ಭಾರತ ಆಸ್ಕರ್‌ಗೆ ತಪ್ಪಾದ ಸಿನಿಮಾಗಳನ್ನು ಕಳುಹಿಸುತ್ತಿದೆ; ಎಆರ್ ರಹಮಾನ್ ಅಸಮಾಧಾನ
ಭಾರತ ಆಸ್ಕರ್‌ಗೆ ತಪ್ಪಾದ ಸಿನಿಮಾಗಳನ್ನು ಆಯ್ಕೆ ಮಾಡಿ ಕಳುಹಿಸುತ್ತಿದೆ ಎಂದು ಆಸ್ಕರ್ ವಿನ್ನರ್ ಸಂಗೀತ ನಿರ್ದೇಶಕ ಎಆರ್ ರಹಮಾನ್ ಅಸಮಾಧಾನ ಹೊರಹಾಕಿದ್ದಾರೆ.

ಟಾಲಿವುಡ್ ಸ್ಟಾರ್ ರಾಮ್ ಚರಣ್ ಮತ್ತು ಜೂ.ಎನ್‌ಟಿಆರ್ ಹೆಜ್ಜೆ ಹಾಕಿದ್ದ ನಾಟು ನಾಟು ಹಾಡು ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಗೆದ್ದುಕೊಂಡಿದೆ. ಆರ್ ಆರ್ ಆರ್ ಸಿನಿಮಾ ಇದೀಗ ಜಾಗತಿನ ಮಟ್ಟದಲ್ಲಿ ಸ್ದದು ಮಾಡುತ್ತಿದೆ. ರಾಮ್ ಚರಣ್, ಜೂ.ಎನ್ ಟಿ ಆರ್ ನಟನೆ, ರಾಜಮೌಳಿ ನಿರ್ದೇಶನ ಎಲ್ಲರ ಮೆಚ್ಚುಗೆ ಪಡೆದಿದೆ. ನಾಟು ನಾಟು ಆಸ್ಕರ್‌ಗೆ ನಾಮನಿರ್ದೇಶನಗೊಳ್ಳುತ್ತಿದ್ದಂತೆ ಆರ್ ಆರ್ ಆರ್ ತಂಡ ಹಾಗೂ ಭಾರತೀಯ ಸಿನಿ ಪ್ರೇಕ್ಷಕರಲ್ಲಿ ಸಂತಸ ತಂದಿದ್ದು. ಇದೀಗ ಆರ್ ಆರ್ ಆರ್ ಆಸ್ಕರ್ ಗೆದ್ದು ಬೀಗತ್ತಿರುವುದು ಭಾರತೀಯರಿಗೆ ಹೆಮ್ಮೆಯ ವಿಚಾರವಾಗಿದೆ. ಆರ್ ಆರ್ ಆರ್ ಸಿನಿಮಾಗೆ ಎಂ ಎಂ ಕೀರವಾಣಿ ಸಂಗೀತ ಸಂಯೋಜನೆ ಮಾಡಿದ್ದಾರೆ.
ಭಾರತದಿಂದ ಆಸ್ಕರ್‌ಗೆ ಆಯ್ಕೆಯಾಗಿ ಹೋಗುವ ಸಿನಿಮಾಗಳ ಬಗ್ಗೆ ಅನೇಕ ಚರ್ಚೆ ನಡೆಯುತ್ತಿದೆ. ಪ್ರತೀ ಬಾರಿಯೂ ಭಾರತದಿಂದ ಸಿನಿಮಾವನ್ನು ಆಯ್ಕೆ ಮಾಡಿ ಕಳುಹಿಸಿದಾಗ ಜೋರಾದ ಚರ್ಚೆ ನಡೆಯುತ್ತದೆ. ಆದರೆ ಅಲ್ಲಿಗೆ ಕೊನೆಯಾಗುತ್ತಿದೆ. ಈ ಬಾರಿ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿತ್ತು. ಆರ್ ಆರ್ ಆರ್ ಸಿನಿಮಾ ಸ್ಪರ್ಧಿಸಿ ಏಕಾಂಗಿಯಾಗಿ ಹೋರಾಟ ಮಾಡಿ ಪ್ರಶಸ್ತಿ ಗೆದ್ದುಕೊಂಡಿದೆ. ಭಾರತದಿಂದ ಸಿನಿಮಾ ಆಯ್ಕೆಯಾಗಿ ಕಳುಹಿಸುವ ಬಗ್ಗೆ ಖ್ಯಾತ ಸಂಗೀತ ನಿರ್ದೇಶಕ, ಆಸ್ಕರ್ ವಿನ್ನಿಂಗ್ ಸಂಗೀತ ನಿರ್ದೇಶಕ ಎಆರ್ ರಹಮಾನ್ ಪ್ರತಿಕ್ರಿಯೆ ನೀಡಿದ್ದಾರೆ. ಯೂ ಟ್ಯೂಬ್ ಮಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಎ ಆರ್ ರಹಮಾನ್ ಭಾರತದಿಂದ ತಪ್ಪು ಸಿನಿಮಾಗಳನ್ನು ಆಸ್ಕರ್‌ಗೆ ಕಳುಹಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಆಸ್ಕರ್‌ಗೆ ರಾಮ್ ಚರಣ್-ಉಪಾಸನಾ ರೆಡಿಯಾಗಿದ್ದು ಹೇಗೆ? ದೇವರಿಗೆ ನಮಸ್ಕರಿಸಿ ಹೊರಟ ವಿಡಿಯೋ ವೈರಲ್
ಈ ಬಗ್ಗೆ ಮಾತನಾಡಿದ ರಹಮಾನ್, 'ಕೆಲವೊಮ್ಮೆ, ನಮ್ಮ ಚಲನಚಿತ್ರಗಳು ಆಸ್ಕರ್‌ವರೆಗೆ ಹೋಗುವುದನ್ನು ನಾನು ನೋಡುತ್ತೇನೆ, ಆದರೆ ಅದಕ್ಕೆ ಆಸ್ಕರ್ ಸಿಗಲ್ಲ. ಆಸ್ಕರ್‌ಗೆ ಕಳುಹಿಸುವ ಸಿನಿಮಾಗಳ ಆಯ್ಕೆ ತಪ್ಪಾಗಿದೆ. ಹಾಗೆ ಮಾಡಬೇಡು ಎಂದು ನಾನು ಹೇಳುತ್ತೇನೆ' ಎಂದು ಹೇಳಿದರು. ಈ ಬಾರಿ ಭಾರತದಿಂದ ಚೆಲ್ಲೋ ಶೋ ಸಿನಿಮಾವನ್ನು ಆಯ್ಕೆ ಮಾಡಿ ಕಳುಹಿಸಲಾಗಿತ್ತು. ಆದರೆ ಈ ಸಿನಿಮಾ ಆಸ್ಕರ್ ನಿಂದ ಹೊರಬಿತ್ತು. ಆದರೆ ಆರ್ ಆರ್ ಆರ್ ಸಿನಿಮಾದ ನಾಟು ನಾಟು ಹಾಡು ಆಸ್ಕರ್ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿತು.
ಆಸ್ಕರ್‌ನಲ್ಲಿ ಜೂ.ಎನ್‌ಟಆರ್-ರಾಮ್ ಚರಣ್ ಯಾಕೆ ಡಾನ್ಸ್ ಮಾಡಿಲ್ಲ? ಕಾರಣ ಬಿಚ್ಚಿಟ್ಟ ಆಸ್ಕರ್ ನಿರ್ಮಾಪಕ
ಆರ್ ಆರ್ ಆರ್ ಸಿನಿಮಾ ಜೊತೆಗೆ ಈ ಬಾರಿ ಆಸ್ಕರ್ ನಲ್ಲಿ ಅತ್ಯುತ್ತಮ ಡಾಕ್ಯುಮೆಂಟರಿ ವಿಭಾಗದಲ್ಲಿ ದಿ ಎಲಿಫಎಂಟ್ ವಿಸ್ಪರ್ಸ್ ಪ್ರಶಸ್ತಿ ಪಡೆದುಕೊಂಡಿದೆ. ಈ ಬಾರಿ ಆಸ್ಕರ್ ಭಾರತೀಯರಿಗೆ ವಿಶೇಷವಾಗಿತ್ತು. ಎರಡು ಪ್ರಶಸ್ತಿಗಳನ್ನು ಬಾಚಿಕೊಳ್ಳುವ ಮೂಲಕ ಇತಿಹಾಸ ಸೃಷ್ಟಿಯಾಗಿದೆ. ರಾಜಮೌಳಿ ನಿರ್ದೇಶಕದ ಆರ್ ಆರ್ ಆರ್ ಆರ್ ಸಿನಿಮಾ ರಾಮ್ ಚರಣ್ ಮತ್ತು ಜೂ.ಎನ್ ಟಿ ಆರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನೂ ಬಾಲಿವುಡ್ ಸ್ಟಾರ್ ಗಳಾದ ಆಲಿಯಾ ಭಟ್, ಅಜ್ ದೇವಗನ್ ಕೂಡ ಪ್ರಮುಖ ಪಾತ್ರದಲ್ಲಿ ಮಿಂಚಿದ್ದರು.