ಆಸ್ಕರ್‌ನಲ್ಲಿ ರಾಮ್, Jr.NTR ಮತ್ತು ಕುಟುಂಬಕ್ಕೆ ಸೀಟ್ ಬುಕ್ ಮಾಡಲು ಕೋಟಿಗಟ್ಟಲೇ ಖರ್ಚು ಮಾಡಿದ್ರಾ ರಾಜಮೌಳಿ?
ರಾಮ್, Jr.NTR ಮತ್ತು ಕುಟುಂಬಕ್ಕೆ ಆಸ್ಕರ್‌ನಲ್ಲಿ ಸೀಟ್ ಬುಕ್ ಮಾಡಲು ಕೋಟಿಗಟ್ಟಲೇ ಖರ್ಚು ಮಾಡಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ.

ಎಸ್ ಎಸ್ ರಾಜಮೌಳಿ ನಿರ್ದೇಶನದ RRR ಚಿತ್ರ ಆಸ್ಕರ್ ಪ್ರಶಸ್ತಿ ಮುಡಿಗೇರಿಸುವ ಮೂಲಕ ಇತಿಹಾಸ ಸೃಷ್ಟಿಸಿದೆ. ಭಾರತದ ಹೆಮ್ಮೆ ಆರ್ ಆರ್ ಆರ್ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದ ಎಂ.ಎಂ.ಕೀರವಾಣಿ ಮತ್ತು ಸಾಹಿತ್ಯ ರಚನೆಗಾರ ಚಂದ್ರಬೋಸ್ ಆಸ್ಕರ್‌ಗೆ ಮುತ್ತಿಟ್ಟರು. ಆರ್ ಆರ್ ಆರ್‌ನ ನಾಟು ನಾಟು ಹಾಡಿಗೆ ಪ್ರತಿಷ್ಠಿತ ಆಸ್ಕರ್ ಬಂದಿದೆ. ಈ ಹಾಡಿನ ಗೆಲುವನ್ನು ಇಡೀ ತಂಡ ಹೇಗೆ ಸಂಭ್ರಮಿಸಿತು ಮತ್ತು ಸಂತೋಷ ಪಟ್ಟರು ಎನ್ನುವುದನ್ನು ಈಗಾಗಲೇ ನೋಡಿದ್ದೀರಿ. ಅಂದಹಾಗೆ ಆಸ್ಕರ್‌ಗಾಗಿ ಆರ್ ಆರ್ ಆರ್ ತಂಡೆ ಕೋಟಿ ಕೋಟಿ ಖರ್ಚು ಮಾಡಿದೆ ಎನ್ನುವ ವಿಚಾರ ಈಗಾಗಲೇ ವೈರಲ್ ಆಗಿದೆ. ಇದೀಗ ಮತ್ತೊಂದು ವಿಚಾರ ಬಹಿರಂಗವಾಗಿದೆ. ಆಸ್ಕರ್ ಸೀಟ್‌ಗಾಗಿ ರಾಜಮೌಳಿ ಕೋಟಿಗಟ್ಟಲೇ ಖರ್ಚು ಮಾಡಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ.
ಅಕಾಡೆಮಿ ಪ್ರಶಸ್ತಿ ಸಮಾರಂಭಕ್ಕೆ ಸಾಕಷ್ಟು ಕಟ್ಟು ನಿಟ್ಟಿದೆ. ನಿಯಮಗಳ ಪ್ರಕಾರ, ನಾಮನಿರ್ದೇಶಿತ ವ್ಯಕ್ತಿ ಮತ್ತು ಒವರ ಒಬ್ಬ ಕುಟುಂಬದ ಸದಸ್ಯರಿಗೆ ಮಾತ್ರ ಉಚಿತ ಪಾಸ್‌ಗಳನ್ನು ಒದಗಿಸಲಾಗುತ್ತದೆ. ಈ ನಿಯಮದ ಪ್ರಕಾರ, ಉಚಿತ ಪ್ರವೇಶವನ್ನು ಎಂಎಂ ಕೀರವಾಣಿ ಮತ್ತು ಚಂದ್ರಬೋಸ್ ಮತ್ತು ಅವರ ಕುಟುಂಬದ ಒಬ್ಬ ಸದಸ್ಯರಿಗೆ ಮಾತ್ರವಿತ್ತು. ಆದ್ದರಿಂದ ಉಳಿದ ಸದಸ್ಯರು- ಎಸ್‌ಎಸ್ ರಾಜಮೌಳಿ, ರಮಾ ರಾಜಮೌಳಿ (ಎಸ್‌ಎಸ್‌ಆರ್ ಪತ್ನಿ), ಕಾರ್ತಿಕೇಯ (ಎಸ್‌ಎಸ್‌ಆರ್ ಮಗ) ಮತ್ತು ಅವರ ಪತ್ನಿ, ರಾಮ್ ಚರಣ್, ಉಪಾಸನಾ (ಚರಣ್ ಪತ್ನಿ) ಮತ್ತು ಜೂನಿಯರ್ ಎನ್‌ಟಿಆರ್ ಅವರಿಗಾಗಿ ಟಿಕೆಟ್ ಅನ್ನು ಕೋಟಿಗಟ್ಟಲೇ ಖರ್ಚು ಮಾಡಿ ಖರೀದಿ ಮಾಡಲಾಗಿದೆ ಎನ್ನಲಾಗಿದೆ.
ಭಾರತ ಆಸ್ಟ್ರೇಲಿಯಾ ಏಕದಿನ ನಡುವೆ ಆಸ್ಕರ್ ಗೆದ್ದ RRR ನಾಟು ನಾಟು ಹಾಡಿಗೆ ಕೊಹ್ಲಿ ಡ್ಯಾನ್ಸ್!
ಆಂಗ್ಲ ಮಾಧ್ಯಮಗಳು ವರದಿ ಮಾಡಿರುವ ಪ್ರಕಾರ SS ರಾಜಮೌಳಿ ಆಸ್ಕರ್ 2023 ರ ಪಾಸ್‌ಗಳನ್ನು ಪಡೆಯಲು ಭಾರಿ ಮೊತ್ತವನ್ನು ಪಾವತಿಸಿದ್ದಾರೆ. ತಮ್ಮ ಕುಟುಂಬ, ಜೂನಿಯರ್ NTR, ರಾಮ್ ಚರಣ್ ಮತ್ತು ಅವರ ಪತ್ನಿಗಾಗಿ ಬರೋಬ್ಬರಿ 1.44 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ ಎನ್ನಲಾಗಿದೆ. ಪ್ರತಿ ವ್ಯಕ್ತಿಯ ಪಾಸ್‌ಗೆ ಸರಿಸುಮಾರು 20.6 ಲಕ್ಷ ರೂಪಾಯಿ ಕೊಟ್ಟಿದ್ದಾರೆ ಎನ್ನಲಾಗಿದೆ. ದೊಡ್ಡ ಮೊತ್ತವಾಗಿದ್ದರೂ ಇದು ಆರ್ ಆರ್ ಆರ್ ತಂಡಕ್ಕೆ ಯೋಗ್ಯವಾಗಿದೆ ಎನ್ನಲಾಗಿದೆ.
ಭಾರತ ಆಸ್ಕರ್‌ಗೆ ತಪ್ಪಾದ ಸಿನಿಮಾಗಳನ್ನು ಕಳುಹಿಸುತ್ತಿದೆ; ಎಆರ್ ರಹಮಾನ್ ಅಸಮಾಧಾನ
ಆಸ್ಕರ್ ಗೆದ್ದ ಬಳಿಕ ರಾಮ್ ಚರಣ್, ಜೂ.ಎನ್ ಟಿ ಆರ್ ಈಗಾಗಲೇ ಭಾರತಕ್ಕೆ ಪಾವಾಸ್ ಆಗಿದ್ದಾರೆ. ಈ ಮೊದಲು ಜೂ.ಎನ್ ಟಿ ಆರ್ ಭಾರತಕ್ಕೆ ವಾಪಾಸ್ ಆಗಿದ್ದರು. ನಿನ್ನೆಯಷ್ಟೆ ರಾಮ್ ಚರಣ್ ದೆಹಲಿಗೆ ಬಂದಿದಿಳಿದಿದ್ದಾರೆ. ಇಬ್ಬರೂ ಸ್ಟಾರ್ ಅನ್ನು ಅದ್ದೂರಿಯಾಗಿ ಸ್ವಾಗತ ಮಾಡಲಾಗಿದೆ. ದೆಹಲಿಯಲ್ಲಿರುವ ರಾಮ್ ಚರಣ್ ಅವರನ್ನು ಸ್ವಾಗತಿಸಲು ಅವರ ತಂದೆ ಚಿರಂಜೀವಿ ಖುದ್ದ ಹಾಜರಿದ್ದರು. ರಾಮ್ ಚರಣ್ ಮತ್ತು ಚಿರಂಜೀವಿ ಇಬ್ಬರೂ ಕೇಂದ್ರ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದರು. ಕೇಂದ್ರ ಸಚಿವರು ರಾಮ್ ಚರಣ್ ಅವರನ್ನು ಸನ್ಮಾನಿಸಿ ಅಭಿನಂದಿಸಿದರು.