Prem Kahaani trailer out sgk
Author
First Published Jul 4, 2023, 3:20 PM IST

ಬಾಲಿವುಡ್ ಸ್ಟಾರ್ ರಣ್ವೀರ್ ಸಿಂಗ್ ಮತ್ತು ಅಲಿಯಾ ಭಟ್ ಇಬ್ಬರೂ ಉತ್ತಮ ಸ್ನೇಹಿತರು. ಈ ಜೋಡಿ ನಟನೆಯ ಗಲ್ಲಿ ಬಾಯ್ ಸಿನಿಮಾ ದೊಡ್ಡ ಮಟ್ಟದಲ್ಲಿ ಸಕ್ಸಸ್ ಆಗಿತ್ತು. ಇಬ್ಬರ ಕೆಮಿಸ್ಟ್ರಿ ಕೂಡ ಅಭಿಮಾನಿಗಳ ಹೃದಯ ಗೆದ್ದಿತ್ತು. ಬಳಿಕ ಮತ್ತೆ ಅಲಿಯಾ ಮತ್ತು ರಣ್ವೀರ್ ಸಿಂಗ್ ಒಟ್ಟಿಗೆ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಹೌದು ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಸಿನಿಮಾ ಮೂಲಕ ಅಲಿಯಾ ಭಟ್ ಮತ್ತು ರಣ್ವೀರ್ ಸಿಂಗ್ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ಸದ್ಯ ಈ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು ಇಬ್ಬರೂ ರೊಮ್ಯಾಟಿಂಕ್ ಆಗಿ ಕಾಣಿಸಿಕೊಂಡಿದ್ದಾರೆ. 

ಸದ್ಯ ರಿಲೀಸ್ ಆಗಿರುವ  ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಟ್ರೈಲರ್ ಟ್ರೆಂಡಿಂಗ್ ನಲ್ಲಿದೆ. ಕರಣ್ ಜೋಹರ್ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬಂದಿದೆ. ರಾಕಿ ಮತ್ತು ರಾಣಿಯ ಪ್ರೇಮ್ ಕಹಾನಿ ಮೆಲೆ ಮತ್ತಷ್ಟು ಕುತೂಹಲ ಹೆಚ್ಚಿಸಿದೆ ಸದ್ಯ ರಿಲೀಸ್ ಆಗಿರುವ ಟ್ರೈಲರ್. ಅಂದಹಾಗೆ ಸದ್ಯ ರಿಲೀಸ್ ಆಗಿರುವ ಟ್ರೈಲರ್ ನಲ್ಲಿ ಅಲಿಯಾ ಮತ್ತು ರಣ್ವೀರ್ ಸಿಂಗ್ ಲಿಪ್‌ಕಿಸ್ ದೃಶ್ಯದಲ್ಲಿ ಕಾಣಿಸಿಕೊಂಡಿದ್ದಾರೆ. ಲಿಪ್ ಕಿಸ್ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. 

ಮಾಮುಲಿಯಂತೆ ರಣ್ವಿರ್ ಸಿಂಗ್ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಇನ್ನೂ ಅಲಿಯಾ ನಟನೆಗೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಟ್ರೈಲರ್ ನೋಡಿದ ಅಭಿಮಾನಿಗಳು ಸೂಪರ್ ಹಿಟ್ ಪಕ್ಕಾ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಅಂದಹಾಗೆ ರಣ್ವೀರ್ ಸಿಂಗ್ ಸಾಲು ಸಾಲು ಸೋಲಿನ ಸುಳಿಯಲ್ಲಿ ಸಿಲುಕಿದ್ದಾರೆ. ರಣ್ವೀರ್ ನಟನೆಯ ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಸೋಲು ಕಂಡಿವೆ. ಈ ಸಿನಿಮಾ ಮೂಲಕವಾದ್ರೂ ಸಕ್ಸಸ್ ಟ್ರ್ಯಾಕ್‌ಗೆ ಮರಳುತ್ತಾರಾ ಎಂದು ಕಾದು ನೋಡಬೇಕಿದೆ. 

ಬ್ಲೌಸ್ ಹಾಕದೆ ಸೀರೆ ಧರಿಸಿದ ಆಲಿಯಾ ಭಟ್; ರಣವೀರ್‌ ಸಿಂಗ್ ಜೊತೆ ಫೋಟೋ ಲೀಕ್!

ಅಂದಹಾಗೆ ಆಲಿಯಾ ಭಟ್ ಮಗುವಿಗೆ ಜನ್ಮ ನೀಡಿದ ಬಳಿಕ ಈ ಸಿನಿಮಾದಲ್ಲಿ ನಟನೆ ಮಾಡಿದ್ದಾರೆ. ರಾಹಾ ಹುಟ್ಟಿ ಕೇವಲ 4 ತಿಂಗಳಿಗೆಯೇ ಅಲಿಯಾ ಭಟ್ ಶೂಟಿಂಗ್ ನಲ್ಲಿ ಭಾಗಿಯಾಗಿದ್ದರು. ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಸಿನಿಮಾದ ಚಿತ್ರೀಕರಣ ಕಾಶ್ಮೀರದಲ್ಲಿ ನಡೆಯುತ್ತಿತ್ತು. ಅಲಿಯಾ ಕೂಡ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಇದೀಗ ಸಿನಿಮಾ ರಿಲೀಸ್‌ಗೆ ರೆಡಿಯಾಗಿದ್ದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಆಲಿಯಾಳನ್ನು ರಣಬೀರ್​ ಸಿಂಗ್ ತಬ್ಬಿಕೊಂಡ್ರೆ ಫ್ಯಾನ್ಸ್​ ಹೀಗ್ ಹೇಳೋದಾ?

ಈ ಸಿನಿಮಾದಲ್ಲಿ ದೊಡ್ಡ ದೊಡ್ಡ ಕಲಾವಿದರು ನಟಿಸಿದ್ದಾರೆ. ಜಯಾ ಬಚ್ಚನ್, ಧರ್ಮೇಂದ್ರ ಹಾಗೂ ಶಬಾನಾ ಅಜ್ಮಿ ಸೇರಿದಂತೆ ಅನೇಕರು ನಟಿಸಿದ್ದಾರೆ. ಇತ್ತೀಚಿಗಷ್ಟೆ ಅಲಿಯಾ ಮತ್ತು ರಣ್ವೀರ್ ಸಿಂಗ್ ಈ ಸಿನಿಮಾಗಾಗಿ ಲುಕ್ ಟೆಸ್ಟ್ ಮಾಡಿದ ಫೋಟೋಗಳು ವೈರಲ್ ಆಗಿತ್ತು. ಕರಣ್ ಜೋಹರ್ ಫೋಟೋಗಳನ್ನು ಶೇರ್ ಮಾಡಿದ್ದರು. ಇಬ್ಬರ ರೊಮ್ಯಾಂಟಿಕ್ ಫೋಟೋಗಳು ಅಭಿಮಾನಿಗಳಿಂದ ಮೆಚ್ಚುಗೆ ಗಳಿಸಿತ್ತು. ಇದೀಗ ಟ್ರೈಲರ್ ಕೂಡ ವೈರಲ್ ಆಗಿದ್ದು ಸಿನಿಮಾ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಿಸಿದೆ. 

Latest Videos
Follow Us:
Download App:
  • android
  • ios