ದೀಪಿಕಾ ಪಡುಕೋಣೆ ಮುಂದಿನ ತಿಂಗಳ ಅಮ್ಮ ಆಗಲಿದ್ದಾರೆ. ಆದರೆ ಅವರ ಹೊಟ್ಟೆಯ ಬಗ್ಗೆ ದಿನಕ್ಕೊಂದರಂತೆ ವಿವಾದ ಸೃಷ್ಟಿಯಾಗುತ್ತಿದ್ದು, ಇದೀಗ ಕಲ್ಕಿಯ ರೋಲ್‌ ಬಗ್ಗೆ ಮಾತುಕತೆ ನಡೆಯುತ್ತಿದೆ ಏನದು?  

ದೀಪಿಕಾ ಪಡುಕೋಣೆಗೆ ಮಗುವಾಗಲು ಇನ್ನು ಕೆಲವೇ ದಿನಗಳು ಬಾಕಿ ಇವೆ. ಆದರೆ ಇವರ ಹೊಟ್ಟೆಯ ಬಗೆಗೆ ಮಾತ್ರ ಇನ್ನೂ ಚರ್ಚೆಗಳು ನಡೆಯುತ್ತಲೇ ಇವೆ. ದಿನಕ್ಕೊಂದರಂತೆ ನಟಿಯ ಹೊಟ್ಟೆ ಕಾಣಿಸುತ್ತಿರುವ ಕಾರಣ, ನಟಿ ಗರ್ಭಿಣಿಯೇ ಅಲ್ಲ ಎಂಬ ಬಗ್ಗೆ ಹೇಳಲಾಗುತ್ತಿದೆ. ಮುಂದಿನ ತಿಂಗಳು ಡೆಲವರಿ ಎಂದರೆ ಈಗ ದೀಪಿಕಾ ತುಂಬು ಗರ್ಭಿಣಿಯಾಗಿರಬೇಕು. ಆದರೆ ಇಲ್ಲಿಯವರೆಗೂ ಅವರ ಹೊಟ್ಟೆಯ ಸೈಜ್‌ನಲ್ಲಿ ವ್ಯತ್ಯಾಸ ಆಗ್ತಿಲ್ಲ, ಅದರ ಶೇಪ್‌ ಮಾತ್ರ ಅಡ್ಡಾದಿಡ್ಡಿ ಆಗುತ್ತಿದೆ ಎನ್ನುವುದು ನೆಟ್ಟಿಗರ ಅಭಿಮತ. ಅಷ್ಟಕ್ಕೂ ನಟಿ ಯೋಗ, ಧ್ಯಾನ, ಡಯೆಟ್‌ ಮಾಡುವ ಮೂಲಕ ಫಿಟ್‌ನೆಸ್‌ ಕಾಯ್ದುಕೊಂಡಿದ್ದಾರೆ. ಅದಕ್ಕಾಗಿಯೇ ತೂಕದಲ್ಲಿಯೂ ಏರುಪೇರು ಆಗಿಲ್ಲ. ಆದರೆ ಇದರ ಬಗ್ಗೆ ಥಹರೇವಾರಿ ಕಮೆಂಟ್‌ ಸುರಿಮಳೆಯಾಗುತ್ತಲೇ ಇದೆ.

ಇದರ ನಡುವೆಯೇ ಇದೀಗ ದೀಪಿಕಾ ಪಡುಕೋಣೆ ಅವರ ಕಲ್ಕಿ 2898 ಎಡಿ ಚಿತ್ರ ಬಿಡುಗಡೆಯಾಗುತ್ತಿದೆ. ಇದರ ಕ್ಲೈಮ್ಯಾಕ್ಸ್‌ನಲ್ಲಿ ಫೈಟಿಂಗ್‌ ದೃಶ್ಯವಿದೆ. ಈ ಸಿನಿಮಾದ ಕ್ಲೈಮ್ಯಾಕ್ಸ್‌ನಲ್ಲಿ ನಟಿ ಗರ್ಭಿಣಿಯಾಗಿರುವ ರೋಲ್‌ ಮಾಡಿದ್ದಾರೆ. ಆಗ ದೀಪಿಕಾ ನಿಜವಾಗಿಯೂ ಗರ್ಭಿಣಿಯಾಗಿದ್ದಳು ಎಂದು ಪತಿ ರಣವೀರ್‌ ಸಿಂಗ್‌ ಹೇಳಿದ್ದಾರೆ. ಆದರೆ 2-3 ತಿಂಗಳ ಗರ್ಭಿಣಿ ಅಂಥ ಸಾಹಸಮಯ ದೃಶ್ಯ ಮಾಡಲು ಸಾಧ್ಯವೇ ಇಲ್ಲ. ಕ್ಲೈಮ್ಯಾಕ್ಸ್‌ನಲ್ಲಿ ನಕಲಿ ಬೇಬಿ ಬಂಪ್‌ ತೋರಿಸಲಾಗಿದೆ. ಅದನ್ನೇ ಈಗಲೂ ನಟಿ ತೋರಿಸುತ್ತಿದ್ದಾರೆ ಎನ್ನುವ ವಾದ ಶುರುವಾಗಿದೆ! ಒಟ್ಟಿನಲ್ಲಿ ದೀಪಿಕಾ ಮಗು ಹುಟ್ಟಿದ ಮೇಲೂ ಆ ಮಗು ಅವರ ಗರ್ಭದಿಂದಲೇ ಬಂದಿದ್ದೋ ಅಲ್ಲವೋ ಎಂಬ ಬಗ್ಗೆ ಚರ್ಚೆ ನಿಲ್ಲುವಂತೆ ಕಾಣುತ್ತಿಲ್ಲ.

ಗರ್ಭಿಣಿ ದೀಪಿಕಾಗೆ ಇದೆಂಥ ಅಗ್ನಿಪರೀಕ್ಷೆನಪ್ಪಾ? ಯಾವ ಹೆಣ್ಣಿಗೂ ಇಂಥ ಸ್ಥಿತಿ ಬರಬಾರದು ಅಂತಿರೋ ಫ್ಯಾನ್ಸ್​

ಅಂದಹಾಗೆ, ಈ ಚರ್ಚೆ ಮೊದಲಿಗೆ ಹುಟ್ಟುಹಾಕಿದ್ದು, ವೈದ್ಯೆಯೊಬ್ಬರ ಮಾತಿನಿಂದ IVF ಎಕ್ಸ್‌ಪರ್ಟ್ ಡಾ. ಗೌರಿ ಅಗರ್ವಾಲ್ ಅವರು ನೀಡಿದ್ದ ಹೇಳಿಕೆಯಿಂದ. ಇನ್‌ಸ್ಪೈಯರ್ ಅಪ್‌ಲಿಫ್ಟ್ ಎಂಬ ಪಾಡ್‌ಕಾಸ್ಟ್ ನಲ್ಲಿ ಇವರು ದೀಪಿಕಾ ಗರ್ಭಿಣಿ ಎನ್ನುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಐವಿಎಫ್ ಮತ್ತು ಐಯುಐ ಬಗ್ಗೆ ಇದರಲ್ಲಿ ಮಾತನಾಡಿದ್ದು, ದೀಪಿಕಾ ಗರ್ಭಿಣಿಯಾಗಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಜೊತೆಗೆ ಬಾಲಿವುಡ್‌ನಲ್ಲಿ ಅನೇಕ ನಟಿಯರಿಗೆ ಲೇಟಾಗಿ ಮಕ್ಕಳು ಆಗುವುದು ಯಾಕೆ ಎಂಬ ಬಗ್ಗೆ ಮಾತನಾಡಿದ್ದರು. ಬಾಲಿವುಡ್‌ ನಲ್ಲಿ ಅನೇಕ ನಟಿಯರು ತುಂಬಾ ಯಂಗ್ ಆಗಿದ್ದರೆ ನಾರ್ಮಲ್‌ ಮಗು ಹೆರುತ್ತಾರೆ. ಆದರೆ ಕೆಲವು ನಟಿಯರು ವಯಸ್ಸಾಗಿದೆ ಎಂದರೆ ಅವರು ಐವಿಎಫ್ ಮೊರೆ ಹೋಗುತ್ತಾರೆ. ದೀಪಿಕಾ ಪಡುಕೋಣೆ ಈಗ ಗರ್ಭಿಣಿ ಎಂಬುದು ವಿವಾದದಲ್ಲಿದೆ. ಬಾಲಿವುಡ್‌ ಅಂಗಳದಲ್ಲಿ ದೀಪಿಕಾ ಪ್ರಗ್ನೆಂಟ್‌ ಅಥವಾ ಸರೋಗಸಿ ಮೂಲಕ ಮಗು ಹೆಡೆಯುತ್ತಾರೆ ಎಂಬುದು ಒಂದು ಚರ್ಚಿತ ವಿಷಯವಾಗಿದೆ ಎಂದಿದ್ದರು.

ಇದಾದ ಬಳಿಕ ದೀಪಿಕಾ ಗರ್ಭಿಣಿಯಾಗಿರುವ ಕುರಿತು ಪರ-ವಿರೋಧಗಳ ಚರ್ಚೆ ಆಗುತ್ತಲೇ ಇದೆ. ಆರಂಭದಲ್ಲಿ ಮಗುವಿನ ಬಗ್ಗೆ ದೀಪಿಕಾ ಘೋಷಿಸಿದಾಗಲೂ ತಾವು ಗರ್ಭಿಣಿ ಎಂದು ಹೇಳಿರಲಿಲ್ಲ. ಸೆಪ್ಟೆಂಬರ್‌ನಲ್ಲಿ ಮಗುವಿನ ನಿರೀಕ್ಷೆ ಅಂದಷ್ಟೇ ಹೇಳಿದ್ದರು. ಅದನ್ನೆಲ್ಲಾ ಕೆದಕಿ, ನಟಿ ಗರ್ಭಿಣಿ ಅಲ್ಲ, ಕಲ್ಕಿಯ ಫೇಕ್‌ ಬೇಬಿಬಂಪ್‌ ಅನ್ನೇ ತೋರಿಸ್ತಿದ್ದಾರೆ ಎನ್ನುತ್ತಿದ್ದಾರೆ ನೆಟ್ಟಿಗರು! 

ದೀಪಿಕಾ-ರಣವೀರ್​ಗೆ ಗಂಡು ಮಗು, ಅಲ್ಲಲ್ಲಾ ಅದು ಹೆಣ್ಣು... ಮಗುವಿನ ಅಸಲಿಯತ್ತು ತಿಳಿದು ಫ್ಯಾನ್ಸ್ ಶಾಕ್​!