ಬಾಲಿವುಡ್​ ದಂಪತಿಯಾದ ರಣವೀರ್​ ಸಿಂಗ್​ ಮತ್ತು ದೀಪಿಕಾ ಪಡುಕೋಣೆ ಅವರಿಗೆ ಮಗು ಆಗಿದ್ದು, ದೀಪಿಕಾ  ಮಗುವನ್ನು ಹಿಡಿದುಕೊಂಡಿರುವ ಫೋಟೋಗಳು ವೈರಲ್​  ಆಗುತ್ತಿವೆ. ಇದರ ಹಿಂದಿರುವ ಸತ್ಯವೇನು?   

ಕನ್ನಡತಿ, ಪಠಾಣ್​- ಜವಾನ್​ ಮೂಲಕ ಹಲ್​ಚಲ್​ ಸೃಷ್ಟಿಸೋ ನಟಿ ದೀಪಿಕಾ ಪಡುಕೋಣೆ ಬರುವ ಸೆಪ್ಟೆಂಬರ್​ನಲ್ಲಿ ಅಂದರೆ ಮುಂದಿನ ತಿಂಗಳ ಮಗುವಿನ ನಿರೀಕ್ಷೆಯಲ್ಲಿ ಇರುವುದಾಗಿ ಅವರೇ ಖುದ್ದು ಹಿಂದೆ ತಿಳಿಸಿದ್ದರು. ಇವರಿಗೆ ಗಂಡು ಮಗು ಆಗಲಿದೆ ಎಂದು ಜ್ಯೋತಿಷಿಗಳು ಇದಾಗಲೇ ಹೇಳಿಯಾಗಿದೆ. ಗರ್ಭಿಣಿಯಾಗಿರುವ ವಿಷಯ ತಿಳಿದ ಬಳಿಕವೂ ತಾವು ನಟಿಸುತ್ತಿದ್ದ ಎಲ್ಲಾ ಚಿತ್ರಗಳ ಶೂಟಿಂಗ್​ಗಳನ್ನೂ ಮುಗಿಸಿ ಭೇಷ್​ ಅನ್ನಿಸಿಕೊಂಡಿದ್ದಾರೆ ನಟಿ. ಆದರೆ ಅವಧಿಗೆ ಮುನ್ನವೇ ಮಗುವೊಂದು ಜನಿಸಿರುವ ಫೋಟೋಗಳು ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ವೈರಲ್​ ಆಗುತ್ತಿವೆ. ಅಷ್ಟಕ್ಕೂ ಎಂಟನೆಯ ತಿಂಗಳಿಗೆ ಮಗು ಹುಟ್ಟುವುದು ಹೊಸ ವಿಷಯವೇನಲ್ಲ. ಅದೇ ರೀತಿ ದೀಪಿಕಾ ಅವರಿಗೂ ಮಗು ಹುಟ್ಟಿರುವುದಾಗಿ ಅವರ ಮತ್ತು ಪತಿ ರಣವೀರ್ ಜೊತೆಗೆ ಮಗುವಿರುವ ಫೋಟೋ ವೈರಲ್​ ಆಗುತ್ತಿದೆ. ದೀಪಿಕಾ ಅವರು ಆಸ್ಪತ್ರೆಯಲ್ಲಿ ಇರುವುದನ್ನು ಈ ಫೋಟೋದಲ್ಲಿ ನೋಡಬಹುದು.

ಇದನ್ನು ನೋಡಿ ದಂಪತಿಗೆ ಶುಭಾಶಯಗಳ ಸುರಿಮಳೆಯೇ ಹರಿದುಬರುತ್ತಿದೆ. ಆದರೆ ವಿಷ್ಯ ಅದಲ್ಲ, ಈ ಮಗು ಗಂಡು ಮಗು ಎಂದು ಕೆಲವರು ಹೇಳುತ್ತಿದ್ದರೆ, ಮತ್ತೆ ಕೆಲವರು ಹೆಣ್ಣು ಮಗುವಿನ ಅಮ್ಮ ಆಗಿದ್ದಾರೆ ದೀಪಿಕಾ ಎಂದು ಹೇಳುತ್ತಿದ್ದಾರೆ. ಇನ್ನು ಕೆಲವು ಕಡೆ ಅವಳಿ ಜವಳಿ ಮಕ್ಕಳನ್ನು ದೀಪಿಕಾ ಹಿಡಿದಿರೋ ಫೋಟೋ ವೈರಲ್​ ಆಗ್ತಿವೆ. ಮಗು ಯಾವುದೇ ಇರಲಿ, ಆದರೆ ಅಸಲಿ ವಿಷಯವೇ ಬೇರೆ. ಅದೇನೆಂದರೆ, ದೀಪಿಕಾಗೆ ಆಗಿರುವುದು ಗಂಡು ಮಗುನೂ ಅಲ್ಲ, ಹೆಣ್ಣು ಮಗುನೂ ಅಲ್ಲ... ಇದರ ಅರ್ಥ ದೀಪಿಕಾಗೆ ಇನ್ನೂ ಮಗುವೇ ಹುಟ್ಟಿಲ್ಲ ಎನ್ನುವುದು! ಹೌದು. ದೀಪಿಕಾ ಮತ್ತು ರಣವೀರ್ ಕೈಯಲ್ಲಿ ಇರುವ ಪಾಪು ನೆಟ್ಟಿಗರು ಸೃಷ್ಟಿಸಿರೋದು. ಎಐ ತಂತ್ರಜ್ಞಾನ ಬಳಸಿ ಈ ಫೇಕ್​ ಫೋಟೋ ವೈರಲ್​ ಮಾಡಲಾಗಿದೆ. ಆದರೆ ಅಸಲಿಯತ್ತು ತಿಳಿಯದೇ ಶುಭಾಶಯಗಳ ಸುರಿಮಳೆಯಾಗುತ್ತಿದೆ. 

ಅಮ್ಮನಾಗಲು ಎರಡೇ ತಿಂಗಳು ಬಾಕಿ: ನಟಿ ದೀಪಿಕಾ ಪಡುಕೋಣೆ ಸೀಮಂತದ ಫೋಟೋಗಳು ವೈರಲ್​ ?

ಇಷ್ಟೇ ಅಲ್ಲ, ಕಳೆದ ತಿಂಗಳು ಎಂಟನೆಯ ತಿಂಗಳಿನಲ್ಲಿ ಹೊಸ್ತಿಲಿನಲ್ಲಿರುವ ದೀಪಿಕಾ ಅವರಿಗೆ ಸಂಪ್ರದಾಯಬದ್ಧವಾಗಿ ಸೀಮಂತ ಮಾಡಲಾಗಿದೆ ಎನ್ನಲಾದ ಫೋಟೋಗಳು ವೈರಲ್​ ಆಗಿದ್ದವು. ಹೀಗೆ ವೈರಲ್​ ಆಗುತ್ತಿರುವ ಫೋಟೋಗಳು ಅಸಲಿಯದ್ದೋ ಅಥವಾ ನಕಲಿಯದ್ದೋ ಎನ್ನುವುದು ಇನ್ನೂ ತಿಳಿದಿಲ್ಲ. ಧಾರ್ಮಿಕ ಗ್ರಂಥಗಳ ಪ್ರಕಾರ, ಸೀಮಂತ ಶಾಸ್ತ್ರಕ್ಕೆ ಅದರದ್ದೇ ಆದ ಮಹತ್ವವಿದೆ. ಇದನ್ನು ಮಾಡುವುದರಿಂದ ಹುಟ್ಟುವ ಮಗು ಶಕ್ತಿ ಪಡೆಯುತ್ತದೆ. ಈ ಸಮಯದಲ್ಲಿ, ಗರ್ಭದಲ್ಲಿ ಬೆಳೆಯುತ್ತಿರುವ ಮಗುವನ್ನು ಅನೇಕ ಮಂತ್ರಗಳಿಂದ ಸಂಸ್ಕಾರ ಮಾಡಲಾಗುತ್ತದೆ. ಹೀಗೆ ಮಾಡುವುದರಿಂದ ಆ ಮಗುವು ಗ್ರಹ ಹೊಂದಾಣಿಕೆಯನ್ನು ಪಡೆಯುತ್ತದೆ ಮತ್ತು ಯಾವುದಾದರೂ ಅಶುಭ ಯೋಗವುಂಟಾದರೆ ಅದರ ಪರಿಣಾಮವೂ ದೂರಾಗುತ್ತದೆ ಎನ್ನಲಾಗುತ್ತದೆ. ಅದೇ ರೀತಿ ದೀಪಿಕಾಗೆ ಸೀಮಂತ ಮಾಡಲಾಗಿದೆ ಎನ್ನಲಾಗುತ್ತಿದ್ದರೂ ಈ ಫೋಟೋಗಳೂ ಫೇಕ್​ ಎನ್ನಲಾಗುತ್ತಿದೆ. 

ಅಂದಹಾಗೆ, ದೀಪಿಕಾ ಇತ್ತೀಚೆಗಷ್ಟೇ ಅನಂತ್​ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್​ ಮದುವೆಯ ಸಂಭ್ರಮದಲ್ಲಿ ಗರ್ಭಿಣಿ ಕಾಣಿಸಿಕೊಂಡಿದ್ದರು. ಝಗಮಗ ಡ್ರೆಸ್​ ಹಾಕಿಕೊಂಡಿದ್ದ ನಟಿಯ ಹೊಟ್ಟೆ ಒಂದು ದೊಡ್ಡದಾಗಿರುವುದು ಬಿಟ್ಟರೆ, ಅದೇ ಫಿಗರ್​ ಮೆಂಟೇನ್​ ಮಾಡಿರುವುದಕ್ಕೆ ಶ್ಲಾಘನೆಗಳ ಮಹಾಪೂರವೇ ಹರಿದು ಬಂದಿತ್ತು. ಸಾಮಾನ್ಯವಾಗಿ ಗರ್ಭಧರಿಸಿದ ಮೇಲೆ ಹೆಣ್ಣುಮಕ್ಕಳು ತೂಕ ಹೆಚ್ಚಿಸಿಕೊಳ್ಳುವುದು ಮಾಮೂಲು. ಆದರೆ ದೀಪಿಕಾ ಹೊಟ್ಟೆ ಮಾತ್ರ ಬಂದಿರುವುದು ಬಿಟ್ಟರೆ, ಮೊದಲಿನ ರೀತಿಯಲ್ಲಿಯೇ ಕಾಣಿಸಿಕೊಂಡಿದ್ದರು. ಇದರ ಸೀಕ್ರೇಟ್​ ಏನು ಎಂದು ಫ್ಯಾನ್ಸ್​ ಪ್ರಶ್ನಿಸಿದ್ದರು. ಅಂದಹಾಗೆ, ರಣವೀರ್​ ಸಿಂಗ್​ ಮತ್ತು ದೀಪಿಕಾ, 25 ಜುಲೈ 2019 ರಂದು ಇಟಲಿಯ ಲೇಕ್ ಕೊಮೊದಲ್ಲಿ ವಿವಾಹವಾಗಿದ್ದದಾರೆ. ಮದುವೆಯಾಗಿ ಸುಮಾರು 5 ವರ್ಷಗಳ ಬಳಿಕ ಈಗ ಗರ್ಭ ಧರಿಸಿದ್ದಾರೆ. 

ಹೆಣ್ಣು ಮಗು ಬೇಕೋ ಗಂಡೊ ಎಂದು ಕೇಳಿದ ಪ್ರಶ್ನೆಗೆ ಲಡ್ಡು-ಪೇಡಾ ಉದಾಹರಣೆ ಕೊಟ್ಟ ರಣವೀರ್ ಸಿಂಗ್!