Asianet Suvarna News Asianet Suvarna News
breaking news image

ಮಹಾಲಕ್ಷ್ಮಿ-ರವೀಂದರ್​ ಡಿವೋರ್ಸ್​ ಕೊಡ್ತಿದ್ದಾರಾ? ಇನ್​ಸ್ಟಾಗ್ರಾಮ್​ನಲ್ಲಿ ನಟಿ ಹೇಳಿದ್ದೇನು?

ಕಳೆದ ಏಳೆಂಟು ತಿಂಗಳಿನಿಂದ  ಅತಿ ಹೆಚ್ಚು ಟ್ರೋಲ್​ಗೆ ಒಳಗಾಗಿರುವ ರವೀಂದರ್​ ಚಂದ್ರಶೇಖರ್​  ಮತ್ತು ಮಹಾಲಕ್ಷ್ಮಿ ದಂಪತಿ ವಿಚ್ಛೇದನ ಕೊಡ್ತಿದ್ದಾರೆ  ಎನ್ನುವ ಸುದ್ದಿಗೆ ಈ ಜೋಡಿ ಹೇಳಿದ್ದೇನು? 
 

Is Actress Mahalakshmi And Ravindar Chandrasekaran Getting Divorced? Here Is Clarity
Author
First Published May 26, 2023, 11:05 AM IST

ಕಳೆದ ಏಳೆಂಟು ತಿಂಗಳಿನಿಂದ  ಅತಿ ಹೆಚ್ಚು ಟ್ರೋಲ್​ಗೆ ಒಳಗಾಗಿರುವ ದಂಪತಿ ಎಂದರೆ ತಮಿಳು ಚಿತ್ರರಂಗದ ಖ್ಯಾತ ನಿರ್ಮಾಪಕ ರವೀಂದರ್ ಚಂದ್ರಶೇಖರ್ (Ravindra Chandrasekaran) ಮತ್ತು ಕಿರುತೆರೆ ನಿರೂಪಕಿ ಮಹಾಲಕ್ಷ್ಮಿ ( Mahalakshmi). ಕಳೆದ ಸೆಪ್ಟೆಂಬರ್ 1ರಂದು ತಿರುಪತಿಯಲ್ಲಿ (Tirupati) ವೈವಾಹಿಕ ಜೀವನಕ್ಕೆ ಕಾಲಿಟ್ಟಾಗಿನಿಂದಲೂ ಇವರ ಮದುವೆ ವಿಚಾರಕ್ಕೆ ಬಹಳಷ್ಟು ಟ್ರೋಲ್​ ಆಗುತ್ತಲೇ ಇದ್ದಾರೆ.  ಎಲ್ಲಿ ನೋಡಿದರೂ ಇವರದ್ದೇ ವಿಷಯ.  ಈ ಜೋಡಿ ಏನೇ ಮಾಡಲಿ ಅದರ ಚರ್ಚೆ ಭಾರಿ ಜೋರಾಗಿ ನಡೆಯುತ್ತದೆ. ಇದಕ್ಕೆ ಕಾರಣ ಈ ಜೋಡಿಯ ಲುಕ್​. ಅತ್ಯಂತ ಸುಂದರಿಯಾಗಿರುವ ಮಹಾಲಕ್ಷ್ಮಿ ಅವರು, ತೀರಾ ದಪ್ಪ ಇರುವ ರವೀಂದರ್​ ಜೊತೆ ಮದುವೆಯಾಗಿದ್ದಾರೆ ಎನ್ನುವ ಕಾರಣಕ್ಕೆ  ಬಾಹ್ಯ ರೂಪ ನೋಡಿ ಟ್ರೋಲ್​ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ. ಅದರಲ್ಲಿಯೂ ಮದುವೆಯಾಗದ ಹುಡುಗರು ಈ ಜೋಡಿಯನ್ನು ನೋಡಿ ಹೊಟ್ಟೆ ಉರಿದುಕೊಳ್ಳುತ್ತಿದ್ದರೆ, ಹುಡುಗಿಯರು ಈಕೆ ಹಣಕ್ಕಾಗಿಯೇ ಮದುವೆಯಾಗಿದ್ದಾರೆ ಎನ್ನುತ್ತಿದ್ದಾರೆ. ರವೀಂದರ್​​ ಅವರ  ಆಸ್ತಿ ನೋಡಿ ಮದುವೆಯಾಗಿದ್ದಾರೆ, ಈ ಜೋಡಿ ಒಟ್ಟಾಗಿ ಇರುವ ಚಾನ್ಸೇ ಇಲ್ಲ ಎಂದವರೇ ಹೆಚ್ಚು. 

 ರವೀಂದರ್​ ಅವರು ಆಗರ್ಭ ಶ್ರೀಮಂತರೆಂದು ಮಹಾಲಕ್ಷ್ಮಿ ಮದುವೆಯಾಗಿದ್ದಾರೆ ಎಂದು ಹಲವರು ಅಂದುಕೊಳ್ಳುತ್ತಲೇ ಇದ್ದರೂ, ಅದಕ್ಕೆ ತಡೆ ಕೆಡಿಸಿಕೊಳ್ಳದ ಈ ಜೋಡಿ ಹಾಯಾಗಿ ಇದೆ. ಪತ್ನಿಗಾಗಿ ರವೀಂದರ್​ ಇದಾಗಲೇ ಚಿನ್ನದ ಮಂಚದಿಂದ (golden cot) ಹಿಡಿದು ಕೆಜಿಗಟ್ಟಲೆ ಚಿನ್ನ, ವಜ್ರ, ವೈಢೂರ್ಯಗಳನ್ನು ನೀಡಿದ್ದು, ಅದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿಕೊಂಡಿದ್ದರು.  ತಮ್ಮನ್ನು ಕಂಡು ಹೊಟ್ಟೆ ಉರಿದುಕೊಳ್ಳುವವರ ಹೊಟ್ಟೆಗೆ ಇನ್ನಷ್ಟು ಕಿಚ್ಚು ಹೊತ್ತಿಸುತ್ತಲೇ ಇದ್ದಾರೆ.  ಪ್ರೀತಿಗೆ ಅಂದ, ರೂಪ, ಬಣ್ಣ ಮುಖ್ಯವಲ್ಲ, ನಿಷ್ಕಲ್ಮಶ ಹೃದಯ ಮುಖ್ಯ ಎಂಬುದು ಮಹಾಲಕ್ಷ್ಮಿ ಅವರ ಮಾತು. ಕಳೆದ  ಪ್ರೇಮಿಗಳ ದಿನಕ್ಕೆ ಜೋಡಿ ಪರಸ್ಪರ ವಿಶ್​ ಮಾಡಿಕೊಂಡಿತ್ತು.  ರವೀಂದರ್​ ಕೂಡ ಸಾಮಾಜಿಕ ಜಾಲತಾಣದಲ್ಲಿ ಪತ್ನಿಯ ಜೊತೆ ರೆಡ್ ಔಟ್​ಫಿಟ್​ನಲ್ಲಿರುವ (putfit) ಫೋಟೋ ಶೇರ್​ ಮಾಡಿಕೊಂಡು ವೆಲೈಂಟೈನ್ಸ್​ ಡೇಗೆ ಶುಭ ಕೋರಿದ್ದರು. ನಿನ್ನ ನಗುವಿನಲ್ಲಿಯೇ ನಾನು ಸ್ವರ್ಗ ಕಾಣುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಮಹಾಲಕ್ಷ್ಮಿ ಅವರು ಪ್ರತಿಕ್ರಿಯೆ ನೀಡಿ,  ‘ಧನ್ಯವಾದ ನನ್ನ ಪ್ರೀತಿಯೇ, ನನ್ನನ್ನು ಜಗತ್ತಿನ ಹೆಮ್ಮೆಯ ಪತ್ನಿಯನ್ನಾಗಿ ಮಾಡಿದಿರಿ’ ಎಂದಿದ್ದರು.

Valentine's Day: ಪತ್ನಿಗೆ ರವೀಂದರ್​ ಬರೆದ ಲವ್​ ಲೆಟರ್ ವೈರಲ್​ 

ಆದರೆ ಈ ಜೋಡಿ ಯಾವಾಗ ಬೇರೆಯಾಗುತ್ತದೆ ಎಂದು ಕಾಯುತ್ತಿದ್ದವರಿಂದಲೋ ಏನೋ ದಂಪತಿ ನಡುವೆ ಏನೂ ಸರಿಯಿಲ್ಲ ಎನ್ನುವ ಸುದ್ದಿ ಹರಿದಾಡಿತ್ತು. ಮಹಾಲಕ್ಷ್ಮಿ ಮತ್ತು ರವೀಂದರ್​ ದಂಪತಿ ವಿಚ್ಛೇದನ (Divorce) ಮಾಡಿಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಸಕತ್​ ಸದ್ದು ಮಾಡಿತ್ತು. ಅದರಲ್ಲಿಯೂ ಕಾಲಿವುಡ್​ನಲ್ಲಿ ಈ ಸುದ್ದಿ ಕಾಳ್ಗಿಚ್ಚಿನಂತೆ ಹರಡಿದೆ. ಕೆಲ ಯೂಟ್ಯೂಬ್​ ಚಾನೆಲ್​ಗಳಲ್ಲಿ ಈ ಜೋಡಿ ಬೇರೆ ಬೇರೆಯಾಗುತ್ತಿದ್ದಾರೆ. ಇಬ್ಬರು ಡಿವೋರ್ಸ್​ ಪಡೆಯೋದಕ್ಕೆ ಒಪ್ಪಿಕೊಂಡಿದ್ದಾರೆ ಅಂತೆಲ್ಲಾ ಸುದ್ದಿಯಾಗುತ್ತಿತ್ತು. 

ಇದೀಗ ಈ ಸುದ್ದಿಗೆ ಈ ಜೋಡಿ ಸಾಮಾಜಿಕ ಜಾಲತಾಣದ ಮೂಲಕವೇ ಕ್ಲಾರಿಟಿ ಕೊಟ್ಟಿದೆ.  ಈ ಕುರಿತು ಮಹಾಲಕ್ಷ್ಮೀ ಗಂಡ ರವೀಂದರ್​ ಜೊತೆ ಇರುವ ಫೋಟೋವನ್ನು ಶೇರ್​ ಮಾಡಿಕೊಂಡಿದ್ದು ಗಾಳಿ ಸುದ್ದಿ ಹರಡುತ್ತಿರುವವರ ಬಾಯಿ ಮುಚ್ಚಿಸಿದ್ದಾರೆ.  ಫೋಟೋ ಶೇರ್​ ಮಾಡಿ ಅವರು ನೀಡಿರುವ ಕ್ಯಾಪ್ಷನ್​ನಿಂದ ಈ ಜೋಡಿ ಸಕತ್​ ಖುಷಿಯಾಗಿದೆ ಎಂದು ತಿಳಿಯುತ್ತದೆ. ಶೀರ್ಷಿಕೆ (Caption)ಯಲ್ಲಿ ಮಹಾಲಕ್ಷ್ಮಿ ಅವರು,  'ನೀವು ನನ್ನ ಭುಜದ ಮೇಲೆ ಕೈ ಹಾಕಿದಾಗ ನಾನು ಈ ಜಗತ್ತಿನಲ್ಲಿ ಏನೂ ಬೇಕಾದರೂ ಮಾಡಬಲ್ಲೆ ಎಂಬ ವಿಶ್ವಾಸ ನನಗಾಗುತ್ತದೆ.  ನನ್ನ ಹೃದಯವು ನಿನ್ನಿಂದ ತುಂಬಿದೆ. ಅಮ್ಮು ಐ ಲವ್​ ಯೂ' ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್​ಗೆ ರವೀಂದರ್​ ಕೂಡ ಐ ಲವ್​ ಯೂ ಟೂ ಎಂದು ಕಾಮೆಂಟ್ ಮಾಡಿದ್ದಾರೆ.  ಇದನ್ನು ನೋಡಿ ಹೊಟ್ಟೆಕಿಚ್ಚು ಪಟ್ಟುಕೊಳ್ಳುತ್ತಿರುವವರು ಇನ್ನಷ್ಟು ಕಿರಿಕಿರಿ ಅನುಭವಿಸುವಂತಾಗಿದೆ. 

ಪತ್ನಿ Mahalakshmiಗಾಗಿ 75 ಲಕ್ಷ ರೂ. ಮನೆ ಖರೀದಿಸಿದ ರವೀಂದರ್; ಟ್ರೋಲ್ ಕಪಲ್ ಸಂಪಾದನೆ ಎಷ್ಟು?

Latest Videos
Follow Us:
Download App:
  • android
  • ios