Asianet Suvarna News Asianet Suvarna News

ಸಲ್ಮಾನ್ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಪವನ್ ಕಲ್ಯಾಣ್ ನಟನೆಯ ಈ ಫ್ಲಾಪ್ ಚಿತ್ರದ ರಿಮೇಕ್? ಇಲ್ಲಿದೆ ವಿವರ

ಸಲ್ಮಾನ್ ಖಾನ್ ಈಗಾಗಲೇ ಅನೇಕ ರಿಮೇಕ್ ಸಿನಿಮಾಗಳಲ್ಲಿ ಮಿಂಚಿದ್ದಾರೆ. ಅನೇಕ ಸಿನಿಮಾಗಳು ಸಕ್ಸಸ್ ಆಗಿವೆ. 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಸಿನಿಮಾ ಟಾಲಿವುಡ್‌ ಸಿನಿಮಾದ ರಿಮೇಕ್ ಎನ್ನುವ ಸುದ್ದಿ ವೈರಲ್ ಆಗಿದೆ.

is Salman Khan starrer Kisi Ka Bhai Kisi Ki Jaan Is A Remake Of Pawan Kalyans katamarayudu Film sgk
Author
First Published Sep 16, 2022, 3:07 PM IST

ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಸಲ್ಮಾನ್ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ.  ಈ ಸಿನಿಮಾದ ಟೀಸರ್  ಇತ್ತೀಚಿಗಷ್ಟೆ ರಿಲೀಸ್ ಆಗಿದೆ. ಅಂದಹಾಗೆ ಈ ಸಿನಿಮಾಗೆ ಕಬಿ ಈದ್ ಕಬಿ ದಿವಾಲಿ ಎನ್ನುವ ಟೈಟಲ್ ಇಡಲಾಗಿತ್ತು. ಇತ್ತೀಚಿಗಷ್ಟೆ ಟೈಟಲ್ ರಿವೀಲ್ ಮಾಡುವ ಜೊತೆಗೆ ಪುಟ್ಟ ಟೀಸರ್ ಕೂಡ ರಿಲೀಸ್ ಮಾಡಿ ಕುತೂಹಲ ಹೆಚ್ಚಿಸಿದೆ ಸಿನಿಮಾತಂಡ. ಕಬಿ ಈದ್ ಕಬಿ ದಿವಾಲಿ ಸಿನಿಮಾ ಸೆಟ್ಟೇರಿ ಅನೇಕ ತಿಂಗಳೇ ಆಗಿತ್ತು. ಈ ಸಿನಿಮಾದ ಚಿತ್ರೀಕರಣ ಸಹ ಪ್ರಾರಂಭವಾಗಿದೆ. ಆದರೆ ಇತ್ತೀಚಿಗಷ್ಟೆ ಸಿನಿಮಾದ ಟೈಟಲ್ ಬದಲಾಯಿಸಲಾಗಿದೆ. ಅಂದಹಾಗೆ ಸಲ್ಮಾನ್ ಖಾನ್ ಉದ್ದ ಕೂದಲು ಬಿಟ್ಟಿರುವ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಸಲ್ಮಾನ್ ಖಾನ್ ಈ ಸಿನಿಮಾಗೆ  ಫರ್ಹಾನ್ ಸಾಮ್ಜಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸಲ್ಮಾನ್ ಖಾನ್ ನಿರ್ಮಾಣದಲ್ಲಿಯೇ ಸಿನಿಮಾ ಮೂಡಿಬರುತ್ತಿದೆ. 

ಅಂದಹಾಗೆ ಈ ಸಿನಿಮಾದ ಬಗ್ಗೆ ಮತ್ತೊಂದು ಸುದ್ದಿ ವೈರಲ್ ಆಗಿದೆ. ಸಲ್ಮಾನ್ ಖಾನ್ ಅವರ ಈ ಸಿನಿಮಾ ಟಾಲಿವುಡ್ ನ ಫ್ಲಾಪ್ ಸಿನಿಮಾವೊಂದರ ರಿಮೇಕ್ ಆಗಿದೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ಸಲ್ಮಾನ್ ಖಾನ್ ಈಗಾಗಲೇ ಅನೇಕ ರಿಮೇಕ್ ಸಿನಿಮಾಗಳಲ್ಲಿ ಮಿಂಚಿದ್ದಾರೆ. ಅನೇಕ ಸಿನಿಮಾಗಳು ಸಕ್ಸಸ್ ಆಗಿವೆ. ಸಲ್ಮಾನ್ ಖಾನ್ ಕೇವಲ ರಿಮೇಕ್ ನಲ್ಲಿಯೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ ಎನ್ನುವ ಆರೋಪ ಕೂಡ ಇದೆ. ಈ ನಡುವೆ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಮೂಲಕ ಬಾಲಿವುಡ್‌ನ ಸ್ವಂತ ಕಥೆಯೊಂದಿಗೆ ಬರ್ತಿದ್ದಾರೆ ಎಂದು ಅಭಿಮಾನಿಗಳು ಭಾವಿಸಿದ್ದರು. ಆದರೀಗ ಈ ಸಿನಿಮಾ ಕೂಡ ಎನ್ನುವ ಸುದ್ದಿ ಹರಿದಾಡುತ್ತಿದೆ. 

ಅಂದಹಾಗೆ ಸಲ್ಮಾನ್ ನಟನೆಯ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಸಿನಿಮಾ ಪವನ್ ಕಲ್ಯಾಣ್ ನಟನೆಯ ಕಾಟಮರಾಯುಡು ಚಿತ್ರದ ರಿಮೇಕ್ ಎನ್ನಲಾಗುತ್ತಿದೆ. ಈ ಸಿನಿಮಾ 2017ರಲ್ಲಿ ರಿಲೀಸ್ ಆಗಿತ್ತು. ಬಾಕ್ಸ್ ಆಫೀಸ್ ನಲ್ಲಿ ಈ ಸಿನಿಮಾ ಹೀನಾಯ ಸೋಲು ಕಂಡಿತ್ತು. ಇದೀಗ ಅದೆ ಸಿನಿಮಾದ ರಿಮೇಕ್ ನಲ್ಲಿ ಸಲ್ಮಾನ್ ಖಾನ್ ನಟಿಸುತ್ತಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಅಂದಹಾಗೆ ಕಾಟಮರಾಯುಡು ಸಿನಿಮಾ ಕೂಡ ತಮಿಳಿನ ವೀರಂ ಸಿನಿಮಾದ ರಿಮೇಕ್ ಆಗಿದೆ. ವೀರಂನಲ್ಲಿ ಅಜಿತ್ ಕಾಣಿಸಿಕೊಂಡಿದ್ದರು. 

ಸಲ್ಮಾನ್ ಖಾನ್ - ಪೂಜಾ ಸಿನಿಮಾ ಟೈಟಲ್ ಬದಲಾವಣೆ; ಲುಕ್ ನೋಡಿ ಮತ್ತೊಂದು ಡಿಸಾಸ್ಟರ್ ಎಂದ ನೆಟ್ಟಿಗರು

ಒಂದುವೇಳೆ ರಿಮೇಕ್ ಮಾಡುತ್ತಿರುವುದು ನಿಜವೇ ಆಗಿದ್ದರೆ ಏನೆಲ್ಲ ಬದಲಾವಣೆ ಮಾಡಿಕೊಳ್ಳಲಾಗಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇದೆ. ಟಾಲಿವುಡ್‌ನಲ್ಲಿ ಫ್ಲಾಪ್ ಆದ ಸಿನಿಮಾ ಬಾಲಿವುಡ್ ನಲ್ಲಿ ಹಿಟ್ ಆಗುತ್ತಾ ಕಾದುನೋಡಬೇಕಿದೆ. ಅಂದಹಾಗೆ ಈ ಸಿನಿಮಾದಲ್ಲಿ ನಾಯಕಿಯಾಗಿ ಕರಾವಳಿ ಸುಂದರಿ ಪೂಜಾ ಹೆಗ್ಡೆ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಶೆಹನಾಜ್ ಗಿಲ್ ಕೂಡ ಪ್ರಮಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸೌತ್ ಸ್ಟಾರ್ ವೆಂಕಟೇಶ್ ದಗ್ಗುಬಾಟಿ ಕೂಡ ಅಭಿನಯಿಸುತ್ತಿದ್ದಾರೆ.

ಸಾರ್ವಜನಿಕವಾಗಿ ಕಪಾಳಮೋಕ್ಷ ಮಾಡಿಸಿಕೊಂಡ Bollywood ಸೆಲೆಬ್ರೆಟಿಗಳು ಇವರು

ಸಲ್ಮಾನ್ ಖಾನ್ ಸಿನಿಮಾಗಳ ಬಗ್ಗೆ ಹೇಳುವುದಾದರೆ ಕೊನೆಯದಾಗಿ ಅಂತಿಮ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾದಲ್ಲಿ ಸಲ್ಮಾನ್ ಖಾನ್ ಸಹೋದರಿ ಅರ್ಪಿತಾ ಖಾನ್ ಪತಿ ಆಯೂಶ್ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಸದ್ಯ ಸಲ್ಮಾನ್ ಖಾನ್ ಟೈಗರ್ 3 , ಕಿಕ್ 2 ಚಿತ್ರೀಕರಣ ಮುಗಿಸಿದ್ದಾರೆ. ಸೂಪರ್ ಹಿಟ್ ಭಜರಂಗಿ ಭಾಯಿಜಾನ್ -2 ಮಾಡುವ ಸುಳಿವು ನೀಡಿದ್ದಾರೆ. ಸದ್ಯದಲ್ಲೇ ಈ ಸಿನಿಮಾ ಸೆಟ್ಟೇರುವ ಸಾಧ್ಯತೆ ಇದೆ. ಸಲ್ಮಾನ್ ಖಾನ್ ಸಿನಿಮಾಗಳು ಮುಂದಿನ ವರ್ಷ ರಿಲೀಸ್ ಆಗುತ್ತಿವೆ.  

Follow Us:
Download App:
  • android
  • ios